ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಇನ್ವೆಸ್ಟ್‌ ಕರ್ನಾಟಕದಲ್ಲಿ 5.10 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೂಡಿಕೆ ಪ್ರಸ್ತಾವ – News Kadaba

ಇನ್ವೆಸ್ಟ್‌ ಕರ್ನಾಟಕದಲ್ಲಿ 5.10 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೂಡಿಕೆ ಪ್ರಸ್ತಾವ

(ನ್ಯೂಸ್ ಕಡಬ) newskadaba.com, ಫೆ.12. ಬೆಂಗಳೂರು:  ಮಂಗಳವಾರ ರಾಜಧಾನಿಯಲ್ಲಿ  ನಡೆದ ಇನ್ವೆಸ್ಟ್‌ ಕರ್ನಾಟಕ 2025 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ  ಪ್ರಮುಖ ಹೂಡಿಕೆ ಯೋಜನೆಗಳನ್ನು ಪ್ರಕಟಿಸಲಾಗಿದೆ. ಸುಮಾರು 5.10 ಲಕ್ಷ ಕೋಟಿ ರೂಪಾಯಿ ಮೊತ್ತದ ಹೂಡಿಕೆಯನ್ನು ಪ್ರಸ್ತಾವಿಸಲಾಗಿದೆ. ಅವುಗಳ ವಿವರ ಹೀಗಿದೆ.

1) ಜೆಎಸ್‌ಡಡಬ್ಲ್ಯು ನಿಯೊ ಎನರ್ಜಿ ಲಿಮಿಟೆಡ್ – ಸೌರ ಯೋಜನೆ , ಗಾಳಿ ಶಕ್ತಿ ಯೋಜನೆಗಳು, ಬ್ಯಾಟರಿ ಶಕ್ತಿ ಸಂಗ್ರಹಣೆ, ಬ್ಲೇಡ್ ತಯಾರಿಕೆ ಮತ್ತು ವಿಂಡ್ ಟರ್ಬೈನ್ ಜನರೇಟರ್ ಸ್ಥಾವರ ಸ್ಥಾಪನೆಗೆ ₹ 56,000 ಕೋಟಿ ಹೂಡಿಕೆ.

2) ಬಲ್ಡೋಟಾ ಸ್ಟೀಲ್ ಆ್ಯಂಡ್‌ ಪವರ್ ಲಿಮಿಟೆಡ್ – ಸಮಗ್ರ ಉಕ್ಕು ತಯಾರಿಕಾ ಸ್ಥಾವರಕ್ಕೆ ರೂ ₹ 54,000 ಕೋಟಿ ಹೂಡಿಕೆ.

3) ಟಾಟಾ ಪವರ್ ರಿನ್ಯೂವೇಬಲ್‌ ಎನರ್ಜಿ ಲಿಮಿಟೆಡ್ – ರಾಜ್ಯದಾದ್ಯಂತ ನವೀಕರಿಸಬಹುದಾದ ಇಂಧನ ವಿದ್ಯುತ್ ಯೋಜನೆಗಳು ಮತ್ತು ಮೇಲ್ಚಾವಣಿ ವಿದ್ಯುತ್‌ ಪರಿಹಾರಗಳ ಅಭಿವೃದ್ಧಿಗೆ ₹ 50,000 ಕೋಟಿ ಹೂಡಿಕೆ.

4) ರೆನ್ಯೂ ಪ್ರೈವೇಟ್‌ ಲಿಮಿಟೆಡ್ – 4 ಗಿಗಾವಾಟ್‌ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಸ್ಥಾಪಿಸಲು ₹ 50,000 ಕೋಟಿ ಹೂಡಿಕೆ.

5) ಸೆರೆಂಟಿಕಾ ರಿನ್ಯೂವೇಬಲ್ಸ್ ಇಂಡಿಯಾ ಪ್ರೈವೇಟ್‌ ಲಿಮಿಟೆಡ್ – ನವೀಕರಿಸಬಹುದಾದ ಇಂಧನ ಯೋಜನೆಗಳ ಅಭಿವೃದ್ಧಿಗಾಗಿ ₹43,975 ಕೋಟಿ ಹೂಡಿಕೆ.

6) ಜೆಎಸ್‌ಡಬ್ಲ್ಯು ಗ್ರೂಪ್ – ಜೆಎಸ್‌ಡಬ್ಲ್ಯು ಸಿಮೆಂಟ್ ಆ್ಯಂಡ್‌ ಸ್ಟೀಲ್ ಮತ್ತು ಅದರ ಅಂಗಸಂಸ್ಥೆಗಳಿಗೆ ₹ 43,900 ಕೋಟಿ ಹೂಡಿಕೆ.

7) ಮಹೀಂದ್ರಾ ಸಸ್ಟೆನ್ ಪ್ರೈವೇಟ್ ಲಿಮಿಟೆಡ್ – ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಸ್ಥಾಪಿಸಲು ₹ 35,000 ಕೋಟಿ ಹೂಡಿಕೆ

8) ಹೀರೋ ಫ್ಯೂಚರ್ ಎನರ್ಜಿಸ್ – ನವೀಕರಿಸಬಹುದಾದ ಇಂಧನ, ಪರಿಶುದ್ಧ ಜಲಜನಕ ಮತ್ತು ಅದರ ಉತ್ಪನ್ನಗಳ ಯೋಜನೆಗಳಿಗೆ ₹ 22,200 ಕೋಟಿ ಹೂಡಿಕೆ

9) ಸುಜ್ಲಾನ್ ಎನರ್ಜಿ ಲಿಮಿಟೆಡ್ – ಪವನ ವಿದ್ಯುತ್ ಯೋಜನೆಗಳಿಗೆ ₹ 21,950 ಕೋಟಿ ಹೂಡಿಕೆ.

10) ಎಸ್ಸಾರ್ ರಿನ್ಯೂವೇಬಲ್ಸ್‌ ಲಿಮಿಟೆಡ್‌- ₹ 20,000 ಕೋಟಿ ಹೂಡಿಕೆ.

11) ಅವಾಡಾ ಎನರ್ಜಿ ಪ್ರೈವೇಟ್ ಲಿಮಿಟೆಡ್ – ₹ 18,000 ಕೋಟಿ ಹೂಡಿಕೆ.

12) ಎಪ್ಸಿಲಾನ್ ಗ್ರೂಪ್ – ಆನೋಡ್ ಮತ್ತು ಕ್ಯಾಥೋಡ್ ಪದಾರ್ಥಗಳ ತಯಾರಿಕೆಗೆ ₹ 15,350 ಕೋಟಿ ಹೂಡಿಕೆ.

13) ಎಂವೀ ಎನರ್ಜಿ ಪ್ರೈವೇಟ್ ಲಿಮಿಟೆಡ್ – ಸೋಲಾರ ಫೊಟೊವೊಲ್ಟ್ಯಾಕ್‌ ಸೆಲ್ಸ್‌ ಮತ್ತು ಮಾಡ್ಯೂಲ್‌ಗಳ ತಯಾರಿಕೆಗೆ ₹ 15,000 ಕೋಟಿ ಹೂಡಿಕೆ.

14) ಲ್ಯಾಮ್ ರಿಸರ್ಚ್ – ಸೆಮಿಕಂಡಕ್ಟರ್‌ ಉಪಕರಣಗಳ ತಯಾರಿಕೆಗೆ ₹ 10,000 ಕೋಟಿ ಹೂಡಿಕೆ

15) ಆಂಪಿನ್‌ ಎನರ್ಜಿ ಟ್ರಾನ್ಸಿಷನ್ ಪ್ರೈವೇಟ್ ಲಿಮಿಟೆಡ್ – ₹10,000 ಕೋಟಿ ಹೂಡಿಕೆ.

16) ಎಸಿಎಂಇ ಸೋಲಾರ್ ಹೋಲ್ಡಿಂಗ್ಸ್ ಲಿಮಿಟೆಡ್ – ₹ 10,000 ಕೋಟಿ ಹೂಡಿಕೆ

17) ಔ2 ಪವರ್ ಪ್ರೈವೇಟ್‌ ಲಿಮಿಟೆಡ್ – ನವೀಕರಿಸಬಹುದಾದ ಇಂಧನ ಸೌರ ಮತ್ತು ಪವನ ಯೋಜನೆಗಳ ಸ್ಥಾಪನೆಗೆ ₹ 10,000 ಕೋಟಿ ಹೂಡಿಕೆ

18) ಕಾಂಟಿನುಮ್‌ ಗ್ರೀನ್ ಎನರ್ಜಿ ಜಿಪಿ – ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಅಭಿವೃದ್ಧಿಪಡಿಸಲು ₹ 10,000 ಕೋಟಿ ಹೂಡಿಕೆ

19) ಸೋಟೆಫಿನ್ ಭಾರತ್ – ಸಂಪೂರ್ಣ ಸ್ವಯಂಚಾಲಿತ ರೊಬೊಟಿಕ್ ಬಹುಮಹಡಿ ಕಾರ್ ಮತ್ತು ಬಸ್ ಪಾರ್ಕಿಂಗ್ ವ್ಯವಸ್ಥೆಗಳ ನಿರ್ಮಾಣ ಮತ್ತು ಸ್ಥಾಪನೆಗೆ ₹ 8,500 ಕೋಟಿ ಹೂಡಿಕೆ

20) ಶ್ರೀ ಸಿಮೆಂಟ್ ಲಿಮಿಟೆಡ್ – ಇಂಟೆಗ್ರೇಟೆಡ್‌ ಸ್ಥಾವರ ಮತ್ತು ಕ್ಲಿಂಕರ್ ಗ್ರೈಂಡಿಂಗ್ ಘಟಕಕ್ಕೆ ₹ 8,350 ಕೋಟಿ ಹೂಡಿಕೆ

21) ಹೆಕ್ಸಾ ಕ್ಲೈಮೇಟ್ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್ – ₹ 8,000 ಕೋಟಿ ಹೂಡಿಕೆ

Scroll to Top