News Kadaba

ತಮಿಳು ರಾಜ್ಯ ಗೀತೆಗೆ ಅಗೌರವ ➤ ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಕ್ಷಮೆಯಾಚನೆಗೆ ಡಿಎಂಕೆ ಸಂಸದೆ ಕನಿಮೋಳಿ ಆಗ್ರಹ

(ನ್ಯೂಸ್ ಕಡಬ) newskadaba.com. ಚೆನ್ನೈ, ಏ.28. ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಯ ಚುನಾವಣಾ ಪ್ರಚಾರದ ವೇಳೆ ರಾಜ್ಯ ಗೀತೆ ‘ತಮಿಳು ಥಾಯ್ ವಜ್ತು’ಗೆ ‘ಅಗೌರವ’ ತೋರಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ತಮಿಳುನಾಡು ಮುಖ್ಯಸ್ಥ ಕೆ ಅಣ್ಣಾಮಲೈ ಕ್ಷಮೆಯಾಚಿಸಬೇಕು ಎಂದು ಡಿಎಂಕೆ ಸಂಸದೆ ಕನಿಮೋಳಿ ಒತ್ತಾಯಿಸಿದ್ದಾರೆ. ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಕನಿಮೋಳಿ, ‘ತಮ್ಮದೇ ಪಕ್ಷದ ಸದಸ್ಯರು ‘ತಮಿಳು ಥಾಯ್ ವಜ್ತು’ ಅನ್ನು ಕೀಳಾಗಿ ಕಾಣುವುದನ್ನು ತಡೆಯಲು ಸಾಧ್ಯವಾಗದ ವ್ಯಕ್ತಿ ತಮಿಳುನಾಡಿನ ಜನರ ಬಗ್ಗೆ ಹೇಗೆ ಕಾಳಜಿ ವಹಿಸುತ್ತಾರೆ?’ ಎಂದಿದ್ದಾರೆ. ಇದಕ್ಕೆ […]

ತಮಿಳು ರಾಜ್ಯ ಗೀತೆಗೆ ಅಗೌರವ ➤ ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಕ್ಷಮೆಯಾಚನೆಗೆ ಡಿಎಂಕೆ ಸಂಸದೆ ಕನಿಮೋಳಿ ಆಗ್ರಹ Read More »

ರಾಷ್ಟ್ರೀಯ ನ್ಯೂಸ್

ಬಸ್ ನಿಲ್ಲಿಸುವ ಮೊದಲೇ ಬಾಗಿಲು ತೆರೆದು ಕೆಳಗೆ ಬಿದ್ದ ಮಹಿಳೆ ಮೃತ್ಯು.!

(ನ್ಯೂಸ್ ಕಡಬ)Newskadaba.com ಚಿಕ್ಕಮಗಳೂರು,ಏ.28 ಕೆಎಸ್‌ಆರ್ಟಿಸಿ ಬಸ್ ಸಂಚರಿಸುವ ಸಂದರ್ಭದಲ್ಲಿ ಬಾಗಿಲು ತೆರೆದು ಆಯತಪ್ಪಿ ಕೆಳಗೆ ಬಿದ್ದ ಮಹಿಳೆ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಹೇಮಾವತಿ(32) ಮೃತಪಟ್ಟ ಮಹಿಳೆ ಎಂದು ಹೇಳಲಾಗಿದೆ. ಬೇಲೂರಿನಿಂದ ಚಿಕ್ಕಮಗಳೂರಿನ ತಾಯಿ ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ಚಿಕ್ಕಮಗಳೂರಿನ ಕೋಟೆ ಸಮೀಪ ಬಸ್ ನಿಲ್ಲಿಸುವ ಮೊದಲೇ ಬಾಗಿಲು ತೆರೆದುಕೊಂಡಿದೆ.ಈ ವೇಳೆ ಬಾಗಿಲ ಪಕ್ಕದಲ್ಲಿಯೇ ಇದ್ದ ಹೇಮಾವತಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕಳುಹಿಸುವ ವೇಳೆ

ಬಸ್ ನಿಲ್ಲಿಸುವ ಮೊದಲೇ ಬಾಗಿಲು ತೆರೆದು ಕೆಳಗೆ ಬಿದ್ದ ಮಹಿಳೆ ಮೃತ್ಯು.! Read More »

ಕರ್ನಾಟಕ

ಜಿಯಾ ಖಾನ್ ಆತ್ಮಹತ್ಯೆ ಪ್ರಕರಣ       ➤ ನಟ ಸೂರಜ್ ಪಾಂಚೋಲಿ ಖುಲಾಸೆಗೊಳಿಸಿದ ಕೋರ್ಟ್..!

(ನ್ಯೂಸ್ ಕಡಬ)newskadaba.com ಮುಂಬೈ, ಏ.28. ಮಾಡೆಲ್‌, ನಟಿ ಜಿಯಾ ಖಾನ್‌ ಅವರ ಆತ್ಮಹ‌ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಜಿಯಾ ಅವರ ಗೆಳೆಯ ಹಾಗೂ ಸಿನೆಮಾ ನಟ ಸೂರಜ್ ಪಾಂಚೋಲಿಯನ್ನು ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಿಂದ ಖುಲಾಸೆಗೊಳಿಸಿದೆ ಎಂದು ವರದಿಯಾಗಿದೆ. 25 ವರ್ಷದ ಜಿಯಾ ಖಾನ್ ಜೂನ್ 3, 2013 ರಂದು ಮುಂಬೈನ ಜುಹುನಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.    

ಜಿಯಾ ಖಾನ್ ಆತ್ಮಹತ್ಯೆ ಪ್ರಕರಣ       ➤ ನಟ ಸೂರಜ್ ಪಾಂಚೋಲಿ ಖುಲಾಸೆಗೊಳಿಸಿದ ಕೋರ್ಟ್..! Read More »

ರಾಷ್ಟ್ರೀಯ ನ್ಯೂಸ್

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 178 ಟನ್ ಚಿನ್ನ ಖರೀದಿಸಿದೆ. .!

(ನ್ಯೂಸ್ ಕಡಬ)Newskadaba.com ಮುಂಬೈ,ಏ.28 ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) 178 ಚಿನ್ನ ಖರೀದಿಸಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕುಗಳು ಚಿನ್ನ ಖರೀದಿಗೆ ಮುಂದಾಗಿವೆ.ಭಾರತದ ಕೇಂದ್ರೀಯ ಬ್ಯಾಂಕ್ ಆರ್.ಬಿ.ಐ.ಕೂಡ ಚಿನ್ನ ಖರೀದಿಯಲ್ಲಿ ಮುಂಚೂಣಿಯಲ್ಲಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ 178 ಟನ್ ಚಿನ್ನ ಖರೀದಿಸಿದೆ. ಇದರಿಂದಾಗಿ ಮೂರು ವರ್ಷಗಳ ಅವಧಿಯಲ್ಲಿ ಆರ್.ಬಿ.ಐ. ಚಿನ್ನ ಸಂಗ್ರಹಣೆಯಲ್ಲಿ ಶೇಕಡ 79 ರಷ್ಟು ಹೆಚ್ಚಳ ಆಗಿದೆ. ಪ್ರಸ್ತುತ ಆರ್.ಬಿ.ಐ. ನಲ್ಲಿ ಚಿನ್ನದ ಮೀಸಲು ಸಂಗ್ರಹ 790 ಟನ್ ಗಳಿಗೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 178 ಟನ್ ಚಿನ್ನ ಖರೀದಿಸಿದೆ. .! Read More »

ರಾಷ್ಟ್ರೀಯ ನ್ಯೂಸ್

ಮಾವಿನ ಹಣ್ಣಿನ ಪೆಟ್ಟಿಗೆ ಕದ್ದಿದ್ದ ಕೇರಳ ಪೊಲೀಸಪ್ಪ ಸೇವೆಯಿಂದಲೇ ವಜಾ

(ನ್ಯೂಸ್ ಕಡಬ)newskadaba.com ಇಡುಕ್ಕಿ, ಏ.28. ಕಳೆದ ವರ್ಷ ಇಡೀ ಮಾವಿನ ಹಣ್ಣಿನ ಪೆಟ್ಟಿಗೆ ಕದ್ದು ಸಿಕ್ಕಿ ಬಿದ್ದಿದ್ದ ಕೇರಳದ ಪೊಲೀಸ್ ಅಧಿಕಾರಿಯನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ. ಪೊಲೀಸಪ್ಪನ ಮಾವಿನ ಹಣ್ಣಿನ ಕಳ್ಳತನ ಪ್ರಕರಣ ಭಾರಿ ಸುದ್ದಿ ಮಾಡಿತ್ತು. ಇದು ರಾಜ್ಯ ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ಉಂಟುಮಾಡಿತ್ತು. ಅಂಗಡಿಯೊಂದರಿಂದ 10 ಕೆಜಿಯಷ್ಟು ತೂಕದ ಮಾವಿನ ಹಣ್ಣುಗಳಿದ್ದ ಪೆಟ್ಟಿಗೆಯನ್ನೇ ಸಿವಿಲ್ ಪೊಲೀಸ್ ಅಧಿಕಾರಿ ಎಗರಿಸಿದ್ದರು. ಅವರನ್ನು ಕಾಯಮ್ಮಾಗಿ ಮನೆಗೆ ಕಳುಹಿಸಿ ಪೊಲೀಸ್ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.  

ಮಾವಿನ ಹಣ್ಣಿನ ಪೆಟ್ಟಿಗೆ ಕದ್ದಿದ್ದ ಕೇರಳ ಪೊಲೀಸಪ್ಪ ಸೇವೆಯಿಂದಲೇ ವಜಾ Read More »

ರಾಷ್ಟ್ರೀಯ ನ್ಯೂಸ್

ದೆಹಲಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ     ➤ ಯುವಕನ ಬಂಧನ..!

(ನ್ಯೂಸ್ ಕಡಬ)newskadaba.com ನವದೆಹಲಿ, ಏ.28. ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶದ ಜಕೀರ್(20) ಬಂಧಿತ ಯುವಕ ಎಂದು ಗುರುತಿಸಲಾಗಿದೆ. ಬಾಂಬ್ ಬೆದರಿಕೆ ಕರೆ ಬಂದಿದ್ದು, ಬಳಿಕ ವಿಮಾನ ನಿಲ್ದಾಣದಲ್ಲಿ ಶೋಧ ನಡೆಸಲಾಗಿತ್ತಲ್ಲದೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂಬುದು ಖಚಿತವಾಗಿತ್ತು.  

ದೆಹಲಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ     ➤ ಯುವಕನ ಬಂಧನ..! Read More »

ರಾಷ್ಟ್ರೀಯ ನ್ಯೂಸ್

ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ ➤ ಬೈಕ್ ಗೆ ಡಿಕ್ಕಿ ಹೊಡೆದು ಲಾರಿ ಚಾಲಕ ಎಸ್ಕೇಪ್

(ನ್ಯೂಸ್ ಕಡಬ) newskadaba.com. ಬೆಂಗಳೂರು, ಏ.28. ಮಡಿವಾಳ ಸಮೀಪದ ಮೈಕೋಬಂಡೆ ಬಳಿ ಹಿಟ್ ಅಂಡ್ ರನ್ ಗೆ ಬೈಕ್ ಸವಾರನೊಬ್ಬ ಸಾವನ್ನಪ್ಪಿರುವ ಘಟನೆ ರಾತ್ರಿ 12 ಗಂಟೆ ಸುಮಾರಿಗೆ ನಡೆದಿದೆ. ವೇಗವಾಗಿ ಬಂದ ಕಂಟೇನರ್ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದಾರೆ. ಡಿಕ್ಕಿಯ ರಭಸಕ್ಕೆ ಗಾಯಗೊಂಡ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಇನ್ನು ಮೃತನ ಹೆಸರು ಹಾಗೂ ವಿಳಾಸ ತಿಳಿದು ಬಂದಿಲ್ಲ. ಘಟನೆ ಸಂಬಂಧ ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿಯ ಪತ್ತೆಗಾಗಿ ಸಿಸಿಟವಿಯನ್ನ

ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ ➤ ಬೈಕ್ ಗೆ ಡಿಕ್ಕಿ ಹೊಡೆದು ಲಾರಿ ಚಾಲಕ ಎಸ್ಕೇಪ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಅನೈತಿಕ ಸಂಬಂಧ ➤ ಗೆಳೆಯನಿಂದಲೇ ಹತ್ಯೆಗೀಡಾದ ಮಹಿಳೆ

(ನ್ಯೂಸ್ ಕಡಬ) newskadaba.com. ಬೆಂಗಳೂರು, ಏ.27.  ತನ್ನನ್ನು ಬಿಟ್ಟು ಪರಸ್ತ್ರೀಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಗೆಳೆಯನೊಂದಿಗೆ ಮಹಿಳೆ ಗಲಾಟೆ ಮಾಡಿದ ಪರಿಣಾಮ ಕೋಪಗೊಂಡ ಗೆಳೆಯ ಆಕೆಯನ್ನು ಹತ್ಯೆ ಮಾಡಿರುವ ಘಟನೆಯೊಂದು ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶರಗುಣಂ (35) ಹತ್ಯೆಯಾದ ಮಹಿಳೆಯಾಗಿದ್ದಾರೆ. ಆರೋಪಿ ಗಮೇಶ್ ಮಹಿಳೆಯನ್ನು ಹತ್ಯೆ ಮಾಡಲು ಯತ್ನಿಸಿದ್ದು, ಬಳಿಕ ಆಕೆಯನ್ನು ಆತನೇ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಮೃತ ಮಹಿಳೆ ಶರಗುಣಂ ಮೂಲತಃ ತಮಿಳುನಾಡು ಮೂಲದವರಾಗಿದ್ದು,

ಅನೈತಿಕ ಸಂಬಂಧ ➤ ಗೆಳೆಯನಿಂದಲೇ ಹತ್ಯೆಗೀಡಾದ ಮಹಿಳೆ Read More »

ಕ್ರೈಮ್ ನ್ಯೂಸ್

ಹೊಟ್ಟಿಯಲ್ಲಿನ ಮಗುವಿನ ಅಂಗವೈಕಲ್ಯ ತೆಗೆದುಹಾಕುವ ನೆಪ     ➤ ಗರ್ಭಿಣಿಗೆ 1.50 ಲಕ್ಷ ರೂ. ವಂಚನೆ..!

(ನ್ಯೂಸ್ ಕಡಬ)newskadaba.com ಗುಜರಾತ್, ಏ.28. ರಾಜ್‌ಕೋಟ್‌ನ ಗ್ರಾಮೀಣ ಭಾಗದಲ್ಲೊಂದು ಮೂಢನಂಬಿಕೆಯ ಪ್ರಕರಣಯೊಂದು ಬೆಳಕಿಗೆ ಬಂದಿದೆ. ಹೌದು, ಮಹಿಳೆಯ ಹುಟ್ಟಲಿರುವ ಮಗುವಿಗೆ ಇರುವ ಅಂಗವೈಕಲ್ಯವನ್ನು ತೆಗೆದುಹಾಕುವ ನೆಪದಲ್ಲಿ ವಂಚಕ ಹಣ ಮಾಡಲಾಗಿದೆ. ರಾಜ್‌ಕೋಟ್‌ನ ಭುವ ಎಂಬ ನಕಲಿ ಬಾಬಾ ಎಂಬುವವನು ನ್ಯಾರಾ ಗ್ರಾಮದ ಗರ್ಭಿಣಿಗೆ 1.5 ಲಕ್ಷ ರೂಪಾಯಿ ವಂಚನೆ ಮಾಡಿದ್ದಾನೆ. ಇದಕ್ಕೂ ಮುನ್ನವೇ ವಂಚನೆಗೊಳಗಾದ ಮಹಿಳೆಯ ಹೊಟ್ಟೆಯಲ್ಲಿರುವ ಮಗು ಅಂಗವೈಕಲ್ಯವಿದೆ ಎಂದು ವೈದ್ಯರು ಹೇಳಿದ್ದರು ಎನ್ನಲಾಗಿದೆ.  

ಹೊಟ್ಟಿಯಲ್ಲಿನ ಮಗುವಿನ ಅಂಗವೈಕಲ್ಯ ತೆಗೆದುಹಾಕುವ ನೆಪ     ➤ ಗರ್ಭಿಣಿಗೆ 1.50 ಲಕ್ಷ ರೂ. ವಂಚನೆ..! Read More »

ರಾಷ್ಟ್ರೀಯ ನ್ಯೂಸ್

ಕಿಚ್ಚನ ಪ್ರಚಾರದ ವಿರುದ್ಧ ಟೀಕಿಸಿ ಮಾತಡಿದ ಮಾಜಿ ಶಾಸಕರ ಪುತ್ರ ➤ ರೊಚ್ಚಿಗೆದ್ದ ಸುದೀಪ್ ಫ್ಯಾನ್ಸ್  

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.28 ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರಗಳ ಪರ್ವವೇ ನಡೆಯಲು ಆರಂಭಿಸಿತು. ಬಿಜೆಪಿಯನ್ನು ತೊರೆದು ಶೆಟ್ಟರ್‌ ಕಾಂಗ್ರೇಸ್‌ ಕೈ ಹಿಡಿದರು. ಲಕ್ಷ್ಮಣ ಸವದಿ ಸಹ ಬಿಜೆಪಿ ಬಿಟ್ಟು ಕಾಂಗ್ರೇಸ್‌ ಸೇರಿಕೊಂಡರು. ಕೈ ಸೇರಿಕೊಂಡ ಶೆಟ್ಟರ್‌ ಅವರನ್ನು ಬಿಜೆಪಿ ಪಕ್ಷ ಎಂದಿಗೂ ಕ್ಷಮಿಸುವುದಿಲ್ಲ, ನಂಬಿಕೆ ದ್ರೋಹಿ ಎಂದೆಲ್ಲಾ ಆರೋಪಿಸಿ ಅವರ ವಿರುದ್ಧ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಇದಲ್ಲದೇ ಶೆಟ್ಟರ್‌ ಸಹ ಬಿಜೆಪಿ ಲಿಂಗಾಯತ ವಿರೋಧಿ ಎಂದು ಆರೋಪಿಸಿದ್ದಾರೆ. ಈ ಆರೋಪದಿಂದ ಬಿಜೆಪಿ ನಿರ್ಣಾಯಕ ಮತದಿಂದ ಶೆಟ್ಟರ್‌ ವಿರುಧ್ಧ ಗೆಲ್ಲುವುದು ಒಂದು

ಕಿಚ್ಚನ ಪ್ರಚಾರದ ವಿರುದ್ಧ ಟೀಕಿಸಿ ಮಾತಡಿದ ಮಾಜಿ ಶಾಸಕರ ಪುತ್ರ ➤ ರೊಚ್ಚಿಗೆದ್ದ ಸುದೀಪ್ ಫ್ಯಾನ್ಸ್   Read More »

ಕರ್ನಾಟಕ
Scroll to Top