News Kadaba

ದುಬೈಗೆ ತೆರಳುತ್ತಿದ್ದ ವಿಮಾನಕ್ಕೆ ಹಕ್ಕಿ ಢಿಕ್ಕಿ  ➤ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

(ನ್ಯೂಸ್ ಕಡಬ)newskadaba.com ಹೊಸದಿಲ್ಲಿ, ಏ.01. ದುಬೈಗೆ ತೆರಳುತ್ತಿದ್ದ ವಿಮಾನಕ್ಕೆ ಹಕ್ಕಿಗಳು ಢಿಕ್ಕಿಯಾದ ಕಾರಣ ಸದ್ಯ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ವರದಿಯಾಗಿದೆ. ಅಪಘಾತ ಸಂಭವಿಸುವ ಅಪಾಯವಿರುವ ಕಾರಣ ವಿಮಾನವು ಏರೋಡ್ರೋಮ್ ನ್ನು ಸಮೀಪಿಸಿದಾಗ ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ವಿಮಾನವನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಸಲು ಮತ್ತು ತಂತ್ರಜ್ಞರು ಕ್ಲಿಯರೆನ್ಸ್ ಮಾಡುವ ಮೊದಲು ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷವಿದೆಯೇ ಎಂದು ಪರಿಶೀಲಿಸಲಿದ್ದಾರೆ.  

ದುಬೈಗೆ ತೆರಳುತ್ತಿದ್ದ ವಿಮಾನಕ್ಕೆ ಹಕ್ಕಿ ಢಿಕ್ಕಿ  ➤ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಣೆ Read More »

ರಾಷ್ಟ್ರೀಯ ನ್ಯೂಸ್

ಪಡಿತರ ವಿತರಣೆ ವೇಳೆ ತಳ್ಳಾಟ,ನೂಕಾಟ   ➤ಕಾಲ್ತುಳಿತದಿಂದ 11  ಮಂದಿ ಮೃತ್ಯು…!

(ನ್ಯೂಸ್ ಕಡಬ)Newskadaba.com ಬೆಂಗಳೂರು, ಏ.01 ಪಾಕಿಸ್ಥಾನದ ಬಂದರು ನಗರಿ ಕರಾಚಿಯಲ್ಲಿ ರಮ್ಜಾನ್‌ ಆಹಾರ ವಿತರಣ ಕೇಂದ್ರದಲ್ಲಿ ಸಂಭವಿಸಿದ ಕಾಲ್ತುಳಿತದಿಂದ ಮಹಿಳೆಯರು ಮತ್ತು ಮಕ್ಕಳು ಸಹಿತ 11 ಮಂದಿ ಬಲಿಯಾಗಿದ್ದಾರೆ. ಆಹಾರ ವಿತರಣೆ ನಡೆಯುತ್ತಿದ್ದ ಪ್ರದೇಶದಲ್ಲಿ ವಿದ್ಯುತ್‌ಪ್ರವಾಹವಿದ್ದ ತಂತಿಯೊಂದು ಬಿದ್ದಿತ್ತು.ಕೆಲವರು ಗೊತ್ತಿಲ್ಲದೇ ಅದರ ಮೇಲೆ ಕಾಲಿಟ್ಟಿದ್ದಾರೆ.ಅದು ಶಾಕ್‌ ಹೊಡೆದಾಗ ಭಯದಿಂದ ಒಬ್ಬರನ್ನೊಬ್ಬರು ನೂಕಿ ಮುಂದೆ ಓಡಲು ಆರಂಭಿಸಿದ್ದಾರೆ. ಈ ವೇಳೆ ಉಂಟಾದ ತಳ್ಳಾಟದಿಂದ ಈ ದುರಂತ ಸಂಭವಿಸಿದೆ.                

ಪಡಿತರ ವಿತರಣೆ ವೇಳೆ ತಳ್ಳಾಟ,ನೂಕಾಟ   ➤ಕಾಲ್ತುಳಿತದಿಂದ 11  ಮಂದಿ ಮೃತ್ಯು…! Read More »

ಕರ್ನಾಟಕ

ಪತ್ರಕರ್ತನ ಮೇಲೆ ದಾಳಿ ಪ್ರಕರಣ..!     ➤ ಇಬ್ಬರು​ ಉಗ್ರರ ಬಂಧನ

(ನ್ಯೂಸ್ ಕಡಬ)newskadaba.com ಶ್ರೀನಗರ, ಏ.01. ಪತ್ರಕರ್ತ ವಸೀಮ್​​ ಅಹ್ಮದ್​ ವಾನಿ(27) ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ದ ರೆಸಿಸ್ಟೆಂಟ್​​​ ಫ್ರಂಟ್​ ಸಂಘಟನೆಗೆ(TRF) ಸೇರಿದ್ದ ಇಬ್ಬರು ಹೈಬ್ರಿಡ್​ ಉಗ್ರರನ್ನು ಜಮ್ಮು-ಕಾಶ್ಮೀರದ ಶೋಫಿಯಾನ್​ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಪತ್ರಕರ್ತನ ಮೇಲಿನ ದಾಳಿಗೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ(SIT)ಅನ್ನು ರಚಿಸಲಾಗಿತ್ತು. ತಾಂತ್ರಿಕ ಸಾಕ್ಷಿಗಳ ಆಧಾರದ ಮೇಲೆ ಹಲವು ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು ಎಂದು ತನಿಖಾ ದಳದ ಸದಸ್ಯರೊಬ್ಬರು ತಿಳಿಸಿದ್ದಾರೆ.  

ಪತ್ರಕರ್ತನ ಮೇಲೆ ದಾಳಿ ಪ್ರಕರಣ..!     ➤ ಇಬ್ಬರು​ ಉಗ್ರರ ಬಂಧನ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಚುನಾವಣಾ ಕರ್ತವ್ಯಕ್ಕೆ ಗೈರು ಹಾಜರಾದ ಶಿಕ್ಷಕ ➤ ಅಮಾನತು ಆದೇಶ

(ನ್ಯೂಸ್ ಕಡಬ)newskadaba.com ವಿಜಯಪುರ, ಏ.01.  ಚುನಾವಣಾ ಕರ್ತವ್ಯದಲ್ಲಿ ಲೋಪವೆಸಗಿದ ಪ್ರೌಢಶಾಲೆ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ ಎನ್ನಲಾಗಿದೆ. ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರುಗಳಾದ ಅಪ್ಪಣ್ಣ ಸವದಿ ಹಾಗೂ ಕಳ್ಳಕವಟಗಿ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಅಲ್ಲಾಬಕ್ಷ ಇವರನ್ನು ಚುನಾವಣಾ ಕರ್ತವ್ಯಕ್ಕೆ ಗೈರು ಹಾಜರಾದದ್ದಕ್ಕೆ ಸೇವೆಯಿಂದ ಅಮಾನತು ಮಾಡಿ ವಿಜಯಪುರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಆದೇಶ ನೀಡಿದ್ದಾರೆ.  

ಚುನಾವಣಾ ಕರ್ತವ್ಯಕ್ಕೆ ಗೈರು ಹಾಜರಾದ ಶಿಕ್ಷಕ ➤ ಅಮಾನತು ಆದೇಶ Read More »

ಕರ್ನಾಟಕ

 4.50 ಕೋಟಿ ರೂ. ಮೌಲ್ಯದ ಸೀರೆ, 1.40 ಕೋಟಿ ರೂ. ಹಣ, 56 ಲೀ. ಬಿಯರ್ ವಶ

(ನ್ಯೂಸ್ ಕಡಬ)newskadaba.com ಶಿವಮೊಗ್ಗ, ಏ.01. ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ, ಶಿವಮೊಗ್ಗದ ಹಲವು ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ದಾಳಿ ಮಾಡಿ ಅಕ್ರಮವಾಗಿ ಸಂಗ್ರಹಿಸಿದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ವಿವಿಧ ಚೆಕ್ ಪೋಸ್ಟ್​ಗಳಲ್ಲಿ ಪರಿಶೀಲನೆ ಮುಂದುವರಿದಿದ್ದು, ದೊಡ್ಡಪೇಟೆ ಪೊಲೀಸರು 4.50 ಕೋಟಿ ರೂ. ಮೌಲ್ಯದ ಸೀರೆಯನ್ನು ವಶಕ್ಕೆ ಪಡೆದಿದ್ದಾರೆ. ಸೂಕ್ತ ದಾಖಲೆಯಿಲ್ಲದೇ, ಅನಧಿಕೃತವಾಗಿ ಸಂಗ್ರಹಿಸಿದ್ದ ಹಿನ್ನಲೆ ವಶಪಡಿಸಿಕೊಂಡಿದ್ದಾರೆ.  

 4.50 ಕೋಟಿ ರೂ. ಮೌಲ್ಯದ ಸೀರೆ, 1.40 ಕೋಟಿ ರೂ. ಹಣ, 56 ಲೀ. ಬಿಯರ್ ವಶ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೈಕ್​​ ಪಾರ್ಕಿಂಗ್ ವಿಚಾರದಲ್ಲಿ ಗಲಾಟೆ…!   ➤ಸ್ನೇಹಿತನನ್ನೇ ಕೊಂದು ದುಷ್ಕರ್ಮಿಗಳು ಪರಾರಿ  

(ನ್ಯೂಸ್ ಕಡಬ)Newskadaba.com ಬೆಂಗಳೂರು, ಏ.01 ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಕೆಲಸಕ್ಕೆ ಬಂದಿದ್ದವರಿಗೆ ಉಡುಪಿ ಮೂಲದ ಸ್ನೇಹಿತ ಕೂಡಾ ಜೊತೆಯಾಗಿದ್ದ. ಹೀಗೆ ಬೆಂಗಳೂರಲ್ಲಿ ಬದುಕು ಕಟ್ಟಿಕೊಂಡು, ಮೂವರು ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಆದರೆ ಒಟ್ಟಿಗೆ ಇದ್ದ ಮೂವರ ಮಧ್ಯೆ ಬೈಕ್ ಪಾರ್ಕಿಂಗ್  ವಿಚಾರಕ್ಕೆ ದೊಡ್ಡ ಗಲಾಟೆಯಾಗಿ ಕೊಲೆಯೇ ನಡೆದು ಹೋಗಿದೆ. ಜಗಳದಲ್ಲಿ ಉಡುಪಿ ಮೂಲದ ಜನಾರ್ದನ ಭಟ್ (29)ಎಂಬಾತನ ಕೊಲೆಯಾಗಿದ್ದಾನೆ.ಜನಾರ್ದನ ಭಟ್ ಪಶ್ಚಿಮ ಬಂಗಾಳ ಮೂಲದ ರಿಜ್ವಾನ್ ಮತ್ತು ಸುಲೇಮಾನ್ ಎಂಬ ಯುವಕರ ಜೊತೆಯಾಗಿದ್ದ. ಕಂಪನಿಯಲ್ಲಿ ಟಿವಿ

ಬೈಕ್​​ ಪಾರ್ಕಿಂಗ್ ವಿಚಾರದಲ್ಲಿ ಗಲಾಟೆ…!   ➤ಸ್ನೇಹಿತನನ್ನೇ ಕೊಂದು ದುಷ್ಕರ್ಮಿಗಳು ಪರಾರಿ   Read More »

ಕರ್ನಾಟಕ

ರೈಲು ಪ್ರಯಾಣಿಕರಿಗೆ ಸಿಹಿ ಸುದ್ಧಿ   ➤ಹುಬ್ಬಳ್ಳಿ-ಬೆಂಗಳೂರು ರೈಲು ಮಾರ್ಗದ ವಿದ್ಯುದ್ದೀಕರಣ ಪೂರ್ಣಗೊಂಡಿದೆ

(ನ್ಯೂಸ್ ಕಡಬ)Newskadaba.com ಬೆಂಗಳೂರು, ಏ.01  ರೈಲು ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ಸಿಹಿ ಸುದ್ದಿಯನ್ನು ಕೊಟ್ಟಿದೆ. ನೈಋತ್ಯ ರೈಲ್ವೆಯ ನಿರೀಕ್ಷೆಯಂತೆ ಬೆಂಗಳೂರು-ಹುಬ್ಬಳ್ಳಿ ರೈಲ್ವೆ ಮಾರ್ಗದ ವಿದ್ಯುದೀಕರಣ ಪೂರ್ಣಗೊಳಿಸಿದೆ. ಏಪ್ರೀಲ್ ತಿಂಗಳು ‘ವಂದೇ ಭಾರತ್‌’ ಅಥವಾ ಇತರೆ ಎಲೆಕ್ಟ್ರಿಕ್‌ ರೈಲುಗಳ ಸಂಚಾರ ಆರಂಭಿಸುವ ಸಾಧ್ಯತೆ ಇದೆ. ಬೆಂಗಳೂರು-ಹುಬ್ಬಳ್ಳಿಯ ಸುಮಾರು 469 ಕಿ.ಮೀ. ಉದ್ದದ ಈ ಮಾರ್ಗದ ಡಬ್ಲಿಂಗ್‌  ಕಾಮಗಾರಿ ಪೂರ್ಣಗೊಂಡಿದೆ.  ಸುಮಾರು 316 ಕಿಮೀನಷ್ಟು ತೋಳಹುಣಸೆವರೆಗೆ ವಿದ್ಯುದೀಕರಣ ಪೂರ್ಣಗೊಂಡಿದೆ. ಇನ್ನು ಬಾಕಿ ಇದ್ದ 153 ಕಿ.ಮೀ. ಕಾಮಗಾರಿಯೂ ಪೂರ್ಣಗೊಂಡಿದೆ. ಪೋಲ್‌ ಹಾಗೂ

ರೈಲು ಪ್ರಯಾಣಿಕರಿಗೆ ಸಿಹಿ ಸುದ್ಧಿ   ➤ಹುಬ್ಬಳ್ಳಿ-ಬೆಂಗಳೂರು ರೈಲು ಮಾರ್ಗದ ವಿದ್ಯುದ್ದೀಕರಣ ಪೂರ್ಣಗೊಂಡಿದೆ Read More »

ಕರ್ನಾಟಕ

ಮಂಗಳೂರು: 60 ರೌಡಿ ಶೀಟರ್ ಗಳ ಮನೆಗೆ ಪೊಲೀಸ್ ದಾಳಿ 

(ನ್ಯೂಸ್ ಕಡಬ)newskadaba.com ಮಂಗಳೂರು, ಏ.01. ದಕ್ಷಿಣ ಕನ್ನಡದಲ್ಲೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯ ಮಗ್ನವಾಗಿದೆ. ಕ್ರಿಮಿನಲ್ ಚಟುವಟಿಕೆ, ಹಿಂದೆ ಗಂಭಿರ ಅಪರಾಧಗಳಲ್ಲಿ ತೊಗಡಿಗೊಂಡಿದ್ದವರ ಲೀಸ್ಟ್ ಸಿದ್ದ ಪಡಿಸಿ ಅವರ ಮೇಲೂ ಕ್ರಮ ಕೈಗೊಳ್ಳುವ ಕಾರ್ಯ ಆರಂಭಿಸಿದೆ. ಜಿಲ್ಲಾ ಕೇಂದ್ರ ಸ್ಥಾನ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಾರ್ಚ್ 31 ರಂದು ಅಪರಾಧ ಚಟುವಟಿಗಳಲ್ಲಿ ಗುರುತಿಸಿಕೊಂಡಿದ್ದ ವಿವಿಧ ರೌಡಿ ಶೀಟರಗಳ ಮನೆಗಳಿಗೆ ದಾಳಿ ನಡೆಸಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಮಂಗಳೂರು

ಮಂಗಳೂರು: 60 ರೌಡಿ ಶೀಟರ್ ಗಳ ಮನೆಗೆ ಪೊಲೀಸ್ ದಾಳಿ  Read More »

ಕರಾವಳಿ

ನದಿಯಲ್ಲಿ ಮುಳುಗಿ ಭಾರತೀಯರು ಸಹಿತ 8 ಮಂದಿ ಮೃತ್ಯು

(ನ್ಯೂಸ್ ಕಡಬ)newskadaba.com ಕೆನಡಾ, ಏ.01. ಗಡಿ ಮೂಲಕ ಕಾನೂನು ಬಾಹಿರವಾಗಿ ಅಮೆರಿಕಾಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದಾಗ ಸೇಂಟ್ ಲಾರೆನ್ಸ್ ನದಿಯಲ್ಲಿ ಮುಳುಗಿದ್ದವರ ಪೈಕಿ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಈ ಮೂಲಕ ಮೃತಪಟ್ಟವರ ಒಟ್ಟು ಸಂಖ್ಯೆ ಎಂಟಕ್ಕೇರಿದೆ ಎಂದು ವರದಿ ತಿಳಿಸಿದೆ. ಮೃತರ ಪೈಕಿ ಭಾರತೀಯ ಕುಟುಂಬವೊಂದರ ಸದಸ್ಯರೂ ಸೇರಿದ್ದಾರೆ ಎಂದು ಕೆನಡಾ ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳು ಆಕ್ವಾಸ್ನ್ ಬಳಿಯ ನದಿ ದಂಡೆಯ ಮರಳಿನಲ್ಲಿ ಹೂತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಈ ಪೈಕಿ ಮತ್ತೊಬ್ಬ ವ್ಯಕ್ತಿ ಇನ್ನೂ ಕಾಣೆಯಾಗಿದ್ದಾನೆ ಎಂದು

ನದಿಯಲ್ಲಿ ಮುಳುಗಿ ಭಾರತೀಯರು ಸಹಿತ 8 ಮಂದಿ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ವಾಹನಗಳ ಕರ್ಕಶ ಹಾರನ್, ಟಿಂಟೆಡ್ ಗ್ಲಾಸ್ ವಿರುದ್ದ ಕಾರ್ಯಚರಣೆ    ➤ 120 ಕೇಸು ದಾಖಲು

(ನ್ಯೂಸ್ ಕಡಬ)newskadaba.com ಮಂಗಳೂರು, ಏ.01. ಪೊಲೀಸರು ಕರ್ಕಶ ಹಾರನ್ ಮತ್ತು ಟಿಂಟೆಡ್ ಗ್ಲಾಸ್ ವಿರುದ್ಧ ಕಾರ್ಯಾಚರಣೆ ಮುಂದುವರೆಸಿದ್ದು, ಒಂದೇ ದಿನ 120 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಬಸ್‌‌ಗಳು ಸೇರಿದಂತೆ 106 ವಾಹನಗಳಿಂದ ಕರ್ಕಶ ಹಾರನ್ ತೆಗೆಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದದು, 14 ವಾಹನಗಳಿಂದ ಟಿಂಟೆಡ್ ಗ್ಲಾಸ್‌ಗಳನ್ನು ತೆರವುಗೊಳಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  

ವಾಹನಗಳ ಕರ್ಕಶ ಹಾರನ್, ಟಿಂಟೆಡ್ ಗ್ಲಾಸ್ ವಿರುದ್ದ ಕಾರ್ಯಚರಣೆ    ➤ 120 ಕೇಸು ದಾಖಲು Read More »

ಕರಾವಳಿ
Scroll to Top