News Kadaba

ಕುಂದಾಪುರ: ಟಿಪ್ಪರ್ ಢಿಕ್ಕಿ ಹೊಡೆದು ಪಾದಾಚಾರಿ ಮೃತ್ಯು

(ನ್ಯೂಸ್ ಕಡಬ)newskadaba.com ಕುಂದಾಪುರ, ಮಾ.25. ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಮೃತಪಟ್ಟ ಘಟನೆ ವಡೇರಹೋಬಳಿ ಗ್ರಾಮದ ನೆಹರೂ ಮೈದಾನದ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಕುಮಾರ್ ಎಂದು ಗುರುತಿಸಲಾಗಿದೆ. ಹೋಗುತ್ತಿದ್ದ ಟಿಪ್ಪರ್, ರಸ್ತೆ ದಾಟುತ್ತಿದ್ದ ಕುಮಾರ್ ಗೆ ಢಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡ ಕುಮಾರ್ ರನ್ನು ತಕ್ಷಣ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕುಮಾರ್ ಮೃತಪಟ್ಟಿದ್ದಾರೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ […]

ಕುಂದಾಪುರ: ಟಿಪ್ಪರ್ ಢಿಕ್ಕಿ ಹೊಡೆದು ಪಾದಾಚಾರಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: 11 ಕೆ.ಜಿ. ಗಾಂಜಾ, 14 ಮಿ.ಗ್ರಾಂ MDMI ಸಹಿತ ಮಾದಕ ವಸ್ತುಗಳ ನಾಶ..!

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.25. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 8 ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ 11 ಕೆ.ಜಿ. ಗಾಂಜಾ, 14 ಮಿ.ಗ್ರಾಂ ಎಂಡಿಎಂಐ ಸಹಿತ ಮಾದಕ ವಸ್ತುವನ್ನು ಪೊಲೀಸ್ ಅಧಿಕಾರಿಗಳು ನಾಶ ಪಡಿಸಿದ್ದಾರೆ. ಜಿಲ್ಲೆಯ ಮೂಲ್ಕಿಯ Ramky Energy Environment Ltd ಎಂಬಲ್ಲಿ ಗಾಂಜಾ ಮತ್ತು ಎಂಡಿಎಂಐ ಅನ್ನು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಾಶ ಪಡಿಸಲಾಯಿತು. ಸೆನ್ ಪೊಲೀಸ್ ಠಾಣೆ, ಕೊಣಾಜೆ, ಪಣಂಬೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಸುರತ್ಕಲ್, ಬಜಪೆ, ಕಂಕನಾಡಿ ಪೊಲೀಸ್

ಮಂಗಳೂರು: 11 ಕೆ.ಜಿ. ಗಾಂಜಾ, 14 ಮಿ.ಗ್ರಾಂ MDMI ಸಹಿತ ಮಾದಕ ವಸ್ತುಗಳ ನಾಶ..! Read More »

ಕರಾವಳಿ

ಇಂದಿನಿಂದ 3 ದಿನಗಳ ಕಾಲ ಗುಡುಗು ಸಹಿತ ಮಳೆ ಸಾಧ್ಯತೆ..!     ➤ ಹವಾಮಾನ ಇಲಾಖೆ ಮುನ್ಸೂಚನೆ        

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.25. ಭಾರೀ ತಾಪಮಾನ ನಡುವೆಯೇ ರಾಜ್ಯಾದ್ಯಂತ ಇಂದಿನಿಂದ ಮೂರು ದಿನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಈ ಕುರಿತು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇಂದಿನಿಂದ ಮಾರ್ಚ್ 27 ರವರೆಗೆ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ವರದಿ ತಿಳಿಸಿದೆ. ಇಂದಿನಿಂದ ಮಾರ್ಚ್ 27 ರವರೆಗೆ ಬೆಂಗಳೂರು, ಬೆಂ.ಗ್ರಾಮಾಂತರ, ಚಾಮರಾಜನಗರ ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು ಹಾಗೂ ರಾಮನಗರದಲ್ಲಿ ಹಾಗೂ ಮಾರ್ಚ್ 26 ರಿಂದ ಬೀದರ್ ಹಾಗೂ ಕಲಬುರಗಿಯಲ್ಲಿ ಮುಂದಿನ 2 ದಿನ

ಇಂದಿನಿಂದ 3 ದಿನಗಳ ಕಾಲ ಗುಡುಗು ಸಹಿತ ಮಳೆ ಸಾಧ್ಯತೆ..!     ➤ ಹವಾಮಾನ ಇಲಾಖೆ ಮುನ್ಸೂಚನೆ         Read More »

ಕರ್ನಾಟಕ

ಆಕಸ್ಮಿಕವಾಗಿ ಹಾರಿದ ಕ್ಷಿಪಣಿಗಳು..!    ➤  ಭಾರೀ ಸ್ಪೋಟ  

(ನ್ಯೂಸ್ ಕಡಬ)newskadaba.com ರಾಜಸ್ಥಾನ, ಮಾ.25. ಭಾರತೀಯ ಸೇನೆಯ ಫೈರಿಂಗ್ ಅಭ್ಯಾಸದ ವೇಳೆ ಮೂರು ಕ್ಷಿಪಣಿಗಳು ಆಕಸ್ಮಿಕವಾಗಿ ಹಾರಿ ಭಾರೀ ಸ್ಪೋಟ ಸಂಭವಿಸಿದ ಘಟನೆ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ನಡೆದಿದೆ. ಇಲ್ಲಿನ ಪೋಖ್ರಾನ್ ಬಯಲು ಪ್ರದೇಶದಲ್ಲಿ ಪ್ರತಿದಿನದಂತೆ ಪ್ರಯೋಗಾತ್ಮಕ ಫೈರಿಂಗ್‌ನಲ್ಲಿ ತೊಡಗಿದ್ದ ವೇಳೆ ಘಟನೆ ಸಂಭವಿಸಿದೆ. ಮೂರು ಕ್ಷಿಪಣಿಗಳನ್ನು ಹಾರಿಸುವಾಗ ಆದ ಎಡವಟ್ಟಿನಿಂದ ಸ್ಪೋಟ ಉಂಟಾಯಿತು. ನೆಲದಿಂದ ವಾಯುಪ್ರದೇಶಕ್ಕೆ ಸರಿಯಾದ ರೀತಿಯಲ್ಲಿ ಈ ಕ್ಷಿಪಣಿಗಳು ಚಿಮ್ಮದ ಕಾರಣ ಸೇನೆ ನಿಗದಿಪಡಿಸಿದ ಸ್ಥಳದ ಬದಲಾಗಿ ಬೇರೆ ಬೇರೆ ಮೂರು ಹಳ್ಳಿಗಳ ಹೊಲಗಳಲ್ಲಿ

ಆಕಸ್ಮಿಕವಾಗಿ ಹಾರಿದ ಕ್ಷಿಪಣಿಗಳು..!    ➤  ಭಾರೀ ಸ್ಪೋಟ   Read More »

ರಾಷ್ಟ್ರೀಯ ನ್ಯೂಸ್
Crime

ಮಾನಸಿಕ ಅಸ್ವಸ್ಥನ ಕೈಗೆ ಸಿಕ್ಕ ಚೂರಿ..!    ➤  ನಾಲ್ವರು ಮೃತ್ಯು, ಇನ್ನೋರ್ವ ಗಂಭೀರ…!

(ನ್ಯೂಸ್ ಕಡಬ)newskadaba.com ಮುಂಬೈ, ಮಾ.25. ದಕ್ಷಿಣ ಮುಂಬೈನ ವಸತಿ ಕಟ್ಟಡವೊಂದರಲ್ಲಿ 54 ವರ್ಷದ ಮಾನಸಿಕ ಅಸ್ವಸ್ಥನೋರ್ವ ನಾಲ್ವರು ನೆರೆಹೊರೆಯವರನ್ನು ಇರಿದು ಕೊಂದಿದ್ದಾರೆ ಮತ್ತು ಇನ್ನೋರ್ವನಿಗೆ ಗಾಯಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಂಟ್ ರಸ್ತೆಯಲ್ಲಿರುವ ಪಾರ್ವತಿ ಮ್ಯಾನ್ಷನ್‌ನಲ್ಲಿ ಮಧ್ಯಾಹ್ನ 3.30 ರ ಸುಮಾರಿಗೆ ಈ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವ್ಯಕ್ತಿಯ ಪತ್ನಿ ಮತ್ತು ಮಕ್ಕಳನ್ನು ಎರಡು ತಿಂಗಳ ಹಿಂದೆ ಅವರನ್ನು ತೊರೆದಿದ್ದರು. ಅಂದಿನಿಂದ ಮಾನಸಿಕವಾಗಿ ನೊಂದಿದ್ದ ಈತ ಶುಕ್ರವಾರ ಅಕ್ಕಪಕ್ಕದವರನ್ನು

ಮಾನಸಿಕ ಅಸ್ವಸ್ಥನ ಕೈಗೆ ಸಿಕ್ಕ ಚೂರಿ..!    ➤  ನಾಲ್ವರು ಮೃತ್ಯು, ಇನ್ನೋರ್ವ ಗಂಭೀರ…! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉಜ್ವಲ ಯೋಜನೆಯಡಿ 12 ಸಿಲಿಂಡರ್ ವಿತರಣೆ      ➤  200 ರೂ. ಸಬ್ಸಿಡಿ…!

(ನ್ಯೂಸ್ ಕಡಬ)newskadaba.com ನವದೆಹಲಿ, ಮಾ.25. ಮಹತ್ವದ ಬೆಳವಣಿಗೆಯಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ವಾರ್ಷಿಕವಾಗಿ 12 ರೀಫಿಲ್‌ಗಳಿಗೆ ಪ್ರತಿ ಸಿಲಿಂಡರ್‌ಗೆ ರೂ 200 ಸಬ್ಸಿಡಿ ನೀಡಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (ಪಿಎಂಯುವೈ) ಫಲಾನುಭವಿಗಳಿಗೆ ಕೇಂದ್ರ ಸಚಿವ ಸಂಪುಟವು ಶುಕ್ರವಾರ 14.2 ಕೆಜಿ ಸಿಲಿಂಡರ್‌ಗೆ ವರ್ಷಕ್ಕೆ 12 ರೀಫಿಲ್‌ಗಳಿಗೆ ತಲಾ 200 ರೂ ಸಬ್ಸಿಡಿ ನೀಡಿಕೆಗೆ ಅನುಮೋದನೆ ನೀಡಿದೆ. ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಮಾಹಿತಿ ಮತ್ತು ಪ್ರಸಾರ

ಉಜ್ವಲ ಯೋಜನೆಯಡಿ 12 ಸಿಲಿಂಡರ್ ವಿತರಣೆ      ➤  200 ರೂ. ಸಬ್ಸಿಡಿ…! Read More »

ರಾಷ್ಟ್ರೀಯ ನ್ಯೂಸ್

ನಾಳೆ(ಮಾ.26) ಪುತ್ತೂರು ಬಸ್ ನಿಲ್ದಾಣಕ್ಕೆ ಕೋಟಿ-ಚೆನ್ನಯ್ಯ ನಾಮಕರಣ

(ನ್ಯೂಸ್ ಕಡಬ)newskadaba.com ಪುತ್ತೂರು, ಮಾ.25. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ಬಸ್ ನಿಲ್ದಾಣಕ್ಕೆ ಕೋಟಿ- ಚೆನ್ನಯ್ಯ ಎಂಬ ನಾಮಕರಣ ಸಮಾರಂಭವು ಮಾ.26ರ(ನಾಳೆ.) ಬೆಳಗ್ಗೆ 10 ಗಂಟೆಗೆ ಪುತ್ತೂರಿನ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾದ ಬಿ ಶ್ರೀ ರಾಮುಲು ನಾಮಫಲಕ ಉದ್ಘಾಟಿಸುವರು. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ. ಸುನಿಲ್ ಕುಮಾರ್ ಜ್ಯೋತಿ ಬೆಳಗಿಸುವರು. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಸಚಿವರಾದ

ನಾಳೆ(ಮಾ.26) ಪುತ್ತೂರು ಬಸ್ ನಿಲ್ದಾಣಕ್ಕೆ ಕೋಟಿ-ಚೆನ್ನಯ್ಯ ನಾಮಕರಣ Read More »

ಕರಾವಳಿ

ಸುಬ್ರಹ್ಮಣ್ಯ: ಹೊಳೆ ಬದಿ ಕಾಡಾನೆ ಪತ್ತೆ ➤ ಆತಂಕದಲ್ಲಿ ಜನರು…!

(ನ್ಯೂಸ್ ಕಡಬ)newskadaba.com ಸುಬ್ರಮಣ್ಯ, ಮಾ.25. ಸುಬ್ರಹ್ಮಣ್ಯದಲ್ಲಿ ಹೊಳೆ ಬದಿಯಲ್ಲಿ ಕಾಡಾನೆ ಕಾಣಿಸಿಕೊಂಡ ಘಟನೆ ಸುಬ್ರಮಣ್ಯದಲ್ಲಿ ವರದಿಯಾಗಿದೆ. ಸುಬ್ರಹ್ಮಣ್ಯ ಸಮೀಪದ ಆದಿಸುಬ್ರಹ್ಮಣ್ಯದ ಕಲ್ಲಗಡ್ಡೆ ಎಂಬಲ್ಲಿ ಹೊಳೆ ಬದಿಯಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು, ಹೊಳೆಗೆ ನೀರು ಕುಡಿಯಲು ಬಂದಿದ್ದ ಆನೆ ಬಳಿಕ ಕಾಡಿಗೆ ವಾಪಸ್ಸಾಗಿದೆ ಎಂದು ತಿಳಿದು ಬಂದಿದೆ. ಐತ್ತೂರು- ಕಡ್ಯ ಕೊಣಾಜೆ ಸಂಪರ್ಕ ರಸ್ತೆಯ ಕೊಣಾಜೆ ಬಳಿಯ ರಾಮನಗರ ಕ್ರಾಸ್‌ನಲ್ಲಿ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಕಾಡಾನೆ ದಾಟಿದೆ. ರಬ್ಬರ್ ತೋಟವೊಂದರಿಂದ ಈ ಆನೆ ರಸ್ತೆಗೆ ಇಳಿದಿತ್ತು. ಬಳಿಕ

ಸುಬ್ರಹ್ಮಣ್ಯ: ಹೊಳೆ ಬದಿ ಕಾಡಾನೆ ಪತ್ತೆ ➤ ಆತಂಕದಲ್ಲಿ ಜನರು…! Read More »

ಕರಾವಳಿ

ದ.ಕ.ದಲ್ಲಿ ಹೊಸ ಮುಖಗಳಿಗೆ ಅವಕಾಶ..!  ➤ ಮಾಜಿ ಪೊಲೀಸ್‌ ಅಧಿಕಾರಿ ಪುತ್ರನಿಗೆ ಕೈ ಟಿಕೆಟ್‌

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.25. ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ಬಿಡುಗಡೆಯಾಗಿದ್ದು, ಬಿಜೆಪಿ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಕೆಲವು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಎಂಟು ಕ್ಷೇತ್ರಗಳ ಪೈಕಿ ಐದು ಕಡೆ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ. ಕಾಂಗ್ರೆಸ್‌ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್‌ ಸಹೋದರ ಬಿಕೆ ಶಿವರಾಂ ಪುತ್ರ ರಕ್ಷಿತ್‌ ಶಿವರಾಂಗೆ ಬೆಳ್ತಂಗಡಿಯಲ್ಲಿ ಟಿಕೆಟ್ ನೀಡಲಾಗಿದೆ. ಸುಳ್ಯ ಮೀಸಲು ಕ್ಷೇತ್ರದಲ್ಲಿ ಕೃಷ್ಣಪ್ಪ ಜಿ ಘೋಷಿಸಲಾಗಿದೆ.

ದ.ಕ.ದಲ್ಲಿ ಹೊಸ ಮುಖಗಳಿಗೆ ಅವಕಾಶ..!  ➤ ಮಾಜಿ ಪೊಲೀಸ್‌ ಅಧಿಕಾರಿ ಪುತ್ರನಿಗೆ ಕೈ ಟಿಕೆಟ್‌ Read More »

ಕರಾವಳಿ

ಮಾ.27 ರಂದು ರೆಬಲ್‌ ಸ್ಟಾರ್‌ ಅಂಬರೀಶ್‌ ಸ್ಮಾರಕ ಉದ್ಘಾಟಿಸಲಿರುವ ಸಿಎಂ ಬೊಮ್ಮಾಯಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.24. ಸ್ಯಾಂಡಲ್‌ ವುಡ್‌ ಹಿರಿಯ ನಟ ರೆಬಲ್‌ ಸ್ಟಾರ್‌ ಅಂಬರೀಶ್‌ ಅವರ ಸ್ಮಾರಕವನ್ನು ಇದೇ ತಿಂಗಳು 27 ರಂದು ಸಿಎಂ ಬಸರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನೆಯ ಸಮಾರಂಭದಲ್ಲಿ ಸ್ಪಷ್ಟನೆ ನೀಡಿದ ಸಿಎಂ, ನನ್ನ ಅಚ್ಚುಮೆಚ್ಚಿನ ನಟ ಅಂಬರೀಶ್‌ ಸ್ಮಾರಕವನ್ನು 27ಕ್ಕೆ ಅನಾವರಣಗೊಳಸಿಲಾಗಿದೆ ಎಂದರು.  

ಮಾ.27 ರಂದು ರೆಬಲ್‌ ಸ್ಟಾರ್‌ ಅಂಬರೀಶ್‌ ಸ್ಮಾರಕ ಉದ್ಘಾಟಿಸಲಿರುವ ಸಿಎಂ ಬೊಮ್ಮಾಯಿ Read More »

ಕರ್ನಾಟಕ
Scroll to Top