News Kadaba

ರಿಲಯನ್ಸ್ ಜಿಯೋ ಸಣ್ಣ ಅಂಗಡಿಗಳು, ಕಿರು ಉದ್ಯಮಗಳಿಗಾಗಿ 24/7 ಕಾರ್ಯನಿರ್ವಹಿಸುವ ಎಐ ಸಹಾಯಕ

(ನ್ಯೂಸ್‌ ಕಡಬ) newskadaba.com,  ಅ .13. ಸಣ್ಣ ಅಂಗಡಿಯವರು ತಮ್ಮ ವ್ಯವಹಾರಗಳನ್ನು ಬೆಳೆಸಲು ಸಹಾಯ ಮಾಡುವುದಕ್ಕಾಗಿ ರಿಲಯನ್ಸ್ ಜಿಯೋ ಎಐ ಸಹಾಯಕವನ್ನು ಪರಿಚಯಿಸಿದೆ. ಈ ಎಐ ಸಹಾಯಕವು ದಿನದ 24 ಗಂಟೆಯೂ ನೆರವಾಗುತ್ತದೆ. ಗ್ರಾಹಕರ ಕರೆಗಳನ್ನು ಸ್ವೀಕರಿಸುವುದು, ಆರ್ಡರ್ ಗಳನ್ನು ತೆಗೆದುಕೊಳ್ಳುವುದು, ಪ್ರಶ್ನೆಗಳಿಗೆ ಉತ್ತರಿಸುವುದು, ಆರ್ಡರ್ ಗಳನ್ನು ಪ್ರೊಸೆಸ್ ಮಾಡುವುದು, ಇತ್ಯಾದಿ ಎಲ್ಲವನ್ನೂ ತಪ್ಪದೆ ಮಾಡುತ್ತದೆ. ರಿಲಯನ್ಸ್ ಜಿಯೋ ಈ ತಂತ್ರಜ್ಞಾನವನ್ನು ಇಂಡಿಯಾ ಮೊಬೈಲ್ ಕಾಂಗ್ರೆಸ್ 2025ರಲ್ಲಿ ಪ್ರದರ್ಶಿಸಿತು.. ಕಿರು ಉದ್ಯಮಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಜಿಯೋ ಏಜೆಂಟಿಕ್ […]

ರಿಲಯನ್ಸ್ ಜಿಯೋ ಸಣ್ಣ ಅಂಗಡಿಗಳು, ಕಿರು ಉದ್ಯಮಗಳಿಗಾಗಿ 24/7 ಕಾರ್ಯನಿರ್ವಹಿಸುವ ಎಐ ಸಹಾಯಕ Read More »

ಬ್ರೇಕಿಂಗ್ ನ್ಯೂಸ್

ಕರ್ನಾಟಕದಾದ್ಯಂತ ಸೈಬರ್ ವಂಚನೆ: ನಾಗರಿಕರು ನಕಲಿ ಇ-ಚಲನ್ ಹಗರಣಕ್ಕೆ ಬಲಿ

(ನ್ಯೂಸ್‌ ಕಡಬ) newskadaba.com,  ಅ .13 ಬೆಳಗಾವಿ:  ಸೈಬರ್ ವಂಚನೆಯ ಹೊಸ ಅಲೆಯೇ ಹರಡಿದ್ದು ಬೆಳಗಾವಿ, ಬೆಂಗಳೂರು, ಶಿವಮೊಗ್ಗ ಮತ್ತು ಇತರ ಜಿಲ್ಲೆಗಳ ನಾಗರಿಕರು ನಕಲಿ ಇ-ಚಲನ್ ಹಗರಣಕ್ಕೆ ಬಲಿಯಾಗುತ್ತಿದ್ದಾರೆ.ಸೈಬರ್ ಅಪರಾಧಿಗಳು ಅಧಿಕೃತ ಪೊಲೀಸ್ ಚಲನ್ ಅಧಿಸೂಚನೆಗಳಂತೆ ಮೋಸಗೊಳಿಸುವ APK ಫೈಲ್‌ಗಳನ್ನು ಕಳುಹಿಸುವ ಮೂಲಕ ಸಂಚಾರ ದಂಡ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅನುಮಾನಾಸ್ಪದ ಫೈಲ್‌ಗಳ ಮೇಲೆ ಕ್ಲಿಕ್ ಮಾಡಿದ ಬಳಿಕ, ಮಾಲ್‌ವೇರ್ ಅವರ ಫೋನ್‌ಗಳನ್ನು ನಿಯಂತ್ರಿಸುತ್ತದೆ, ವಂಚಕರಿಗೆ ಬ್ಯಾಂಕ್ ಖಾತೆ ವಿವರಗಳು ಸೇರಿದಂತೆ ಸೂಕ್ಷ್ಮ ಡೇಟಾವನ್ನು ಪ್ರವೇಶಿಸಲು

ಕರ್ನಾಟಕದಾದ್ಯಂತ ಸೈಬರ್ ವಂಚನೆ: ನಾಗರಿಕರು ನಕಲಿ ಇ-ಚಲನ್ ಹಗರಣಕ್ಕೆ ಬಲಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಮತ್ತೊಂದು ಭೀಕರ ಮರ್ಡರ್

(ನ್ಯೂಸ್‌ ಕಡಬ) newskadaba.com,  ಅ .13 ವಿಜಯಪುರ : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವ ಘಟನೆಯೊಂದು ವಿಜಯಪುರದಲ್ಲಿ ನಡೆದಿದೆ. ವಿಜಯಪುರ ತಾಲೂಕಿನ ಕನ್ನೂರು ಗ್ರಾಮದಲ್ಲಿ ಯುವಕರಿಬ್ಬರ ಬರ್ಬರ ಹತ್ಯೆ  ನಡೆದಿದೆ. ಹಳೇ ದ್ವೇಷ ಹಿನ್ನೆಲೆ ಕಲ್ಲಿನಿಂದ ಜಜ್ಜಿ ಇಬ್ಬರು ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸಾಗರ್ ಬೆಳುಂಡಗಿ (25), ಇಸಾಕ್ ಖುರೇಶಿ (24) ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಎರಡು ವರ್ಷದ ಹಿಂದೆ ಗ್ರಾಮದ ಈರಣ್ಣಗೌಡ ಮೇಲೆ ಕೊಲೆಯಾದ ಸಾಗರ್ ಹಾಗೂ ಇಸಾಕ್ ಹಲ್ಲೆ ನಡೆಸಿದ್ದರು.

ರಾಜ್ಯದಲ್ಲಿ ಮತ್ತೊಂದು ಭೀಕರ ಮರ್ಡರ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪಾಕಿಸ್ತಾನದ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಉಗ್ರರ ದಾಳಿ; ಏಳು ಪೊಲೀಸರು ಸಾವು

(ನ್ಯೂಸ್‌ ಕಡಬ) newskadaba.com,  ಅ.11:  ಇಸ್ಲಾಮಾಬಾದ್‌: ಖೈಬರ್ ಪಖ್ತುಂಖ್ವಾ ಬಳಿಯ ಪಾಕಿಸ್ತಾನ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಟಿಟಿಪಿ ಉಗ್ರರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಮೂವರು ಭಯೋತ್ಪಾದಕರು ಹಾಗೂ ಏಳು ಪೊಲೀಸರು ಸಾವನ್ನಪ್ಪಿದ್ದಾರೆ. ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ರಟ್ಟಾ ಕುಲಾಚಿ ಪೊಲೀಸ್ ತರಬೇತಿ ಶಾಲೆಯ ಮೇಲೆ ದಾಳಿ ನಡೆದಿತ್ತು. ದಾಳಿಯ ನಂತರ ಪೊಲೀಸ್ ಸಿಬ್ಬಂದಿ ನಡೆಸಿದ ಪ್ರತೀಕಾರದ ಗುಂಡಿನ ದಾಳಿಯಲ್ಲಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದರು ಮತ್ತು ಇನ್ನೂ ಕೆಲವರು ಕಾಂಪೌಂಡ್ ಒಳಗೆ ಅಡಗಿಕೊಂಡಿದ್ದಾರೆ ಎಂದು ಹೇಳಲಾಗಿದೆ. ದಾಳಿಯಲ್ಲಿ ಸಾವನ್ನಪ್ಪಿದ ಭದ್ರತಾ

ಪಾಕಿಸ್ತಾನದ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಉಗ್ರರ ದಾಳಿ; ಏಳು ಪೊಲೀಸರು ಸಾವು Read More »

ಬ್ರೇಕಿಂಗ್ ನ್ಯೂಸ್

ಭರ್ಜರಿ ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಯಶಸ್ವಿ ಜೈಸ್ವಾಲ್

(ನ್ಯೂಸ್‌ ಕಡಬ) newskadaba.com,  ಅ.11 ಮುಂಬೈ: ಸೌತ್ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ ಅವರು 23ನೇ ವಯಸ್ಸಿನಲ್ಲಿ ಬರೆದ ವರ್ಲ್ಡ್ ರೆಕಾರ್ಡ್ ಅನ್ನು ಮುರಿದು, ಭಾರತ ತಂಡದ ಯಂಗ್ ಬ್ಯಾಟರ್ ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಯಶಸ್ವಿ ಜೈಸ್ವಾಲ್ 253 ಎಸೆತಗಳಲ್ಲಿ 173 ರನ್ ಗಳಿಸಿದ್ದರು. ಈ ಉತ್ತಮ

ಭರ್ಜರಿ ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಯಶಸ್ವಿ ಜೈಸ್ವಾಲ್ Read More »

ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹಾಸನಾಂಬೆಗೆ ಜಾತ್ರಾ ಮಹೋತ್ಸವಕ್ಕೆ ಕೆಎಸ್‌‍ಆರ್‌ಟಿಸಿ ವಿಶೇಷ ಬಸ್‌‍ ಟೂರ್‌ ಪ್ಯಾಕೇಜ್‌

(ನ್ಯೂಸ್‌ ಕಡಬ) newskadaba.com,  ಅ.11 ಬೆಂಗಳೂರು: ಹಾಸನಾಂಬ ದರ್ಶನೋತ್ಸವಕ್ಕೆ ಭಕ್ತರು ಹಾಗೂ ಪ್ರವಾಸಿಗರಿಗೆ ಪ್ರವಾಸಿತಾಣಗಳನ್ನು ಪರಿಚಯಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವತಿಯಿಂದ ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಸ್ಥಳಗಳಿಂದ ಟೂರ್‌ ಪ್ಯಾಕೇಜ್‌ ಕಲ್ಪಿಸಿದೆ. ವೋಲ್ವೋ, ಅಶ್ವಮೇಧ ಹಾಗೂ ಕರ್ನಾಟಕ ಸಾರಿಗೆಗಳಲ್ಲಿ ಟೂರ್‌ ಪ್ಯಾಕೇಜ್‌ ರೂಪಿಸಿದ್ದು, ಅ.22ರವರೆಗೆ ಈ ಸೌಲಭ್ಯವಿರುತ್ತದೆ. ಬೆಂಗಳೂರಿನಿಂದ ವೋಲ್ವೊ ಬಸ್‌‍ ಮೂಲಕ ಹಾಸನ ತಲುಪಿ, ಹಾಸನಾಂಬೆದೇವಿ, ಸಿದ್ದೇಶ್ವರ ದೇವಾಲಯ, ದೇವಿಗೆರೆ ಕಲ್ಯಾಣಿ, ಕೆಂಚಮನ ಹೊಸಕೋಟೆ ದೇವಾಲಯದ ಸ್ಥಳಗಳನ್ನು ವೀಕ್ಷಿಸಬಹುದಾಗಿದ್ದು, ಒಟ್ಟು 470

ಹಾಸನಾಂಬೆಗೆ ಜಾತ್ರಾ ಮಹೋತ್ಸವಕ್ಕೆ ಕೆಎಸ್‌‍ಆರ್‌ಟಿಸಿ ವಿಶೇಷ ಬಸ್‌‍ ಟೂರ್‌ ಪ್ಯಾಕೇಜ್‌ Read More »

ಕರ್ನಾಟಕ

‘ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಲೈಂಗಿಕ ಶಿಕ್ಷಣ ನೀಡಬೇಕು’- ಸುಪ್ರೀಂ ಕೋರ್ಟ್‌ ಆದೇಶ

(ನ್ಯೂಸ್‌ ಕಡಬ) newskadaba.com,  ಅ.11:  ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವ ಕುರಿತು ಬಹಳ ಸಮಯದಿಂದ ಚರ್ಚೆಯಲ್ಲಿದೆ. ಅನೇಕರು ಇದನ್ನು ಒಪ್ಪಿಕೊಂಡರೇ , ಇನ್ನು ಕೆಲವು ಜನರು ಇದನ್ನು ವಿರೋಧಿಸಿದ್ದಾರೆ. ಮನೋವೈದ್ಯರು ಸರಿಯಾದ ಸಮಯದಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ಒದಗಿಸಬೇಕೆಂದು ಪ್ರತಿಪಾದಿಸುತ್ತಾರೆ. ಇದರ ಮಧ್ಯೆ, ಇದೀಗ ಸುಪ್ರೀಂ ಕೋರ್ಟ್ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ನೀಡುವ ಮಹತ್ವದ ಬಗ್ಗೆ ಪ್ರಮುಖವಾದ ಆದೇಶವನ್ನು ಹೊರಡಿಸಿದೆ. 9 ನೇ ತರಗತಿಯಿಂದ ಪ್ರಾರಂಭಿಸುವ ಬದಲು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಶಾಲಾ ಪಠ್ಯಕ್ರಮದಲ್ಲಿ ಲೈಂಗಿಕ

‘ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಲೈಂಗಿಕ ಶಿಕ್ಷಣ ನೀಡಬೇಕು’- ಸುಪ್ರೀಂ ಕೋರ್ಟ್‌ ಆದೇಶ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಓಲಾ ಸ್ಕೂಟರ್ ಶೋರೂಂ ಹೊರಗೇ ನಿಂತು ಸ್ಕೂಟರ್‌ಗೆ ಬೆಂಕಿ ಹಚ್ಚಿದ ವ್ಯಕ್ತಿ

(ನ್ಯೂಸ್‌ ಕಡಬ) newskadaba.com,  ಅ.11 ಅಹಮದಾಬಾದ್:  ಶೋರೂಂವೊಂದರ ಹೊರಗೆ ನಿಂತಿದ್ದ ವ್ಯಕ್ತಿಯೊಬ್ಬ ತನ್ನ ವಾಹನಕ್ಕೆ ಬೆಂಕಿ ಹಚ್ಚಿದ ಘಟನೆ ಗುಜರಾತ್‌ನ ಪಾಲನ್‌ಪುರದಲ್ಲಿ ನಡೆದಿದೆ. ಕೆಲವೇ ನಿಮಿಷಗಳಲ್ಲಿ ನಡೆದ ಘಟನೆಯ ದೃಶ್ಯಾವಳಿ ಕ್ಯಾಮರಾದಲ್ಲಿ ಸೆರೆಯಾಯಿತು. ಏನಾಯಿತು ಎಂದು ಯಾರಾದರೂ ಅರ್ಥಮಾಡಿಕೊಳ್ಳುವ ಮೊದಲೇ, ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಆಘಾತ ಮತ್ತು ಕುತೂಹಲಕ್ಕೆ ದೂಡಿತು. ಆ ವ್ಯಕ್ತಿಯು ತುಂಬಾ ನಿರಾಶೆಗೊಂಡಿದ್ದ. ತನ್ನ ಓಲಾ ಸ್ಕೂಟರ್ ಸವಾರಿಗಿಂತ ಹೆಚ್ಚಿನ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಅವನು ಹೇಳಿಕೊಂಡಿದ್ದಾನೆ. ವರದಿ ಪ್ರಕಾರ, ತನ್ನ

ಓಲಾ ಸ್ಕೂಟರ್ ಶೋರೂಂ ಹೊರಗೇ ನಿಂತು ಸ್ಕೂಟರ್‌ಗೆ ಬೆಂಕಿ ಹಚ್ಚಿದ ವ್ಯಕ್ತಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸರ್ಕಾರದಿಂದಲೇ ಆ್ಯಂಬುಲೆನ್ಸ್‌ ಸೇವೆ : 3,691 ಸಿಬ್ಬಂದಿ ನೇಮಕಕ್ಕೆ ಒಪ್ಪಿಗೆ

(ನ್ಯೂಸ್‌ ಕಡಬ) newskadaba.com,  ಅ.11:  ರಾಜ್ಯದಲ್ಲಿ ಮೊದಲ ಬಾರಿಗೆ ‘108-ಆರೋಗ್ಯ ಕವಚ’ ಹಾಗೂ ‘104-ಆರೋಗ್ಯ ಸಹಾಯವಾಣಿ’ ಯೋಜನೆಯನ್ನು ಆರೋಗ್ಯ ಇಲಾಖೆ ವತಿಯಿಂದಲೇ ಜಾರಿಗೊಳಿಸುತ್ತಿದ್ದು, ಇದಕ್ಕೆ ಅಗತ್ಯವಿರುವ 3,691 ಸಿಬ್ಬಂದಿಯನ್ನು ಗುತ್ತಿಗೆ ಹಾಗೂ ಹೊರಗುತ್ತಿಗೆ ಅಡಿ ಪಡೆಯಲು ಮಂಜೂರಾತಿ ನೀಡಲಾಗಿದೆ. ಬೆಳಗ್ಗೆ ಹಾಗೂ ಮಧ್ಯಾಹ್ನದ ಅವಧಿ ಶಿಫ್ಟ್‌, ರಾತ್ರಿ ಪಾಳಿ ಶಿಫ್ಟ್‌ ಸೇರಿ 1,700 ಪೈಲಟ್‌ (ಚಾಲಕರು) 1,700 ಇಎಂಟಿ (ತುರ್ತು ಚಿಕಿತ್ಸಾ ತಂತ್ರಜ್ಞ), ಜಿಲ್ಲಾ ವ್ಯವಸ್ಥಾಪಕರು ಹಾಗೂ ಫ್ಲೀಟ್‌ ವ್ಯವಸ್ಥಾಪಕರು 62, ಎಸ್‌ಪಿಎಂ ಸಿಬ್ಬಂದಿ 5 ಮಂದಿ

ಸರ್ಕಾರದಿಂದಲೇ ಆ್ಯಂಬುಲೆನ್ಸ್‌ ಸೇವೆ : 3,691 ಸಿಬ್ಬಂದಿ ನೇಮಕಕ್ಕೆ ಒಪ್ಪಿಗೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾರ್ಕಳದ ಯುವಕನ ಆತ್ಮಹತ್ಯೆ ಪ್ರಕರಣ; ತನಿಖೆಗಾಗಿ ನಾಲ್ವರು ಗೆಳೆಯರ ಮೊಬೈಲ್ ವಶಕ್ಕೆ

(ನ್ಯೂಸ್‌ ಕಡಬ) newskadaba.com,  ಅ.11 ಕಾರ್ಕಳ: ಸ್ನೇಹಿತರಿಂದ ಬ್ಲಾಕ್‌ಮೇಲ್‌ಗೆ ಒಳಗಾದ ಬಗ್ಗೆ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿರುವ ನಿಟ್ಟೆಯ ಯುವಕನ ಪ್ರಕರಣದ ಕುರಿತು ಪೊಲೀಸರ ತನಿಖೆ ಮುಂದುವರಿದಿದ್ದು, ನಾಲ್ವರು ಗೆಳೆಯರ ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅವುಗಳನ್ನು ವಿವಿಧ ತಾಂತ್ರಿಕ ಆಯಾಮದಲ್ಲಿ ಪರಿಶೀಲಿಸಲಾಗುತ್ತಿದೆ. ನಿಟ್ಟೆ ಗ್ರಾಮದ ಪರಪ್ಪಾಡಿ ನಿವಾಸಿ ಅಭಿಷೇಕ್ ಆಚಾರ್ಯ (23) ಮೃತ ಯುವಕ. ಅವರು ಗುರುವಾರ ಬೆಳ್ಮಣ್‌ನಲ್ಲಿರುವ ಖಾಸಗಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಥಮಿಕ

ಕಾರ್ಕಳದ ಯುವಕನ ಆತ್ಮಹತ್ಯೆ ಪ್ರಕರಣ; ತನಿಖೆಗಾಗಿ ನಾಲ್ವರು ಗೆಳೆಯರ ಮೊಬೈಲ್ ವಶಕ್ಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top