News Kadaba

 ವಿಜಯನಗರ ಜಿಲ್ಲೆಯ ಹಲವೆಡೆ ಭೂಕಂಪನ.. !!     ➤ ಸಾರ್ವಜನಿಕರಲ್ಲಿ ಆತಂಕ..!                        

(ನ್ಯೂಸ್ ಕಡಬ)Newskadaba.com  ವಿಜಯನಗರ: ಮಾ.29 ವಿಜಯನಗರ ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಯ್ಯನಹಳ್ಳಿಯಲ್ಲಿ ಭೂಕಂಪನವಾಗಿದೆ. ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ಈ ಬಗ್ಗೆ ಮಾಹಿತಿ ನೀಡಿದ್ದು, 15ರಿಂದ 20 ಕಿಲೋ ಮೀಟರ್ ರೇಡಿಯಲ್ ವ್ಯಾಪ್ತಿಯಲ್ಲಿ ಭೂಕಂಪನ ದಾಖಲಾಗಿದೆ.ಕಂಪನದ ತೀವ್ರತೆ ಕಡಿಮೆಯಾಗಿದ್ದು, ಸ್ಥಳೀಯರಿಗೆ ಯಾವುದೇ ತೊಂದರೆಯಾಗಿಲ್ಲ. ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಯಾವುದೇ ಆತಂಕಕ್ಕೆ ಒಳಗಾಗದಂತೆ ಜಿಲ್ಲಾಡಳಿತ ಸಾರ್ವಜನಿಕರಲ್ಲಿ ಮನವಿ ಮಾಡಿದೆ.         […]

 ವಿಜಯನಗರ ಜಿಲ್ಲೆಯ ಹಲವೆಡೆ ಭೂಕಂಪನ.. !!     ➤ ಸಾರ್ವಜನಿಕರಲ್ಲಿ ಆತಂಕ..!                         Read More »

ಕರ್ನಾಟಕ

ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆ ➤ ಮೇ 13ಕ್ಕೆ ಫಲಿತಾಂಶ !!

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.29. ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಯಾವಾಗ ಎನ್ನುವ ಪ್ರಶ್ನೆಗೆ ಇಂದು ತೆರೆ ಬಿದ್ದಿದೆ. ರಾಜ್ಯದ ಚುನಾವಣೆಯ ದಿನಾಂಕವನ್ನು ಇಂದು ಪ್ರಕಟಿಸಲಾಗಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್  ಸುದ್ದಿಗೋಷ್ಠಿ ನಡೆಸಿ ಚುನಾವಣೆ ಕುರಿತು ಮಾಹಿತಿ ನೀಡಿದರು. ರಾಜ್ಯದಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಏಕ ಹಂತದಲ್ಲಿ ಮೇ 10 2023 ರಂದು ಬುಧವಾರ ಮತದಾನ ನಡೆಯಲಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದೊಂದಿಗೆ ಮೇ 13 ರಂದು ಮತ ಎಣಿಕೆ ನಡೆಯಲಿದೆ.

ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆ ➤ ಮೇ 13ಕ್ಕೆ ಫಲಿತಾಂಶ !! Read More »

ಕರ್ನಾಟಕ

ಸುಳ್ಯ ವೃತ್ತ ನಿರೀಕ್ಷಕರಾಗಿದ್ದ ನವೀನ್ ಚಂದ್ರ ಜೋಗಿಗೆ ಮುಖ್ಯಮಂತ್ರಿ ಚಿನ್ನದ ಪದಕ

(ನ್ಯೂಸ್ ಕಡಬ)newskadaba.com ಸುಳ್ಯ, ಮಾ.29. ಸುಳ್ಯ ವೃತ್ತ ನಿರೀಕ್ಷಕರಾಗಿದ್ದ ನವೀನ್ ಚಂದ್ರ ಜೋಗಿ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಗುಪ್ತವಾರ್ತೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ನವೀನ್ ಚಂದ್ರ ಜೋಗಿ ಮೂರು ವರ್ಷಗಳ ಹಿಂದೆ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾಗಿ ಆಗಮಿಸಿದ್ದರು. ಸುಳ್ಯದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಹಲವಾರು ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದರು.  

ಸುಳ್ಯ ವೃತ್ತ ನಿರೀಕ್ಷಕರಾಗಿದ್ದ ನವೀನ್ ಚಂದ್ರ ಜೋಗಿಗೆ ಮುಖ್ಯಮಂತ್ರಿ ಚಿನ್ನದ ಪದಕ Read More »

ಕರಾವಳಿ

ಅಪ್ರಾಪ್ತೆ ಮೇಲೆ ಅತ್ಯಾಚಾರ….!      ➤ ಆರೋಪಿಗೆ 10 ವರ್ಷ ಜೈಲು ಶಿಕ್ಷೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.29. ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ 21 ವರ್ಷದ ಆರೋಪಿಗೆ ನ್ಯಾಯಾಲಯ ಪೋಕ್ಸೋ ಕಾಯ್ದೆಯಡಿ 10 ವರ್ಷಗಳ ಕಠಿಣ ಸಜೆ ಜೊತೆಗೆ 10 ಸಾವಿರ ರೂ. ದಂಡ ವಿಧಿಸಿದೆ. ಅಲ್ಲದೇ ಸಂತ್ರಸ್ತೆಗೆ ಆರೋಪಿಯು 4 ಲಕ್ಷ ರೂ ಪರಿಹಾರ ನೀಡುವಂತೆ ಆದೇಶಿಸಿದೆ. 14 ವರ್ಷದ ಬಾಲಕಿ ಕುರಿ ಕಾಯಲು ಹೋಗುತ್ತಿದ್ದಾಗ ಆಕೆಯನ್ನು ಆರೋಪಿ, ಅಜ್ಜಿಯೊಬ್ಬರು ರಸ್ತೆಯಲ್ಲಿ ಬಿದ್ದಿದ್ದಾರೆ ನೋಡಲು ಬನ್ನಿ ಎಂದು ಆನೇಕಲ್ ತಾಲೂಕಿನ ಜಿಗಣಿ ಹೊರವಲಯಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ.  

ಅಪ್ರಾಪ್ತೆ ಮೇಲೆ ಅತ್ಯಾಚಾರ….!      ➤ ಆರೋಪಿಗೆ 10 ವರ್ಷ ಜೈಲು ಶಿಕ್ಷೆ Read More »

ಕರ್ನಾಟಕ

ಐಐಟಿ ಬಾಂಬೆಯಲ್ಲಿ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ         ➤ ಸುಸೈಡ್ ನೋಟ್‌ನಲ್ಲಿ ಸಹಪಾಠಿಯ ಹೆಸರು ಉಲ್ಲೇಖ..!                        

(ನ್ಯೂಸ್ ಕಡಬ)Newskadaba.com ಮುಂಬೈ,ಮಾ.29  ಐಐಟಿ ಬಾಂಬೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ದಲಿತ ವಿದ್ಯಾರ್ಥಿ ಸುಸೈಡ್ ನೋಟ್‌ನಲ್ಲಿ ತನ್ನ ಓರ್ವ ಸಹಪಾಠಿಯ ಹೆಸರು ಉಲ್ಲೇಖಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿದ್ದಾರೆ. ದರ್ಶನ್ ಸೋಲಂಕಿ ಫೆಬ್ರವರಿ 12ರಂದು ಹಾಸ್ಟೆಲ್ ಕಟ್ಟಡದ 7ನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಅಹ್ಮದಾಬಾದ್ ಮೂಲದ, 18 ವರ್ಷದ ಸೋಲಂಕಿ ಐಐಟಿ ಬಾಂಬೆಯಲ್ಲಿ ಮೊದಲ ವರ್ಷದ ತಂತ್ರಜ್ಞಾನ (ರಾಸಾಯನಿಕ)ದ ಪದವಿ ವಿದ್ಯಾರ್ಥಿಯಾಗಿದ್ದ.   ಐಐಟಿ ಬಾಂಬೆಯಲ್ಲಿ ಸೋಲಂಕಿ ಜಾತಿ ತಾರತಮ್ಯ ಎದುರಿಸಿದ್ದ ಎಂದು ಆತನ

ಐಐಟಿ ಬಾಂಬೆಯಲ್ಲಿ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ         ➤ ಸುಸೈಡ್ ನೋಟ್‌ನಲ್ಲಿ ಸಹಪಾಠಿಯ ಹೆಸರು ಉಲ್ಲೇಖ..!                         Read More »

ರಾಷ್ಟ್ರೀಯ ನ್ಯೂಸ್

8 ವರ್ಷದ ಮಗನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ತಂದೆ

(ನ್ಯೂಸ್ ಕಡಬ)newskadaba.com ಕೋಲಾರ, ಮಾ.29. ಎಂಟು ವರ್ಷದ ಮಗನನ್ನು ಪಾಪಿ ತಂದೆಯೊಬ್ಬ ಚೂರಿಯಿಂದ ಇರಿದು ಕೊಲೆ ಮಾಡಿರುವ ಹೃದಯವಿದ್ರಾಹಕ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿಯಲ್ಲಿ ನಡೆದಿದೆ. ಎಂಟು ವರ್ಷದ ಬಾಲಕ ಭುವನ್‌ ತೇಜ್‌ ಅಪ್ಪನ ಕೈಯಿಂದ ಕೊಲೆಯಾದ ಮಗ.ಸುಬ್ರಮಣಿ ನಂಗಲಿ ಎಂಬಾತ ಮಗನಿಗೆ ಕೊಲೆ ಮಾಡಿದ್ದಾನೆ‌. ಆರೋಪಿ ಸುಬ್ರಮಣಿ ಈ‌ ಮೊದಲು ತನ್ನ ಪತ್ನಿಯನ್ನು ಕೊಂದು ಜೈಲು ಪಾಲಾಗಿದ್ದ ಎನ್ನಲಾಗಿದ್ದು, ಭುವನ್‌ತೇಜ್‌ ಕೋಲಾರದ ನಂಗಲಿ ಗ್ರಾಮದ ಎಸ್‌ಬಿಐ ಬ್ಯಾಂಕ್ ಹಿಂಭಾಗದಲ್ಲಿರುವ ಮನೆಯಲ್ಲಿ ಅಜ್ಜಿ ಜೊತೆ

8 ವರ್ಷದ ಮಗನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ತಂದೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಚಾಮರಾಜನಗರ ಎಡಿಸಿ ಸಹಿ ಫೋರ್ಜರಿ ಮಾಡಿ ಕೋಟಿ ಗುಳುಂ   ➤ಡಿ ಗ್ರೂಪ್ ನೌಕರ ಅಂದರ್..!

(ನ್ಯೂಸ್ ಕಡಬ)Newskadaba.com ಚಾಮರಾಜನಗರ: ಮಾ,29 ಚಾಮರಾಜನಗರದ ಹಿಂದಿನ ಅಪರ ಜಿಲ್ಲಾಧಿಕಾರಿಯಾಗಿದ್ದ ಆನಂದ್ ಅವರ ಹೆಸರನ್ನು ಫೋರ್ಜರಿ ಮಾಡಿ 1 ಕೋಟಿ ರೂ.ಗೂ ಅಧಿಕ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಘಟನೆ ನಡೆದಿದೆ. ಚಾಮರಾಜನಗರದ ಎಡಿಸಿ ಕಚೇರಿಯ ಡಿ ಗ್ರೂಪ್ ನೌಕರ ರಾಜೇಶ್ ಫೋರ್ಜರಿ ಮಾಡಿರುವ ಆರೋಪಿ.‌ ಜಿಲ್ಲಾಧಿಕಾರಿ ಅವರ ಗ್ರಾಮೀಣ ರಸಪ್ರಶ್ನೆ ಕಾರ್ಯಕ್ರಮದ ಬ್ಯಾಂಕ್ ಖಾತೆಯಿಂದ ಎಡಿಸಿ ಸಹಿಯನ್ನು ರಾಜೇಶ್ ಫೋರ್ಜರಿ ಮಾಡಿ 1 ಕೋಟಿ ರೂ.ಗೂ ಅಧಿಕ ಹಣವನ್ನು ತನ್ನ ಖಾತೆಗೆ ಮತ್ತು ಇತರರ ಖಾತೆಗೆ ಈತ

ಚಾಮರಾಜನಗರ ಎಡಿಸಿ ಸಹಿ ಫೋರ್ಜರಿ ಮಾಡಿ ಕೋಟಿ ಗುಳುಂ   ➤ಡಿ ಗ್ರೂಪ್ ನೌಕರ ಅಂದರ್..! Read More »

ಕರ್ನಾಟಕ

ಧರ್ಮಸ್ಥಳ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟಿಸಿದ ಡಾ.ವೀರೇಂದ್ರ ಹೆಗ್ಗಡೆ

(ನ್ಯೂಸ್ ಕಡಬ)newskadaba.com ಧರ್ಮಸ್ಥಳ, ಮಾ.29. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಧರ್ಮಸ್ಥಳ ಪೊಲೀಸ್ ಠಾಣೆಯ ನೂತನ ಕಟ್ಟಡದ ಉದ್ಘಾಟನೆಯನ್ನು ಧರ್ಮದರ್ಶಿಗಳು ಹಾಗೂ ರಾಜ್ಯ ಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆಯವರು ಹಾಗೂ ಶ್ರೀ ಬ್ರಹ್ಮನಂದ ಸರಸ್ವತಿ ಸ್ವಾಮೀಜಿಯವರು ನೆರವೇರಿಸಿದರು. ಈ ಸಂದರ್ಭದಲ್ಲಿ ದ.ಕ ಪೊಲೀಸ್ ಅಧೀಕ್ಷಕ ಡಾ.ವಿಕ್ರಮ್ ಅಮಟೆ IPS, ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಗ್ರಾಮ ಪಂಚಾಯತ್ ಅಧ್ಯಕ್ಷ ಜಯ ಮೋನ್ನಪ್ಪ ಗೌಡ

ಧರ್ಮಸ್ಥಳ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟಿಸಿದ ಡಾ.ವೀರೇಂದ್ರ ಹೆಗ್ಗಡೆ Read More »

ಕರಾವಳಿ

(ನ್ಯೂಸ್ ಕಡಬ)Newskadaba.com ಹೊಸದಿಲ್ಲಿ: ಮಾ,29 ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಯ ಬಡ್ಡಿಯ ದರವನ್ನು ಶೇ. 8.15ಕ್ಕೆ ಹೆಚ್ಚಿಸಲಾಗಿದೆ. 2022-23ನೇ ವರ್ಷಕ್ಕೆ ಸಂಬಂಧಿಸಿದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಭವಿಷ್ಯ ನಿಧಿ ಮಂಡಳಿ ಪ್ರಕಟಿಸಿದೆ. ಕಳೆದ ವರ್ಷ ಅದರ ಪ್ರಮಾಣ ಶೇ. 8.10 ಆಗಿತ್ತು. 1977-78ನೇ ಸಾಲಿನಲ್ಲಿ ಶೇ. 8ಕ್ಕೆ ಇಳಿಕೆಯಾಗಿತ್ತು. 2020ರ ಮಾರ್ಚ್‌ನಲ್ಲಿ ಶೇ. 8.5ಕ್ಕೆ ಬಡ್ಡಿ ದರವನ್ನು ಇಳಿಕೆ ಮಾಡಿತ್ತು. 2017-18ನೇ ಸಾಲಿನಲ್ಲಿ ಶೇ. 8.55 ಬಡ್ಡಿ ದರ ಇತ್ತು. 8.10 ಆಗಿತ್ತು.     *ಪಿಎಫ್ ಮೇಲಿನ

Read More »

ರಾಷ್ಟ್ರೀಯ ನ್ಯೂಸ್

ಬೈಕ್ ಮತ್ತು ಟಿಪ್ಪರ್ ನಡುವೆ ಅಪಘಾತ..!   ➤ ವಿದ್ಯಾರ್ಥಿ ಮೃತ್ಯು

(ನ್ಯೂಸ್ ಕಡಬ)newskadaba.com ಮಂಜೇಶ್ವರ,  ಮಾ.29. ಬೈಕ್ ಗೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಮಂಜೇಶ್ವರ ಸಮೀಪದ ಹೊಸಂಗಡಿಯಲ್ಲಿ ನಡೆದಿದೆ. ಮಂಜೇಶ್ವರ ಕುಂಜತ್ತೂರಿನ ಆದಿಲ್ ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಜೊತೆಯಲ್ಲಿದ್ದ ಇನ್ನೋರ್ವ ವಿದ್ಯಾರ್ಥಿ ಗಾಯಗೊಂಡಿದ್ದಾನೆ.  

ಬೈಕ್ ಮತ್ತು ಟಿಪ್ಪರ್ ನಡುವೆ ಅಪಘಾತ..!   ➤ ವಿದ್ಯಾರ್ಥಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top