News Kadaba

ಇನ್ವೆಸ್ಟ್‌ ಕರ್ನಾಟಕದಲ್ಲಿ 5.10 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೂಡಿಕೆ ಪ್ರಸ್ತಾವ

(ನ್ಯೂಸ್ ಕಡಬ) newskadaba.com, ಫೆ.12. ಬೆಂಗಳೂರು:  ಮಂಗಳವಾರ ರಾಜಧಾನಿಯಲ್ಲಿ  ನಡೆದ ಇನ್ವೆಸ್ಟ್‌ ಕರ್ನಾಟಕ 2025 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ  ಪ್ರಮುಖ ಹೂಡಿಕೆ ಯೋಜನೆಗಳನ್ನು ಪ್ರಕಟಿಸಲಾಗಿದೆ. ಸುಮಾರು 5.10 ಲಕ್ಷ ಕೋಟಿ ರೂಪಾಯಿ ಮೊತ್ತದ ಹೂಡಿಕೆಯನ್ನು ಪ್ರಸ್ತಾವಿಸಲಾಗಿದೆ. ಅವುಗಳ ವಿವರ ಹೀಗಿದೆ. 1) ಜೆಎಸ್‌ಡಡಬ್ಲ್ಯು ನಿಯೊ ಎನರ್ಜಿ ಲಿಮಿಟೆಡ್ – ಸೌರ ಯೋಜನೆ , ಗಾಳಿ ಶಕ್ತಿ ಯೋಜನೆಗಳು, ಬ್ಯಾಟರಿ ಶಕ್ತಿ ಸಂಗ್ರಹಣೆ, ಬ್ಲೇಡ್ ತಯಾರಿಕೆ ಮತ್ತು ವಿಂಡ್ ಟರ್ಬೈನ್ ಜನರೇಟರ್ ಸ್ಥಾವರ ಸ್ಥಾಪನೆಗೆ ₹ 56,000 ಕೋಟಿ […]

ಇನ್ವೆಸ್ಟ್‌ ಕರ್ನಾಟಕದಲ್ಲಿ 5.10 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೂಡಿಕೆ ಪ್ರಸ್ತಾವ Read More »

ಕರ್ನಾಟಕ

ಏರ್‌ ಶೋ ನಡುವೆಯೇ ಬೆಂಗಳೂರು ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ

(ನ್ಯೂಸ್ ಕಡಬ) newskadaba.com, ಫೆ.11. ಬೆಂಗಳೂರು: ಏರೋ ಇಂಡಿಯಾ ಶೋ ನಡೆಯುತ್ತಿರುವ ಸಂದರ್ಭದಲ್ಲಿಯೇ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದಿದೆ. ದುಷ್ಕರ್ಮಿಗಳು ಫೆಬ್ರವರಿ 8ರಂದು ಇಮೇಲ್ ಮುಖಾಂತರ ಬಾಂಬ್ ಬೆದರಿಕೆ ಹಾಕಿದ್ದಾರೆ. mahanteshs6699@proton.mi ಎನ್ನುವ ಐಡಿಯಿಂದ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಪತ್ರ ಬರೆದಿದ್ದೇನೆ. ಆ ನನ್ನ ಪತ್ರಕ್ಕೆ ಪ್ರತಿಕ್ರಿಯೆ ಬರದಿದ್ದರೆ ಡ್ರೋನ್ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ

ಏರ್‌ ಶೋ ನಡುವೆಯೇ ಬೆಂಗಳೂರು ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಶಾಲಾ ಬಸ್ಸಿನಲ್ಲಿ ಸೀಟಿಗಾಗಿ ನಡೆದ ಜಗಳ; ವಿದ್ಯಾರ್ಥಿ ಸಾವು

(ನ್ಯೂಸ್ ಕಡಬ) newskadaba.com, ಫೆ.11.  : ಶಾಲಾ ಬಸ್ಸಿನಲ್ಲಿ ಸೀಟಿಗಾಗಿ ನಡೆದ ಜಗಳದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 14 ವರ್ಷದ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಸೇಲಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 9 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಾದ ಸರವಣನ್ ಮತ್ತು ಕಂದಗುರು ನಡುವೆ ಶಾಲಾ ಬಸ್ಸಿನಲ್ಲಿ ಸೀಟಿನ ವಿಚಾರವಾಗಿ ಜಗಳ ನಡೆದಿದೆ. ಕೊನೆಗೆ ಈ ಜಗಳ ತಾರಕ್ಕೇರಿ ಸರವಣನ್ ಕಂದಗುರುವನ್ನು ತಳ್ಳಿದ್ದಾನೆ. ಪರಿಣಾಮ ಕಂದಗುರು ಬಿದ್ದು ತಲೆಗೆ ಪೆಟ್ಟು ಬಿದ್ದಿತ್ತು ಎನ್ನಲಾಗಿದೆ. ಕಂದಗುರುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ,

ಶಾಲಾ ಬಸ್ಸಿನಲ್ಲಿ ಸೀಟಿಗಾಗಿ ನಡೆದ ಜಗಳ; ವಿದ್ಯಾರ್ಥಿ ಸಾವು Read More »

ಬ್ರೇಕಿಂಗ್ ನ್ಯೂಸ್

ರಾಹುಲ್ ಗಾಂಧಿ ಬಗ್ಗೆ ವಿವಾದಿತ ಪೋಸ್ಟ್- ದೂರು ದಾಖಲು

(ನ್ಯೂಸ್ ಕಡಬ) newskadaba.com, ಫೆ.11.  : ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಬಗ್ಗೆ ವಿವಾದಿತ ಪೋಸ್ಟ್​ ಹಾಕಿದ್ದವನ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಮ್ಮ ನಾಯಕ ರಾಹುಲ್ ಗಾಂಧಿಗೆ ವ್ಯಂಗ್ಯವಾಗಿ ಅಶ್ಲೀಲವಾಗಿ ರಾಹುಲ್ ಗಾಂಧಿಯನ್ನು ಬಿಂಬಿಸಲಾಗಿದೆ. ಪೋಸ್ಟ್ ಮಾಡಿರುವವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಲಿಖಿತ ರೂಪದಲ್ಲಿ ಎಂ.ಲಕ್ಷ್ಮಣ ದೂರು ನೀಡಿದ್ದಾರೆ. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಂ. ಲಕ್ಷ್ಮಣ ಕಲ್ಲು ತೂರಾಟದ ಹಿಂದೆ

ರಾಹುಲ್ ಗಾಂಧಿ ಬಗ್ಗೆ ವಿವಾದಿತ ಪೋಸ್ಟ್- ದೂರು ದಾಖಲು Read More »

ಬ್ರೇಕಿಂಗ್ ನ್ಯೂಸ್

ಡ್ರಗ್ಸ್‌ ಪ್ರಕರಣ: ನಟಿ ಸಂಜನಾ ಗಲ್ರಾನಿಗೆ ಮತ್ತೆ ಸಂಕಷ್ಟ

(ನ್ಯೂಸ್ ಕಡಬ) newskadaba.com, ಫೆ.11.  : ನಟಿ ಸಂಜನಾ ಗಲ್ರಾನಿಗೆ ಡ್ರಗ್ಸ್‌ ಪ್ರಕರಣದಲ್ಲಿ ಮತ್ತೆ ಸಂಕಷ್ಟ ಎದುರಾಗಿದೆ. ಕೇಸ್‌ ಸಂಬಂಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಗಲ್ರಾನಿ ಸಿಲುಕಿದ ಬಳಿಕ ಹೈಕೋರ್ಟ್‌ನಲ್ಲಿ ಪ್ರಕರಣ ರದ್ದು ಮಾಡಿಸಿಕೊಂಡಿದ್ದರು. ಆದರೀಗ, ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್‌ಗೆ ಹೋಗಲು ತಯಾರಿ ಮಾಡಿದೆ. ಬಹುತೇಕ ಈ ತಿಂಗಳ ಅಂತ್ಯದ ಒಳಗಾಗಿ ರದ್ದಾಗಿರೋ ಎಫ್‌ಐಆರ್ ಆದೇಶವನ್ನು ಪ್ರಶ್ನೆ ಮಾಡಲಿದ್ದಾರೆ.ನಟಿ ವಿರುದ್ಧ ಮೇಲ್ಮನವಿ

ಡ್ರಗ್ಸ್‌ ಪ್ರಕರಣ: ನಟಿ ಸಂಜನಾ ಗಲ್ರಾನಿಗೆ ಮತ್ತೆ ಸಂಕಷ್ಟ Read More »

ಕರ್ನಾಟಕ

ನಡುರಸ್ತೆಯಲ್ಲೇ ಹೊತ್ತಿ ಉರಿದ ಮೃತದೇಹ ಸಾಗಿಸುತ್ತಿದ್ದ ಅಂಬುಲೆನ್ಸ್‌

(ನ್ಯೂಸ್ ಕಡಬ) newskadaba.com, ಫೆ.11.  : ಆಶಾಪುರ ರಸ್ತೆಯಲ್ಲಿ ಚಲಿಸುತ್ತಿದ್ದ ಅಂಬುಲೆನ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಡುರಸ್ತೆಯಲ್ಲೇ ಅಂಬುಲೆನ್ಸ್ ಹೊತ್ತಿ ಉರಿದ ಘಟನೆ ನಡೆದಿದೆ. ಇಂಜಿನ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡು ಮೃತದೇಹವನ್ನ ಸಾಗಿಸುತ್ತಿದ್ದ ಖಾಸಗಿ ಆಸ್ಪತ್ರೆಯ ಅಂಬುಲೆನ್ಸ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅಂಬುಲೆನ್ಸ್‌ನಲ್ಲಿದ್ದ ಮೂವರು ಹಾಗೂ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ರಾಯಚೂರಿನಿಂದ ಉಡಮಗಲ್ ಗ್ರಾಮಕ್ಕೆ ಹೊರಟಿದ್ದ ಅಂಬುಲೆನ್ಸ್‌ನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು, ದಟ್ಟ ಹೊಗೆಯೊಂದಿಗೆ ಹೊತ್ತಿ ಉರಿದಿದೆ ಎಂದು ಸಾರ್ವಜನಿಕರು ಹೇಳಿಕೆ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ

ನಡುರಸ್ತೆಯಲ್ಲೇ ಹೊತ್ತಿ ಉರಿದ ಮೃತದೇಹ ಸಾಗಿಸುತ್ತಿದ್ದ ಅಂಬುಲೆನ್ಸ್‌ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಳ್ಯ : ಪಯಸ್ವಿನಿ ನದಿಯಲ್ಲಿ ಮೀನುಗಳ ಮಾರಣಹೋಮ

(ನ್ಯೂಸ್ ಕಡಬ) newskadaba.com, ಫೆ.11.  : ಪಯಸ್ವಿನಿ ನದಿಯಲ್ಲಿ ಸೋಮವಾರ ಮತ್ತಷ್ಟು ಮೀನುಗಳು ಸಾವನ್ನಪ್ಪಿದ್ದು, ನೀರು ಮಲಿನಗೊಂಡಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ರವಿವಾರ ನಾಗಪಟ್ಟಣ ವೆಂಟೆಡ್‌ ಡ್ಯಾಂ ಕೆಳಭಾಗ ದಲ್ಲಿ ಮೀನುಗಳು ಸತ್ತು ಬಿದ್ದಿದ್ದವು. ಇದೀಗ ಸೋಮವಾರ ಪಯಸ್ವಿನಿ ನದಿಯ ನಾಗಪಟ್ಟಣ, ಭಸ್ಮಡ್ಕ, ಕಾಂತ ಮಂಗಲ ವ್ಯಾಪ್ತಿಯಲ್ಲೂ ಮೀನುಗಳು ಸತ್ತಿರುವುದು ಹಾಗೂ ಅಸ್ವಸ್ಥಗೊಂಡಿರುವುದು ಕಂಡುಬಂತು. ನದಿಯ ನೀರು ಕಲುಷಿತಗೊಂಡಿರುವುದರಿಂದಲೇ ಮೀನುಗಳು ಸಾಯುತ್ತಿವೆ ಎನ್ನಲಾಗಿದೆ. ಇಲ್ಲಿನ ನೀರು ಕೂಡ ಕಪ್ಪು ಬಣ್ಣಕ್ಕೆ ತಿರುಗಿದ್ದು, ವಾಸನೆಯೂ ಬರುತ್ತಿದೆ. ಕಾಂತಮಂಗಲ

ಸುಳ್ಯ : ಪಯಸ್ವಿನಿ ನದಿಯಲ್ಲಿ ಮೀನುಗಳ ಮಾರಣಹೋಮ Read More »

ಕರಾವಳಿ

ಸಕಲೇಶಪುರ: ಕಾಫಿ ಕುಯ್ಲಿಗೆ ಕಾರ್ಮಿಕರನ್ನು ಸಾಗಿಸುತ್ತಿದ್ದ ವಾಹನ ಪಲ್ಟಿ; 14 ಮಂದಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com, ಫೆ.11. ಹಾಸನ : ಕಾಫಿ ಕುಯ್ಲಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ವಿಂಗರ್ ವಾಹನ ರಸ್ತೆ ಬದಿಗೆ ಪಲ್ಟಿಯಾಗಿ ಬಿದ್ದು ಹಲವು ಕೂಲಿ ಕಾರ್ಮಿಕರು ಗಾಯಗೊಂಡಿರುವ ಘಟನೆ ತಾಲೂಕಿನ ಬಾಳ್ಳುಪೇಟೆ ಸಮೀಪದ ನಿಡನೂರು ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ತಮಿಳುನಾಡಿನ ಸೇಲಂ ನಿಂದ ಮಡಿಕೇರಿ ಜಿಲ್ಲೆಯ ಶನಿವಾರಸಂತೆಯ ಬಳಿಯ ಕಾಫಿ ಎಸ್ಟೇಟೊಂದಕ್ಕೆ ಕಾಫಿ ಕುಯ್ಲಿಗೆ ಬರುತ್ತಿದ್ದಾಗ ಘಟನೆ ನಡೆದಿದೆ. ಒಂದು ಪುಟ್ಟ ಮಗು ಸೇರಿದಂತೆ 14 ಜನ ಕೂಲಿ ಕಾರ್ಮಿಕರು ಪ್ರಯಾಣಿಸುತ್ತಿದ್ದ

ಸಕಲೇಶಪುರ: ಕಾಫಿ ಕುಯ್ಲಿಗೆ ಕಾರ್ಮಿಕರನ್ನು ಸಾಗಿಸುತ್ತಿದ್ದ ವಾಹನ ಪಲ್ಟಿ; 14 ಮಂದಿಗೆ ಗಂಭೀರ ಗಾಯ Read More »

ಕರ್ನಾಟಕ

ಚಿನ್ನದ ದರದಲ್ಲಿ ಇಂದು ಭಾರೀ ಏರಿಕೆ

(ನ್ಯೂಸ್ ಕಡಬ) newskadaba.com, ಫೆ.11. ಬೆಂಗಳೂರು: ಸೋಮವಾರ ಏರಿಕೆಯಾಗಿದ್ದ ಚಿನ್ನದ ದರ ಇಂದು ಕೂಡ ದುಬಾರಿಯಾಗಿದೆ (Gold Price Today). ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 80 ರೂ. ಅಧಿಕವಾಗಿ 8,060 ರೂ.ಗೆ ತಲುಪಿದರೆ, 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 87 ರೂ. ದುಬಾರಿಯಾಗಿ 8,793 ರೂ.ಗೆ ಏರಿಕೆಯಾಗಿದೆ. ಆ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ 64,480 ರೂ. ಬೆಲೆ ಬಾಳಿದರೆ, 10 ಗ್ರಾಂಗೆ

ಚಿನ್ನದ ದರದಲ್ಲಿ ಇಂದು ಭಾರೀ ಏರಿಕೆ Read More »

ಕರ್ನಾಟಕ

ಬಂಟ್ವಾಳ: ಬಡಕಬೈಲ್ ಜಂಕ್ಷನ್ ನ ಬಳಿ 3-4 ಮನೆಗಳಿಗೆ ತಗುಲಿದ ಆಕಸ್ಮಿಕ ಬೆಂಕಿ

(ನ್ಯೂಸ್ ಕಡಬ) newskadaba.com, ಫೆ.11. ಪ್ಯಾರಿಸ್: ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲ್ ಜಂಕ್ಷನ್ ನ ಬಳಿ 3-4 ಮನೆಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿದರು. ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ ಉಳಿಪ್ಪಾಡಿ ಅವರು ರಾತ್ರಿ 1:00 ಗಂಟೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಗ್ನಿಶಾಮಕ ದಳದ ಕಾರ್ಯಾಚರಣೆ ವೀಕ್ಷಣೆ ಮಾಡಿದರು. ಜೊತೆಗೆ ಮನೆಮಂದಿಗೆ ಸಾಂತ್ವನ ಹೇಳಿದರು. ಕಂದಾಯ ನಿರೀಕ್ಷಕ ವಿಜಯ್ ಆರ್ ಸಹಿತ

ಬಂಟ್ವಾಳ: ಬಡಕಬೈಲ್ ಜಂಕ್ಷನ್ ನ ಬಳಿ 3-4 ಮನೆಗಳಿಗೆ ತಗುಲಿದ ಆಕಸ್ಮಿಕ ಬೆಂಕಿ Read More »

ಕರಾವಳಿ
Scroll to Top