News Kadaba

ದೇವಸ್ಥಾನದ ಮೆಟ್ಟಿಲು ಬಾವಿ ಕುಸಿದು 13 ಮಂದಿ ಮೃತ್ಯು

(ನ್ಯೂಸ್ ಕಡಬ)newskadaba.com ಭೋಪಾಲ್, ಮಾ.31. ಇಂದೋರ್‌ನ ದೇವಾಲಯವೊಂದರಲ್ಲಿ ಕಡಿದಾದ ಬಾವಿಗೆ ಬಿದ್ದು ಕನಿಷ್ಠ 13 ಜನರು ಮೃತಪಟ್ಟು, ಅವರಲ್ಲಿ ಹೆಚ್ಚಿನವರು ಮಹಿಳೆಯರು ಎಂದು ತಿಳಿದುಬಂದಿದೆ. ಅಲ್ಲದೆ ಓರ್ವ ಅಪ್ರಾಪ್ತೆ ನಾಪತ್ತೆಯಾಗಿದ್ದಾಳೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ. 13 ಮಂದಿಯಲ್ಲಿ 10 ಮಂದಿ ಮಹಿಳೆಯರು, ಇನ್ನೂ ಕೆಲವರು ನಾಪತ್ತೆಯಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಎನ್‌ಡಿಆರ್‌ಎಫ್ ತಂಡ 13 ಮೃತ ದೇಹಗಳನ್ನು ಬಾವಿಯಿಂದ ಹೊರತೆಗೆದಿದೆ.  

ದೇವಸ್ಥಾನದ ಮೆಟ್ಟಿಲು ಬಾವಿ ಕುಸಿದು 13 ಮಂದಿ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

7.30 ಕೋಟಿ ರೂ ಮೌಲ್ಯದ ಗಾಂಜಾ ವಶ  

(ನ್ಯೂಸ್ ಕಡಬ)newskadaba.com ತ್ರಿಪುರಾ, ಮಾ.31. ತ್ರಿಪುರಾ ಪೊಲೀಸರು ಗುರುವಾರ 7.3 ಕೋಟಿ ಮೌಲ್ಯದ 3,660 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಪವಿಭಾಗೀಯ ಪೊಲೀಸ್ ಅಧಿಕಾರಿ ಕಮಲ್ ದೆಬ್ಬರ್ಮಾ ನೇತೃತ್ವದ ಪೊಲೀಸ್ ತಂಡವು ಉನಕೋಟಿ ಜಿಲ್ಲೆಯ ಪೆಚಾರ್ತಲ್‌ನಲ್ಲಿ ಚೆಕ್ ಗೇಟ್‌ನಲ್ಲಿ ಅಸ್ಸಾಂನಿಂದ ಬಂದ ಹತ್ತು ಚಕ್ರಗಳ ತೈಲ ಟ್ಯಾಂಕರ್ ಅನ್ನು ತಡೆದು 3,660 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.  

7.30 ಕೋಟಿ ರೂ ಮೌಲ್ಯದ ಗಾಂಜಾ ವಶ   Read More »

ರಾಷ್ಟ್ರೀಯ ನ್ಯೂಸ್

ಏರ್‌ಪೋರ್ಟ್‌ನಲ್ಲಿ ಕಳುವಾದ ಲಗೇಜ್‌ ಏರ್‌ಟ್ಯಾಗ್ ಮೂಲಕ ಟ್ರ್ಯಾಕ್   ➤  ಕಳ್ಳ ಪ್ರಯಾಣಿಕನ ಬಟ್ಟೆಗಳನ್ನ ಧರಿಸಿದ್ದು ಪತ್ತೆ..!!

(ನ್ಯೂಸ್ ಕಡಬ)Newskadaba.com ನ್ಯೂಯಾರ್ಕ್,ಮಾ.31 ವಿಮಾನ ನಿಲ್ದಾಣದಲ್ಲಿ ಕಳೆದುಕೊಂಡ ಲಗೇಜ್ ಬ್ಯಾಗ್ ನ ಟ್ರ್ಯಾಕ್ ಮಾಡಿದಾಗ ಬ್ಯಾಗ್ ನಲ್ಲಿದ್ದ ಬಟ್ಟೆಗಳನ್ನ ಕಳ್ಳ ಧರಿಸಿರೋದನ್ನ ಕಂಡ ವ್ಯಕ್ತಿ ಆಘಾತಕ್ಕೊಳಗಾಗಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ ಅಮೆರಿಕಾದ ವಿಮಾನ ನಿಲ್ದಾಣದಲ್ಲಿ ತನ್ನ ಬ್ಯಾಗ್ ಕಳೆದುಕೊಂಡ ವ್ಯಕ್ತಿಯೊಬ್ಬರು ಆಪಲ್‌ನ ಏರ್‌ಟ್ಯಾಗ್ ಬಳಸಿ ಸೂಟ್‌ಕೇಸ್ ಅನ್ನು ಟ್ರ್ಯಾಕ್ ಮಾಡಿದಾಗ ಕಳ್ಳನು ವ್ಯಕ್ತಿಯ ಬಟ್ಟೆಗಳನ್ನು ಧರಿಸಿರೋದು ಪತ್ತೆಯಾಗಿದೆ.          

ಏರ್‌ಪೋರ್ಟ್‌ನಲ್ಲಿ ಕಳುವಾದ ಲಗೇಜ್‌ ಏರ್‌ಟ್ಯಾಗ್ ಮೂಲಕ ಟ್ರ್ಯಾಕ್   ➤  ಕಳ್ಳ ಪ್ರಯಾಣಿಕನ ಬಟ್ಟೆಗಳನ್ನ ಧರಿಸಿದ್ದು ಪತ್ತೆ..!! Read More »

ಅಂತರ್ರಾಷ್ಟ್ರೀಯ ನ್ಯೂಸ್

ಮುಂಬೈ ಮಹಾನಗರಕ್ಕೆ ಮತ್ತೊಮ್ಮೆ ವರ್ಲ್ಡ್ ಟ್ರೀ ಸಿಟಿ ಪಟ್ಟ

(ನ್ಯೂಸ್ ಕಡಬ)newskadaba.com ಮುಂಬೈ, ಮಾ.31. ಕಾಂಕ್ರೀಟ್ ಕಾಡು ಎಂದೇ ಗುರುತಿಸಿಕೊಂಡಿರುವ ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಸತತ ಎರಡನೇ ವರ್ಷವೂ ವರ್ಲ್ಡ್ ಟ್ರೀ ಸಿಟಿ 2022 ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ ಎಂದು ಬಿಎಂಸಿ ಅಧಿಕಾರಿ ತಿಳಿಸಿದ್ದಾರೆ. ಆರ್ಬರ್ ಡೇ ಫೌಂಡೇಶನ್ ಮುಖ್ಯ ಕಾರ್ಯನಿರ್ವಾಹಕ ಡಾನ್ ಲ್ಯಾಂಬೆ ಪ್ರಮಾಣಪತ್ರವನ್ನು ಬಿಎಂಸಿ ಅಧಿಕಾರಿಗಳಿಗೆ ನೀಡಿದ್ದಾರೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಪರಿಸರ ವಿಭಾಗ ವಿಶ್ವಾದ್ಯಂತ 35 ಕೋಟಿಗೂ ಅಧಿಕ ಮರಗಳನ್ನು ನೆಟ್ಟಿದ್ದು, 2027ರವೇಳೆಗೆ 50 ಕೋಟಿ ಮರಗಳನ್ನು ಬೆಳೆಸುವ ಗುರಿ

ಮುಂಬೈ ಮಹಾನಗರಕ್ಕೆ ಮತ್ತೊಮ್ಮೆ ವರ್ಲ್ಡ್ ಟ್ರೀ ಸಿಟಿ ಪಟ್ಟ Read More »

ರಾಷ್ಟ್ರೀಯ ನ್ಯೂಸ್

ಮೋದಿ ವಿರುದ್ದ ಪೋಸ್ಟರ್ !!! ➤ 8 ಮಂದಿ ಬಂಧನ

(ನ್ಯೂಸ್ ಕಡಬ)newskadaba.com ನವದೆಹಲಿ, ಮಾ.31. ಮೋದಿ ಹಟಾವೋ, ದೇಶ್ ಬಚಾವೋ ಎಂಬುದಾಗಿ ಅಹ್ಮದಾಬಾದ್‌ನ ವಿವಿಧೆಡೆ ಪೋಸ್ಟರ್ ಹಾಕಿದ ವಿಚಾರವಾಗಿ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ದ ಆಮ್ ಆದ್ಮಿ ಪಕ್ಷವು ರಾಷ್ಟ್ರ ವ್ಯಾಪಿ ಅಭಿಯಾನ ಆರಂಭಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದ್ದು, ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ. ಸದ್ಯ ಎಂಟು ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಹ್ಮದಾಬಾದ್ ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ

ಮೋದಿ ವಿರುದ್ದ ಪೋಸ್ಟರ್ !!! ➤ 8 ಮಂದಿ ಬಂಧನ Read More »

ರಾಷ್ಟ್ರೀಯ ನ್ಯೂಸ್

3,000 ಖಗ-ಮೃಗಗಳ ನೀರ ನೆಮ್ಮದಿಗೆ ಕಾರಣವಾಯ್ತು ಈ ಹೊಸ ಉಪಕ್ರಮ  

(ನ್ಯೂಸ್ ಕಡಬ)Newskadaba.com ಮಾ.31 ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಕರೆಸಿಕೊಳ್ಳುವ ಗದಗ ಜಿಲ್ಲೆಯ ಕಪ್ಪತಗುಡ್ಡಕ್ಕೆ ಬೇಸಿಗೆಯಲ್ಲಿ ಬೆಂಕಿಯ ಕಾಟ ಒಂದೆಡೆಯಾದರೆ, ಕಪ್ಪತಗುಡ್ಡದಲ್ಲಿ ನೀರಿನ ಮೂಲಗಳು ಬತ್ತಿ ಹೋಗಿದ್ದರಿಂದ ಇಲ್ಲಿ ವಾಸಿಸುವ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರು ಇಲ್ಲದೆ ಪರಿತಪಿಸುತ್ತಿರುವುದು ವಿಷಾದವಾಗಿದೆ. ಆದರೆ, ಕಳೆದ ಅನೇಕ ವರ್ಷಗಳಿಂದ ಕಪ್ಪತಹಿಲ್ಸ್ ಅರಣ್ಯ ಇಲಾಖೆ ಕೃತಕ ಹೊಂಡಗಳನ್ನು ನಿರ್ಮಿಸಿ ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರು ಒದಗಿಸುತ್ತಿರುವುದು ಮಾನವೀಯ ಮೌಲ್ಯಕ್ಕೆ ಸಾಕ್ಷಿಯಾಗಿದೆ.      

3,000 ಖಗ-ಮೃಗಗಳ ನೀರ ನೆಮ್ಮದಿಗೆ ಕಾರಣವಾಯ್ತು ಈ ಹೊಸ ಉಪಕ್ರಮ   Read More »

ಕರ್ನಾಟಕ

➤ ಚೆಕ್ ಪೋಸ್ಟ್ ನಲ್ಲಿ ಬೊಮ್ಮಾಯಿ ಕಾರು ತಪಾಸಣೆ

(ನ್ಯೂಸ್ ಕಡಬ) newskadaba.com. ಬೆಂಗಳೂರು,ಮಾ.31. ಬೆಂಗಳೂರಿನಿಂದ ದೊಡ್ಡಬಳ್ಳಾಪುರದ ಘಾಟ್ ಸುಬ್ರಹ್ಮಣ್ಯ ದೇಗುಲಕ್ಕೆ ಹೊರಟ ವೇಳೆ ಬೊಮ್ಮಾಯಿ ಅವರ ಕಾರನ್ನು ಪರಿಶೀಲನೆ ನಡೆಸಲಾಗಿದೆ. ಮಾರ್ಗ ಮಧ್ಯೆ ಮಾರಸಂದ್ರ ಸಮೀಪ ಹೊಸಹುಡ್ಯ ಬಳಿಯ ಚೆಕ್ ಪೋಸ್ಟ್ ನಲ್ಲಿ ಬೆಂಗಳೂರು ಗ್ರಾಮಾಂತರ ಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ಮುಂದಾಳತ್ವದಲ್ಲಿ ಮುಖ್ಯ ಮಂತ್ರಿಗಳ ಕಾರನ್ನು ತಪಾಸಣೆ ನಡೆಸಲಾಯಿತು.

➤ ಚೆಕ್ ಪೋಸ್ಟ್ ನಲ್ಲಿ ಬೊಮ್ಮಾಯಿ ಕಾರು ತಪಾಸಣೆ Read More »

ಕರ್ನಾಟಕ

‘ಜೈಲಿಗೆ ಹೋಗಲು ನಾನು ಹೆದರುವುದು ಇಲ್ಲ’    ➤ ಅಮೃತಪಾಲ್ ಸಿಂಗ್‌

(ನ್ಯೂಸ್ ಕಡಬ)newskadaba.com ಅಮೃತಸರ, ಮಾ.31. ನನ್ನ ಬಂಧನಕ್ಕೆ ಸಂಬಂಧಿಸಿ ನಾನು ಯಾವ ಡಿಮ್ಯಾಂಡ್‌ ಅನ್ನೂ ಮಾಡಿಲ್ಲ. ಜೈಲಿಗೆ ಹೋಗಲು ನಾನು ಹೆದರುವುದೂ ಇಲ್ಲ ಎಂದು ಕಳೆದ 13 ದಿನಗಳಿಂದ ತಲೆಮರಿಸಿಕೊಂಡಿರುವ ಸಿಖ್ ಧರ್ಮ ಪ್ರಚಾರಕ ಅಮೃತಪಾಲ್ ಸಿಂಗ್‌ನದ್ದು ಎನ್ನಲಾದ ಆಡಿಯೋವೊಂದು ಪಂಜಾಬ್‌ ನಾದ್ಯಂತ ಹರಿದಾಡುತ್ತಿದೆ. ಅಮೃತ್‌ಪಾಲ್‌ ಪ್ರಕರಣದ ವೇಳೆ ಬಂಧಿತರಾಗಿದ್ದ 360 ಯುವಕರ ಪೈಕಿ 348 ಮಂದಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದ್ದು, ಉಳಿದವರನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಪಂಜಾಬ್‌ ಸರಕಾರ ಭರವಸೆ ನೀಡಿದೆ ಎಂದು ಸಿಕ್ಖ್ರ ಪರಮೋಚ್ಚ

‘ಜೈಲಿಗೆ ಹೋಗಲು ನಾನು ಹೆದರುವುದು ಇಲ್ಲ’    ➤ ಅಮೃತಪಾಲ್ ಸಿಂಗ್‌ Read More »

ರಾಷ್ಟ್ರೀಯ ನ್ಯೂಸ್

ತರಬೇತಿ ವೇಳೆ ಸೇನಾ ಹೆಲಿಕಾಪ್ಟರ್‌ ಗಳ ನಡುವೆ ಢಿಕ್ಕಿ

(ನ್ಯೂಸ್ ಕಡಬ)newskadaba.com ಯುನೈಟೆಡ್ ಸ್ಟೇಟ್ಸ್‌, ಮಾ.31. ಯುನೈಟೆಡ್ ಸ್ಟೇಟ್ಸ್‌ನಲ್ಲಿ ತರಬೇತಿ ವೇಳೆ ಸೇನಾ ಹೆಲಿಕಾಪ್ಟರ್‌ಗಳ ನಡುವೆ ಢಿಕ್ಕಿ ಸಂಭವಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಆದರೆ ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ತಿಳಿದು ಬಂದಿಲ್ಲ. ಎಂದಿನಂತೆ ಬುಧವಾರವೂ ಸೇನಾ ಹೆಲಿಕಾಪ್ಟರ್‌ಗಳು ತರಬೇತಿ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಆದರೆ ರಾತ್ರಿ ಸುಮಾರು 10 ಗಂಟೆ ವೇಳೆಗೆ ಎರಡು ಎಚ್‌ಎಚ್-60 ಬ್ಲಾಕ್ ಹಾಕ್ ಅಸಾಲ್ಟ್ ನ ಎರಡು ಹೆಲಿಕಾಪ್ಟರ್‌ಗಳ ನಡುವೆ ಢಿಕ್ಕಿ ಸಂಭವಿಸಿದೆ. ಟ್ರಿಗ್ ಕೌಂಟಿಯಲ್ಲಿ ತರಬೇತಿಯಲ್ಲಿದ್ದ ವೇಳೆ ಘಟನೆ ಸಂಭವಿಸಿದೆ.

ತರಬೇತಿ ವೇಳೆ ಸೇನಾ ಹೆಲಿಕಾಪ್ಟರ್‌ ಗಳ ನಡುವೆ ಢಿಕ್ಕಿ Read More »

ರಾಷ್ಟ್ರೀಯ ನ್ಯೂಸ್

ಉಡುಪಿ: ಕಳ್ಳತನವಾದ 34 ಮೊಬೈಲ್‌‌ಗಳನ್ನು ವಾರಸುದಾರರಿಗೆ ಹಿಂದಿರುಗಿಸಿದ ಪೊಲೀಸರು

(ನ್ಯೂಸ್ ಕಡಬ)newskadaba.com ಉಡುಪಿ, ಮಾ.31. ಕಳ್ಳತನವಾದ ಹಾಗೂ ಕಳೆದು ಹೋಗಿದ್ದ 34 ಮೊಬೈಲ್ ಫೋನ್‌ ಗಳನ್ನು ಪತ್ತೆ ಹಚ್ಚಿ ಆಯಾ ಮಾಲೀಕರಿಗೆ ಹಸ್ತಾಂತರಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ವರದಿಯಾದ ವಿವಿಧ ಪ್ರಕರಣಗಳ ಅಡಿಯಲ್ಲಿ, ಕಳೆದುಹೋದ 34 ಫೋನ್‌ ಗಳನ್ನು ಜಿಲ್ಲಾ ಪೊಲೀಸರು ಪತ್ತೆ ಮಾಡಿದ್ದಾರೆ. ಮೊಬೈಲ್ ಫೋನ್‌ ಗಳು ಕಳ್ಳತನ ಮತ್ತು ನಾಪತ್ತೆಯಾದ ಬಗ್ಗೆ ಸಾರ್ವಜನಿಕರು ಆದಷ್ಟು ಬೇಗ ಹತ್ತಿರದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡುವಂತೆ ಉಡುಪಿ ಜಿಲ್ಲಾ ಪೊಲೀಸ್ ಆಯುಕ್ತರು ವಿನಂತಿಸಿದ್ದಾರೆ.

ಉಡುಪಿ: ಕಳ್ಳತನವಾದ 34 ಮೊಬೈಲ್‌‌ಗಳನ್ನು ವಾರಸುದಾರರಿಗೆ ಹಿಂದಿರುಗಿಸಿದ ಪೊಲೀಸರು Read More »

ಕರಾವಳಿ
Scroll to Top