News Kadaba

ಬೈಕ್‌ ಮತ್ತು ಜೀಪ್ ನಡುವೆ ಅಪಘಾತ     ➤ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಐದು ಮಂದಿ ಮೃತ್ಯು

(ನ್ಯೂಸ್ ಕಡಬ)newskadaba.com ಪುಣೆ, ಮಾ.29. ಬೈಕ್‌ ಗೆ ಜೀಪ್ ಡಿಕ್ಕಿ ಹೊಡೆದು ಐವರು ಮೃತಪಟ್ಟ ಘಟನೆ ನಡೆದಿದೆ. ಈ ಭೀಕರ ಅಪಘಾತದ ಹಿನ್ನೆಲೆ ಜೀಪ್​​ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರನ್ನು ಸುಂದರಾಬಾಯಿ(28) ಗೌರವ್ ಮಾದೆ (5) ನಿತಿನ್​​ ಮಾದೆ(25) ಮತ್ತೊಂದು ಮಗು ಮೃತಪಟ್ಟಿದೆ ಎನ್ನಲಾಗಿದೆ. ಮೃತರಲ್ಲಿ ಒಬ್ಬರ ಹೆಸರು ಪತ್ತೆಯಾಗಿಲ್ಲ. ಅರ್ಚನಾ ಮಾದೆ ಮತ್ತು ಸುಹಾಸ್​​ ಮಾದೆ ಅವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  

ಬೈಕ್‌ ಮತ್ತು ಜೀಪ್ ನಡುವೆ ಅಪಘಾತ     ➤ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಐದು ಮಂದಿ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಪಿಯುಸಿ ಪರೀಕ್ಷೆ ಬೆನ್ನಿಗೇ ಮೂವರು ವಿದ್ಯಾರ್ಥಿಗಳ ಮರಣ..! ➤ ಅದೃಷ್ಟವಶಾತ್ ಇನ್ನಿಬ್ಬರು ಪ್ರಾಣಾಪಾಯದಿಂದ ಪಾರು                    

(ನ್ಯೂಸ್ ಕಡಬ)Newskadaba.com ಚಿತ್ರದುರ್ಗ: ಮಾ.29 ಪಿಯುಸಿ ಪರೀಕ್ಷೆ ಮುಗಿದ ಬೆನ್ನಿಗೇ ಮೂವರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅದೃಷ್ಟವಶಾತ್, ಜೊತೆಗಿದ್ದ ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ನಂದನಹೊಸೂರು ಗ್ರಾಮದ ಸಂಜಯ್ (18), ಎಚ್​.ಡಿ.ಪುರದ ಗಿರೀಶ್ (18) ನಂದನಹೊಸೂರು ಗೊಲ್ಲರಹಟ್ಟಿಯ ಮನು (18) ಸಾವಿಗೀಡಾದವರು. ಹೊಳಲ್ಕೆರೆ ತಾಲ್ಲೂಕಿನ ನಂದನಹೊಸೂರು ಗ್ರಾಮದ ಕೆರೆಯಲ್ಲಿ ಈ ಅವಘಡ ಸಂಭವಿಸಿದೆ. ಪಿಯುಸಿ ಪರಿಕ್ಷೆ ಮುಗಿಸಿ ಗ್ರಾಮಗಳಿಗೆ ಮರಳಿದ್ದ ಐವರು ಕೆರೆಗೆ ಈಜಲು ಧುಮುಕಿದ್ದರು. ಗುಂಡಿಕೆರೆ ತುಂಬಾ

ಪಿಯುಸಿ ಪರೀಕ್ಷೆ ಬೆನ್ನಿಗೇ ಮೂವರು ವಿದ್ಯಾರ್ಥಿಗಳ ಮರಣ..! ➤ ಅದೃಷ್ಟವಶಾತ್ ಇನ್ನಿಬ್ಬರು ಪ್ರಾಣಾಪಾಯದಿಂದ ಪಾರು                     Read More »

ಕರ್ನಾಟಕ

ಬಿಎಂಟಿಸಿ ಚಾಲಕನ ಜೇಬಿನಲ್ಲಿದ್ದ ಹಣ ಸೀಜ್ ಮಾಡಿದ ಅಧಿಕಾರಿಗಳು.!   ➤ ಹೈಕೋರ್ಟ್ ಮೊರೆ ಹೋದ ಚಾಲಕ                        

(ನ್ಯೂಸ್ ಕಡಬ)Newskadaba.com ಬೆಂಗಳೂರು: ಮಾ.29 ನೌಕರರಿಗೆ ಬಿಎಂಟಿಸಿ ಅಧಿಕಾರಿಗಳ ಕಿರುಕುಳ ಮುಂದುವರಿದಿದ್ದು, ಮಗಳ ಕಾಲೇಜು ಫೀಸ್ ಕಟ್ಟಲು ಜೇಬಲ್ಲಿ ಇಟ್ಟುಕೊಂಡಿದ್ದ ಹಣವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ನ್ಯಾಯ ನೀಡುವಂತೆ ಬಸ್ ಚಾಲಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸಾರಿಗೆ ನೌಕರರು ಅಧಿಕಾರಿಗಳ ಕಿರುಕುಳ ತಾಳಲಾರದೆ ಪ್ರತಿವರ್ಷ ಮುಷ್ಕರಕ್ಕೆ ಮುಂದಾಗುತ್ತಾರೆ. ಸರ್ಕಾರ ಕೂಡ ಅಧಿಕಾರಿಗಳ ಕಿರುಕುಳವನ್ನು ತಪ್ಪಿಸುತ್ತೇವೆ ಅಂತ ಸಾಲು ಸಾಲು ಭರವಸೆಯನ್ನು ಕೊಡುತ್ತದೆ. ಆದರೆ ಎಷ್ಟೇ ಭರವಸೆ ನೀಡಿದರೂ ಬಿಎಂಟಿಸಿಯಲ್ಲಿ ಅಧಿಕಾರಿಗಳ ಕಿರುಕುಳ ತಪ್ಪುತ್ತಿಲ್ಲ ಎನ್ನುವುದಕ್ಕೆ ಈ ಪ್ರಕರಣ ಉದಾಹರಣೆಯಾಗಿ

ಬಿಎಂಟಿಸಿ ಚಾಲಕನ ಜೇಬಿನಲ್ಲಿದ್ದ ಹಣ ಸೀಜ್ ಮಾಡಿದ ಅಧಿಕಾರಿಗಳು.!   ➤ ಹೈಕೋರ್ಟ್ ಮೊರೆ ಹೋದ ಚಾಲಕ                         Read More »

ಕರ್ನಾಟಕ

ಅಂಜನಾದ್ರಿ ಬೆಟ್ಟ ಹತ್ತುವ ವೇಳೆ ಹೃದಯಾಘಾತ.!              ➤ ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತ್ಯು

(ನ್ಯೂಸ್ ಕಡಬ)Newskadaba.com ಗಂಗಾವತಿ: ಮಾ.29 ಗಂಗಾವತಿ ತಾಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟ ಹತ್ತುವಾಗ ವೀರೇಶ್ ಎಂಬ ಯುವಕ  ಹೃದಯಘಾತ ಸಂಭವಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆಫಲಕಾರಿಯಾಗಿದೆ ಕೊನೆಯುಸಿರೆಳೆದ ಘಟನೆ ನಡೆದಿದೆ. ವಿರೇಶ ಕುಷ್ಟಗಿ ತಾಲೂಕಿನ ವಣಗೇರಿ ಗ್ರಾಮದ ನಿವಾಸಿಯಾಗಿದ್ದಾನೆ. ತನ್ನ ನಾಲ್ವರ ಗೆಳೆಯರ ಜತೆ ಅಂಜನಾದ್ರಿ ದರ್ಶನಕ್ಕೆ ಆಗಮಿಸಿದ್ದು,ಮಧ್ಯಾಹ್ನ ಗೆಳೆಯರ ಜತೆ ಬೆಟ್ಟ ಹತ್ತುವ ಸಂದರ್ಭದಲ್ಲಿ ಮೂರ್ಛೆ ಬಂದು ಮೆಟ್ಟಿಲು ಮೇಲೆ ಬಿದ್ದಾಗ ಜತೆಗಿದ್ದವರು ದೇವಸ್ಥಾನ ಸಿಬ್ಬಂದಿ ಆಟೋ ಮೂಲಕ ಆನೆಗೊಂದಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆಗೆ

ಅಂಜನಾದ್ರಿ ಬೆಟ್ಟ ಹತ್ತುವ ವೇಳೆ ಹೃದಯಾಘಾತ.!              ➤ ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತ್ಯು Read More »

ಕರ್ನಾಟಕ

ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನ    ➤ ಇಬ್ಬರು ಆರೋಪಿಗಳ ಬಂಧನ

(ನ್ಯೂಸ್ ಕಡಬ)newskadaba.com ಸುರತ್ಕಲ್, ಮಾ.29. ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಸುರತ್ಕಲ್ ಪೊಲೀಸರು ಬಂಧಿಸಿ ಅಪಾರ ಪ್ರಮಾಣದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಒರಿಸ್ಸಾ ಮೂಲದ ಚಿಂತಾಮಣಿ ಮತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದು, ಇವರಿಂದ 3.180 ಕೆಜಿ ಗಾಂಜಾವನ್ನು ವಶಕ್ಕೆ ಪಡೆಲಾಗಿದೆ ಎಂದು ತಿಳಿಸಿದ್ದಾರೆ. ಬಂಧಿತರು ಇಲ್ಲಿನ ಇಡ್ಯಾ ಗ್ರಾಮದ ಗೋವಿಂದದಾಸ ಕಾಲೇಜು ಬಳಿ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಕುರಿತ ಖಚಿತ ವರ್ತಮಾನದ ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ ನೇತೃತ್ವದ

ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನ    ➤ ಇಬ್ಬರು ಆರೋಪಿಗಳ ಬಂಧನ Read More »

ಕರಾವಳಿ

ಉಡುಪಿ: ಶಿವರಾಮ ಕಾರಂತರ ಆಪ್ತ ಸಹಾಯಕಿ ಮಾಲಿನಿ ಮಲ್ಯ ನಿಧನ

(ನ್ಯೂಸ್ ಕಡಬ)newskadaba.com ಉಡುಪಿ, ಮಾ.29. ಕೋಟ ಡಾ. ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಅಧ್ಯಕ್ಷೆಯಾಗಿದ್ದ ಮಾಲಿನಿ ಮಲ್ಯ ಬೆಂಗಳೂರು ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನರಾಗಿದ್ದಾರೆ. ದೀರ್ಘ ಕಾಲದಿಂದಲೂ ಪಾರ್ಕಿನ್ಸನ್ ರೋಗದಿಂದ ಬಳಲುತ್ತಿದ್ದ ಅವರನ್ನು ಸಾಲಿಗ್ರಾಮದಿಂದ ಇತ್ತೀಚಿಗಷ್ಟೆ ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿತ್ತು. ಸಾಲಿಗ್ರಾಮದಲ್ಲಿ ಕಾರಂತ ಸ್ಮೃತಿ ಭವನ ನಿರ್ಮಿಸಿ ಕಾರಂತ ಕಾರ್ಯಕ್ರಮ ಆಯೋಜನೆ‌ ಮಾಡುತ್ತಿದ್ದರು.  

ಉಡುಪಿ: ಶಿವರಾಮ ಕಾರಂತರ ಆಪ್ತ ಸಹಾಯಕಿ ಮಾಲಿನಿ ಮಲ್ಯ ನಿಧನ Read More »

ಕರಾವಳಿ

ಬೆಳ್ತಂಗಡಿ: ಹೆಂಡತಿಗೆ ಕತ್ತಿಯಿಂದ ಕಡಿದ ಪಾಪಿ ಗಂಡ..!  ➤ ಪತ್ನಿ ಆಸ್ಪತ್ರೆಗೆ, ಪತಿ ರಕ್ತದೊತ್ತಡದಿಂದ ಮೃತ್ಯು

(ನ್ಯೂಸ್ ಕಡಬ)newskadaba.com ಧರ್ಮಸ್ಥಳ, ಮಾ.29. ಪತಿ ಮತ್ತು ಪತ್ನಿ ನಡುವೆ ಜಗಳ ನಡೆದು, ಪತಿ ಮೃತಪಟ್ಟ ಘಟನೆ ಧರ್ಮಸ್ಥಳ ಗ್ರಾಮದ ಕನ್ಯಾಡಿ ಹತ್ತಿರ ಗಂಗೆತ್ಯಾರ್ ಎಂಬಲ್ಲಿ ಎಂಬಲ್ಲಿ ನಡೆದಿದೆ. ರಾಮಣ್ಣ ಗೌಡ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಚೆನ್ನಕ್ಕ ಗಂಭೀರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತ್ನಿಯೊಂದಿಗೆ ಜಗಳವಾಡಿದ ರಾಮಣ್ಣ ಗೌಡ ಚೆನ್ನಕ್ಕನಿಗೆ ಹಲ್ಲೆ ನಡೆಸಿ ಕತ್ತಿಯಿಂದ ಕಡಿದು ಗಾಯಗೊಳಿಸಿದ್ದಾರೆ. ತತ್ ಕ್ಷಣ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಧರ್ಮಸ್ಥಳ ಪೊಲೀಸರು

ಬೆಳ್ತಂಗಡಿ: ಹೆಂಡತಿಗೆ ಕತ್ತಿಯಿಂದ ಕಡಿದ ಪಾಪಿ ಗಂಡ..!  ➤ ಪತ್ನಿ ಆಸ್ಪತ್ರೆಗೆ, ಪತಿ ರಕ್ತದೊತ್ತಡದಿಂದ ಮೃತ್ಯು Read More »

ಕರಾವಳಿ

ಆಟೋದಲ್ಲಿ ಬಾಡಿಗೆ ಹೋದ ವ್ಯಕ್ತಿ ನಾಪತ್ತೆ..!

(ನ್ಯೂಸ್ ಕಡಬ)newskadaba.com ಉಡುಪಿ, ಮಾ.29.  ಶಿರ್ವ ಕುತ್ಯಾರ್ ಶಾಲೆಯೊಂದರ ಬಸ್‌ನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಕುತ್ಯಾರು ಬ್ಯಾಂಕ್‌ ಆಫ್‌ ಬರೋಡಾ ಶಾಖೆಯ ಬಳಿಯ ಬಾಡಿಗೆ ಮನೆ ನಿವಾಸಿ ಶೈಲೇಶ್‌ ಕೆ. ಪ್ರಭು (44) ಏಕಾಎಕಿ ನಾಪತ್ತೆಯಾಗಿದ್ದಾರೆ. ಬೆಳಗ್ಗಿನಿಂದ ನಾಪತ್ತೆಯಾಗಿದ್ದು ಈ ಸಂಬಂಧ ದೂರು ದಾಖಲಾಗಿದೆ. ಕುತ್ಯಾರಿನಲ್ಲಿ ತಿಂಗಳ ಹಿಂದೆ ಖರೀದಿಸಿದ ರಿಕ್ಷಾದಲ್ಲಿ ಚಾಲಕನಾಗಿ ಕೂಡ ಶೈಲೇಶ್ ದುಡಿಯುತ್ತಿದ್ದು, ಮಾ. 27ರಂದು ಬೆಳಗ್ಗೆ 9.30ರ ವೇಳೆಗೆ ಬಾಡಿಗೆಗೆ ಹೋದವರು ಮಧ್ಯಾಹ್ನ ಊಟಕ್ಕೆ ಬಾರದೆ ಇದ್ದಾಗ ಪತ್ನಿ ಕರೆ ಮಾಡಿದ್ದಾರೆ.

ಆಟೋದಲ್ಲಿ ಬಾಡಿಗೆ ಹೋದ ವ್ಯಕ್ತಿ ನಾಪತ್ತೆ..! Read More »

ಕರಾವಳಿ

ತಂಗಿಗೆ ಬರೊಬ್ಬರಿ 8.31 ಕೋಟಿ ಮೌಲ್ಯದ ವರದಕ್ಷಿಣೆ ನೀಡಿದ ಸಹೋದರರು

(ನ್ಯೂಸ್ ಕಡಬ)newskadaba.com ರಾಜಸ್ಥಾನ, ಮಾ.29. ಒಡಹುಟ್ಟಿದ ತಂಗಿ ಮದುವೆಗೆ 8 ಕೋಟಿ ರೂಪಾಯಿ ಮೌಲ್ಯದ ವರದಕ್ಷಿಣೆ ನೀಡಿ ಸಹೋದರರು ಸುದ್ದಿಯಾಗಿದ್ದಾರೆ. ನಾಗೌರ್ ಜಿಲ್ಲೆಯ ದಿಂಗಸಾಗರ ಗ್ರಾಮದ ಮೆಹರಿಯ ಕುಟುಂಬ ಇದೀಗ ಭಾರತದಾದ್ಯಂತ ಸದ್ದು ಮಾಡುತ್ತಿದೆ. ನಾಲ್ವರು ಸಹೋದರರು ತಮ್ಮ ತಂಗಿಗೆ ಕಂತೆ ಕಂತೆ ದುಡ್ಡಿನ ನೋಟು ವೇದಿಕೆಗೆ ತಂದು ಎಲ್ಲರ ಮುಂದೆ ಪ್ರದರ್ಶಿಸಿ ವರದಕ್ಷಿಣೆ ನೀಡಿದ್ದಾರೆ. ಮೆಹರಿಯಾ ಕುಟುಂಬದ ಭನ್ವಾರಿ ದೇವಿ ಮದುವೆ ಮಾರ್ಚ್ 26 ರಂದು ನಿಗದಿ ಮಾಡಲಾಗಿತ್ತು.ತಂಗಿಯ ಮದುವೆಗೆ ಸಹೋದರರಾದ ಅರ್ಜುನ್ ರಾಮ್ ಮೆಹರಿಯಾ,

ತಂಗಿಗೆ ಬರೊಬ್ಬರಿ 8.31 ಕೋಟಿ ಮೌಲ್ಯದ ವರದಕ್ಷಿಣೆ ನೀಡಿದ ಸಹೋದರರು Read More »

ರಾಷ್ಟ್ರೀಯ ನ್ಯೂಸ್

ಅಕ್ರಮ ಚಟುವಟಿಕೆಗಳ ತಾಣವಾಯ್ತು ಬೆಂಗಳೂರಿನ ಹೃದಯ ಭಾಗದ ಸ್ಕೈವಾಕ್​​        ➤ ಕಾಂಡೋಮ್​ ಸೇರಿದಂತೆ ತರಹೇವಾರಿ ತ್ಯಾಜ್ಯ ಪತ್ತೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.29. ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಎಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತೆ ಅಂತ ಹೇಳುವುದು ಕಷ್ಟ. ಏಕೆಂದರೆ ಪುಂಡ‌ರು ಎಲ್ಲಿ ಬೇಕಿದ್ದರೂ ಮೋಜು ಮಸ್ತಿ ಮಾಡುತ್ತಾರೆ. ಸರ್ಕಾರಿ ಶಾಲೆ  ಆದರೂ ಆಗಬಹುದು, ಆಟದ ಮೈದಾನ ಆದರೂ ಸರಿಯೇ. ಆದರೆ ಇದೀಗ ಜನ ಓಡಾಡುವ ಸ್ಕೈವಾಕ್​ ಕೂಡ ಪುಂಡರ ತಾಣ ಆಗಿದೆ. ಬೆಂಗಳೂರಿನಲ್ಲಿ ವಾಹನ ಸಂಚಾರ ದಟ್ಣಣೆಯಲ್ಲಿ ರಸ್ತೆದಾಟುವುದು ಅಷ್ಟು ಸುಲಭದ ಮಾತಲ್ಲ. ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗಬೇಕು ಎಂದರೆ ಮೇಲ್ಸೇತುವೆಗಳು ಅನಿವಾರ್ಯ.

ಅಕ್ರಮ ಚಟುವಟಿಕೆಗಳ ತಾಣವಾಯ್ತು ಬೆಂಗಳೂರಿನ ಹೃದಯ ಭಾಗದ ಸ್ಕೈವಾಕ್​​        ➤ ಕಾಂಡೋಮ್​ ಸೇರಿದಂತೆ ತರಹೇವಾರಿ ತ್ಯಾಜ್ಯ ಪತ್ತೆ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top