News Kadaba

78,800 ಕೋಟಿ ರೂ.ಗಳ ಬಜೆಟ್‌ ಮಂಡಿಸಿದ ದೆಹಲಿ ಸರ್ಕಾರ

(ನ್ಯೂಸ್ ಕಡಬ)newskadaba.com ನವದೆಹಲಿ, ಮಾ.23. ದೆಹಲಿ ಸರ್ಕಾರವು ದೆಹಲಿ ವಿಧಾನಸಭೆಯಲ್ಲಿಂದು 78,800 ಕೋಟಿ ರೂ.ಗಳ ಬಜೆಟ್‌ ಮಂಡಿಸಿದೆ ಎಂದು ತಿಳಿದುಬಂದಿದೆ. ಹಣಕಾಸು ಸಚಿವ ಕೈಲಾಶ್ ಗೆಹ್ಲೋತ್‌ ಅವರು 2023-24ನೇ ಸಾಲಿನ ಬಜೆಟ್ ಮಂಡಿಸಿದರು. ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಮೂಲಸೌಕರ್ಯಕ್ಕೆ 22,000, ಶಿಕ್ಷಣಕ್ಕೆ 16 ಸಾವಿರ ಕೋಟಿ, ಆರೋಗ್ಯಕ್ಕೆ 9 ಸಾವಿರ ಕೋಟಿ, ಜಾಹೀರಾತುಗಳಿಗೆ 550 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ ಎಂದು ಗೆಹ್ಲೋತ್ ಅವರು ತಿಳಿಸಿದ್ದಾರೆ.

78,800 ಕೋಟಿ ರೂ.ಗಳ ಬಜೆಟ್‌ ಮಂಡಿಸಿದ ದೆಹಲಿ ಸರ್ಕಾರ Read More »

ರಾಷ್ಟ್ರೀಯ ನ್ಯೂಸ್

ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಪ್ರಕರಣ     ➤ ಆರೋಪಿಗೆ 62 ವರ್ಷ ಸಜೆ ಮತ್ತು 1 ಲಕ್ಷ ರೂ. ದಂಡ

(ನ್ಯೂಸ್ ಕಡಬ)newskadaba.com ಕಾಸರಗೋಡು, ಮಾ.23. ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿಗೆ 62 ವರ್ಷ ಸಜೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ಕಾಸರಗೋಡು ಪಾಸ್ಟ್ ಟ್ರಾಕ್ ವಿಶೇಷ (ಪೋಕ್ಸೋ) ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕುಂಬಳೆ ಬಂಬ್ರಾಣ ದ ಕೆ. ಚಂದ್ರ ಶೇಖರ (56) ಶಿಕ್ಷೆ ಗೊಳಗಾದವನು ಎನ್ನಲಾಗಿದೆ. ಕಾಸರಗೋಡು ಮತ್ತು ಕುಂಬಳೆ ಠಾಣಾ ಪೊಲೀಸರು ದಾಖಲಿಸಿದ ಎರಡು ಪ್ರತ್ಯೇಕ ಫೋಕ್ಸೋ ಪ್ರಕರಣ ಗಳಿಗೆ ಸಂಬಂಧ ಪಟ್ಟಂತೆ ಶಿಕ್ಷೆ

ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಪ್ರಕರಣ     ➤ ಆರೋಪಿಗೆ 62 ವರ್ಷ ಸಜೆ ಮತ್ತು 1 ಲಕ್ಷ ರೂ. ದಂಡ Read More »

ಕರ್ನಾಟಕ

ಕೊರೊನಾ, ಇನ್ಫ್ಲುಯೆನ್ಸ್ ಪ್ರಕರಣ ಉಲ್ಬಣ    ➤ ಮಾಸ್ಕ್ ಧರಿಸುವ ಅಗತ್ಯವನ್ನು ಒತ್ತಿ ತಿಳಿಸಿದ ಪ್ರಧಾನಿ

(ನ್ಯೂಸ್ ಕಡಬ)newskadaba.com ನವದೆಹಲಿ, ಮಾ.23. ದೇಶಾದ್ಯಂತ ಕೊರೊನಾ ಸೋಂಕಿನ ಸ್ಥಿತಿಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವ ಅವಶ್ಯಕತೆಯಿದ್ದು, ನೈರ್ಮಲ್ಯ ಮತ್ತು ಜನನಿಬಿಡ ಸ್ಥಳಗಳಲ್ಲಿ ಕೊರೊನಾದ ಸೂಕ್ತ ನಡವಳಿಕೆಯನ್ನು ಅನುಸರಿಸಲು, ಆರೋಗ್ಯ ವೃತ್ತಿಪರರು ಮತ್ತು ಆರೋಗ್ಯ ಕಾರ್ಯಕರ್ತರು ಆಸ್ಪತ್ರೆಗಳ ಆವರಣದಲ್ಲಿ ಮಾಸ್ಕ್ ಧರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದ್ದಾರೆ. ಭಾರತದಲ್ಲಿ ಕೊರೊನಾ ಮತ್ತು ಇನ್ಫ್ಲುಯೆನ್ಸ ಪ್ರಕರಣಗಳ ಉಲ್ಬಣದ ಬಗ್ಗೆ ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆಯ ಸಿದ್ಧತೆಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ

ಕೊರೊನಾ, ಇನ್ಫ್ಲುಯೆನ್ಸ್ ಪ್ರಕರಣ ಉಲ್ಬಣ    ➤ ಮಾಸ್ಕ್ ಧರಿಸುವ ಅಗತ್ಯವನ್ನು ಒತ್ತಿ ತಿಳಿಸಿದ ಪ್ರಧಾನಿ Read More »

ರಾಷ್ಟ್ರೀಯ ನ್ಯೂಸ್

ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ

(ನ್ಯೂಸ್ ಕಡಬ)newskadaba.com ಚನ್ನರಾಯಪಟ್ಟಣ, ಮಾ.23. ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ(73) ವಿಧಿವಶರಾಗಿದ್ದಾರೆ ಎಂದು ತಿಳಿದುಬಂದಿದೆ. ಸ್ವಾಮೀಜಿಯವರು ಕಳೆದ 4 ತಿಂಗಳಿನಿಂದ ಅನಾರೋಗ್ಯಕ್ಕೀಡಾಗಿದ್ದು ಶ್ರವಣಬೆಳಗೊಳದ ಮಠದಲ್ಲಿಯೇ ಅವರಿಗೆ ಶುಶ್ರೂಷೆ ಮಾಡಲಾಗುತ್ತಿತ್ತು ಎನ್ನಲಾಗಿತ್ತು. ಬಿಪಿ, ಶುಗರ್ ಏರುಪೇರಿನಿಂದ ಅಸ್ವಸ್ಥಗೊಂಡು ಸ್ವಾಮೀಜಿ ಕೆಳಗೆ ಬಿದ್ದಿದ್ದು ತಕ್ಷಣ ಅವರನ್ನು ಮಠದಲ್ಲೇ ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್‌ ಮೂಲಕ ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.  

ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ Read More »

ಕರ್ನಾಟಕ

ಚೆಕ್‌ ಅಮಾನ್ಯ ಪ್ರಕರಣ    ➤ 6 5.69 ಲಕ್ಷ ರೂ. ದಂಡ

(ನ್ಯೂಸ್ ಕಡಬ)newskadaba.com  ಬಂಟ್ವಾಳ, ಮಾ.22. ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಿಂದ ಸಾಲ ಪಡೆದು ಮರು ಪಾವತಿಸದ ಆರೋಪಿಗೆ ಬಂಟ್ವಾಳ ನ್ಯಾಯಾಲಯ ಚೆಕ್‌ ಅಮಾನ್ಯ (ಬೌನ್ಸ್‌) ಪ್ರಕರಣದಲ್ಲಿ 5,69,500 ರೂ. ದಂಡ ವಿಧಿಸಿ ಆದೇಶ ನೀಡಿದೆ. ಪಂಜಿಕಲ್ಲು ನಿವಾಸಿ ಪದ್ಮನಾಭ ಮಡಿವಾಳ ಆರೋಪಿಯಾಗಿದ್ದು, ಬಂಟ್ವಾಳ ಪಿಎಲ್‌ಡಿ ಬ್ಯಾಂಕಿನಿಂದ ಸಾಲ ಪಡೆದು ಮರುಪಾವತಿಸಿರಲಿಲ್ಲ. ಬ್ಯಾಂಕಿಗೆ ಅವರು ನೀಡಿದ ಚೆಕ್‌ ಕೂಡ ಅಮಾನ್ಯಗೊಂಡಿದ್ದು, ಹೀಗಾಗಿ ಬ್ಯಾಂಕ್‌ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿತ್ತು.  

ಚೆಕ್‌ ಅಮಾನ್ಯ ಪ್ರಕರಣ    ➤ 6 5.69 ಲಕ್ಷ ರೂ. ದಂಡ Read More »

ಕರಾವಳಿ

ರಾಜ್ಯದ ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ➤ ಸಿಎಂ ಬೊಮ್ಮಾಯಿ ಘೋಷಣೆ..!

(ನ್ಯೂಸ್ ಕಡಬ)newskadaba.com ಬಾಗಲಕೋಟೆ, ಮಾ.22. ರಾಜ್ಯದ ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಸಿಎಂ ಬೊಮ್ಮಾಯಿ ಸಿಹಿಸುದ್ದಿ ನೀಡಿದ್ದು, ಪಿಯುಸಿ, ಪದವಿ ವಿದ್ಯಾರ್ಥಿಗ’ಳಿಗೆ ಉಚಿತ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ ಎಂದು ಘೋಷಣೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಈ ಬಾರಿ ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ . 4 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುತ್ತೇವೆ ಎಂದು ಹೇಳಿದರು. ಸರ್ಕಾರಿ ಪಿಯು, ಡಿಗ್ರಿ ಕಾಲೇಜಿನಲ್ಲಿ ಪ್ರವೇಶ

ರಾಜ್ಯದ ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ➤ ಸಿಎಂ ಬೊಮ್ಮಾಯಿ ಘೋಷಣೆ..! Read More »

ಕರ್ನಾಟಕ

ಬಂಟ್ವಾಳ ತಾಲೂಕು ಕಚೇರಿಯಲ್ಲಿ ಕಡತ ಕಾಣೆ ➤ ತರಾಟೆಗೆತ್ತಿಕೊಂಡ ಲೋಕಾಯುಕ್ತ ಎಸ್ಪಿ

(ನ್ಯೂಸ್ ಕಡಬ) newskadaba.com. ಬಂಟ್ವಾಳ, ಮಾ 22. ತಾಲೂಕು ಕಚೇರಿಯಲ್ಲಿ ಕಡತಗಳು ಕಾಣೆಯಾಗುತ್ತಿರುವುದು ಏಕೆ ಎಂದು ಲೋಕಾಯುಕ್ತ ಎಸ್ಪಿ ಸೈಮನ್ ಗರಂ ಆದ ಘಟನೆ ಬಂಟ್ವಾಳ ತಾಲೂಕಿನಲ್ಲಿ ಕರೆದ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ನಡೆಯಿತು. ಎಸ್ಪಿ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಕಾರ್ಯಕ್ರಮದಲ್ಲಿ ಸುಮಾರು ಹದಿನೈದರಷ್ಟು ಮಂದಿ ತಮ್ಮ ದೂರು, ದುಮ್ಮಾನ ಸಲ್ಲಿಸಿದರು. ಈ ಸಂದರ್ಭ ಕರೋಪಾಡಿ ಗ್ರಾಮದ ವಿಕ್ಟರ್ ವೇಗಸ್ ಎಂಬವರು ದೂರು ನೀಡಿ, ತನ್ನ ಕಡತಗಳ ಕುರಿತು ತಾಲೂಕು ಕಚೇರಿಯಲ್ಲಿ ಕೇಳಿದರೆ,

ಬಂಟ್ವಾಳ ತಾಲೂಕು ಕಚೇರಿಯಲ್ಲಿ ಕಡತ ಕಾಣೆ ➤ ತರಾಟೆಗೆತ್ತಿಕೊಂಡ ಲೋಕಾಯುಕ್ತ ಎಸ್ಪಿ Read More »

ಕರಾವಳಿ

ಮಂಗಳೂರು: ಸೀಮೆಎಣ್ಣೆ ಸೇವಿಸಿ ವಿದ್ಯಾರ್ಥಿ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com  ಮಂಗಳೂರು, ಮಾ.22. ವಿದ್ಯಾರ್ಥಿಯೋರ್ವ ಸೀಮೆಎಣ್ಣೆ ಸೇವಿಸಿ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ನೈಮರ್ಮುಲಾ ತನ್ಸಿಯುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಉಮರ್ ಅಫ್ರಾಬುದ್ದೀನ್ (15) ಪೆರುಂಬಳ ಚಾಳ ಜೆಟ್ಟಿ ಅಶ್ರಫ್ ಹಾಗೂ ಫಾಮಿನಿಯಾ ದಂಪತಿಯ ಪುತ್ರ  ಮೃತಪಟ್ಟ ವಿದ್ಯಾರ್ಥಿ. ಹಲವು ದಿನಗಳಿಂದ ತೀವ್ರ ಅಸ್ವಸ್ಥನಾಗಿದ್ದ ಉಮರ್ ಅಫ್ರಾಬುದ್ದೀನ್ ಸೀಮೆಎಣ್ಣೆ ಸೇವಿಸಿದ್ದಾಗಿ ಪತ್ತೆಯಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು. ಪರೀಕ್ಷೆಯಲ್ಲಿ ನಾಲ್ಕು ವಿಷಯಗಳಲ್ಲಿ ಕಷ್ಟ

ಮಂಗಳೂರು: ಸೀಮೆಎಣ್ಣೆ ಸೇವಿಸಿ ವಿದ್ಯಾರ್ಥಿ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಅಪರಾದಿಗಳನ್ನು ಗಲ್ಲಿಗೇರಿಸುವುದು ಬಿಟ್ಟು ಮರಣದಂಡನೆಗೆ ಅನ್ಯ ಮಾರ್ಗ ಹುಡುಕಿ ➤ ಸುಪ್ರೀಂ ಕೋರ್ಟ್

(ನ್ಯೂಸ್ ಕಡಬ) newskadaba.com. ನವದೆಹಲಿ, ಮಾ 22. ನೇಣು ಹಾಕುವ ಮೂಲಕ ಮರಣದಂಡನೆ ವಿಧಿಸುವಿಕೆ ಅತಿ ಸೂಕ್ತ ಮತ್ತು ನೋವು ರಹಿತ ವಿಧಾನವೇ ಎಂಬುದನ್ನು ಪರಿಶೀಲಿಸಲು ತಜ್ಞರ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಈ ಕುರಿತು ವಕೀಲ ರಿಷಿ ಮಲ್ಹೋತ್ರಾ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ಗಲ್ಲಿಗೇರಿಸುವ ಸಂದರ್ಭದಲ್ಲಿ ಉಂಟಾಗುವ ಪರಿಣಾಮ ಮತ್ತು ನೋವಿನ ಬಗ್ಗೆ ಯಾವುದೇ ಅಧ್ಯಯನ ನಡೆದಿದೆಯೇ ಮತ್ತು ಪ್ರಸಕ್ತ ಲಭ್ಯ ಇರುವ ಅತ್ಯಂತ ಸೂಕ್ತ

ಅಪರಾದಿಗಳನ್ನು ಗಲ್ಲಿಗೇರಿಸುವುದು ಬಿಟ್ಟು ಮರಣದಂಡನೆಗೆ ಅನ್ಯ ಮಾರ್ಗ ಹುಡುಕಿ ➤ ಸುಪ್ರೀಂ ಕೋರ್ಟ್ Read More »

ರಾಷ್ಟ್ರೀಯ ನ್ಯೂಸ್

ಭಾರತದ ರಾಷ್ಟ್ರಧ್ವಜ ಮೇಲೆ ಆಟೋಗ್ರಾಫ್ ಹಾಕಿದ ಅಫ್ರಿದಿ ➤ನೆಟ್ಟಿಗರ ಕಿಡಿ

(ನ್ಯೂಸ್ ಕಡಬ) newskadaba.com.ನವದೆಹಲಿ, ಮಾ 22. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಭಾರತದ ರಾಷ್ಟ್ರಧ್ವಜದ ಮೇಲೆ ಸಹಿ ಹಾಕಿ ಟೀಕೆಗೆ ಗುರಿಯಾಗಿದ್ದಾರೆ. ದೋಹಾದಲ್ಲಿ ನಡೆದ ಟಿ20 ಪಂದ್ಯಾವಳಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಆಕ್ಷನ್-ಪ್ಯಾಕ್ಡ್ ಸೀಸನ್‌ನಲ್ಲಿ ಅಭಿಮಾನಿಗಳ ಆಸೆಯನ್ನು ಪೂರೈಸುವ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಇತ್ತೀಚೆಗೆ ಭಾರತೀಯ ಧ್ವಜದ ಮೇಲೆ ಅಭಿಮಾನಿಯೊಬ್ಬರಿಗೆ ತಮ್ಮ ಹಸ್ತಾಕ್ಷರವನ್ನು ನೀಡುತ್ತಿರುವುದು ಕಂಡುಬಂದಿದೆ.ಅಭಿಮಾನಿಯ ಮನವಿಗೆ ಸ್ಪಂದಿಸಿದ ಅಫ್ರಿದಿ ಅಭಿಮಾನಿಗೆ ಶುಭಾಶಯ ಕೋರಿದ್ದು, ಭಾರತದ ಧ್ವಜದ ಮೇಲೆ ತಮ್ಮ ಹಸ್ತಾಕ್ಷರವನ್ನೂ ನೀಡಿದ್ದಾರೆ.

ಭಾರತದ ರಾಷ್ಟ್ರಧ್ವಜ ಮೇಲೆ ಆಟೋಗ್ರಾಫ್ ಹಾಕಿದ ಅಫ್ರಿದಿ ➤ನೆಟ್ಟಿಗರ ಕಿಡಿ Read More »

ರಾಷ್ಟ್ರೀಯ ನ್ಯೂಸ್
Scroll to Top