News Kadaba

ದೀರ್ಘ ಜ್ವರ & ಕೆಮ್ಮು, ರಾಜ್ಯದಲ್ಲಿ ಹೆಚ್ಚಿದ H3N2 ವೈರಸ್ ಭೀತಿ !        

(ನ್ಯೂಸ್ ಕಡಬ)newskadaba.com ನವದೆಹಲಿ, ಮಾ.06. ಭಾರತದಲ್ಲಿ H3N2 ವೈರಸ್ ಆತಂಕ ಮೂಡಿಸಿದ್ದು, ಈ ಕುರಿತು ಮುಂಜಾಗೃತೆ ವಹಿಸುವಂತೆ ರಾಜ್ಯಗಳಿಗೆ ಕೇಂದ್ರದಿಂದ ಸೂಚನೆ ನೀಡಲಾಗಿದೆ. ಈ ಕುರಿತು ಇಂದು ಆರೋಗ್ಯ ಇಲಾಖೆ ಮಹತ್ವದ ಸಭೆ ನಡೆಸಲಿದೆ ಎನ್ನಲಾಗಿದೆ. ದೀರ್ಘ ಕಾಲದ ಕೆಮ್ಮು ಈ ವೈರಸ್‌ನ ಪ್ರಮುಖ ಗುಣಲಕ್ಷಣ ಎಂದು ಪ್ರಾರಂಭಿಕ ಪ್ರಕರಣದಲ್ಲಿ ತಿಳಿದು ಬಂದಿದೆ. ಇದನ್ನು ಹೊರತುಪಡಿಸಿ ವಾಕರಿಕೆ, ವಾಂತಿ, ಗಂಟಲು ನೋವು,ಸ್ನಾಯು ಸೆಳೆತ ಜ್ವರ ಸಮಸ್ಯೆಗಳು ಕಾಡಲಿದೆ ಎನ್ನಲಾಗಿದೆ.  

ದೀರ್ಘ ಜ್ವರ & ಕೆಮ್ಮು, ರಾಜ್ಯದಲ್ಲಿ ಹೆಚ್ಚಿದ H3N2 ವೈರಸ್ ಭೀತಿ !         Read More »

ರಾಷ್ಟ್ರೀಯ ನ್ಯೂಸ್

ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ರೋಗಿಯ ಶಿಶ್ನವನ್ನು ಕತ್ತರಿಸಿ ಎಡವಟ್ಟು ಮಾಡಿದ ವೈದ್ಯರು !

(ನ್ಯೂಸ್ ಕಡಬ)newskadaba.com ನವದೆಹಲಿ, ಮಾ.06. ಶಿಶ್ನದಲ್ಲಿ ಗೆಡ್ಡೆ ಇದೆ ಎಂದು ವೈದ್ಯರು ರೋಗಿಯೊಬ್ಬನ ಶಿಶ್ನವನ್ನು ಕತ್ತರಿಸಿರುವ ಘಟನೆ ವರದಿಯಾಗಿದೆ. ಅರೆಝೋದಲ್ಲಿನ ಸ್ಯಾನ್ ಡೊನಾಟೊ ಆಸ್ಪತ್ರೆಯಲ್ಲಿ 60 ವರ್ಷದ ರೋಗಿಯ ಶಿಶ್ನವನ್ನು ವೈದ್ಯರು ಗೆಡ್ಡೆ ಇದೆ ಎಂದು ತಪ್ಪಾಗಿ ಗ್ರಹಿಸಿ ಕತ್ತರಿಸಿದ್ದಾರೆ. ಬಳಿಕ ತಪ್ಪಿನ ಅರಿವಾಗಿ ಪುನಃ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ರೋಗಿಯ ಜೀವಕ್ಕೆ ಅಪಾಯ ಇಲ್ಲವಾದರೂ ಜೀವನ ಪೂರ್ತಿ ನೋವಿನಲ್ಲಿಯೇ ಇರುವ ಸ್ಥಿತಿ ಉಂಟಾಗಿದೆ.  

ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ರೋಗಿಯ ಶಿಶ್ನವನ್ನು ಕತ್ತರಿಸಿ ಎಡವಟ್ಟು ಮಾಡಿದ ವೈದ್ಯರು ! Read More »

ರಾಷ್ಟ್ರೀಯ ನ್ಯೂಸ್

ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ !      ➤ ಆಟೋ ಚಾಲಕ ಪುರುಷೋತ್ತಮರವರಿಗೆ ಹೊಸ ರಿಕ್ಷಾ, 5 ಲಕ್ಷ ಸಹಾಯಧನ ಹಸ್ತಾಂತರ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 06. ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಗಾಯಾಳು ಆಟೋ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಹೊಸ ಆಟೋ ರಿಕ್ಷಾ ಹಾಗೂ 5 ಲಕ್ಷ ರೂ.ನೆರವನ್ನು ನೀಡಿರುವ ಕುರಿತು ಎಂದು ವರದಿಯಾಗಿದೆ. ಪುರುಷೋತ್ತಮ ಪೂಜಾರಿ ಅವರ ಮನೆಗೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಹೊಸ ರಿಕ್ಷಾ ಹಾಗೂ 5 ಲಕ್ಷ ರೂ. ಗಳ ಚೆಕ್ ಹಸ್ತಾಂತರಿಸಿದ್ದಾರೆ. ಕಳೆದ ನವೆಂಬರ್ ನಲ್ಲಿ ಮಂಗಳೂರಿನ ಪಂಪ್ ವೆಲ್ ಬಳಿ ಆಟೋವೊಂದರಲ್ಲಿ ಕುಕ್ಕರ್

ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ !      ➤ ಆಟೋ ಚಾಲಕ ಪುರುಷೋತ್ತಮರವರಿಗೆ ಹೊಸ ರಿಕ್ಷಾ, 5 ಲಕ್ಷ ಸಹಾಯಧನ ಹಸ್ತಾಂತರ Read More »

ಕರಾವಳಿ, ಕ್ರೈಮ್ ನ್ಯೂಸ್

ಬಂಟ್ವಾಳ: ಆಕಸ್ಮಿಕ ಬೆಂಕಿ ಅನಾಹುತ ! ➤ ರೆಫ್ರಿಜರೇಟರ್ ದುರಸ್ಥಿ ಮಳಿಗೆ ಬೆಂಕಿಗಾಹುತಿ

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.06. ಪಾಣೆಮಂಗಳೂರಿನ ಗುಡ್ಡೆ ಅಂಗಡಿಯ ರೆಫ್ರಿಜರೇಟರ್ ದುರಸ್ತಿಯ ಮಳಿಗೆಯೊಂದರಲ್ಲಿ ರವಿವಾರ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸೊತ್ತುಗಳು ಬೆಂಕಿಗಾಹುತಿಯಾದ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ. ಗುಡ್ಡೆ ಅಂಗಡಿಯ ಫಾರೂಕ್ ಅವರಿಗೆ ಸೇರಿದ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಸಂಭವಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ಸೇರಿ ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿದ್ದಾರೆ ಎಂದು ವರದಿ ತಿಳಿಸಿದೆ.

ಬಂಟ್ವಾಳ: ಆಕಸ್ಮಿಕ ಬೆಂಕಿ ಅನಾಹುತ ! ➤ ರೆಫ್ರಿಜರೇಟರ್ ದುರಸ್ಥಿ ಮಳಿಗೆ ಬೆಂಕಿಗಾಹುತಿ Read More »

ಕರಾವಳಿ, ಕ್ರೈಮ್ ನ್ಯೂಸ್

ಚಾಲಕನಿಲ್ಲದೆ ಶೋ ರೂಂಗೆ ನುಗ್ಗಿದ ಟ್ರಾಕ್ಟರ್ !

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ, ಮಾ.04. ಶೋರೂಂ ಹೊರಗೆ ನಿಂತಿದ್ದ ಟ್ರಾಕ್ಟರ್ ವೊಂದು ಚಾಲಕನಿಲ್ಲದೆ ಹೋದರೂ ಅಚಾನಕ್ಕಾಗಿ ಸ್ಟಾರ್ಟ್ ಆಗಿ ನೇರವಾಗಿ ಶೋ ರೂಂಗೆ ನುಗ್ಗಿ ಆತಂಕ ಸೃಷ್ಟಿಸಿದ್ದ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಶೋ ರೂಂ ಹೊರಗೆ ನಿಂತಿದ್ದ ಟ್ರಾಕ್ಟರ್ ನೋಡನೋಡುತ್ತಲೇ ದಿಢೀರ್ ಸ್ಟಾರ್ಟ್ ಆಗಿ ಶೋ ರೂಂಗೆ ನುಗ್ಗಿದೆ. ಈ ವೇಳೆ ಶೋರೂಂ ಗ್ಲಾಸ್ ಡೋರ್ ಛಿದ್ರವಾಗಿದ್ದು, ಟ್ರಾಕ್ಟರ್ ನಿಯಂತ್ರಿಸಲು ಸಿಬ್ಬಂದಿ ಹರಸಾಹಸಪಟ್ಟ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.

ಚಾಲಕನಿಲ್ಲದೆ ಶೋ ರೂಂಗೆ ನುಗ್ಗಿದ ಟ್ರಾಕ್ಟರ್ ! Read More »

ಕರ್ನಾಟಕ

➤ ಬೆಂಗಳೂರು 300 ಬೆಣ್ಣೆ ಹಣ್ಣಿನ ಮರಗಳಿಗೆ ಕಿಡಿಗೇಡಿಗಳಿಂದ ಬೆಂಕಿ

(ನ್ಯೂಸ್ ಕಡಬ) newskadaba.co.ಬೆಂಗಳೂರು, ಮಾ 4.  ಬಿಡದಿಯ ಕೊಡಿಯಾಲ ಕರೇನಹಳ್ಳಿಯಲ್ಲಿ 42 ವರ್ಷದ ರತ್ನ ಅವರ ಎರಡು ಎಕರೆಗೂ ಹೆಚ್ಚು ಜಮೀನಿನಲ್ಲಿ ಬೆಳೆದಿದ್ದ 300 ಬೆಣ್ಣೆ ಹಣ್ಣಿನ ಮರಗಳನ್ನು ಅಪರಿಚಿತ ದುಷ್ಕರ್ಮಿಗಳು ಸುಟ್ಟು ಹಾಕಿದ್ದಾರೆ. ರತ್ನ ಅವರು ಈ ಬೇಸಿಗೆಯಲ್ಲಿ ಹಣ್ಣುಗಳನ್ನು ಮಾರಾಟ ಮಾಡಿ ಲಾಭ ಗಳಿಸಿದ್ದರು. ಮರಗಳಲ್ಲದೆ, ನೀರಿನ ಪೈಪ್‌ಗಳು ಮತ್ತು ಯಂತ್ರಗಳು ಸಹ ಸುಟ್ಟುಹೋಗಿವೆ. ಇಡೀ ಪ್ರದೇಶವು ಸುಟ್ಟು ಕರಕಲಾಗಿದೆ. ಸುಮಾರು 10 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ವಾಣಿಜ್ಯ ಬೆಳೆಗಳನ್ನು ರಕ್ಷಿಸಲು

➤ ಬೆಂಗಳೂರು 300 ಬೆಣ್ಣೆ ಹಣ್ಣಿನ ಮರಗಳಿಗೆ ಕಿಡಿಗೇಡಿಗಳಿಂದ ಬೆಂಕಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮನೀಶ್ ಸಿಸೋಡಿಯಾ ಸಿಬಿಐ ಕಸ್ಟಡಿ ಇನ್ನೆರಡು ದಿನ ವಿಸ್ತರಿಸಿ    ➤ ನ್ಯಾಯಾಲಯ ಆದೇಶ

(ನ್ಯೂಸ್ ಕಡಬ)newskadaba.com ನವದೆಹಲಿ, ಮಾ.04. ಅಬಕಾರಿ ನೀತಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಸಿಬಿಐ ಕಸ್ಟಡಿ ಅವಧಿಯನ್ನು ಮಾರ್ಚ್ 6ರವರೆಗೆ ವಿಸ್ತರಿಸಿ ಶನಿವಾರ ರೋಸ್ ಅವಿನ್ಯೂ ಕೋರ್ಟ್  ಆದೇಶ ನೀಡಿದೆ. ಐದು ದಿನಗಳ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಧೀಶ ಎಂಕೆ ನಾಗ್ ಪಾಲ್ ಅವರ ಮುಂದೆ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಇಂದು ಹಾಜರುಪಡಿಸಿತು.

ಮನೀಶ್ ಸಿಸೋಡಿಯಾ ಸಿಬಿಐ ಕಸ್ಟಡಿ ಇನ್ನೆರಡು ದಿನ ವಿಸ್ತರಿಸಿ    ➤ ನ್ಯಾಯಾಲಯ ಆದೇಶ Read More »

ರಾಷ್ಟ್ರೀಯ ನ್ಯೂಸ್

ಉಳ್ಳಾಲ: ಮಾ.25, 26 ರಂದು ನಿಂತುಹೋಗಿದ್ದ ಲವ-ಕುಶ ಜೋಡುಕರೆ ಕಂಬಳಕ್ಕೆ ಚಾಲನೆ

(ನ್ಯೂಸ್ ಕಡಬ)newskadaba.com  ಉಳ್ಳಾಲ, ಮಾ.04. ತಾಲೂಕಿನ ನರಿಂಗಾನ ಗ್ರಾಮದ ಮೋರ್ಲ-ಬೋಳ ಎಂಬಲ್ಲಿ ಶಾಸಕ ಯು.ಟಿ.ಖಾದರ್ ಅನುದಾನದಿಂದ ನಿರ್ಮಾಣಗೊಂಡ ಕಂಬಳ ಕರೆ ಉದ್ಘಾಟನೆಗೊಂಡಿದ್ದು, ಇಲ್ಲಿ ಮಾರ್ಚ್ 25,26 ರಂದು ಕಾರಣಾಂತರಗಳಿಂದ‌ ನಿಂತು ಹೋಗಿದ್ದ ಲವ-ಕುಶ ಜೋಡುಕರೆ ಕಂಬಳ ನಡೆಯಲಿದೆ. ಮೋರ್ಲ-ಬೋಳದ ವಿಶಾಲ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಸರಕಾರಿ ಕಂಬಳ ಕರೆಯನ್ನ ಬುಧವಾರ ಲವ-ಕುಶ ಜೋಡುಕರೆ ಕಂಬಳ ಉತ್ಸವ ಸಮಿತಿಯ ಗೌರವಾಧ್ಯಕ್ಷ ವೆಂಕಪ್ಪ ಕಾಜವ ಅವರು ಉದ್ಘಾಟಿಸಿದರು.  

ಉಳ್ಳಾಲ: ಮಾ.25, 26 ರಂದು ನಿಂತುಹೋಗಿದ್ದ ಲವ-ಕುಶ ಜೋಡುಕರೆ ಕಂಬಳಕ್ಕೆ ಚಾಲನೆ Read More »

ಕರಾವಳಿ

ಅಮಿತ್ ಶಾ ಕೇರಳ ಪ್ರವಾಸ ಮುಂದೂಡಿಕೆ

(ನ್ಯೂಸ್ ಕಡಬ)newskadaba.com  ಕೊಚ್ಚಿ, ಮಾ.04. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾರ್ಚ್ 5ರಂದು ಕೇರಳದ ತ್ರಿಶೂರ್ ಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ತಿಳಿಸಿದ್ದಾರೆ. ಅಮಿತ್ ಶಾ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚನೆ ಸಂಬಂಧ ಮಾತುಕತೆಯಲ್ಲಿ ತೊಡಗಿಸಿಕೊಂಡಿರುವುದನ್ನು ಗಮನಿಸಬಹುದು. ಈ ಹಿನ್ನಲೆಯಲ್ಲಿ ಭೇಟಿ ರದ್ದಾಗಿದೆ ಎಂದು ತಿಳಿದುಬಂದಿದೆ.  

ಅಮಿತ್ ಶಾ ಕೇರಳ ಪ್ರವಾಸ ಮುಂದೂಡಿಕೆ Read More »

ರಾಷ್ಟ್ರೀಯ ನ್ಯೂಸ್

ಉಜಿರೆ ಆಸುಪಾಸು ಮೂರು ಪ್ರದೇಶಗಳಲ್ಲಿ ಬೆಂಕಿ ಅನಾಹುತ

(ನ್ಯೂಸ್ ಕಡಬ)newskadaba.com  ಉಜಿರೆ, ಮಾ.04. ಎರಡು ಕಡೆ ಮತ್ತು ಮುಂಡಾಜೆಯಲ್ಲಿ ಬೆಂಕಿ ಅನಾಹುತ ಸಂಭವಿಸಿದ ಘಟನೆ ಶುಕ್ರವಾರ ನಡೆದಿದೆ. ಮುಂಡಾಜೆ ಗ್ರಾಮದ ಕಡಂಬಳ್ಳಿ ಸಮೀಪ ಗುಡ್ಡದಲ್ಲಿ ಬೆಂಕಿ ಉಂಟಾಗಿ ಭೀತಿಯ ವಾತಾವರಣ ಸೃಷ್ಟಿಯಾಯಿತು. ವಿದ್ಯುತ್ ಪರಿವರ್ತಕದಿಂದ ಸಿಡಿದ ಕಿಡಿಗಳಿಂದ ಉಂಟಾದ ಬೆಂಕಿ ಸಮೀಪದ ಗುಡ್ಡವನ್ನು ಆವರಿಸಿ, ರಬ್ಬರ್ ತೋಟಕ್ಕೂ ಪಸರಿಸಿದೆ. ತಕ್ಷಣ ಸ್ಪಂದಿಸಿದ ಸ್ಥಳೀಯ ಮಂದಿ ಬೆಂಕಿ ಇನ್ನಷ್ಟು ಹರಡದಂತೆ ಕ್ರಮ ಕೈಗೊಂಡ ಕಾರಣದಿಂದ ರಬ್ಬರ್ ತೋಟಕ್ಕೆ ಹೆಚ್ಚಿನ ಹಾನಿ ಉಂಟಾಗಿಲ್ಲ.    

ಉಜಿರೆ ಆಸುಪಾಸು ಮೂರು ಪ್ರದೇಶಗಳಲ್ಲಿ ಬೆಂಕಿ ಅನಾಹುತ Read More »

ಕರಾವಳಿ
Scroll to Top