News Kadaba

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಪರಿಷ್ಕರಣೆ ➤ 92 ರೂಪಾಯಿ ಇಳಿಕೆ

(ನ್ಯೂಸ್ ಕಡಬ)newskadaba.com ನವದೆಹಲಿ, ಏ.01. ಕೇಂದ್ರ ಸರ್ಕಾರ ಏ.01 ರಿಂದ ವಾಣಿಜ್ಯ ಬಳಕೆಯ LPG ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಿದ್ದು, 92 ರೂಪಾಯಿ ಇಳಿಕೆ ಮಾಡಿದೆ ಎನ್ನಲಾಗಿದೆ. ಏಪ್ರಿಲ್ 1 ನೂತನ ಆರ್ಥಿಕ ವರ್ಷದ ಆರಂಭವಾಗಿದ್ದು, ಇಂದಿನಿಂದ ಬೇರೆ ಬೇರೆ ಹೊಸ ನಿಯಮಗಳು ಜಾರಿಯಾಗಿದ್ದು, ಕಾರುಗಳ ದರ ದುಬಾರಿಯಾಗಲಿದೆ. ಔಷಧಗಳ ಬೆಲೆ ಇಳಿಕೆಯಾಗಲಿದ್ದು, ಹೊಸ ತೆರಿಗೆ ಪದ್ಧತಿ ಜಾರಿಯಾಗಲಿದೆ.

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಪರಿಷ್ಕರಣೆ ➤ 92 ರೂಪಾಯಿ ಇಳಿಕೆ Read More »

ರಾಷ್ಟ್ರೀಯ ನ್ಯೂಸ್

96 ಲೀಟರ್ ರಕ್ತದಾನ ಮಾಡಿ ಮಾನವೀಯತೆ ಮೆರೆದ 80 ವರ್ಷದ ಅಜ್ಜಿ.!

(ನ್ಯೂಸ್ ಕಡಬ)Newskadaba.com ಕೆನಾಡ, ಏ.01   ರಕ್ತದಾನ ಅಮೂಲ್ಯ ಮತ್ತು ಶ್ರೇಷ್ಠ. ಅನೇಕ ಜೀವಗಳನ್ನು ಉಳಿಸುತ್ತದೆ. ರಕ್ತದಾನದ ಬಗ್ಗೆ ತಿಳಿವಳಿಕೆ ಇರುವವರು ಹಲವು ಬಾರಿ ರಕ್ತದಾನ ಮಾಡುತ್ತಾರೆ. ಆದರೆ ಅಜ್ಜಿಯೊಬ್ಬರು ತಮ್ಮ ಜೀವನದಲ್ಲಿ ರಕ್ತದಾನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಜೋಸೆಫೀನ್ 22 ನೇ ವಯಸ್ಸಿನಿಂದ ರಕ್ತದಾನ ಮಾಡಲು ಪ್ರಾರಂಭಿಸಿದರು ಮತ್ತು 76 ವರ್ಷ ವಯಸ್ಸಿನ ನಂತರವೂ ರಕ್ತದಾನ ಮಾಡುವುದನ್ನು ಮುಂದುವರೆಸಿದ್ದಾರೆ. ಹೀಗೆ ತಮ್ಮ 80 ನೇ ವಯಸ್ಸಿನಲ್ಲಿ. ಬರೋಬ್ಬರಿ 96 ಲೀಟರ್‌ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

96 ಲೀಟರ್ ರಕ್ತದಾನ ಮಾಡಿ ಮಾನವೀಯತೆ ಮೆರೆದ 80 ವರ್ಷದ ಅಜ್ಜಿ.! Read More »

ಅಂತರ್ರಾಷ್ಟ್ರೀಯ ನ್ಯೂಸ್

ಸೈಕಲ್‌ನಲ್ಲಿ ಕನ್ಯಾಕುಮಾರಿಗೆ 1500 ಕಿ.ಮೀ ಯಾತ್ರೆ ಪೂರ್ಣಗೊಳಿಸಿದ ಪದವಿ ವಿದ್ಯಾರ್ಥಿ 

(ನ್ಯೂಸ್ ಕಡಬ)newskadaba.com  ಉಡುಪಿ, ಏ.01. ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ತೃತೀಯ ಬಿಎ ​​ವಿದ್ಯಾರ್ಥಿ ದಿನೇಶ್ ಸೈಕಲ್‌ನಲ್ಲಿ ಕನ್ಯಾಕುಮಾರಿಗೆ 1500 ಕಿಲೋಮೀಟರ್ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಕಾಲೇಜಿನಲ್ಲಿ ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು ಎನ್ನಲಾಗಿದೆ. 1500 ಕಿ.ಮೀ 20 ದಿನಗಳಲ್ಲಿ ಕನ್ಯಾಕುಮಾರಿ ಯಾತ್ರೆ ಪೂರ್ಣಗೊಳಿಸಿದ ದಿನೇಶ್ ಅವರನ್ನು ಕಾಲೇಜು ಕ್ಯಾಂಪಸ್‌ನಿಂದ ಅವರ ತಾಯಿ ಪಾರ್ವತಿ ಬೋವಿಯವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.  

ಸೈಕಲ್‌ನಲ್ಲಿ ಕನ್ಯಾಕುಮಾರಿಗೆ 1500 ಕಿ.ಮೀ ಯಾತ್ರೆ ಪೂರ್ಣಗೊಳಿಸಿದ ಪದವಿ ವಿದ್ಯಾರ್ಥಿ  Read More »

ಕರಾವಳಿ

ಮೆಟ್ರೋದೊಳಗೆ ಮಹಿಳೆಯರ ಹೊಡೆದಾಟ ➤ ವಿಡಿಯೋ ವೈರಲ್

(ನ್ಯೂಸ್ ಕಡಬ)newskadaba.com ದೆಹಲಿ, ಏ.01. ಮೆಟ್ರೋದೊಳಗೆ ಇಬ್ಬರು ಮಹಿಳೆಯರು ಗಲಾಟೆ ಮಾಡಿಕೊಂಡ ವಿಡಿಯೋ ವೈರಲ್ ಆಗಿದ್ದು, ಮಹಿಳೆಯರು ಮೆಟ್ರೋದೊಳಗೆ ಹೊಡೆದಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಮಹಿಳೆಯೊಬ್ಬಳು ತನ್ನ ಪಾದರಕ್ಷೆಗಳನ್ನು ಕೈಯಲ್ಲಿ ಹಿಡಿದುಕೊಂಡು ಇನ್ನೊಬ್ಬ ಮಹಿಳೆಯನ್ನು ಬೆದರಿಸಲು ಮತ್ತು ಹೊಡೆಯಲು ಪ್ರಯತ್ನಿಸುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇನ್ನೊಬ್ಬ ಮಹಿಳೆ ಕೈಯಲ್ಲಿ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೊಡೆದಾಟ ಶುರು ಮಾಡಿದ್ದಾರೆ. ವೈರಲ್ ವೀಡಿಯೊದಲ್ಲಿ ಕಂಡುಬಂದಂತೆ ಸುತ್ತಮುತ್ತಲಿನ ಜನರು ಅವರನ್ನು ತಡೆಯಲು ಪ್ರಯತ್ನಿಸಿದರು. ಬಳಿಕ ಇಬ್ಬರೂ ಮಾತಿನಲ್ಲೇ ಕಿರುಚುತ್ತಿರುವುದು ಕಂಡುಬಂದಿದೆ.

ಮೆಟ್ರೋದೊಳಗೆ ಮಹಿಳೆಯರ ಹೊಡೆದಾಟ ➤ ವಿಡಿಯೋ ವೈರಲ್ Read More »

ರಾಷ್ಟ್ರೀಯ ನ್ಯೂಸ್

ನಕಲಿ ಬಿಎಡ್‌ ಅಂಕಪಟ್ಟಿ ಮೂಲಕ ಹುದ್ದೆ ಗಿಟ್ಟಿಸಿಕೊಡ ಶಿಕ್ಷಕ.?   ➤ವಾರ್ಡನ್‌ ಹುದ್ದೆಯಿಂದ ಪ್ರಿನ್ಸಿಪಾಲ್‌ ಹುದ್ದೆ..!  

(ನ್ಯೂಸ್ ಕಡಬ)Newskadaba.com ಧಾರವಾಡ, ಏ.01   ಧಾರವಾಡದ ಮುತ್ತಣ್ಣ ಸ್ಮಾರಕ ಪೊಲೀಸ್ ವಸತಿ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಯಲ್ಲಪ್ಪಗೌಡ ಪಿ.ಕಲ್ಲನಗೌಡರ್ ಎಂಬವರು ನಕಲಿ ಅಂಕಪಟ್ಟಿ ಮೂಲಕ ಈ ಹುದ್ದೆಗೇರಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ನಕಲಿ ಬಿಎಡ್ ಅಂಕಪಟ್ಟಿ ಪಡೆದು ವಾರ್ಡನ್ ಹುದ್ದೆಯಿಂದ ಪ್ರಾಂಶುಪಾಲ ಹುದ್ದೆಗೆ ಜಿಗಿದಿದ್ದಾರೆ ಎಂದು ಸಿದ್ದಪ್ಪ ಅಕ್ಕಿ ಎನ್ನುವವರು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಲ್ಲನಗೌಡರ್‌ ಅವರು ಪ್ರಾಂಶುಪಾಲ ಹುದ್ದೆ ಗಿಟ್ಟಿಸುವ ದುರುದ್ದೇಶದಿಂದ ಉತ್ತರ ಪ್ರದೇಶದ ಸಂಸ್ಥೆಯಿಂದ ಬಿಎಡ್ ನಕಲಿ

ನಕಲಿ ಬಿಎಡ್‌ ಅಂಕಪಟ್ಟಿ ಮೂಲಕ ಹುದ್ದೆ ಗಿಟ್ಟಿಸಿಕೊಡ ಶಿಕ್ಷಕ.?   ➤ವಾರ್ಡನ್‌ ಹುದ್ದೆಯಿಂದ ಪ್ರಿನ್ಸಿಪಾಲ್‌ ಹುದ್ದೆ..!   Read More »

ಕರ್ನಾಟಕ

ಕುರ್ಲಾನ್​ ಕಾರ್ಖಾನೆಗೆ ಇದ್ದಕ್ಕಿದ್ದಂತೆ ತಗುಲಿದ ಬೆಂಕಿ..!  ➤ಅಪಾಯದಿಂದ ಪಾರಾದ ಕಾರ್ಮಿಕರು

(ನ್ಯೂಸ್ ಕಡಬ)Newskadaba.com ಬೆಂಗಳೂರು, ಏ.01 ನೆಲಮಂಗಲ ತಾಲೂಕಿನ ಟಿ. ಬೇಗೂರಿನ ಬಳಿ ಇರುವ ಕುರ್ಲಾನ್ ಕಾರ್ಖಾನೆಗೆ ಇದ್ದಕ್ಕಿಂದತೆ ಬೆಂಕಿ ತಗುಲಿದೆ. ಬೆಂಕಿ ಬೀಳುತ್ತಿದ್ದಂತೆ ಕಾರ್ಮಿಕರೆಲ್ಲರೂ ಹೊರ ಬಂದಿದ್ದಾರೆ. ಲಕ್ಷಾಂತರ ಮೌಲ್ಯದ ವಸ್ತುಗಳು ನಾಶವಾದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ. ಹೈಟೆನ್ಶನ್ ವೈಯರ್ ಕಾರ್ಖಾನೆ ಮೇಲೆ‌ ಬಿದ್ದ ಕಾರಣ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.ಕುರ್ಲಾನ್ ಕಾರ್ಖಾನೆ ಅಕ್ಕ-ಪಕ್ಕದಲ್ಲಿ ಆಯಿಲ್ ಮುಂತಾದ ಕಾರ್ಖಾನೆಯಿದ್ದು, ಜನರಲ್ಲಿ ಆತಂಕ ಎಡೆಮಾಡಿದೆ. ನೆಲಮಂಗಲ ಅಗ್ನಿಶಾಮಕ ಠಾಣಾ

ಕುರ್ಲಾನ್​ ಕಾರ್ಖಾನೆಗೆ ಇದ್ದಕ್ಕಿದ್ದಂತೆ ತಗುಲಿದ ಬೆಂಕಿ..!  ➤ಅಪಾಯದಿಂದ ಪಾರಾದ ಕಾರ್ಮಿಕರು Read More »

ಕರ್ನಾಟಕ

30 ಕೋಟಿ ಆಸ್ತಿ ಇದ್ದರೂ ಹೆತ್ತವರಿಗೆ ಊಟ ಹಾಕದ ಮಗ   ➤ ಡೆತ್ ನೋಟ್ ಬರೆದಿಟ್ಟು ದಂಪತಿ ಆತ್ಮಹತ್ಯೆ..!

(ನ್ಯೂಸ್ ಕಡಬ)Newskadaba.com ಬೆಂಗಳೂರು, ಏ.01 ಮಗನ ಬಳಿ 30 ಕೋಟಿ ರೂ. ಆಸ್ತಿ ಇದೆ. ಆದರೆ ನಮಗೆ ಎರಡು ಹೊತ್ತು ಊಟ ಕೂಡ ಸರಿಯಾಗಿ ಕೊಡುತ್ತಿಲ್ಲ, ಎಂದು ಡೆತ್ ನೋಟ್ ಬರೆದಿಟ್ಟು ದಂಪತಿ ಆತ್ಮಹತ್ಯೆ ಮಾಡಿಕೊಂಡ ಅಮಾನವೀಯ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.   ಚಕ್ರಿ ದಾದಿ ಬಳಿಯ ಬಾಂದ್ರಿಯ ಶಿವ ಕಾಲೋನಿ ನಿವಾಸಿಗಳಾದ ಜಗದೀಶ್ ಚಂದ್ರ ಆರ್ಯಾ (78) ಮತ್ತು ಭಾಗ್ಲಿ ದೇವಿ (77) ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಳ್ಳುವ

30 ಕೋಟಿ ಆಸ್ತಿ ಇದ್ದರೂ ಹೆತ್ತವರಿಗೆ ಊಟ ಹಾಕದ ಮಗ   ➤ ಡೆತ್ ನೋಟ್ ಬರೆದಿಟ್ಟು ದಂಪತಿ ಆತ್ಮಹತ್ಯೆ..! Read More »

ರಾಷ್ಟ್ರೀಯ ನ್ಯೂಸ್

ಮಂಗಳೂರು: ಚುನಾವಣಾ ಸಿಬ್ಬಂದಿಗೆ ತರಬೇತಿ

(ನ್ಯೂಸ್ ಕಡಬ)newskadaba.com ಮಂಗಳೂರು, ಏ.01. ಪುತ್ತೂರಿನ ಪುರಭವನದಲ್ಲಿ ಚುನಾವಣಾ ಪೂರ್ವ ಸಿದ್ಧತೆಗಳ ಬಗ್ಗೆ ತರಬೇತಿ ನಡೆಯಿತು ಎನ್ನಲಾಗಿದೆ. ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿಗಳೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ತರಬೇತಿ ನೀಡಿದರು. ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಚುನಾವಣಾ ಸಿಬ್ಬಂದಿ ಉಪಸ್ಥಿತರಿದ್ದರು.  

ಮಂಗಳೂರು: ಚುನಾವಣಾ ಸಿಬ್ಬಂದಿಗೆ ತರಬೇತಿ Read More »

ಕರಾವಳಿ

ವಿಮಾನದಲ್ಲಿ ಗಗನಸಖಿಯ ಮೇಲೆ ಲೈಂಗಿಕ ದೌರ್ಜನ್ಯ..! ➤ ಸ್ವೀಡನ್ ಮೂಲದ ವ್ಯಕ್ತಿ ಅರೆಸ್ಟ್

(ನ್ಯೂಸ್ ಕಡಬ)newskadaba.com  ಮುಂಬೈ, ಏ.01. ಇಂಡಿಗೊ ವಿಮಾನದಲ್ಲಿ ಗಗನಸಖಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿತ ಸ್ವೀಡನ್ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಬಂಧಿತ ಪ್ರಯಾಣಿಕನನ್ನು ಕ್ಲಾಸ್ ಎರಿಕ್ ಹರಾಲ್ಡ್ ಜೊನಾಸ್ ವೆಸ್ಟ್ಬರ್ಗ್ ಎಂದು ಗುರುತಿಸಲಾಗಿದೆ. ಬ್ಯಾಂಕಾಕ್ ನಿಂದ ಮುಂಬೈಗೆ ತೆರಳುತ್ತಿದ್ದ ವಿಮಾನದಲ್ಲಿ ಕುಡಿದ ಮತ್ತಿನಲ್ಲಿದ್ದ ಸ್ವೀಡನ್ ಪ್ರಜೆಯೊಬ್ಬರು ಇಂಡಿಗೊ ಕ್ಯಾಬಿನ್ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಇನ್ನು ಲಭ್ಯವಿರುವ ಖಾದ್ಯಕ್ಕಾಗಿ ಪ್ರಯಾಣಿಕರಿಂದ ಹಣ ಪಡೆಯಲು ಪ್ರಯತ್ನಿಸಿದಾಗ ಪ್ರಯಾಣಿಕನು ಗಗನಸಖಿಯ ಕೈಯನ್ನು ಹಿಡಿದಿದ್ದಾನೆ ಎಂದು ವರದಿಯಾಗಿದೆ.  

ವಿಮಾನದಲ್ಲಿ ಗಗನಸಖಿಯ ಮೇಲೆ ಲೈಂಗಿಕ ದೌರ್ಜನ್ಯ..! ➤ ಸ್ವೀಡನ್ ಮೂಲದ ವ್ಯಕ್ತಿ ಅರೆಸ್ಟ್ Read More »

ರಾಷ್ಟ್ರೀಯ ನ್ಯೂಸ್

ವಾಹನ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ ➤ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಟೋಲ್ ದರ ಮತ್ತಷ್ಟು ಹೆಚ್ಚಳ.!

(ನ್ಯೂಸ್ ಕಡಬ)Newskadaba.com ಬೆಂಗಳೂರು, ಏ.01 ಬೆಂಗಳೂರಿನಿಂದ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಟೋಲ್​ ದರ ಏರಿಕೆಯಾಗಿದೆ. ಏರ್​​ಪೋರ್ಟ್​​ ರಸ್ತೆಯ ನಿರ್ವಹಣೆ ಹೊತ್ತಿರುವ ಅಥಾಂಗ್ ಟೋಲ್ ವೇ ಪ್ರವೈಟ್ ಲಿಮಿಟೆಡ್‌ ಮಧ್ಯರಾತ್ರಿಯಿಂದಲೇ ಟೋಲ್ ದರವನ್ನು ಏರಿಸಿದೆ. ಟೋಲ್​ ದರ ಏರಿಕೆಯಾಗಿದ್ದು ಒಂದಡೆಯಾದರೆ, ಬೆಂಗಳೂರಿನಿಂದ ದೇವನಹಳ್ಳಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಟೋಲ್​ ದರ ಕೂಡ ಏರಿಕೆಯಾಗಿದೆ.ಏರ್​​ಪೋರ್ಟ್​​ ರಸ್ತೆಯ ನಿರ್ವಹಣೆ ಹೊತ್ತಿರುವ ಅಥಾಂಗ್ ಟೋಲ್ ವೇ ಪ್ರವೈಟ್ ಲಿಮಿಟೆಡ್‌ ಮಧ್ಯರಾತ್ರಿಯಿಂದಲೇ ಟೋಲ್ ದರವನ್ನು ಏರಿಸಿದೆ.      

ವಾಹನ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ ➤ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಟೋಲ್ ದರ ಮತ್ತಷ್ಟು ಹೆಚ್ಚಳ.! Read More »

ಕರ್ನಾಟಕ
Scroll to Top