News Kadaba

ಲಿ.ಶಿವಕುಮಾರ ಶ್ರೀಗಳ 116 ನೇ ಜಯಂತಿ   ➤ಸಿದ್ಧಗಂಗಾ ಮಠದಲ್ಲಿ ವಿಶೇಷ ಪೂಜೆ  

(ನ್ಯೂಸ್ ಕಡಬ)Newskadaba.com ತುಮಕೂರು,ಏ.01 ತುಮಕೂರಿನಲ್ಲಿ ಏ.01 (ಇಂದು) ತ್ರಿವಿಧ ದಾಸೋಹಿ ಲಿಂಗೈಕ್ಯ ಶಿವಕುಮಾರ ಶ್ರೀಗಳ ಜಯಂತಿ ನಡೆಯಲಿದೆ. ಸಿದ್ದಗಂಗಾ ಮಠದಲ್ಲಿ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಗುವುದು. ಲಿಂಗೈಕ್ಯ ಶಿವಕುಮಾರ ಶ್ರೀಗಳ 116ನೇ ಜಯಂತಿ ಹಿನ್ನೆಲೆಯಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ, ಮಹಾಮಂಗಳಾರತಿ ನೆರವೇರಿಸಲಾಗುವುದು.ಇಂದು ರುದ್ರಾಕ್ಷಿ ಮಂಟಪದಲ್ಲಿ ಶ್ರೀಗಳ ಪ್ರತಿಮೆ ಇಟ್ಟು ಮೆರವಣಿಗೆ ನಡೆಸಲಾಗುತ್ತದೆ.  ಶ್ರೀ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ.        

ಲಿ.ಶಿವಕುಮಾರ ಶ್ರೀಗಳ 116 ನೇ ಜಯಂತಿ   ➤ಸಿದ್ಧಗಂಗಾ ಮಠದಲ್ಲಿ ವಿಶೇಷ ಪೂಜೆ   Read More »

ಕರ್ನಾಟಕ

ಮಂಗಳೂರು: 11,158 ಮಂದಿ ಮತದಾರರ ಹೆಸರುಗಳು ಪಟ್ಟಿಯಿಂದ ರದ್ದು    

(ನ್ಯೂಸ್ ಕಡಬ)newskadaba.com ಮಂಗಳೂರು, ಏ.01. ವಿವಿಧ ಕಾರಣಗಳಿಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 11,158 ಮಂದಿಯ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಕ್ಷೇತ್ರದಲ್ಲಿ 2,40,057 ಮತದಾರರಿದ್ದರು. ಹೊಸದಾಗಿ ಈಗ 13,487 ಮತದಾರರು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಒಟ್ಟಾರೆ 1,15,895 ಪುರುಷರು ಮತ್ತು 1,26,447 ಮಹಿಳೆಯರ ಸಹಿತ 2,42,888 ಮತದಾರರಿದ್ದಾರೆ ಎಂದು ಚುನಾವಣಾ ಅಧಿಕಾರಿ ಕೆಂಪೇಗೌಡ ಹೇಳಿದರು ಎನ್ನಲಾಗಿದೆ.  

ಮಂಗಳೂರು: 11,158 ಮಂದಿ ಮತದಾರರ ಹೆಸರುಗಳು ಪಟ್ಟಿಯಿಂದ ರದ್ದು     Read More »

ಕರಾವಳಿ

ಆಕಸ್ಮಿಕ ಕಾಲುಜಾರಿ ಹೊಳೆಗೆ ಬಿದ್ದು ವ್ಯಕ್ತಿ ಮೃತ್ಯು 

(ನ್ಯೂಸ್ ಕಡಬ)newskadaba.com ಕಾರ್ಕಳ, ಏ.01. ಮುಂಬೈಯಲ್ಲಿ ಹೋಟೆಲ್ ಉದ್ಯಮಿಯಾಗಿದ್ದ ಮುಂಡ್ಕೂರು ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ನಿವಾಸಿ ರಮೇಶ್ ಸಪಳಿಗ (68) ವರ್ಷ ಎಂಬವರ ಮೃತದೇಹ ಮುಂಡ್ಕೂರು ಶಾಂಭವಿ ಹೊಳೆಯಲ್ಲಿ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ. ವಿಪರೀತ ಮಧ್ಯಪಾನದ ಚಟ ಹೊಂದಿದ್ದ ರಮೇಶ್ ಸಪಳಿಗ ಕೆಲವು ಸಮಯದ ಹಿಂದೆ ಸಹೋದರ ಅನಾರೋಗ್ಯದ ಪೀಡಿತರಾದ ಹಿನ್ನಲೆ ಊರಿಗೆ ಬಂದವರು ವಾಪಸು ಹೋಗಿರಲಿಲ್ಲ. ಮಧ್ಯಪಾನ ಮಾಡಲೆಂದು ಮನೆಯಿಂದ ಹೋದವರು ವಾಪಸ್ ಮನೆಗೆ ಬಂದಿರಲಿಲ್ಲ ಎನ್ನಲಾಗಿದೆ.  

ಆಕಸ್ಮಿಕ ಕಾಲುಜಾರಿ ಹೊಳೆಗೆ ಬಿದ್ದು ವ್ಯಕ್ತಿ ಮೃತ್ಯು  Read More »

ಕರಾವಳಿ

LPG ಗ್ಯಾಸ್‌ ಸೋರಿಕೆಯಾಗಿ ಭೀಕರ ಅಗ್ನಿ ದುರಂತ ➤ ಏಳು ಮಂದಿ ಕಾರ್ಮಿಕರು ಮೃತ್ಯು

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.01. ಗ್ಯಾಸ್‌ ಸೋರಿಕೆಯಾಗಿ ನಡೆದ ಅಗ್ನಿ ಅವಘಡದಲ್ಲಿ ಏಳು ಮಂದಿ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಮೀಪದ ಮೇಡಹಳ್ಳಿಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ. ಶೆಡ್ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬಿಹಾರ ಮತ್ತು ಉತ್ತರಪ್ರದೇಶದಿಂದ ಬಂದಿದ್ದ 7 ಮಂದಿ ಶೆಡ್‌ ನಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಡ್ಯಾಮೇಜ್ ಆಗಿದ್ದ ಪೈಪ್‌ ನಿಂದ ಎಲ್‌ಪಿಜಿ ಗ್ಯಾಸ್ ಸೋರಿಕೆಯಾಗಿ ಅಗ್ನಿ ಅನಾಹುತ ನಡೆದಿದ್ದು ಅವಘಡ ಸಂಭವಿಸಿದ ದಿನ ಬೆಳಿಗ್ಗೆ 3.55 ರ ಸುಮಾರಿಗೆ

LPG ಗ್ಯಾಸ್‌ ಸೋರಿಕೆಯಾಗಿ ಭೀಕರ ಅಗ್ನಿ ದುರಂತ ➤ ಏಳು ಮಂದಿ ಕಾರ್ಮಿಕರು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ರಾಜ್ಯದಲ್ಲಿ ಎರಡು ದಿನ ಗುಡುಗು ಸಹಿತ ಮಳೆ ಸಾಧ್ಯತೆ     ➤ ಹವಾಮಾನ ಇಲಾಖೆ ಮುನ್ಸೂಚನೆ..!!

(ನ್ಯೂಸ್ ಕಡಬ)Newskadaba.com ಬೆಂಗಳೂರು, ಏ.01 ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಏಪ್ರಿಲ್ 1ರ (ಇಂದು) ಹಾಗೂ ಏಪ್ರಿಲ್ 2ರ (ನಾಳೆ) ರಾಜ್ಯದ ಕೆಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕುರಿತಂತೆ ಹವಾಮಾನ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಏಪ್ರಿಲ್ 1ರಂದು ಗುಡುಗು ಸಹಿತ ಮಳೆಯು ಬೆಂಗಳೂರು ಗ್ರಾಮಾಂತರ, ಬೆಂಗಳೂರು

ರಾಜ್ಯದಲ್ಲಿ ಎರಡು ದಿನ ಗುಡುಗು ಸಹಿತ ಮಳೆ ಸಾಧ್ಯತೆ     ➤ ಹವಾಮಾನ ಇಲಾಖೆ ಮುನ್ಸೂಚನೆ..!! Read More »

ಕರ್ನಾಟಕ

SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..!    ➤ ಶೇ. 10ರಷ್ಟು ಗ್ರೇಸ್‌ ಮಾರ್ಕ್ಸ್

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.01. ಈ ಬಾರಿಯ ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಕೊರೊನಾ ಪ್ರಭಾವದ ಶೈಕ್ಷಣಿಕ ವರ್ಷವೆಂದು ಪರಿಗಣಿಸಿ ಗ್ರೇಸ್‌ ಮಾರ್ಕ್ಸ್ ನೀಡಲು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ಧರಿಸಿರುವುದಾಗಿ ವರದಿಯಾಗಿದೆ. ಕೊರೊನಾದ ಪ್ರಭಾವದಿಂದ ಮಕ್ಕಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳದ ಕಾರಣ ಕೃಪಾಂಕ ನೀಡಲಾಗುತ್ತಿದ್ದು, ಒಟ್ಟಾರೆ ಕನಿಷ್ಠ ಅಂಕಗಳನ್ನುಗಳಿಸುವ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಶೇ.10 ಕೃಪಾಂಕ ನೀಡಿ ಉತ್ತೀರ್ಣಗೊಳಿಸಲಾಗುವುದು ಎಂದು ತಿಳಿದುಬಂದಿದೆ.  

SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..!    ➤ ಶೇ. 10ರಷ್ಟು ಗ್ರೇಸ್‌ ಮಾರ್ಕ್ಸ್ Read More »

ಕರ್ನಾಟಕ

ಮೈಸೂರು ಚುನಾವಣೆ ಹಿನ್ನೆಲೆ ➤ ಐಪಿಎಲ್ ಬೆಟ್ಟಿಂಗ್ ಮೇಲೂ ತೀವ್ರ ನಿಗಾ!

(ನ್ಯೂಸ್ ಕಡಬ) newskadaba.com.ಮೈಸೂರು, ಮಾ. 31.  ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ಮೈಸೂರಲ್ಲಿ ಪೊಲೀಸ್ ಇಲಾಖೆ ಕಾರ್ಯ ಪ್ರವೃತ್ತವಾಗಿದ್ದು, ಚುನಾವಣೆ ವೇಳೆ ಐಪಿಎಲ್ ಬೆಟ್ಟಿಂಗ್ ದಾರರಿಗೂ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ನಗರದಾದ್ಯಂತ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಮೈಸೂರಿನ ಆಯಕಟ್ಟಿನ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಗಳನ್ನು

ಮೈಸೂರು ಚುನಾವಣೆ ಹಿನ್ನೆಲೆ ➤ ಐಪಿಎಲ್ ಬೆಟ್ಟಿಂಗ್ ಮೇಲೂ ತೀವ್ರ ನಿಗಾ! Read More »

ಕರ್ನಾಟಕ

ಮಂಗಳೂರು: 3 ಟೋಲ್ ಗೇಟ್‌ಗಳಲ್ಲಿ ಏ.1ರಿಂದ ಶುಲ್ಕ ಹೆಚ್ಚಳ

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.31. ತಲಪಾಡಿ, ಹೆಜಮಾಡಿ ಮತ್ತು ಗುಂಡ್ಮಿಯ ಮೂರು ಟೋಲ್ ಗೇಟ್‌ಗಳಲ್ಲಿ ಏಪ್ರಿಲ್ 1 ರಿಂದ ಪರಿಷ್ಕೃತ ಶುಲ್ಕವನ್ನು ಹೆಚ್ಚಿಸಲಾಗುವುದು ಎಂದು ನವಯುಗ ಉಡುಪಿ ಟೋಲ್‌ವೇ ಪ್ರೈವೇಟ್ ಲಿಮಿಟೆಡ್ ಪ್ರಕಟಣೆಯಲ್ಲಿ ತಿಳಿಸಿದೆ. ಕಾರು, ಜೀಪ್ ವ್ಯಾನ್ ಅಥವಾ ಲಘು ವಾಹನಗಳ ಗುಂಡ್ಮಿ ಟೋಲ್ ಪ್ಲಾಜಾದ ಏಕಮುಖ ಸಂಚಾರಕ್ಕೆ ರೂ. 60 ಮತ್ತು ರೂ. 85 ಮಾಸಿಕ ಪಾಸ್ ತಿಂಗಳಿಗೆ ಗರಿಷ್ಠ 50 ಬಾರಿ 1930 ರೂ. ಎಲ್‌ಸಿವಿ ಮತ್ತು ಮಿನಿ ಬಸ್‌ಗಳಿಗೆ ಏಕಮುಖ ಸಂಚಾರ

ಮಂಗಳೂರು: 3 ಟೋಲ್ ಗೇಟ್‌ಗಳಲ್ಲಿ ಏ.1ರಿಂದ ಶುಲ್ಕ ಹೆಚ್ಚಳ Read More »

ಕರಾವಳಿ

FDA, SDA, ಸೇರಿ 757 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ KEA !

(ನ್ಯೂಸ್ ಕಡಬ)newskadaba.com ಮಾ.31. ರಾಜ್ಯ ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿದ್ದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎನ್ನಲಾಗಿದೆ. ಕರ್ನಾಟಕ ಸರ್ಕಾರದ ಹುದ್ದೆಗಳಿಗೆ ತಯಾರಿ ನಡೆಸುತ್ತಾ ಎದುರು ನೋಡುತ್ತಿದ್ದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶುಭ ಸುದ್ದಿ ನೀಡಿದೆ. ಕರ್ನಾಟಕ ರಾಜ್ಯದ ಸರ್ಕಾರಿ ಸಂಸ್ಥೆಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹಲವು ಸ್ತರದ ಹುದ್ದೆಗಳ ಭರ್ತಿಗೆ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ಆಹಾರ ಮತ್ತು

FDA, SDA, ಸೇರಿ 757 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ KEA ! Read More »

ಉದ್ಯೋಗ

ನಾಲ್ವರು ‘IAS’ ಅಧಿಕಾರಿಗಳ ವರ್ಗಾವಣೆ ! ➤ ರಾಜ್ಯ ಸರ್ಕಾರ ಆದೇಶ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.31. ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ ನಾಲ್ವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ ಎನ್ನಲಾಗಿದೆ. ಈ ಕುರಿತಂತೆ ಅಧಿಸೂಚನೆ ಹೊರಡಿಸಿರುವಂತ ರಾಜ್ಯ ಸರ್ಕಾರವು, ಮೈನಿಂಗ್ ಮತ್ತು ಜಿಯಾಲಜಿ ಇಲಾಖೆಯ ಡೈರೆಕ್ಟರ್ ಆಗಿದ್ದಂತ ಐಎಎಸ್ ಅಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಬೆಳಗಾವಿ ವಿಭಾಗದ ಪ್ರಾದೇಶಿಕ ಕಮೀಷನರ್ ಆಗಿ ಆದೇಶಿಸಲಾಗಿದೆ. ಬೆಳಗಾವಿ ಪ್ರಾದೇಶಿಕ ಕಮೀಷನರ್ ಆಗಿದ್ದಂತ ಹಿರೇಮಠ್ ಎಂ.ಜಿ ಅವರನ್ನು ಕರ್ನಾಟಕ ರೂರಲ್ ಇನ್ಫಾಸ್ಟ್ರಕ್ಚರ್ ಡೆವಲ್ಪಮೆಂಟ್ ಕಾರ್ಪೊರೇಷನ್ ಎಂ.ಡಿಯಾಗಿ ನಿಯೋಜಿಸಲಾಗಿದೆ.

ನಾಲ್ವರು ‘IAS’ ಅಧಿಕಾರಿಗಳ ವರ್ಗಾವಣೆ ! ➤ ರಾಜ್ಯ ಸರ್ಕಾರ ಆದೇಶ Read More »

ಕರ್ನಾಟಕ
Scroll to Top