ಸರ್ಕಾರದಿಂದಲೇ ಆ್ಯಂಬುಲೆನ್ಸ್‌ ಸೇವೆ : 3,691 ಸಿಬ್ಬಂದಿ ನೇಮಕಕ್ಕೆ ಒಪ್ಪಿಗೆ

(ನ್ಯೂಸ್‌ ಕಡಬ) newskadaba.com,  ಅ.11:  ರಾಜ್ಯದಲ್ಲಿ ಮೊದಲ ಬಾರಿಗೆ ‘108-ಆರೋಗ್ಯ ಕವಚ’ ಹಾಗೂ ‘104-ಆರೋಗ್ಯ ಸಹಾಯವಾಣಿ’ ಯೋಜನೆಯನ್ನು ಆರೋಗ್ಯ ಇಲಾಖೆ ವತಿಯಿಂದಲೇ ಜಾರಿಗೊಳಿಸುತ್ತಿದ್ದು, ಇದಕ್ಕೆ ಅಗತ್ಯವಿರುವ 3,691 ಸಿಬ್ಬಂದಿಯನ್ನು ಗುತ್ತಿಗೆ ಹಾಗೂ ಹೊರಗುತ್ತಿಗೆ ಅಡಿ ಪಡೆಯಲು ಮಂಜೂರಾತಿ ನೀಡಲಾಗಿದೆ.

ಬೆಳಗ್ಗೆ ಹಾಗೂ ಮಧ್ಯಾಹ್ನದ ಅವಧಿ ಶಿಫ್ಟ್‌, ರಾತ್ರಿ ಪಾಳಿ ಶಿಫ್ಟ್‌ ಸೇರಿ 1,700 ಪೈಲಟ್‌ (ಚಾಲಕರು) 1,700 ಇಎಂಟಿ (ತುರ್ತು ಚಿಕಿತ್ಸಾ ತಂತ್ರಜ್ಞ), ಜಿಲ್ಲಾ ವ್ಯವಸ್ಥಾಪಕರು ಹಾಗೂ ಫ್ಲೀಟ್‌ ವ್ಯವಸ್ಥಾಪಕರು 62, ಎಸ್‌ಪಿಎಂ ಸಿಬ್ಬಂದಿ 5 ಮಂದಿ ನೇಮಕ ಮಾಡಲಾಗುವುದು.

ಸಹಾಯವಾಣಿ ಸ್ಥಾಪನೆ ಮಾಡಿ ನಿರ್ವಹಣೆ ಮಾಡಲು ಕೇಂದ್ರೀಕೃತ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್‌, ಜಿಲ್ಲಾ ಕಂಟ್ರೋಲ್‌ ರೂಂ ಸ್ಥಾಪಿಸಿ ಆಡಳಿತ ಸಿಬ್ಬಂದಿ, ನಿರ್ವಹಣಾ ಸಿಬ್ಬಂದಿ, ಕಾಲ್‌ ಸೆಂಟರ್ ಸಿಬ್ಬಂದಿ, ತಂತ್ರಜ್ಞರು ಸೇರಿ ವಿವಿಧ ಸಿಬ್ಬಂದಿ ನೇಮಿಸಬೇಕಿದೆ. ಹೀಗಾಗಿ 224 ಮಂದಿ ಸಿಬ್ಬಂದಿ ನೇಮಿಸಲು ಆರೋಗ್ಯ ಇಲಾಖೆ ಒಪ್ಪಿಗೆ ನೀಡಿದೆ

Scroll to Top