ಸೈಕಲ್‌ನಲ್ಲಿ ಕನ್ಯಾಕುಮಾರಿಗೆ 1500 ಕಿ.ಮೀ ಯಾತ್ರೆ ಪೂರ್ಣಗೊಳಿಸಿದ ಪದವಿ ವಿದ್ಯಾರ್ಥಿ 

(ನ್ಯೂಸ್ ಕಡಬ)newskadaba.com  ಉಡುಪಿ, ಏ.01. ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ತೃತೀಯ ಬಿಎ ​​ವಿದ್ಯಾರ್ಥಿ ದಿನೇಶ್ ಸೈಕಲ್‌ನಲ್ಲಿ ಕನ್ಯಾಕುಮಾರಿಗೆ 1500 ಕಿಲೋಮೀಟರ್ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಕಾಲೇಜಿನಲ್ಲಿ ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು ಎನ್ನಲಾಗಿದೆ.

1500 ಕಿ.ಮೀ 20 ದಿನಗಳಲ್ಲಿ ಕನ್ಯಾಕುಮಾರಿ ಯಾತ್ರೆ ಪೂರ್ಣಗೊಳಿಸಿದ ದಿನೇಶ್ ಅವರನ್ನು ಕಾಲೇಜು ಕ್ಯಾಂಪಸ್‌ನಿಂದ ಅವರ ತಾಯಿ ಪಾರ್ವತಿ ಬೋವಿಯವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

 

Scroll to Top