News Kadaba

ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆ  

(ನ್ಯೂಸ್ ಕಡಬ)newskadaba.com ತೆಲಂಗಾಣ​, ಮಾ.31. ಉಂಗುರ ಕಳೆದುಕೊಂಡಿದ್ದಕ್ಕೆ ಯುವತಿಯೊಬ್ಬಳು ನೊಂದು ಸಾವಿನ ಹಾದಿ ಹಿಡಿದಿರುವ ಘಟನೆ ತೆಲಂಗಾಣದ ವಾರಂಗಲ್​ನಲ್ಲಿ ವರದಿಯಾಗಿದೆ. ಮಾದುಲ ಹೇಮಲತಾ ರೆಡ್ಡಿ (19) ಮೃತ ಯುವತಿ ಎಂದು ಗುರುತಿಸಲಾಗಿದೆ. ಈಕೆ ವಾರಂಗಲ್​ನ ಗುನ್ನೆಪಲ್ಲಿ ಗ್ರಾಮದವಳಾಗಿದ್ದು,  ಹನುಮಕೊಂಡದ ಡಿಗ್ರಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದಳು ಎನ್ನಲಾಗಿದೆ.  

ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆ   Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಳ್ತಂಗಡಿ ಮನೆಯೊಂದರಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆ! ➤ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

(ನ್ಯೂಸ್ ಕಡಬ) newskadaba.com. ಬೆಳ್ತಂಗಡಿ, ಮಾ.31.  ಕರಂಬಾರು ಗ್ರಾಮದ ಬಂತಡ್ಕದ ಮನೆಯೊಂದರಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಈ ಹಾವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಬಂತಡ್ಕದ ಮನೆಯಲ್ಲಿ ರಾತ್ರಿ ಬೃಹತ್ ಗಾತ್ರದ ಹಾವು ಕಾಣಿಸಿಕೊಂಡಿತ್ತು. ಬಳಿಕ ಅಶೋಕ್ ಬಂತಡ್ಕ ಹಾಗೂ ಲಂಕೇಶ್ ಎಂಬವರು ಸ್ಥಳಕ್ಕೆ ಬಂದು ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.

ಬೆಳ್ತಂಗಡಿ ಮನೆಯೊಂದರಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆ! ➤ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ Read More »

ಕರಾವಳಿ

‘ವಂದೇ ಭಾರತ್ ರೈಲಿಗೆ ಕಲ್ಲು ತೂರಿದ್ರೆ 5 ವರ್ಷ ಜೈಲು ಶಿಕ್ಷೆ’ ➤ ರೈಲ್ವೇ ಇಲಾಖೆ ಎಚ್ಚರಿಕೆ

(ನ್ಯೂಸ್ ಕಡಬ)newskadaba.com ನವದೆಹಲಿ, ಮಾ.31. ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟದಂತಹ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದರೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ದಕ್ಷಿಣ ಮಧ್ಯ ರೈಲ್ವೆ (ಎಸ್‌ಸಿಆರ್) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ತೆಲಂಗಾಣದ ವಿವಿಧ ಸ್ಥಳಗಳಿಂದ ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟದ ಹಲವಾರು ನಿದರ್ಶನಗಳು ವರದಿಯಾದ ನಂತರ ಈ ಎಚ್ಚರಿಕೆ ನೀಡಲಾಗಿದೆ.  

‘ವಂದೇ ಭಾರತ್ ರೈಲಿಗೆ ಕಲ್ಲು ತೂರಿದ್ರೆ 5 ವರ್ಷ ಜೈಲು ಶಿಕ್ಷೆ’ ➤ ರೈಲ್ವೇ ಇಲಾಖೆ ಎಚ್ಚರಿಕೆ Read More »

ರಾಷ್ಟ್ರೀಯ ನ್ಯೂಸ್

ಮನಿಲಾ ಪ್ರಯಾಣಿಕ ಹಡಗಿನಲ್ಲಿ ಬೆಂಕಿ ➤ 31 ಮಂದಿ ಸಜೀವದಹನ ಹಲವರು ನಾಪತ್ತೆ..!

ನ್ಯೂಸ್ ಕಡಬ) newskadaba.com. ದಕ್ಷಿಣ ಫಿಲಿಪ್ಪೀನ್ಸ್, ಮಾ.31.  ಮನಿಲಾ ಪ್ರಯಾಣಿಕ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 31 ಮಂದಿ ಸಜೀವದಹನಗೊಂಡ, ಹಲವರು ಗಾಯಗೊಂಡಿರುವ ಹಾಗೂ ನಾಪತ್ತೆಯಾಗಿರುವ ಘಟನೆ ದಕ್ಷಿಣ ಫಿಲಿಪ್ಪೀನ್ಸ್’ನಲ್ಲಿ ನಡೆದಿದೆ. ಎಂವಿ ಲೇಡಿ ಮೇರಿ ಜಾಯ್ 3 ಎಂಬ ಈ ಹಡಗಿನಲ್ಲಿ ಸುಮಾರು 250ಕ್ಕೂ ಅಧಿಕ ಪ್ರಯಾಣಿಕರು ಹಾಗೂ ಸಿಬ್ಬಂದಿ ಎಂದು ತಿಳಿದುಬಂದಿದೆ. 200ಕ್ಕೂ ಹೆಚ್ಚು ಜನರು ಜೀವ ಉಳಿಸಿಕೊಳ್ಳಲು ನೀರಿಗೆ ಜಿಗಿದಿದ್ದಾರೆ. ದಟ್ಟವಾದ ಕತ್ತಲಿನಲ್ಲಿಯೂ ಕರಾವಳಿ ಕಾವಲು ಪಡೆ, ನೌಕಾ ಪಡೆ, ಸಮೀಪದಲ್ಲಿದ್ದ ದೋಣಿ

ಮನಿಲಾ ಪ್ರಯಾಣಿಕ ಹಡಗಿನಲ್ಲಿ ಬೆಂಕಿ ➤ 31 ಮಂದಿ ಸಜೀವದಹನ ಹಲವರು ನಾಪತ್ತೆ..! Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಇಬ್ಬರು ಯುವಕರ ಮೇಲೆ ಚಾಕು ಇರಿತ..!!   ➤ ದೂರು ದಾಖಲು

(ನ್ಯೂಸ್ ಕಡಬ)Newskadaba.com ಹಾಸನ, ಮಾ.31 ಇಬ್ಬರು ಯುವಕರಿಗೆ ಚಾಕು ಇರಿದ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ.ಮುರುಳಿ ಹಾಗೂ ಹರ್ಷ ಚಾಕು ಇರಿತಕ್ಕೊಳಗಾದವರು.ರಾಮನವಮಿ ಅಂಗವಾಗಿ ನಗರದ ಜಾಮೀಯಾ ಮಸೀದಿ ರಸ್ತೆಯಲ್ಲಿ ಮೆರವಣಿಗೆ ಹೋಗುತ್ತಿದ್ದ ವೇಳೆ ಸಂಘಪರಿವಾರದ ಕಾರ್ಯಕರ್ತರು ದಾಂಧಲೆವೆಬ್ಬಿಸಿದ್ದಾರೆ. ಈ ವೇಳೆ ಇಬ್ಬರಿಗೆ ಚಾಕುವಿನಿಂದ ಇರಿಯಲಾಗಿದೆ. ರಾಮನವಮಿ ಅಂಗವಾಗಿ ನಗರದ ಜಾಮೀಯಾ ಮಸೀದಿ ರಸ್ತೆಯಲ್ಲಿ ರಾತ್ರೀ ಮೆರವಣಿಗೆ ಹೋಗುತ್ತಿದ್ದ ವೇಳೆ ಎರಡು ಕೋಮಿನ ಯುವಕರ ನಡುವೆ ಜಗಳ ಶುರುವಾಗಿದೆ. ಇದು ತಾರಕಕ್ಕೇರಿ ಮುರುಳಿ ಹಾಗೂ ಹರ್ಷ ಎಂಬ ಯುವಕರ ಹೊಟ್ಟೆ

ಇಬ್ಬರು ಯುವಕರ ಮೇಲೆ ಚಾಕು ಇರಿತ..!!   ➤ ದೂರು ದಾಖಲು Read More »

ಕರ್ನಾಟಕ

ಚೆಕ್‌ ಬೌನ್ಸ್‌ ಪ್ರಕರಣ ➤ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಬಂಧನಕ್ಕೆ ಜಾಮೀನುರಹಿತ ವಾರಂಟ್

(ನ್ಯೂಸ್ ಕಡಬ) newskadaba.com. ಚಿಕ್ಕಮಗಳೂರು, ಮಾ.31. ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯವು ಇವರ ಬಂಧನಕ್ಕೆ ಜಾಮೀನುರಹಿತ ವಾರಂಟ್‌ ಹೊರಡಿಸಿದೆ. ಚೆಕ್‌ ಬೌನ್ಸ್‌ ಪ್ರಕರಣವೊಂದಕ್ಕೆ ಸಂಬಂಧಿಸಿ ಜನಪ್ರತಿನಿಧಿಗಳ ನ್ಯಾಯಾಲಯ ಎಂ.ಪಿ.ಕುಮಾರಸ್ವಾಮಿ ಅವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶವಿತ್ತಾದರೂ ಕುಮಾರಸ್ವಾಮಿ ಅರ್ಜಿ ಸಲ್ಲಿಸಿರಲಿಲ್ಲ. ಇದೀಗ ಮಾ.28 ರಂದು ಕೋರ್ಟ್‌ ಜಾಮೀನುರಹಿತ ವಾರಂಟ್‌ ಹೊರಡಿಸಿದೆ. ಕುಮಾರಸ್ವಾಮಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಚಿಕ್ಕಮಗಳೂರು ಎಸ್​ ಪಿಗೆ ಸೂಚನೆ

ಚೆಕ್‌ ಬೌನ್ಸ್‌ ಪ್ರಕರಣ ➤ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಬಂಧನಕ್ಕೆ ಜಾಮೀನುರಹಿತ ವಾರಂಟ್ Read More »

ಕರ್ನಾಟಕ

ಮಂಗಳೂರು: ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟು ಪಾಲನೆಗೆ ಸೂಚನೆ

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.31. ವಿಧಾನಸಭೆ ಚುಣಾವಣೆ ಘೋಷಣೆಯಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ ಈ ನಿಟ್ಟಿನಲ್ಲಿ ಕೆಲ ಸೂಚನೆಗಳನ್ನು ಪಾಲಿಸುವಂತೆ ಜಿಲ್ಲಾಡಳಿತ ತಿಳಿಸಿದೆ. ಮಾ.29ರಿಂದ ಮೇ 15ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುತ್ತದೆ. ಮಾದರಿ ನೀತಿಸಂಹಿತೆ ಉಲ್ಲಂಘನೆಯಾಗದಂತೆ ತಡೆಗಟ್ಟುವ ಉದ್ದೇಶದಿಂದ ವಿಧಾನಸಭಾ ಕ್ಷೇತ್ರವಾರು ವಿವಿಧ ತಂಡಗಳನ್ನು ರಚಿಸಲಾಗಿದೆ.

ಮಂಗಳೂರು: ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟು ಪಾಲನೆಗೆ ಸೂಚನೆ Read More »

ಕರಾವಳಿ

ಡಚ್ ಪ್ರವಾಸಿಗರಿಗೆ ಚೂರಿ ಇರಿತ..!!   ➤ ಓರ್ವ ಸಿಬ್ಬಂದಿಯನ್ನು ಬಂಧಿಸಿದ ಪೋಲೀಸರು  

(ನ್ಯೂಸ್ ಕಡಬ)Newskadaba.com ಗೋವಾ,ಮಾ.31 ಡಚ್ ಪ್ರವಾಸಿಯೊಬ್ಬರಿಗೆ ಚೂರಿಯಿಂದ ಇರಿದು ಹಲ್ಲೆ ಮಾಡಿದ್ದಲ್ಲದೆ, ಪ್ರವಾಸಿಗರಿಗೆ ಸಹಾಯ ಮಾಡಲು ಹೋದ ಇನ್ನೊಬ್ಬ ವ್ಯಕ್ತಿಗೆ ಚೂರಿಯಿಂದ ಇರಿದಿರುವ ಉತ್ತರ ಗೋವಾದ ಪೆರ್ನೆಮ್‌ನಲ್ಲಿರುವ ರೆಸಾರ್ಟ್‌ನ ಸಿಬ್ಬಂದಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಆರೋಪಿಯನ್ನು ಅಭಿಷೇಕ್ ವರ್ಮಾ ಎಂದು ಗುರುತಿಸಲಾಗಿದ್ದು, ಗಾಯಗೊಂಡ ವ್ಯಕ್ತಿಯನ್ನು ಯುರಿಕೋ ಎಂದು ಗುರುತಿಸಲಾಗಿದೆ. “ದೂರುದಾರರ ಬಾಡಿಗೆ ಟೆಂಟ್‌ಗೆ ರೆಸಾರ್ಟ್ ಸಿಬ್ಬಂದಿಯೊಬ್ಬ ಅತಿಕ್ರಮಣ ಮಾಡಿದ್ದಾನೆ, ಡಚ್ ಮಹಿಳೆ ಸಹಾಯಕ್ಕಾಗಿ ಬೊಬ್ಬಿಟ್ಟಾಗ, ಸ್ಥಳೀಯ ವ್ಯಕ್ತಿಯೊಬ್ಬರು ಮಹಿಳೆಯ ರಕ್ಷಣೆಗೆ ಬಂದರು . ಆಗ

ಡಚ್ ಪ್ರವಾಸಿಗರಿಗೆ ಚೂರಿ ಇರಿತ..!!   ➤ ಓರ್ವ ಸಿಬ್ಬಂದಿಯನ್ನು ಬಂಧಿಸಿದ ಪೋಲೀಸರು   Read More »

ರಾಷ್ಟ್ರೀಯ ನ್ಯೂಸ್

ಕರಾವಳಿ: ಮತದಾನ ಕೇಂದ್ರಗಳಲ್ಲಿ ಯಕ್ಷಗಾನ, ಕಂಬಳದ ಸೊಗಸು          

(ನ್ಯೂಸ್ ಕಡಬ)newskadaba.com ಕರಾವಳಿ, ಮಾ.31. ದಕ್ಷಿಣ ಕನ್ನಡ ಜಿಲ್ಲೆ ಕರಾವಳಿ ಜಿಲ್ಲೆ ಮತ್ತು ಇದು ಯಕ್ಷಗಾನ ಕಲೆಯ ಸಾಂಪ್ರದಾಯಿಕ ಜಾನಪದ ನೃತ್ಯಕ್ಕೆ ಹೆಸರುವಾಸಿಯಾಗಿದೆ. ಯಕ್ಷಕಲೆ ನೃತ್ಯ, ಸಂಗೀತ, ಹಾಡು ಮತ್ತು ಬಣ್ಣದ ವೇಷಭೂಷಣಗಳೊಂದಿಗೆ ವಿದ್ವತ್ ಸಂವಾದದ ಅಪರೂಪದ ಸಂಯೋಜನೆ. ಕರಾವಳಿ ಜಿಲ್ಲೆಯ ಜನರು ಈ ಸಾಂಪ್ರದಾಯಿಕ ಜಾನಪದ ಕಲೆ ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾಗವಹಿಸುವ ಮತದಾರರನ್ನು ಸೆಳೆಯಲು ಯಕ್ಷಕಲೆಯನ್ನು ಬಳಸಿಕೊಳ್ಳಲು ಸ್ವೀಪ್‌ ತಂಡ ಮುಂದಾಗಿದೆ.  

ಕರಾವಳಿ: ಮತದಾನ ಕೇಂದ್ರಗಳಲ್ಲಿ ಯಕ್ಷಗಾನ, ಕಂಬಳದ ಸೊಗಸು           Read More »

ಕರಾವಳಿ

ಏರ್ಟ್ಯಾಗ್ ಬಳಸಿ ವಿಮಾನ ನಿಲ್ದಾಣದಲ್ಲಿ ಲಗೇಜ್ ಟ್ರ್ಯಾಕ್ ಮಾಡಿದ ವ್ಯಕ್ತಿ ➤ಕಳ್ಳ ಸಿಕ್ಕಿ ಬಿದ್ದದ್ದು ರೋಚಕ ಸ್ಟೋರಿ

(ನ್ಯೂಸ್ ಕಡಬ) newskadaba.com. ಬೆಂಗಳೂರು,ಮಾ.31. ವಿಮಾನ ನಿಲ್ದಾಣದಲ್ಲಿ ತನ್ನ ಸಾಮಾನುಗಳನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಆಪಲ್‌ನ ಏರ್‌ಟ್ಯಾಗ್ ಬಳಸಿ ಸೂಟ್‌ಕೇಸ್ ಅನ್ನು ಟ್ರ್ಯಾಕ್ ಮಾಡಿದಾಗ ವ್ಯಕ್ತಿಯೊಬ್ಬ ಆತನ ಬಟ್ಟೆಗಳನ್ನು ಧರಿಸಿರುವುದನ್ನು ಕಂಡು ಶಾಕ್ ಆಗಿದ್ದಾರೆ. ಜಮೀಲ್ ರೀಡ್  ಎಂಬ ವ್ಯಕ್ತಿ ಲಾಸ್ ಏಂಜಲೀಸ್‌ನಿಂದ ಜಾರ್ಜಿಯಾದ ಅಟ್ಲಾಂಟಾಗೆ ಪ್ರಯಾಣಿಸುತ್ತಿದ್ದಾಗ, ಬ್ಯಾಗೇಜ್ ಕಾರೂಹ್ಸೆಲ್ ನಲ್ಲಿ ತನ್ನ ಬ್ಯಾಗ್‌ ಇಲ್ಲ ಎಂಬುದನ್ನು ಗಮನಿಸಿದರು. ಯಾರೋ ಅದನ್ನು ತೆಗೆದುಕೊಂಡು ಹೋಗಿರಬೇಕು ಎಂದು ಅಂದುಕೊಂಡರು. ಅರ್ಧ ಗಂಟೆ ಕಾದರೂ ಅವರ ಲಗೇಜ್ ಬರಲಿಲ್ಲ. ಅವರ ಪ್ರಕಾರ,

ಏರ್ಟ್ಯಾಗ್ ಬಳಸಿ ವಿಮಾನ ನಿಲ್ದಾಣದಲ್ಲಿ ಲಗೇಜ್ ಟ್ರ್ಯಾಕ್ ಮಾಡಿದ ವ್ಯಕ್ತಿ ➤ಕಳ್ಳ ಸಿಕ್ಕಿ ಬಿದ್ದದ್ದು ರೋಚಕ ಸ್ಟೋರಿ Read More »

ರಾಷ್ಟ್ರೀಯ ನ್ಯೂಸ್
Scroll to Top