News Kadaba

ಇಂದು AI Summit ನಲ್ಲಿ ಪ್ರಧಾನಿ ಮೋದಿ ಭಾಗಿ; ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಆತ್ಮೀಯ ಸ್ವಾಗತ

(ನ್ಯೂಸ್ ಕಡಬ) newskadaba.com, ಫೆ.11. ಪ್ಯಾರಿಸ್: ಭಾರತೀಯ ಕಾಲಮಾನ ಪ್ರಕಾರ ಕಳೆದ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಪ್ರವಾಸಕ್ಕೆ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ ಗೆ ಆಗಮಿಸಿದ್ದಾರೆ. ಇಂದು ಪ್ಯಾರಿಸ್ ನಲ್ಲಿ ನಡೆಯಲಿರುವ ಎಐ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸುವ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಬರಮಾಡಿಕೊಂಡ ಫ್ಲಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಆತ್ಮೀಯ ಸ್ವಾಗತ ಕೋರಿದ್ದಾರೆ. ಇದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಪ್ಯಾರಿಸ್‌ನಲ್ಲಿ ನನ್ನ ಸ್ನೇಹಿತ ಅಧ್ಯಕ್ಷ ಮ್ಯಾಕ್ರನ್ ಅವರನ್ನು ಭೇಟಿ […]

ಇಂದು AI Summit ನಲ್ಲಿ ಪ್ರಧಾನಿ ಮೋದಿ ಭಾಗಿ; ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಆತ್ಮೀಯ ಸ್ವಾಗತ Read More »

ಅಂತರ್ರಾಷ್ಟ್ರೀಯ ನ್ಯೂಸ್

‘ಮಕ್ಕಳನ್ನು ಮಾಡೆಲ್ಗಳಂತೆ ಪ್ರದರ್ಶನಕ್ಕಿಡಬೇಡಿ’ – ಪೋಷಕರಿಗೆ ಪ್ರಧಾನಿ ಮೋದಿ ಸಲಹೆ

(ನ್ಯೂಸ್ ಕಡಬ) newskadaba.com, ಫೆ.10. ನವದೆಹಲಿ: ನಿವಿಡೋಗಳ ಪೆ-ಚರ್ಚಾ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಪೋಷಕರಿಗೆ ಸಲಹೆ ನೀಡುತ್ತಾ, “ನೀವು ನಿಮ್ಮ ಮಕ್ಕಳಿಂದ ಬೇರೆಯವರ ಮಕ್ಕಳಂತೆ ಅಥವಾ ಅವರ ಪಠ್ಯಕ್ರಮದಂತೆ ಅವರ ಅಭ್ಯಾಸಗಳನ್ನು ನಿರೀಕ್ಷಿಸಬೇಡಿ. ನಿಮ್ಮ ಮಕ್ಕಳ ಆಸಕ್ತಿಯನ್ನು ಪ್ರೋತ್ಸಾಹಿಸಿ, ಅವರಿಗೆ ತಮ್ಮ ಆಸಕ್ತಿಯ ಪ್ರಕಾರ ಅಧ್ಯಯನ ಮಾಡಲು ಅವಕಾಶ ಕೊಡಿ” ಎಂದು ಹೇಳಿದರು. ಮಕ್ಕಳಿಗೆ ಮನಸ್ಸಿನಲ್ಲಿ ಉಂಟಾದ ಆಸಕ್ತಿಯನ್ನು ಮುಚ್ಚಿಕೊಳ್ಳಲು ಬಿಡಬೇಡಿ. ಅವುಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಪ್ರೋತ್ಸಾಹಿಸಿ, ಪೋಷಕರು ತಮ್ಮ ಆಸೆಗಳನ್ನು ಮಕ್ಕಳ

‘ಮಕ್ಕಳನ್ನು ಮಾಡೆಲ್ಗಳಂತೆ ಪ್ರದರ್ಶನಕ್ಕಿಡಬೇಡಿ’ – ಪೋಷಕರಿಗೆ ಪ್ರಧಾನಿ ಮೋದಿ ಸಲಹೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸರ್ಕಾರ ಆದಷ್ಟು ಬೇಗ ಜನಗಣತಿ ನಡೆಸಬೇಕು: ರಾಜ್ಯಸಭೆಯಲ್ಲಿ ಸೋನಿಯಾ ಗಾಂಧಿ ಆಗ್ರಹ

(ನ್ಯೂಸ್ ಕಡಬ) newskadaba.com, ಫೆ.10. ನವದೆಹಲಿ: ದೇಶದಲ್ಲಿ ಸುಮಾರು 14 ಕೋಟಿ ಜನ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ, ಕೇಂದ್ರ ಸರ್ಕಾರ ಜನಗಣತಿಯನ್ನು ಆದಷ್ಟು ಬೇಗ ನಡೆಸಬೇಕು ಎಂದು ಸೋಮವಾರ ಒತ್ತಾಯಿಸಿದ್ದಾರೆ. ಇಂದು ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸೋನಿಯಾ ಗಾಂಧಿ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ(ಎನ್‌ಎಫ್‌ಎಸ್‌ಎ) ಅಡಿಯಲ್ಲಿ ಫಲಾನುಭವಿಗಳನ್ನು 2011 ರ ಜನಗಣತಿಯ ಪ್ರಕಾರ ಗುರುತಿಸಲಾಗುತ್ತಿದೆ. ಇತ್ತೀಚಿನ ಜನಸಂಖ್ಯಾ ಸಂಖ್ಯೆಗಳ ಪ್ರಕಾರ ಅಲ್ಲ

ಸರ್ಕಾರ ಆದಷ್ಟು ಬೇಗ ಜನಗಣತಿ ನಡೆಸಬೇಕು: ರಾಜ್ಯಸಭೆಯಲ್ಲಿ ಸೋನಿಯಾ ಗಾಂಧಿ ಆಗ್ರಹ Read More »

ರಾಷ್ಟ್ರೀಯ ನ್ಯೂಸ್

ಭಾರತೀಯ ನೌಕಾಪಡೆಯಲ್ಲಿ 270 ಹುದ್ದೆಗೆ ಅರ್ಜಿ ಅಹ್ವಾನ

(ನ್ಯೂಸ್ ಕಡಬ) newskadaba.com, ಫೆ.10. ಬೆಂಗಳೂರು: ಭಾರತೀಯ ನೌಕಾಪಡೆಯಲ್ಲಿ ಉದ್ಯೋಗ ಹೊಂದಬೇಕು ಎಂದು ಕನಸು ಕಾಣುತ್ತಿರುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಖಾಲಿ ಇರುವ 270 ಎಸ್‌ಎಸ್‌ಸಿ ಆಫೀಸರ್‌ ಹುದ್ದೆಗಳ ಭರ್ತಿಗೆ ಭಾರತೀಯ ನೌಕಾಪಡೆ ಅರ್ಜಿ ಆಹ್ವಾನಿಸಿದೆ. ಪೈಲಟ್‌, ಏರ್‌ ಟ್ರಾಫಿಕ್‌ ಕಂಟ್ರೋಲರ್‌ ಮುಂತಾದ ಹುದ್ದೆಗಳಿದ್ದು, ಬಿ.ಎಸ್‌ಸಿ, ಬಿ.ಕಾಂ, ಎಂಜಿನಿಯರಿಂಗ್‌ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಫೆ. 25 ಕೊನೆಯ ದಿನವಾಗಿದೆ. ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ ಎಕ್ಸಿಕ್ಯುಟಿವ್‌ ಬ್ರ್ಯಾಂಚ್‌ – 60 ಹುದ್ದೆ,

ಭಾರತೀಯ ನೌಕಾಪಡೆಯಲ್ಲಿ 270 ಹುದ್ದೆಗೆ ಅರ್ಜಿ ಅಹ್ವಾನ Read More »

ಉದ್ಯೋಗ

ತಿರುಪತಿ ಲಡ್ಡು ವಿವಾದ; ನಾಲ್ವರು ಆರೊಪಿಗಳ ಬಂಧನ

(ನ್ಯೂಸ್ ಕಡಬ) newskadaba.com, ಫೆ.10. ಹೈದರಾಬಾದ್‌: ಕಳೆದ ವರ್ಷ ದೇಶವನ್ನೇ ಬೆಚ್ಚಿಬೀಳಿಸಿದ್ದ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಭಾನುವಾರ ನಾಲ್ವರನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತನಿಖೆ ನಡೆಸಿದ್ದ ಹೈದರಾಬಾದ್ ವಿಭಾಗದ ಜಂಟಿ ನಿರ್ದೇಶಕ ವೀರೇಶ್ ಪ್ರಭು, ವಿಶಾಖಪಟ್ಟಣಂ ಸಿಬಿಐ ಎಸ್ಪಿ ಮುರಳೀರಾಂಬ, ವಿಶಾಖಪಟ್ಟಣಂ ಡಿಐಜಿ ಗೋಪಿನಾಥ್ ಜೆಟ್ಟಿ, ಗುಂಟೂರು ಐಜಿ ಸರ್ವಶ್ರೇಷ್ಠಿ ತ್ರಿಪಾಠಿ ಮತ್ತು ಎಫ್‌ಎಸ್‌ಎಸ್‌ಎಐ ಅಧಿಕಾರಿ ಸತ್ಯಕುಮಾರ್ ಪಾಂಡಾ ನೇತೃತ್ವದ ತಂಡ ನಾಲ್ವರು ಆರೋಪಿಗಳನ್ನು

ತಿರುಪತಿ ಲಡ್ಡು ವಿವಾದ; ನಾಲ್ವರು ಆರೊಪಿಗಳ ಬಂಧನ Read More »

ಕರ್ನಾಟಕ

ಗ್ಯಾರಂಟಿ ಯೋಜನೆಗಳು ಶೀಘ್ರದಲ್ಲೇ ಬಂದ್: ಛಲವಾದಿ ನಾರಾಯಣಸ್ವಾಮಿ

(ನ್ಯೂಸ್ ಕಡಬ) newskadaba.com, ಫೆ.10. ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಶೀಘ್ರದಲ್ಲೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಭಾನುವಾರ ಹೇಳಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕೊನೆಗೊಳಿಸುವ ಕೆಲಸಕ್ಕೆ ಕೈ ಹಾಕಲಿದೆ ಎಂದೆನಿಸುತ್ತಿದೆ. ಈಗಾಗಲೇ ಸರ್ಕಾರ ಮೆಟ್ರೋ ರೈಲು, ಹಾಲು, ಸ್ಟ್ಯಾಂಪ್ ಡ್ಯೂಟಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿದೆ. ಇಷ್ಟೆಲ್ಲ ಆದರೂ

ಗ್ಯಾರಂಟಿ ಯೋಜನೆಗಳು ಶೀಘ್ರದಲ್ಲೇ ಬಂದ್: ಛಲವಾದಿ ನಾರಾಯಣಸ್ವಾಮಿ Read More »

ಕರ್ನಾಟಕ

ದೆಹಲಿ ಚುನಾವಣೆ: ಕಾಂಗ್ರೆಸ್‌ ʼಶೂನ್ಯʼ ಸಾಧನೆ-ʼಗ್ಯಾರಂಟಿ‌ʼ ಫ್ಲಾಪ್

(ನ್ಯೂಸ್ ಕಡಬ) newskadaba.com , ಫೆ.08. ನವದೆಹಲಿ: ಬಹು ನಿರೀಕ್ಷಿತ ದೆಹಲಿ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗಿದ್ದು, ಬಿಜೆಪಿ ಭಾರೀ ಮುನ್ನಡೆಯನ್ನು ಸಾಧಿಸಿದೆ. 70 ವಿಧಾನಸಭಾ ಕ್ಷೇತ್ರಗಳ ಪೈಕಿ 43 ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಮುನ್ನಡೆಯಲ್ಲಿದ್ದು, ಆಪ್ 27 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಕಾಂಗ್ರೆಸ್‌  ಯಾವುದೇ ಕ್ಷೇತ್ರದಲ್ಲೂ ಮುನ್ನಡೆಯಲ್ಲಿಲ್ಲ. ಶೂನ್ಯ ಸಾಧನೆಯನ್ನು ತೋರಿಸಿದೆ. ಪ್ರಬಲ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ ರಾಷ್ಟ್ರ ರಾಜಧಾನಿ ಚುನಾವಣೆಯ ಎಲ್ಲಾ ಕ್ಷೇತ್ರಗಳಲ್ಲೂ ಹೀನಾಯವಾಗಿ ಸೋಲುವ ಸಾಧ್ಯತೆಯಿದೆ. ಈ ಬಾರಿ ಮತದಾರ ಬಿಜೆಪಿ ಕೈ

ದೆಹಲಿ ಚುನಾವಣೆ: ಕಾಂಗ್ರೆಸ್‌ ʼಶೂನ್ಯʼ ಸಾಧನೆ-ʼಗ್ಯಾರಂಟಿ‌ʼ ಫ್ಲಾಪ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

38ನೇ ರಾಷ್ಟ್ರೀಯ ಗೇಮ್ಸ್‌: ಟೆನಿಸ್‌ನಲ್ಲಿ ಕರ್ನಾಟಕಕ್ಕೆ ಬೆಳ್ಳಿ, ತಮಿಳುನಾಡಿಗೆ ಚಿನ್ನ

(ನ್ಯೂಸ್ ಕಡಬ) newskadaba.com , ಫೆ.08. ಡೆಹ್ರಾಡೂನ್‌: 38ನೇ ರಾಷ್ಟ್ರೀಯ ಗೇಮ್ಸ್‌ನ ಟೆನಿಸ್‌ನಲ್ಲಿ ಕರ್ನಾಟಕ ಪುರುಷರ ತಂಡ ಬೆಳ್ಳಿ ಪದಕ ಗೆದ್ದಿದೆ. ಶುಕ್ರವಾರ ನಡೆದ ಫೈನಲ್‌ನಲ್ಲಿ ರಾಜ್ಯ ತಂಡಕ್ಕೆ 0-2 ಸೋಲು ಎದುರಾಗಿ, ಬೆಳ್ಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಮೊದಲ ಸಿಂಗಲ್ಸ್‌ನಲ್ಲಿ ರಾಜ್ಯದ ರಿಶಿ ರೆಡ್ಡಿ ವಿರುದ್ಧ ತಮಿಳುನಾಡಿನ ಅಭಿನವ್‌ ಷಣ್ಮುಗಂ 3-6, 7-6(8-6), 6-4ರಲ್ಲಿ ಗೆಲುವು ಸಾಧಿಸಿದರು. 2ನೇ ಸಿಂಗಲ್ಸ್‌ನಲ್ಲಿ ಕರ್ನಾಟಕದ ನಂ.1 ಆಟಗಾರ ಪ್ರಜ್ವಲ್‌ ದೇವ್‌ಗೂ ಆಘಾತ ಎದುರಾಯಿತು. ಅವರು ತಾರಾ ಆಟಗಾರ ಮನೀಶ್‌ ಸುರೇಶ್‌ಕುಮಾರ್‌ ವಿರುದ್ಧ

38ನೇ ರಾಷ್ಟ್ರೀಯ ಗೇಮ್ಸ್‌: ಟೆನಿಸ್‌ನಲ್ಲಿ ಕರ್ನಾಟಕಕ್ಕೆ ಬೆಳ್ಳಿ, ತಮಿಳುನಾಡಿಗೆ ಚಿನ್ನ Read More »

ಕರ್ನಾಟಕ, ಕ್ರೀಡಾ ನ್ಯೂಸ್

ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವೆ: ಸ್ನೇಹಮಯಿ ಕೃಷ್ಣ

(ನ್ಯೂಸ್ ಕಡಬ) newskadaba.com , ಫೆ.07. ಮೈಸೂರು: ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ್ದು, ದೂರುದಾರರಾದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ಈ ತೀರ್ಪನ್ನು ಪ್ರಶ್ನಿಸುವುದಾಗಿ ತಿಳಿಸಿದ್ದಾರೆ. ಮೈಸೂರಿನ ಕೆಸರೆ ಗ್ರಾಮದಲ್ಲಿ ಸ್ವಾಧೀನಪಡಿಸಿಕೊಂಡ ಪಾರ್ವತಿ ಅವರ ಮೂರು ಎಕರೆ 16 ಗುಂಟೆ ಭೂಮಿಗೆ ಬದಲಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಪ್ರಭಾವ ಬಳಸಿ ಮೈಸೂರಿನಲ್ಲಿ 14 ನಿವೇಶನಗಳನ್ನು ಪಡೆದ ಆರೋಪವಿದೆ. ಲೋಕಾಯುಕ್ತ

ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವೆ: ಸ್ನೇಹಮಯಿ ಕೃಷ್ಣ Read More »

ಕರ್ನಾಟಕ

16000 ಶಿಕ್ಷಕರ ನೇಮಕಾತಿಯ ಬಿಗ್ ಅಪ್ಡೇಟ್ ಕೊಟ್ಟ ಶಿಕ್ಷಣ ಸಚಿವ ಮಧು ಬಂಗಾರಪ್ಪ!

(ನ್ಯೂಸ್ ಕಡಬ) newskadaba.com , ಫೆ.07. ದಾವಣಗೆರೆ: ರಾಜ್ಯದಲ್ಲಿ ಈಗಾಗಲೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 13 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದ್ದೇವೆ. ಶೀಘ್ರವಾಗಿ ಕಲ್ಯಾಣ ಕರ್ನಾಟಕದ 6 ಸಾವಿರ ಸೇರಿದಂತೆ ರಾಜ್ಯದಲ್ಲಿ 16 ಸಾವಿರ ಶಿಕ್ಷಕರ ನೇಮಕಾತಿಯನ್ನು ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಾಥಮಿಕ ಶಾಲೆಗಳಿಗೆ 13 ಸಾವಿರ  ಶಿಕ್ಷರರನ್ನು

16000 ಶಿಕ್ಷಕರ ನೇಮಕಾತಿಯ ಬಿಗ್ ಅಪ್ಡೇಟ್ ಕೊಟ್ಟ ಶಿಕ್ಷಣ ಸಚಿವ ಮಧು ಬಂಗಾರಪ್ಪ! Read More »

ಕರ್ನಾಟಕ
Scroll to Top