ಆಟೋದಲ್ಲಿ ಬಾಡಿಗೆ ಹೋದ ವ್ಯಕ್ತಿ ನಾಪತ್ತೆ..!

(ನ್ಯೂಸ್ ಕಡಬ)newskadaba.com ಉಡುಪಿ, ಮಾ.29.  ಶಿರ್ವ ಕುತ್ಯಾರ್ ಶಾಲೆಯೊಂದರ ಬಸ್‌ನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಕುತ್ಯಾರು ಬ್ಯಾಂಕ್‌ ಆಫ್‌ ಬರೋಡಾ ಶಾಖೆಯ ಬಳಿಯ ಬಾಡಿಗೆ ಮನೆ ನಿವಾಸಿ ಶೈಲೇಶ್‌ ಕೆ. ಪ್ರಭು (44) ಏಕಾಎಕಿ ನಾಪತ್ತೆಯಾಗಿದ್ದಾರೆ.

ಬೆಳಗ್ಗಿನಿಂದ ನಾಪತ್ತೆಯಾಗಿದ್ದು ಈ ಸಂಬಂಧ ದೂರು ದಾಖಲಾಗಿದೆ. ಕುತ್ಯಾರಿನಲ್ಲಿ ತಿಂಗಳ ಹಿಂದೆ ಖರೀದಿಸಿದ ರಿಕ್ಷಾದಲ್ಲಿ ಚಾಲಕನಾಗಿ ಕೂಡ ಶೈಲೇಶ್ ದುಡಿಯುತ್ತಿದ್ದು, ಮಾ. 27ರಂದು ಬೆಳಗ್ಗೆ 9.30ರ ವೇಳೆಗೆ ಬಾಡಿಗೆಗೆ ಹೋದವರು ಮಧ್ಯಾಹ್ನ ಊಟಕ್ಕೆ ಬಾರದೆ ಇದ್ದಾಗ ಪತ್ನಿ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಅವರು ಬರೋಡಾ ಬ್ಯಾಂಕ್‌ನ ಸಿಬಂದಿಗೆ ಊಟ ಕೊಟ್ಟು ಬರುತ್ತೇನೆ ಎಂದು ಹೇಳಿದವರು ವಾಪಸ್‌ ಮನೆಗೆ ಬಾರದೆ ಕರೆ ಮಾಡಿದರೂ ಸ್ವೀಕರಿಸದೆ ನಾಪತ್ತೆಯಾಗಿದ್ದಾರೆ.

 

 

Scroll to Top