News Kadaba

ಬೆಳ್ತಂಗಡಿ: ಕಾಂಗ್ರೆಸ್‌ನಿಂದ ರಕ್ಷಿತ್‌; ಬಿಜೆಪಿಯಲ್ಲಿ ಹರೀಶ್‌ ಪೂಂಜ ಸ್ಪರ್ಧೆ ಸಾಧ್ಯತೆ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಮಾ.04. ಬೆಳ್ತಂಗಡಿಯಲ್ಲಿ ನೇತ್ರಾವತಿ, ಫಲ್ಗುಣಿ, ಮೃತ್ಯುಂಜಯ, ಸೋಮಾವತಿ ನದಿಗಳಲ್ಲಿ ನೀರು ಹರಿದ ಹಾಗೇ ರಾಜಕೀಯ ಬೆಳವಣಿಗೆಗಳು ನಡೆದಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಸ್ಥಾನ ಭದ್ರಗೊಳಿಸಬೇಕು ಎಂಬ ಹವಣಿಕೆಯಲ್ಲಿದೆ. ಅಂತೆಯೇ ಕಾಂಗ್ರೆಸ್‌ ಕಳೆದು ಹೋದ ಸ್ಥಾನ ಮಾನವನ್ನು ಹೇಗೆ ದಕ್ಕಿಸಿಕೊಳ್ಳಬಹುದು ಎಂಬ ಚಿಂತನೆಯಲ್ಲಿದೆ. ಬಿಜೆಪಿ ಶಾಸಕರ ಹರೀಶ ಪೂಂಜ ಅಭ್ಯರ್ಥಿ ಎಂಬ ಭಾವನೆ ಎಲ್ಲೆಡೆ ಇದೆ. ಸುಮಾರು ೧,೮೦೦ ಕೋಟಿ ರೂ.ಗಳಷ್ಟು ಅನುದಾನದ ವಿವಿಧ ಕಾರ್ಯಕ್ರಮಗಳಿಗೆ ವಿನಿಯೋಗಿಸಿರುವುದು ಸ್ಥಾನ ಭದ್ರವಾಗಲು ಕಾರಣವಾಗಿದೆ.

ಬೆಳ್ತಂಗಡಿ: ಕಾಂಗ್ರೆಸ್‌ನಿಂದ ರಕ್ಷಿತ್‌; ಬಿಜೆಪಿಯಲ್ಲಿ ಹರೀಶ್‌ ಪೂಂಜ ಸ್ಪರ್ಧೆ ಸಾಧ್ಯತೆ Read More »

ಕರಾವಳಿ

ವಿಕಲಚೇತನ ವಕೀಲೆ ನ್ಯಾಯಾಧೀಶ ಹುದ್ದೆಗೆ ಪದೋನ್ನತಿ ➤ ಕೊಲಿಜಿಯಂ ಶಿಫಾರಸು

(ನ್ಯೂಸ್ ಕಡಬ)newskadaba.com  ಹೊಸದಿಲ್ಲಿ, ಮಾ.04. ವಿಕಲಚೇತನ ನ್ಯಾಯವಾದಿಯೊಬ್ಬರನ್ನು ಹೈಕೋರ್ಟ್‌ ಜಡ್ಜ್ ಆಗಿ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಪದೋನ್ನತಿ ನೀಡಿದೆ. ವಕೀಲೆ ಮೋಕ್ಸಾ ಕಿರಣ್‌ ಥಕ್ಕರ್‌ ಅವರನ್ನು ಗುಜರಾತ್‌ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಕೊಲಿಜಿಯಂ ಶಿಫಾರಸು ಮಾಡಿದ್ದು, ಈ ನೇಮಕದಿಂದ ವಕೀಲೆ ಥಕ್ಕರ್‌ ಅವರಿಗೆ ತಮ್ಮ ದೈಹಿಕ ಅಸಮರ್ಥತೆಯಿಂದ ಹೊರಬರಲು ಸಾಧ್ಯವಾಗುವುದು ಎಂದು ಹೇಳಿದೆ.  

ವಿಕಲಚೇತನ ವಕೀಲೆ ನ್ಯಾಯಾಧೀಶ ಹುದ್ದೆಗೆ ಪದೋನ್ನತಿ ➤ ಕೊಲಿಜಿಯಂ ಶಿಫಾರಸು Read More »

ರಾಷ್ಟ್ರೀಯ ನ್ಯೂಸ್

ಇಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬಿಸಿಗಾಳಿ ಸಾಧ್ಯತೆ

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.04. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಇಂದು ಬಿಸಿಗಾಳಿ ಬೀಸುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಪ್ರಸ್ತುತ ದೇಶದ ಉತ್ತರ ಭಾಗಗಳಲ್ಲಿ ತಾಪಮಾನ ಏರಿಕೆ ಕಂಡಿದೆ. ಪುಣೆ, ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದೆ. ಆ ಭಾಗದಿಂದ ಕರಾವಳಿ ಕಡೆಗೆ ಬಿಸಿ ಗಾಳಿ ಬೀಸುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ. ಅಲ್ಲದೆ ಮೆಡಿಟರೇನಿಯನ್‌ ಪ್ರದೇಶದಲ್ಲಿ ಧೂಳು ಮಿಶ್ರಿತ ಗಾಳಿ ಆರಂಭವಾಗಿದೆ.

ಇಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬಿಸಿಗಾಳಿ ಸಾಧ್ಯತೆ Read More »

ಕರಾವಳಿ

➤ ಕಾಲೇಜು ಆವರಣದಲ್ಲಿ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು..!

(ನ್ಯೂಸ್ ಕಡಬ) newskadaba.com.ಕೊಡಗು, ಮಾ 4.  ಹೈದರಾಬಾದ್, ಮಾ 04 ಕಾಲೇಜಿನಲ್ಲಿ ಊಟ ಮುಗಿಸಿ, ಮೊದಲ ತರಗತಿಯನ್ನು ಮುಗಿಸಿ ಸ್ನೇಹಿತನೊಟ್ಟಿಗೆ ಕಾಲೇಜಿನ ಆವರಣದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ತೆಲಂಗಾಣದ ಗುಂಡ್ಲಾ ಪೋಚಂಪಲ್ಲಿಯಲ್ಲಿರುವ ಎಂಆರ್ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ಇಂಜಿನಿಯರ್‌ ವಿದ್ಯಾರ್ಥಿ ಸಚಿನ್‌ (18) ಮೃತ ದುರ್ದೈವಿ. ಸ್ನೇಹಿತನೊಟ್ಟಿಗೆ ಕಾಲೇಜಿನ ಆವರಣದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸಚಿನ್‌ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು,

➤ ಕಾಲೇಜು ಆವರಣದಲ್ಲಿ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ʼಬೈಕ್ ಕದ್ದು ಕಡಿಮೆ ಬೆಲೆಗೆ ಮಾರುತ್ತಿದ್ದ ಖದೀಮ ಅರೆಸ್ಟ್‌ʼ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.04. ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಕಳ್ಳರಿಗೇನು ಕಮ್ಮಿಯಿಲ್ಲ, ಇದೀಗ ಬೈಕ್ಗಳನ್ನ ಕದ್ದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನುಸಿದ್ದಾಪುರ ಪೊಲೀಸರಿಂದ ಬಂಧಿಸಲಾಗಿದೆ. ಸಿಲಿಕಾನ್‌ ಸಿಟಿಯಲ್ಲಿ ಬೆಂಗಳೂರಿಲ್ಲಿ ಪಾರ್ಕಿಂಗ್‌ ಇಲ್ಲದೇ ಅದೇಷ್ಟು ಜನರು ಮನೆ ಮುಂದೆ ಬೈಕ್‌ ನ್ನು ನಿಲ್ಲಿಸುತ್ತಾರೆ. ಇದನ್ನೆ ಬಂಡಾವಳವನ್ನಾಗಿ ಮಾಡಿಕೊಂಡು ರಾತ್ರೋರಾತ್ರಿ ಕಳ್ಳತನ ಮಾಡಿ ಮಾರಾಟ ಮಾಡುವ ಹೊಸ ದಂಧೆಯನ್ನ ಶುರು ಮಾಡಿದ್ದನು.

ʼಬೈಕ್ ಕದ್ದು ಕಡಿಮೆ ಬೆಲೆಗೆ ಮಾರುತ್ತಿದ್ದ ಖದೀಮ ಅರೆಸ್ಟ್‌ʼ Read More »

ಕರ್ನಾಟಕ, ಕ್ರೈಮ್ ನ್ಯೂಸ್

ವಿಜಯಪುರ: ಸೇತುವೆಯ ಮೇಲೆ ಮೊಸಳೆ ಪ್ರತ್ಯಕ್ಷ

(ನ್ಯೂಸ್ ಕಡಬ)newskadaba.com  ವಿಜಯಪುರ, ಮಾ.4.  ಕೃಷ್ಣಾನದಿಯ ಸೇತುವೆ ಮೇಲೆ ಇಂದು ಬೆಳಗ್ಗೆ ಬಾಯಿಯನ್ನು ಹಗ್ಗದಿಂದ ಕಟ್ಟಲ್ಪಟ್ಟ ಸ್ಥಿತಿಯಲ್ಲಿ ಮೊಸಳೆ (Crocodile) ಯೊಂದು ಪತ್ತೆಯಾಗಿದೆ. ಜನವಸತಿಗೆ ನುಗ್ಗಿರುವ ಮೊಸಳೆಯನ್ನು ಹಗ್ಗ ಕಟ್ಟಿ ಹಿಡಿಯುವ ವೇಳೆ ತಪ್ಪಿಸಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇಂದು ಬೆಳಗ್ಗೆ ರಸ್ತೆ ಮಧ್ಯೆ ಏಕಾಏಕಿ ಮೊಸಳೆಯನ್ನು ಕಂಡು ವಾಹನ ಸವಾರರು ಗಾಬರಿಗೊಂಡಿದ್ದಾರೆ.  

ವಿಜಯಪುರ: ಸೇತುವೆಯ ಮೇಲೆ ಮೊಸಳೆ ಪ್ರತ್ಯಕ್ಷ Read More »

ಕರ್ನಾಟಕ

ಶಾಲೆಯಲ್ಲಿ ಆಟದ ಮೈದಾನ ಕಡ್ಡಾಯ ➤ ಸುಪ್ರೀಂಕೋರ್ಟ್‌ ಆದೇಶ

(ನ್ಯೂಸ್ ಕಡಬ)newskadaba.com  ನವದೆಹಲಿ, ಮಾ.04. ಆಟದ ಮೈದಾನವಿಲ್ಲದೆ ಶಾಲೆ ಇರುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಅಭಿಪ್ರಾಯಪಟ್ಟಿದೆ. ಇದೇ ವೇಳೆ, ಹರಿಯಾಣದ ಯಮುನಾ ನಗರದಲ್ಲಿರುವ ಶಾಲೆಯ ಆವರಣದ ಅತಿಕ್ರಮಣವನ್ನು ತೆರವುಗೊಳಿಸುವಂತೆ ಕೋರ್ಟ್‌ ಆದೇಶಿಸಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ ಮತ್ತು ಬಿ.ವಿ.ನಾಗರತ್ನ ಅವರಿದ್ದ ದ್ವಿಸದಸ್ಯ ನ್ಯಾಯಪೀಠವು, ‘ಶಾಲೆಯ ಭೂಮಿಯನ್ನು ಮಾರುಕಟ್ಟೆಯ ಬೆಲೆಗೆ ಅತಿಕ್ರಮಣದಾರರಿಗೆ ಮಾರಾಟ ಮಾಡಿ ಭೂಮಿಯನ್ನು ಸಕ್ರಮ ಮಾಡಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ 2016ರಲ್ಲಿ ಆದೇಶ ನೀಡಿರುವುದು ‘ಗಂಭೀರವಾದ ತಪ್ಪು’ ಎಂದು ಅಭಿಪ್ರಾಯಪಟ್ಟಿದೆ.  

ಶಾಲೆಯಲ್ಲಿ ಆಟದ ಮೈದಾನ ಕಡ್ಡಾಯ ➤ ಸುಪ್ರೀಂಕೋರ್ಟ್‌ ಆದೇಶ Read More »

ರಾಷ್ಟ್ರೀಯ ನ್ಯೂಸ್

ಉಡುಪಿ: ಸುಸ್ಥಿತಿಯಲ್ಲಿದ್ದ ರಸ್ತೆಗೆ ಮತ್ತೆ ಕಾಂಕ್ರೀಟ್ ಕಾಮಗಾರಿ.!

(ನ್ಯೂಸ್ ಕಡಬ)newskadaba.com  ಉಡುಪಿ, ಮಾ.04. ಶಾರದಾ ಕಲ್ಯಾಣ ಮಂಟಪದಿಂದ ಬೀಡಿನಗುಡ್ಡೆ ಸಂಪರ್ಕಿಸುವ ಮುಖ್ಯ ಕಾಂಕ್ರೀಟ್ ರಸ್ತೆಯನ್ನು ಕಾಮಗಾರಿಯ ನೆಪದಲ್ಲಿ ಸುವ್ಯವಸ್ಥೆಯಲ್ಲಿದ್ದ ಉತ್ತಮ ಗುಣಮಟ್ಟದ ಕಾಂಕ್ರೀಟ್ ರಸ್ತೆಯನ್ನು ಅಗೆಯುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹತ್ತಿಂಚು ದಪ್ಪ, ಕಬ್ಬಿಣದ ಸರಳು ಅಳವಡಿಸಿ, ಕೆಲವು ಸಮಯದ ಹಿಂದೆ ಹೊಸದಾಗಿ ನಿರ್ಮಾಣ ಮಾಡಿರುವ ಕಾಂಕ್ರೀಟ್ ರಸ್ತೆ ಇದು. ಯಾವುದೇ ಹೊಂಡಗುಂಡಿಗಳಿಲ್ಲದೆ ಸುಸ್ಥಿತಿಯಲ್ಲಿತ್ತು, ಮತ್ತಷ್ಟು ವರ್ಷಗಳು ಬಾಳಿಕೆ ಬರುವ ರಸ್ತೆ ಇದಾಗಿತ್ತು.  

ಉಡುಪಿ: ಸುಸ್ಥಿತಿಯಲ್ಲಿದ್ದ ರಸ್ತೆಗೆ ಮತ್ತೆ ಕಾಂಕ್ರೀಟ್ ಕಾಮಗಾರಿ.! Read More »

ಕರಾವಳಿ

ಸೇನೆ ಸೇರ ಬಯಸುವವರಿಗೆ ಗುಡ್ ನ್ಯೂಸ್ ➤ ಅಗ್ನಿವೀರ್ ನೇಮಕಾತಿಗೆ ನೋಂದಣಿ ಆರಂಭ

(ನ್ಯೂಸ್ ಕಡಬ)newskadaba.com ಶಿವಮೊಗ್ಗ, ಮಾ.04. ಭಾರತ ಸರ್ಕಾರವು ಅಗ್ನಿವೀರ್ ನೇಮಕಾತಿ ಯೋಜನೆಯಡಿ 2023-24 ನೇ ಸಾಲಿಗೆ ಸಶಸ್ತ್ರ ಪಡೆಗೆ ನೇಮಕಾತಿ ಮಾಡಿಕೊಳ್ಳಲು ಆನ್ಲೈಿನ್ ನೋಂದಣಿಯನ್ನು ಆರಂಭಿಸಿದೆ ಎನ್ನಲಾಗಿದೆ. ಮಾರ್ಚ್ 15 ರವರೆಗೆ ನೋಂದಣಿ ಮಾಡಿಕೊಳ್ಳಬಹುದುದಾಗಿದ್ದು, ಅಗ್ನಿವೀರ್ ನೇಮಕಾತಿಯ ಪರೀಕ್ಷೆಗಳು ಏಪ್ರಿಲ್ 17 ರಿಂದ ಆರಂಭವಾಗಲಿದೆ ಎಂದು ವರದಿ ತಿಳಿಸಿದೆ. ಫೇಸ್-1 ರಲ್ಲಿ ಆನ್ಲೈಣನ್ ಕಂಪ್ಯೂಟರ್ ಆಧಾರಿತ ಸಾಮಾನ್ಯ ಪ್ರವೇಶ ಪರೀಕ್ಷೆ(ಆನ್ಲೈ ನ್ ಸಿಇಇ) ಮತ್ತು ಫೇಸ್-2 ರಲ್ಲಿ ನೇಮಕಾತಿ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದೆ ಎಂದು ತಿಳಿದುಬಂದಿದೆ.

ಸೇನೆ ಸೇರ ಬಯಸುವವರಿಗೆ ಗುಡ್ ನ್ಯೂಸ್ ➤ ಅಗ್ನಿವೀರ್ ನೇಮಕಾತಿಗೆ ನೋಂದಣಿ ಆರಂಭ Read More »

ಕರ್ನಾಟಕ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ➤ KSRTC ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.04. ಮಾ. 9ರಿಂದ ದ್ವಿತೀಯ ಪಿಯುಸಿ ಪರೀಕ್ಷೆ (2nd PUC Exam)ಗಳು ಶುರುವಾಗಲಿದೆ ಎಂದು ವರದಿಯಾಗಿದೆ. ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯ ನೀರ್ಣಯ ಮಂಡಳಿ ನೀಡಿದ್ದ ಮನವಿಗೆ ಕೆಎಸ್‌ಆರ್‌ಟಿಸಿ ( KSRTC) ಒಪ್ಪಿ ಸುತ್ತೋಲೆ ಹೊರಡಿಸಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು ತಮ್ಮ ವಿದ್ಯಾಸಂಸ್ಥೆಗಳ ಕೇಂದ್ರಗಳ ಹೊರತಾಗಿ ಬೇರೆ ಸ್ಥಳಗಳಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ಸಂಚರಿಸಲು ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ ಲಭ್ಯವಾಗಲಿದೆ ಎನ್ನಲಾಗಿದೆ. ಈ ಹಿಂದೆಯೇ ಕರ್ನಾಟಕ ರಾಜ್ಯ ಶಾಲಾ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ➤ KSRTC ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ Read More »

ಕರ್ನಾಟಕ
Scroll to Top