News Kadaba

ಮುಷ್ಕರಕ್ಕೆ ಕರೆ ನೀಡಿದ್ದ ಸಾರಿಗೆ ನೌಕರರ ಸಂಘದ ಅಧ್ಯಕ್ಷ ವಶಕ್ಕೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.22. ಸಾರಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಶಾಂತಿನಗರದ ಕೆಎಸ್‌ಆರ್ಟಿಸಿ ಕಚೇರಿ ಮುಂದೆ ಸತ್ಯಾಗ್ರಹ ಕೈಗೊಂಡಿದ್ದ ಚಂದ್ರಶೇಖರ್ ಅವರನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಾರಿಗೆ ನೌಕರರು ಮುಷ್ಕರ ವಾಪಸ್ ಪಡೆದುಕೊಂಡಿದ್ದಕ್ಕೆ ಚಂದ್ರಶೇಖರ್ ವಿರೋಧ ವ್ಯಕ್ತಪಡಿಸಿದ್ದರು.

ಮುಷ್ಕರಕ್ಕೆ ಕರೆ ನೀಡಿದ್ದ ಸಾರಿಗೆ ನೌಕರರ ಸಂಘದ ಅಧ್ಯಕ್ಷ ವಶಕ್ಕೆ Read More »

ಕರ್ನಾಟಕ

16ರ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಡಿಪ್ಲೋಮಾ ವಿದ್ಯಾರ್ಥಿ ➤ ದೂರು ದಾಖಲು..!

(ನ್ಯೂಸ್ ಕಡಬ)newskadaba.com  ಕಾರವಾರ, ಮಾ.22. 16 ವರ್ಷದ ಬಾಲಕಿಯ ಮೇಲೆ ಡಿಪ್ಲೊಮಾ ವಿದ್ಯಾರ್ಥಿಯೋರ್ವ ಅತ್ಯಾಚಾರ ನಡೆಸಿರುವ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ. ಆರೋಪಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನವನು ಎನ್ನಲಾಗಿದ್ದು, ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದ ಈತ ಕಳೆದ ಜನವರಿ ತಿಂಗಳಿನಲ್ಲಿ ಅಂಕೋಲಾಕ್ಕೆ ಬಂದಿದ್ದಾಗ ಬಾಲಕಿಯನ್ನು ಬೀಚ್‌ಗೆ ಕರೆದೊಯ್ದು ಬಲವಂತವಾಗಿ ಅತ್ಯಾಚಾರ ಎಸಗಿದ್ದ ಎಂದು ದೂರು ದಾಖಲಾಗಿದೆ.

16ರ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಡಿಪ್ಲೋಮಾ ವಿದ್ಯಾರ್ಥಿ ➤ ದೂರು ದಾಖಲು..! Read More »

ಕರಾವಳಿ, ಕ್ರೈಮ್ ನ್ಯೂಸ್

ಯುವತಿಗೆ ಹೋಳಿ ಹಾಕಿದ್ದಕ್ಕೆ ವಿದ್ಯಾರ್ಥಿಯನ್ನು ಅಪಹರಿಸಿ, ಬೆತ್ತಲೆಗೊಳಿಸಿ ಹಲ್ಲೆ

(ನ್ಯೂಸ್ ಕಡಬ)newskadaba.com  ಕೋಲಾರ, ಮಾ.22. ಯುವತಿಗೆ ಹೋಳಿ ಹಾಕಿದ್ದಕ್ಕೆ ಕಾನೂನು ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ ಹಲ್ಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಮಧು ಬಿ.ಸಿ ಹಲ್ಲೆಗೊಳ್ಳಗಾದ ಕಾನೂನು ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಮಧು ಡಿ.ಎನ್.ಡಿ ಮತ್ತು ಆತನ ಸ್ನೇಹಿತರಾದ ಶಿವರಾಜ್, ಅಭಿಲಾಷ್, ರಾಹುಲ್ ಹಾಗೂ ಪ್ರಮೋದ್ ವಿರುದ್ಧ ವಿದ್ಯಾರ್ಥಿಯನ್ನು ಅಪಹರಿಸಿ, ಬೆತ್ತಲೆಗೊಳಿಸಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.    

ಯುವತಿಗೆ ಹೋಳಿ ಹಾಕಿದ್ದಕ್ಕೆ ವಿದ್ಯಾರ್ಥಿಯನ್ನು ಅಪಹರಿಸಿ, ಬೆತ್ತಲೆಗೊಳಿಸಿ ಹಲ್ಲೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕ್ಲಸ್ಟರ್‌ ಹಂತದಲ್ಲೇ 5, 8ನೇ ತರಗತಿ ಮೌಲ್ಯಮಾಪನ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಮಾ.22. ರಾಜ್ಯ ಪಠ್ಯಕ್ರಮ ಬೋಧಿಸುವ 5 ಮತ್ತು 8ನೇ ತರಗತಿ ಮಕ್ಕಳಿಗೆ ನಡೆಸುತ್ತಿರುವ ಮೌಲ್ಯಾಂಕನ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಕ್ಲಸ್ಟರ್‌ ಮಟ್ಟದಲ್ಲಿ ನಿರ್ವಹಿಸುವುದಾಗಿ ತೀರ್ಮಾನಿಸಲಾಗಿದೆ. ಒಂದು ಬ್ಲಾಕ್‌ನಿಂದ ಮತ್ತೂಂದು ಬ್ಲಾಕ್‌ಗೆ ಪ್ರಶ್ನೆಪತ್ರಿಕೆಗಳ ಸಾಗಾಟ ಮಾಡಿ ಮೌಲ್ಯಮಾಪನ ನಡೆಸಿ ಫಲಿತಾಂಶ ಪ್ರಕಟಿಸಲು ಸಮಯ ಸಾಲದು, ಆದ್ದರಿಂದ ಅಂತರ್‌ ಕ್ಲಸ್ಟರ್‌ವಾರು ನಿರ್ವಹಿಸುವಂತೆ ಡಿಡಿಪಿಐ ಮತ್ತು ಬಿಇಒಗಳಿಗೆ ಸೂಚಿಸಲಾಗಿದೆ.  

ಕ್ಲಸ್ಟರ್‌ ಹಂತದಲ್ಲೇ 5, 8ನೇ ತರಗತಿ ಮೌಲ್ಯಮಾಪನ Read More »

ಕರ್ನಾಟಕ

ಉಗ್ರರೊಂದಿಗೆ ಗುಂಡಿನ ಚಕಮಕಿ ➤ ಐಎಸ್‌ಐ ಟಾಪ್ ಬ್ರಿಗೇಡಿಯರ್ ಹತ್ಯೆ

(ನ್ಯೂಸ್ ಕಡಬ)newskadaba.com  ನವದೆಹಲಿ, ಮಾ.22. ಪಾಕಿಸ್ತಾನದ ದಕ್ಷಿಣ ವಜಿರಿಸ್ತಾನದ ಅಂಗೂರ್ ಅಡ್ಡಾದಲ್ಲಿ ಹಾರ್ಡ್‌ಕೋರ್ ಭಯೋತ್ಪಾದಕರ ಜೊತೆಗಿನ ಎನ್‌ ಕೌಂಟರ್‌ ನಲ್ಲಿ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್(ಐಎಸ್‌ಐ) ನ ಬ್ರಿಗೇಡಿಯರ್ ಮುಸ್ತಫಾ ಕಮಲ್ ಬಾರ್ಕಿ ಕೊಲ್ಲಲ್ಪಟ್ಟರು ಎಂದು ಪಾಕಿಸ್ತಾನ ಮಿಲಿಟರಿ ಮಾಧ್ಯಮ ವಿಭಾಗ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ತಿಳಿಸಿದೆ. ಎರಡು ಕಡೆಯ ನಡುವೆ ತೀವ್ರವಾದ ಗುಂಡಿನ ಚಕಮಕಿ ನಡೆದಿದೆ ಎಂದು ISPR ಹೇಳಿಕೆಯಲ್ಲಿ ತಿಳಿಸಿದ್ದು, ಮುಂಭಾಗದಿಂದ ಎನ್‌ಕೌಂಟರ್ ಮುನ್ನಡೆಸುತ್ತಿರುವಾಗ ಬ್ರಿಗೇಡಿಯರ್ ಮುಸ್ತಫಾ ಕಮಾಲ್ ಬಾರ್ಕಿಯನ್ನು ಕೊಲ್ಲಲಾಗಿದೆ. 7 ಮಂದಿ ಗಾಯಗೊಂಡಿದ್ದು,

ಉಗ್ರರೊಂದಿಗೆ ಗುಂಡಿನ ಚಕಮಕಿ ➤ ಐಎಸ್‌ಐ ಟಾಪ್ ಬ್ರಿಗೇಡಿಯರ್ ಹತ್ಯೆ Read More »

ರಾಷ್ಟ್ರೀಯ ನ್ಯೂಸ್
Death, deadbody, Waterfall

ತಾಯಿಯ ಅನೈತಿಕ ಸಂಬಂಧಕ್ಕೆ 10ನೇ ತರಗತಿ ಮಗಳು ಬಲಿ

(ನ್ಯೂಸ್ ಕಡಬ)newskadaba.com ಗದಗ, ಮಾ.22. ತಾಯಿಯ ಅನೈತಿಕ ಸಂಬಂಧಕ್ಕೆ ಮಗಳು ಕೊಲೆಯಾಗಿರುವ ಆರೋಪ ಗದಗ ಜಿಲ್ಲೆಯಲ್ಲಿ ಕೇಳಿಬಂದಿದೆ. ಮುಂಡರಗಿ ಪಟ್ಟಣದಲ್ಲಿ ಪರೀಕ್ಷೆ ಬರೆದು ಬಂದ ಅಪ್ರಾಪ್ತ ಬಾಲಕಿಯನ್ನು ಮೆಹಬೂಬ್ ಸಾಬ್ ಬಾಣದ ಎನ್ನುವಾತ ಕೊಲೆ ಮಾಡಿದ್ದಾನೆ. ಇದಕ್ಕೆ ಬಾಲಕಿ ವಿರೋಧ ವ್ಯಕ್ತಪಡಿಸಿದ್ದಳು ಅದ್ಕೆ ಕೋಪಗೊಂಡ ಮೆಹಬೂಬ್ ಸಾಬ್‌ ಅವಳ ಕತ್ತು ಹಿಸುಕಿ, ಉಸಿರು ಗಟ್ಟಿಸಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸ್ತಿದ್ದಾರೆ.

ತಾಯಿಯ ಅನೈತಿಕ ಸಂಬಂಧಕ್ಕೆ 10ನೇ ತರಗತಿ ಮಗಳು ಬಲಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಆಸ್ತಿ ವಿವಾದ ➤ ರೌಡಿಶೀಟರ್ ಗಗನ್ ಶರ್ಮಾ ಹತ್ಯೆಗೆ ಯತ್ನ

(ನ್ಯೂಸ್ ಕಡಬ) newskadaba.com.ಬೆಂಗಳೂರು, ಮಾ 22. ಇಂದು  ಬೆಳಗ್ಗೆ ಸಚಿವೆ ಶಶಿಕಲಾ ಜೊಲ್ಲೆ ಮನೆ ಮುಂದೆಯೇ ಸ್ನೇಹಿತರಿಂದ ರೌಡಿಶೀಟರ್ ಗಗನ್ ಶರ್ಮಾ ಕೊಲೆಗೆ ಯತ್ನ ನಡೆದಿದೆ. ದುಷ್ಕರ್ಮಿಗಳು ರೌಡಿಶೀಟರ್ ಮೇಲೆ ಮೂರ್ನಾಲ್ಕು ಬಾರಿ ಕಾರು ಹತ್ತಿಸಿ ಹತ್ಯೆ ಮಾಡಲು ಮುಂದಾಗಿದ್ದು, ಗಗನ್ ಶರ್ಮಾ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮಾರ್ಚ್ 21ರ ಮುಂಜಾನೆ 5.30 ರಿಂದ 6 ಗಂಟೆಗೆ ಆಸುಪಾಸಿನಲ್ಲಿ ಘಟನೆ ನಡೆದಿದ್ದು, ಗಗನ್ ಶರ್ಮಾ ಹೌಗ್ರೌಂಡ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿ ಗುರುತಿಸಿಕೊಂಡಿದ್ದಾನೆ. ಬಿಬಿಎಂಪಿ

ಆಸ್ತಿ ವಿವಾದ ➤ ರೌಡಿಶೀಟರ್ ಗಗನ್ ಶರ್ಮಾ ಹತ್ಯೆಗೆ ಯತ್ನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸೂಕ್ತ ದಾಖಲೆಗಳಿಲ್ಲದೆ 9 ಲಕ್ಷ ರೂ. ನಗದು ಕಾರಿನಲ್ಲಿ ಸಾಗಾಟ

(ನ್ಯೂಸ್ ಕಡಬ)newskadaba.com  ಬೆಳಗಾವಿ, ಮಾ.22. ಸೂಕ್ತ ದಾಖಲಾತಿಗಳಿಲ್ಲದೇ ಸಾಗಿಸಲಾಗುತ್ತಿದ್ದ 9 ಲಕ್ಷ ರೂಪಾಯಿ ನಗದು ಹಣವನ್ನು ಕಣಬರಗಿ ಚೆಕ್ ಪೋಸ್ಟ್ ನಲ್ಲಿ ವಶಪಡಿಸಿಕೊಳ್ಳಲಾಗಿದೆ. ಕಾರನ್ನು ಕಣಬರಗಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಿದಾಗ ನಗದು ಪತ್ತೆಯಾಗಿದೆ. ನಗದು ಹಣವು ಖಾಸಗಿ ಫೈನಾನ್ಸ್ ಕಂಪನಿಗೆ ಸೇರಿದೆ. ಆದರೆ ಈ ಹಣಕ್ಕೆ ಸಂಬಂಧಿಸಿದಂತೆ ಸಮರ್ಪಕ ದಾಖಲೆಗಳನ್ನು ಅವರು ಒದಗಿಸಿರುವುದಿಲ್ಲ. ಇದಲ್ಲದೇ ಹಣ ಸಾಗಾಣಿಕೆಗೆ ಸಂಬಂಧಿಸಿದಂತೆ ಇರುವ ನಿಗದಿತ ಎಸ್.ಓ.ಪಿ.ಯನ್ನು ಕೂಡ ಪಾಲಿಸದಿರುವುದು ಕಂಡುಬಂದಿದೆ.  

ಸೂಕ್ತ ದಾಖಲೆಗಳಿಲ್ಲದೆ 9 ಲಕ್ಷ ರೂ. ನಗದು ಕಾರಿನಲ್ಲಿ ಸಾಗಾಟ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬ್ರಹ್ಮಾವರ: ಅಕ್ರಮ ಅಕ್ಕಿ ಸಾಗಾಟ ➤ 5.7 ಲಕ್ಷ ರೂ. ಮೌಲ್ಯದ 220  ಚೀಲ ಪಡಿತರ ಅಕ್ಕಿ ವಶಕ್ಕೆ

(ನ್ಯೂಸ್ ಕಡಬ)newskadaba.com  ಬ್ರಹ್ಮಾವರ, ಮಾ.22. ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 5,00,790 ರೂ. ಮೌಲ್ಯದ 220 ಚೀಲ ಪಡಿತರ ಅಕ್ಕಿಯನ್ನು ಬ್ರಹ್ಮಾವರ ತಾಲೂಕು ಆಹಾರ ನಿರೀಕ್ಷಕರು ಪೊಲೀಸರ ಸಹಕಾರದೊಂದಿಗೆ ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಸಾಗಾಟಕ್ಕೆ ಬಳಸಿದ ಕಂಟೈನರ್ ವಾಹನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಬ್ರಹ್ಮಾವರ ಚಾಂತಾರು ಗ್ರಾಮದ ಕೃಷಿ ಕೇಂದ್ರದ ಬಳಿ ಬ್ರಹ್ಮಾವರ-ಹೆಬ್ರಿ ರಸ್ತೆಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಬ್ರಹ್ಮಾವರ ಠಾಣಾ ಪಿಎಸ್‌ಐ ಹಾಗೂ ಸಿಬಂದಿಯ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದ ತಾಲೂಕು ಆಹಾರ ನಿರೀಕ್ಷಕರು

ಬ್ರಹ್ಮಾವರ: ಅಕ್ರಮ ಅಕ್ಕಿ ಸಾಗಾಟ ➤ 5.7 ಲಕ್ಷ ರೂ. ಮೌಲ್ಯದ 220  ಚೀಲ ಪಡಿತರ ಅಕ್ಕಿ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ರಾಜ್ಯದಲ್ಲಿ ಹೆಚ್ಚಾದ ಸೀರೆ ಪಾಲಿಟಿಕ್ಸ್ ➤16 ಲಕ್ಷ ಬೆಲೆ ಬಾಳುವ ಸೀರೆ ಜಪ್ತಿ

(ನ್ಯೂಸ್ ಕಡಬ) newskadaba.com. ಕೋಲಾರ, ಮಾ 22. ಚಿಕ್ಕೋಡಿ ರಾಜ್ಯಾದ್ಯಂತ ಮತ ಪ್ರಚಾರ ಭರದಿಂದ ಸಾಗುತ್ತಿದ್ದು, ಮತದಾರರ ಮನವೊಲಿಸಲು ಹಲವು ಗಿಮಿಕ್ ಗಳು ನಡೆಯುತ್ತಿವೆ. ಮತ್ತೊಂದೆಡೆ  ಗಿಪ್ಷ್ ಪಾಲಿಟಿಕ್ಸ್ ತಂತ್ರ ಕೂಡ ನಡೆಯುತ್ತಿದೆ. ಈ ವೇಳೆ ಸದಲಗಾ ದತವಾಡ ಚೆಕ್ ಪೋಸ್ಟ್ ನಲ್ಲಿ ಮತದಾರರಿಗೆ ಹಂಚಲು ಕೊಂಡೊಯ್ಯುತ್ತಿದ್ದ ಸೀರೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.ಸುಮಾರು 16ಲಕ್ಷ ಬೆಲೆ ಬಾಳುವ ಸೀರೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ರಾಜ್ಯದಲ್ಲಿ ಹೆಚ್ಚಾದ ಸೀರೆ ಪಾಲಿಟಿಕ್ಸ್ ➤16 ಲಕ್ಷ ಬೆಲೆ ಬಾಳುವ ಸೀರೆ ಜಪ್ತಿ Read More »

ಕರ್ನಾಟಕ
Scroll to Top