News Kadaba

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ..!  

(ನ್ಯೂಸ್ ಕಡಬ)Newskadaba.com ನ್ಯೂಯಾರ್ಕ್,ಏ.24 ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿಗಳ ಮೃತದೇಹಗಳು ಅಮೆರಿಕಾದ ಇಂಡಿಯಾನಾದಲ್ಲಿನ ಸರೋವರದಲ್ಲಿ ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಎಪ್ರಿಲ್ 15ರಂದು ತಮ್ಮ ಗೆಳೆಯರ ಗುಂಪಿನೊಂದಿಗೆ ನೈಋತ್ಯ ಇಂಡಿಯಾನಾಪೊಲೀಸ್ ಡೌನ್‌ಟೌನ್‌ನಿಂದ ಸುಮಾರು 64 ಮೈಲಿ ದೂರವಿರುವ ಮಾನ್ರೊ ಸರೋವರದಲ್ಲಿ ಈಜುತ್ತಿದ್ದಾಗ ಸಿದ್ಧಾಂತ್ ಶಾ (19) ಹಾಗೂ ಆರ್ಯನ್ ವೈದ್ಯ (20) ನಾಪತ್ತೆಯಾಗಿದ್ದರು. ಎಪ್ರಿಲ್ 18ರಂದು ಶೋಧನಾ ತಂಡವು ಮೃತದೇಹಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ವರದಿಯಾಗಿದೆ.  

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ..!   Read More »

ರಾಷ್ಟ್ರೀಯ ನ್ಯೂಸ್

ಹಿರಿಯ ನಟ ಶರತ್ ಬಾಬು ಆರೋಗ್ಯ ಸ್ಥಿತಿ ಚಿಂತಾಜನಕ

(ನ್ಯೂಸ್ ಕಡಬ)newskadaba.com ಹೈದರಾಬಾದ್, ಏ.24. ಖ್ಯಾತ ಚಿತ್ರನಟ ಶರತ್ ಬಾಬು ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಇದೀಗ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಹೈದರಾಬಾದ್‌’ನಲ್ಲಿರುವ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿಗೆ ಶರತ್ ಬಾಬು ದಾಖಲಾಗಿದ್ದು, ನಟನ ಆರೋಗ್ಯದ ಬಗ್ಗೆ ಲೇಟೆಸ್ಟ್ ಅಪ್ ಡೇಟ್ ಹೊರಬಿದ್ದಿದೆ. ಇನ್ನು ನಟನ ಇಡೀ ದೇಹಕ್ಕೆ ಸೋಂಕು ತಗುಲಿದ್ದರಿಂದ ಕಿಡ್ನಿ, ಶ್ವಾಸಕೋಶ, ಯಕೃತ್ ಮತ್ತಿತರ ಅಂಗಾಂಗಗಳ ಮೇಲೆ ಪರಿಣಾಮ ಬೀರಿದೆ ಎಂದು ಆಸ್ಪತ್ರೆ ಮೂಲಗಳು ಬಹಿರಂಗಪಡಿಸಿವೆ.

ಹಿರಿಯ ನಟ ಶರತ್ ಬಾಬು ಆರೋಗ್ಯ ಸ್ಥಿತಿ ಚಿಂತಾಜನಕ Read More »

ರಾಷ್ಟ್ರೀಯ ನ್ಯೂಸ್

ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿದ ಕಾರು    ➤ ಮೂವರು ಮೃತ್ಯು

(ನ್ಯೂಸ್ ಕಡಬ)newskadaba.com ಕಾಸರಗೋಡು, ಏ.24. ಕಾರು ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿದ ಪರಿಣಾಮ ಕಾಸರಗೋಡಿನ ವಿದ್ಯಾರ್ಥಿನಿ ಸೇರಿದಂತೆ ಮೂವರು ಮೃತ ಪಟ್ಟ ಘಟನೆ ವಯನಾಡ್ ಕಲ್ಪಟ್ಟ ಸಮೀಪ ನಡೆದಿದೆ. ಅಪಘಾತದಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕಾಸರಗೋಡು ವೆಳ್ಳರಿಕಂಡು ವಿನ ಸ್ನೇಹಾ ಜೋಸ್ (20), ಜಿಸ್ನಾ ಮೇರಿ ಜೋಸೆಫ್(20) ಮತ್ತು ಅಡೋನ್ ಬೆಸ್ಟಿ (20) ಮೃತ ಪಟ್ಟವರು ಎಂದು ತಿಳಿದುಬಂದಿದೆ. ಡಿಯೋನಾ ಬೆಸ್ಟಿ, ಸ್ನೇಹಾಲ ಸಹೋದರಿ ಸೋನಾ ಜೋಸೆಫ್ ಮತ್ತು ಸಾಂಜೋ ಜೋಸ್ ಗಾಯಗೊಂಡಿದ್ದು,

ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿದ ಕಾರು    ➤ ಮೂವರು ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಬಸ್ ನಲ್ಲಿ ಸಾಗಿಸುತ್ತಿದ್ದ ದಾಖಲೆ ರಹಿತ 1.95 ಲಕ್ಷ ರೂ. ನಗದು ವಶಕ್ಕೆ

(ನ್ಯೂಸ್ ಕಡಬ)newskadaba.com ಕೊಪ್ಪಳ, ಏ.24. ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ ಹೆದ್ದಾರಿ ವಿಧಾನಸಭೆ ಚುನಾವಣೆಯ ಸ್ಥಿರ ಚಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಸರಕಾರಿ ಬಸ್ ನಲ್ಲಿ ದಾಖಲೆ ರಹಿತವಾಗಿ ಸಾಗಿಸುತ್ತಿದ್ದ 1.95 ಲಕ್ಷ ರೂ. ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಕ್ಯಾದಿಗುಪ್ಪ ಹೆದ್ದಾರಿ ಕ್ರಾಸ್ ನಲ್ಲಿ ಚೆಕ್ ಪೋಸ್ಟ್ ಸಿಬ್ಬಂದಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸಪೇಟೆ ಘಟಕದ ಬಸ್ ಅನ್ನು (ಕೆಎ-37 ಎಫ್-0324) ತಡೆದು ತಪಾಸಣೆ ನಡೆಸಿದ್ದರು. ಬಸ್

ಬಸ್ ನಲ್ಲಿ ಸಾಗಿಸುತ್ತಿದ್ದ ದಾಖಲೆ ರಹಿತ 1.95 ಲಕ್ಷ ರೂ. ನಗದು ವಶಕ್ಕೆ Read More »

ಕರ್ನಾಟಕ

ಕುಂದಾಪುರ: ಆನೆಗುಡ್ಡೆಯಲ್ಲಿ ಸರಣಿ ಅಪಘಾತ   ➤ ಓರ್ವ ಮೃತ್ಯು

(ನ್ಯೂಸ್ ಕಡಬ)newskadaba.com ಕುಂದಾಪುರ, ಏ.24. ರಾಷ್ಟ್ರೀಯ ಹೆದ್ದಾರಿ 66ರ ಕುಂಭಸಿಯ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಎದುರುಗಡೆ ಜೀಪು, ಸ್ಕೂಟಿ ಬೈಕ್ ಹಾಗೂ ಸೈಕಲ್ ನಡುವೆ ಸರಣಿ ಅಪಘಾತದಿಂದ ಸ್ಕೋಟಿ ಸವಾರ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿ ತೆಕ್ಕಟೆ ನಾಗರಾಜ್ ದೇವಾಡಿಗ ಎಂದು ಗುರುತಿಸಲಾಗಿದೆ. ಉಡುಪಿಯಿಂದ ಕುಂದಾಪುರ ಕಡೆಗೆ ಅತೀ ವೇಗ ಅಜಾಗ್ರತೆಯಿಂದ ಬಂದ ಜೀಪು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಸ್ಕೋಟಿಗೆ ಢಿಕ್ಕಿ ಹೊಡೆದು ಮುಂದೆ ಸಾಗಿ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು

ಕುಂದಾಪುರ: ಆನೆಗುಡ್ಡೆಯಲ್ಲಿ ಸರಣಿ ಅಪಘಾತ   ➤ ಓರ್ವ ಮೃತ್ಯು Read More »

ಕರಾವಳಿ, ಕರ್ನಾಟಕ

ಸಮಸ್ಯೆ ಹೇಳಿಕೊಂಡಿದಕ್ಕೆ ಯುವಕನಿಗೆ ಕಪಾಳಮೋಕ್ಷ ಮಾಡಿದ ಕಾಂಗ್ರೆಸ್ ನಾಯಕ.!   ➤ಎಂ.ಬಿ.ಪಾಟೀಲ್..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.24 ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಅವರು ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋವನ್ನು ಬಿಜೆಪಿ ಶೇರ್ ಮಾಡಿದೆ. ಕಾಂಗ್ರೆಸ್ ಗೂಂಡಾಗಿರಿಯನ್ನು ಟೀಕಿಸಿರುವ ಬಿಜೆಪಿ, ತನ್ನ ಕುಂದುಕೊರತೆಗಳನ್ನು ಹಂಚಿಕೊಂಡಿದ್ದಕ್ಕಾಗಿ ಯುವಕನ ಮೇಲೆ ದೈಹಿಕ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದೆ. ಗೂಂಡಾಗಿರಿ ಕಾಂಗ್ರೆಸ್ನ ಡಿಎನ್‌ಎಯಲ್ಲಿದೆ. ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್ ತಮ್ಮ ಕುಂದುಕೊರತೆಗಳನ್ನು ಹಂಚಿಕೊಂಡಿದ್ದಕ್ಕಾಗಿ ಯುವಕನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ.    

ಸಮಸ್ಯೆ ಹೇಳಿಕೊಂಡಿದಕ್ಕೆ ಯುವಕನಿಗೆ ಕಪಾಳಮೋಕ್ಷ ಮಾಡಿದ ಕಾಂಗ್ರೆಸ್ ನಾಯಕ.!   ➤ಎಂ.ಬಿ.ಪಾಟೀಲ್..! Read More »

ಕರ್ನಾಟಕ

ಏ.24(ಇಂದು)  ನಾಮಪತ್ರ  ಹಿಂಪಡೆಯಲು ಕೊನೆ ದಿನ.!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.24 ರಾಜ್ಯ ವಿಧಾನಸಭೆ ಚುನಾವಣೆ ನಾಮಪತ್ರ ವಾಪಸ್ ಪಡೆಯಲು ಇಂದೇ ಕೊನೆ ದಿನವಾಗಿದೆ. 3632 ಮಂದಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. 502 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿಲ್ಲದ ಕಾರಣ ತಿರಸ್ಕರಿಸಲಾಗಿದೆ. 3130 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿವೆ. ಜೆಡಿಎಸ್ 211 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಕೆಲವೆಡೆ ಬಂಡಾಯ ಅಭ್ಯರ್ಥಿಗಳ ಮನವೊಲಿಕೆ ಯಶಸ್ವಿಯಾಗಿದ್ದು, ನಾಮಪತ್ರ ವಾಪಸ್ ಪಡೆಯಲು ಒಪ್ಪಿಕೊಂಡಿದ್ದಾರೆ. ಇಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ.      

ಏ.24(ಇಂದು)  ನಾಮಪತ್ರ  ಹಿಂಪಡೆಯಲು ಕೊನೆ ದಿನ.! Read More »

ಕರ್ನಾಟಕ

ಬೆಳ್ತಂಗಡಿ: ಮಾಜಿ ಸಚಿವ ಕೆ.ಗಂಗಾಧರವರ ಮನೆಗೆ ಐಟಿ ದಾಳಿ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಏ.24. ಮಾಜಿ ಸಚಿವರೂ, ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಉಪಾಧ್ಯಕ್ಷರಾಗಿರುವ ಗಂಗಾಧರ ಗೌಡ ಮತ್ತು ಮಗ ರಂಜನ್ ಗೌಡ ಅವರ ಮನೆಗಳಿಗೆ ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಒಟ್ಟು ಮೂರು ಸ್ಥಳಗಳಿಗೆ ಇಂದು ಬೆಳಗ್ಗೆ ದಾಳಿ ಸಂಭವಿಸಿದೆ ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಪಕ್ಕದಲ್ಲಿರುವ ಮನೆಯ ಮೇಲೆ, ಲಾಯಿದಲ್ಲಿರುವ ಪ್ರಸನ್ನ ಎಜುಕೇಶನ್ ಇನ್ಸಿಟ್ಯೂಷನ್ ಮತ್ತು ಇಂದಬೆಟ್ಟು ನಲ್ಲಿರುವ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ. ಇನೋವಾ ಕಾರಿನಲ್ಲಿ ಪೊಲೀಸರ ಜೊತೆ ಬಂದ ಐಟಿ

ಬೆಳ್ತಂಗಡಿ: ಮಾಜಿ ಸಚಿವ ಕೆ.ಗಂಗಾಧರವರ ಮನೆಗೆ ಐಟಿ ದಾಳಿ Read More »

ಕರಾವಳಿ

ವ್ಯಾಪಾರಿಗಳಿಗೆ ಸಿಹಿ ಸುದ್ದಿ! ➤ ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿ ಜಾರಿಗೆ ಸಿದ್ಧತೆ..!

(ನ್ಯೂಸ್ ಕಡಬ)Newskadaba.com ನವದೆಹಲಿ,ಏ.24 ಚಿಲ್ಲರೆ ವ್ಯಾಪಾರದಲ್ಲಿ ಸುಧಾರಣೆಗೆ ಕೇಂದ್ರ ಸರ್ಕಾರ ಕ್ರಾಂತಿಕಾರಿ ಕ್ರಮ ಕೈಗೊಂಡಿದ್ದು, ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿ ಜಾರಿಗೆ ಸಿದ್ಧತೆ ಕೈಗೊಂಡಿದೆ.ಇದೇ ಮೊದಲ ಬಾರಿಗೆ ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಮಗ್ರ ರಾಷ್ಟ್ರೀಯ ನೀತಿ ಘೋಷಣೆ ಮಾಡುವ ಸಾಧ್ಯತೆ ಇದೆ. ಜಿ.ಎಸ್‌.ಟಿ. ಅಡಿ ನೋಂದಾಯಿತ ವ್ಯಾಪಾರಿಗಳಿಗೆ ಅಪಘಾತ ವಿಮೆ ಜಾರಿಗೊಳಿಸಲಾಗುವುದು ಎಂದು ಕೇಂದ್ರದ ಅಧಿಕಾರಿಯೊಬ್ಬರು ಹೇಳಿದ್ದಾರೆ.ಚಿಲ್ಲರೆ ವ್ಯಾಪಾರ ನೀತಿ ಅಡಿ ವ್ಯಾಪಾರಿಗೆ ಸುಧಾರಿತ ಮೂಲ ಸೌಕರ್ಯ ಹಾಗೂ ಹೆಚ್ಚು ಸಾಲ ಸೌಲಭ್ಯ ಕಲ್ಪಿಸಲಾಗುವುದು.    

ವ್ಯಾಪಾರಿಗಳಿಗೆ ಸಿಹಿ ಸುದ್ದಿ! ➤ ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿ ಜಾರಿಗೆ ಸಿದ್ಧತೆ..! Read More »

ರಾಷ್ಟ್ರೀಯ ನ್ಯೂಸ್

ಸುಫಾರಿ ಪಡೆದು ಕೊಲೆಗೆ ಹೊಂಚು ಹಾಕಿದ್ದ ಯುವಕ ಅಂದರ್..!

(ನ್ಯೂಸ್ ಕಡಬ)Newskadaba.com ಯಾದಗಿರಿ,ಏ.23  ಆ ಯುವಕ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದ. ಆದ್ರೆ, ಹಣದ ಆಸೆಗೆ ಖತರ್ನಾಕ್ ಕೆಲಸ ಮಾಡಲು ಮುಂದಾಗಿದ್ದ. ಪೊಲೀಸರು ಚುನಾವಣೆ ಎಂದು ಲಾಡ್ಜ್​ಗಳನ್ನ ಪರಿಶೀಲನೆ ಮಾಡಲು ಹೋಗಿದ್ರು. ಇದೆ ವೇಳೆ ಆ ಯುವಕ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ. ಯುವಕನ ಬಳಿಯಿರುವ ವಸ್ತುಗಳು ಹಾಗೂ ಯವಕ ಹೇಳಿದ ಮಾತಿಗೆ ಖುದ್ದು ಪೊಲೀಸರೆ ಶಾಕ್ ಆಗಿದ್ದರು.      

ಸುಫಾರಿ ಪಡೆದು ಕೊಲೆಗೆ ಹೊಂಚು ಹಾಕಿದ್ದ ಯುವಕ ಅಂದರ್..! Read More »

ಕರ್ನಾಟಕ
Scroll to Top