News Kadaba

ಟಿಪ್ಪು ಸುಲ್ತಾನ್, ಸಿದ್ದರಾಮಯ್ಯರವರ ಅವಹೇಳನ ► ಉಪ್ಪಿನಂಗಡಿ ಯುವ ಕಾಂಗ್ರೆಸ್ ನಿಂದ ದೂರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.27. ಸ್ವಾತಂತ್ರ ಸೇನಾನಿ ಟಿಪ್ಪು ಸುಲ್ತಾನ್ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಅಸಹ್ಯವಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ ಎಂದು ಆರೋಪಿಸಿ ಉಪ್ಪಿನಂಗಡಿ ಪರಿಸರದ ಇಬ್ಬರ ಮೇಲೆ ಯುವ ಕಾಂಗ್ರೆಸ್ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದೆ. 34ನೇ ನೆಕ್ಕಿಲಾಡಿಯಲ್ಲಿನ ಕಾರ್ ಕ್ಲಬ್ ಮಾಲಕ ಸದಾನಂದ ಹಾಗೂ ಯೊಗೀಶ್ ಪ್ರಭು ಅವರ ಮೇಲೆ ದೂರು ದಾಖಲಾಗಿದ್ದು, ಯೊಗೀಶ್ ಪ್ರಭು ಎಂಬವರು ಸ್ವಾತಂತ್ರ್ಯ ಸೇನಾನಿ ಟಿಪ್ಪು ಸುಲ್ತಾನ್ ಹಾಗೂ ಕರ್ನಾಟಕದ ಮುಖ್ಯಮಂತ್ರಿ […]

ಟಿಪ್ಪು ಸುಲ್ತಾನ್, ಸಿದ್ದರಾಮಯ್ಯರವರ ಅವಹೇಳನ ► ಉಪ್ಪಿನಂಗಡಿ ಯುವ ಕಾಂಗ್ರೆಸ್ ನಿಂದ ದೂರು Read More »

ಕರಾವಳಿ

ಪ್ರಧಾನಿ ಮೋದಿ ಧರ್ಮಸ್ಥಳ ಭೇಟಿ ಹಿನ್ನೆಲೆ ► ಧರ್ಮಸ್ಥಳದ ಸುತ್ತ ‘ನ್ಯೂಸ್ ಕಡಬ’ದ ಒಂದು ನೋಟ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ.27.  ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 29 ಭಾನುವಾರದಂದು ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದು, ಕಾರ್ಯಕ್ರಮ ಸಿದ್ಧತೆ ಬಿರುಸಿನಿಂದ ಸಾಗಿದೆ. ಭದ್ರತೆ, ವಾಹನ ಪಾರ್ಕಿಂಗ್, ಮೂಲಭೂತ ಸೌಕರ್ಯಗಳನ್ನು ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ನಿಭಾಯಿಸಲು ರೂಪುರೇಷೆ ತಯಾರಿಸಲಾಗಿದೆ. ಭದ್ರತೆಗೆ ಸಜ್ಜಾಗಿದೆ ಖಾಕಿ ಪಡೆ, ಸಿಸಿ ಕ್ಯಾಮೆರಾ ಕಣ್ಗಾವಲು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ನೀಡಲಿರುವ ಉಜಿರೆ ಹಾಗೂ ಧರ್ಮಸ್ಥಳದಲ್ಲಿ ಬಿಗಿ ಭದ್ರತೆಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಸುಮಾರು 2,500 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುತ್ತಿದೆ. ಆಯಕಟ್ಟಿನ

ಪ್ರಧಾನಿ ಮೋದಿ ಧರ್ಮಸ್ಥಳ ಭೇಟಿ ಹಿನ್ನೆಲೆ ► ಧರ್ಮಸ್ಥಳದ ಸುತ್ತ ‘ನ್ಯೂಸ್ ಕಡಬ’ದ ಒಂದು ನೋಟ Read More »

ರಾಷ್ಟ್ರೀಯ ನ್ಯೂಸ್

ಶೀಘ್ರವೇ ಮರಳು ಸಾಗಾಟ ನಡೆಸಲು ಅನುಮತಿ ನೀಡುವಂತೆ ಆಗ್ರಹ ► ಕಡಬ ತಾಲ್ಲೂಕು ಟೆಂಪೊ ಚಾಲಕ ಮಾಲಕರ ಸಂಘದಿಂದ ತಹಶಿಲ್ದಾರರಿಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಅ.27. ಸರಕಾರವು ಟೆಂಪೋಗಳಲ್ಲಿ ಮರಳನ್ನು ಸಾಗಿಸಲು ಶೀಘ್ರದಲ್ಲೇ ಅನುಮತಿ ನೀಡಬೇಕು ಎಂದು ಕಡಬ ತಾಲ್ಲೂಕು ಟೆಂಪೋ ಚಾಲಕ ಮಾಲಕರ ಸಂಘದ ವತಿಯಿಂದ ಕಡಬ ತಹಶಿಲ್ದಾರರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಲಾಯಿತು. ಕಡಬ ಪರಿಸರದಲ್ಲಿ ಸುಮಾರು 32 ಟೆಂಪೋ ವಾಹನಗಳಿದ್ದು, ಟೆಂಪೋದಲ್ಲಿ ಮರಳನ್ನು ಸಾಗಾಟ ಮಾಡುವ ಮೂಲಕ ಕುಟುಂಬವನ್ನು ನಿರ್ವಹಿಸುತ್ತಾ ಬಂದಿರುತ್ತೇವೆ. ಆದರೆ ಸರಕಾರವು ಏಕಾಏಕಿ ಮರಳು ಸಾಗಾಟ ಮಾಡಲು ಅನುಮತಿ ನಿರಾಕರಿಸಿದ್ದು, ಇದರಿಂದಾಗಿ ಮರಳು‌ಲೋಡು ಮಾಡುತ್ತಿರುವ ಸುಮಾರು 250

ಶೀಘ್ರವೇ ಮರಳು ಸಾಗಾಟ ನಡೆಸಲು ಅನುಮತಿ ನೀಡುವಂತೆ ಆಗ್ರಹ ► ಕಡಬ ತಾಲ್ಲೂಕು ಟೆಂಪೊ ಚಾಲಕ ಮಾಲಕರ ಸಂಘದಿಂದ ತಹಶಿಲ್ದಾರರಿಗೆ ಮನವಿ Read More »

ಕರಾವಳಿ

ಮಾ.01ರಿಂದ ದ್ವಿತೀಯ ಪಿಯು ಪರೀಕ್ಷೆ ► ವೇಳಾಪಟ್ಟಿ ಆಕ್ಷೇಪಣೆಗೆ ಒಂದು ತಿಂಗಳ ಕಾಲಾವಕಾಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.27. 2017-18ನೆ ಸಾಲಿನ ದ್ವಿತೀಯ ಪಿಯು ಪರೀಕ್ಷೆಯನ್ನು ಮಾ.1ರಿಂದ ಮಾ.16ರವರೆಗೆ ನಡೆಸಲು ಉದ್ದೇಶಿಸಲಾಗಿದ್ದು, ಈ ವೇಳಾಪಟ್ಟಿಗೆ ಆಕ್ಷೇಪಗಳಿದ್ದಲ್ಲಿ ನ.24ರೊಳಗೆ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಬಹುದಾಗಿದೆ. ವೇಳಾ ಪಟ್ಟಿ: ಮಾ.1: ಅರ್ಥಶಾಸ್ತ್ರ, ಭೌತಶಾಸ್ತ್ರ ಮಾ.2: ಮನಃಶಾಸ್ತ್ರ, ಇಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ ಮಾ.3: ಹಿಂದಿ, ತೆಲಗು, ಮರಾಠಿ, ಫ್ರೆಂಚ್ ಮಾ.5: ವ್ಯವಹಾರ ಅಧ್ಯಯನ, ಜೀವಶಾಸ್ತ್ರ ಮಾ.6: ರಾಜ್ಯಶಾಸ್ತ್ರ ಮಾ.7: ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೋಟೀವ್, ಹೆಲ್ತ್‌ಕೇರ್, ಬ್ಯೂಟಿ ಮತ್ತು ವೆಲ್‌ನೆಸ್ ಮಾ.8:

ಮಾ.01ರಿಂದ ದ್ವಿತೀಯ ಪಿಯು ಪರೀಕ್ಷೆ ► ವೇಳಾಪಟ್ಟಿ ಆಕ್ಷೇಪಣೆಗೆ ಒಂದು ತಿಂಗಳ ಕಾಲಾವಕಾಶ Read More »

ಕರ್ನಾಟಕ

ಮಂಗಳೂರು: ಅಂತರ್ರಾಜ್ಯ ಮಾದಕ ವಸ್ತುಗಳ ಮಾರಾಟ ಜಾಲ ಪತ್ತೆ ► ನಾಲ್ವರ ಬಂಧನ, ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.27. ಮಾದಕ ವಸ್ತುಗಳಾದ ಎಲ್.ಎಸ್.ಡಿ., ಎಂ.ಡಿ.ಎಂ.ಎ., ಮತ್ತು ಎಂ.ಡಿ.ಎಂ. ಟ್ಯಾಬ್ಲೆಟ್ ಗಳನ್ನು ಮಾರಾಟ ಮಾಡುತ್ತಿದ್ದ, ಅಂತಾರಾಜ್ಯ ಜಾಲವನ್ನು ಭೇದಿಸಿರುವ ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳ ಅಧಿಕಾರಿ ಮತ್ತು ರೌಡಿ ನಿಗ್ರಹದಳದ ತಂಡ ಆರೋಪಿಗಳನ್ನು ಬಂಧಿಸಿದ ಘಟನೆ ಗುರುವಾರ ಸಮಜೆ ನಡೆದಿದೆ. ಬಂಧಿತ ಆರೋಪಿಗಳನ್ನು ಕಾಸರಗೋಡು ಕಾಞಿಂಗಾಡ್ ರೈಲ್ವೆ ನಿಲ್ದಾಣ ಬಳಿಯ ನಿಖಿಲ್.ಕೆ.ಬಿ (24), ಕುಲಶೇಖರದ ಶ್ರವಣ ಪೂಜಾರಿ (23), ಕೇರಳ ಕಣ್ಣೂರಿನ ರೋಶನ್ ವೇಗಸ್ (22) ಮತ್ತು ಕೇರಳ ತ್ರಿಶೂರಿನ

ಮಂಗಳೂರು: ಅಂತರ್ರಾಜ್ಯ ಮಾದಕ ವಸ್ತುಗಳ ಮಾರಾಟ ಜಾಲ ಪತ್ತೆ ► ನಾಲ್ವರ ಬಂಧನ, ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ Read More »

ಕರಾವಳಿ

ಮಾ. 23 ರಿಂದ ಎಸೆಸೆಲ್ಸಿ ಪರೀಕ್ಷೆ ಪ್ರಾರಂಭ ► ಆಕ್ಷೇಪಣೆಗೆ ಒಂದು ತಿಂಗಳ ಕಾಲಾವಕಾಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.27. ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಪ್ರಕಟಿಸಿದ್ದು, 2018 ರ ಮಾರ್ಚ್ 23 ರಿಂದ ಏಪ್ರಿಲ್ 4 ರವರೆಗೆ ಪರೀಕ್ಷೆ ನಡೆಯಲಿದೆ. ಮಾರ್ಚ್ 23 ರಂದು ಪ್ರಥಮ ಭಾಷೆ ಕನ್ನಡ ಪರೀಕ್ಷೆ ನಡೆಯಲಿದ್ದು, 26 ರಂದು ಗಣಿತ, 28 ರಂದು ಇಂಗ್ಲೀಷ್, 29 ರಂದು ವಿಜ್ಞಾನ, ಏಪ್ರಿಲ್ 2 ರಂದು ಹಿಂದಿ ಅಥವಾ ತೃತೀಯ ಭಾಷೆ ಹಾಗೂ ಎಪ್ರಿಲ್ 4 ರಂದು ಸಮಾಜ

ಮಾ. 23 ರಿಂದ ಎಸೆಸೆಲ್ಸಿ ಪರೀಕ್ಷೆ ಪ್ರಾರಂಭ ► ಆಕ್ಷೇಪಣೆಗೆ ಒಂದು ತಿಂಗಳ ಕಾಲಾವಕಾಶ Read More »

ಕರ್ನಾಟಕ

ಮಕ್ಕಾ ಮಸೀದಿ ಅವಹೇಳನ ಪ್ರಕರಣದಲ್ಲಿ ಅಮಾಯಕ ಯುವಕರ ಫಿಕ್ಸ್ ಆರೋಪ ► ಹಿಂದೂಪರ ಸಂಘಟನೆಗಳ ವತಿಯಿಂದ ಶನಿವಾರ ಕಡಬ ಬಂದ್ ಗೆ ಕರೆ

(ನ್ಯೂಸ್ ಕಡಬ) newskadaba.com ಕಡಬ, ಅ.26. ವಾಟ್ಸಾಪ್ ನಲ್ಲಿ ಮುಸ್ಲಿಮರ ಪವಿತ್ರ ಕ್ಷೇತ್ರವಾದ ಮಕ್ಕಾ ಮಸೀದಿಯ ಅವಹೇಳನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿತ ವ್ಯಕ್ತಿಯನ್ನು ಪೋಲಿಸರಿಗೆ ಒಪ್ಪಿಸಿದರೂ ಅಮಾಯಕ ಹಿಂದೂ ಕಾರ್ಯಕರ್ತರನ್ನು ಪೋಲೀಸರು ಪ್ರಕರಣದಲ್ಲಿ ಸಿಲುಕಿಸಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅಕ್ಟೋಬರ್ 28 ಶನಿವಾರದಂದು ಕಡಬ ಬಂದ್ ಗೆ ಹಿಂದೂಪರ ಸಂಘಟನೆಗಳು ಕರೆನೀಡಿವೆ. ಕಡಬದಲ್ಲಿ ಗುರುವಾರ ಸಂಜೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ತುತರ್ು ಸಭೆ ನಡೆಸಿ ಈ ನಿಧರ್ಾರಕ್ಕೆ ಬಂದಿದ್ದಾರೆ. ಸಭೆಯಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ

ಮಕ್ಕಾ ಮಸೀದಿ ಅವಹೇಳನ ಪ್ರಕರಣದಲ್ಲಿ ಅಮಾಯಕ ಯುವಕರ ಫಿಕ್ಸ್ ಆರೋಪ ► ಹಿಂದೂಪರ ಸಂಘಟನೆಗಳ ವತಿಯಿಂದ ಶನಿವಾರ ಕಡಬ ಬಂದ್ ಗೆ ಕರೆ Read More »

ಕರಾವಳಿ

ಭಾನುವಾರ ಪ್ರಧಾನಿ ಧರ್ಮಸ್ಥಳಕ್ಕೆ ಭೇಟಿ ► ಭಕ್ತರಿಗೆ ದರ್ಶನ ಭಾಗ್ಯ ನಿಷೇಧ..!!!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ.26. ಭಾನುವಾರ(ಅ.29 ಕ್ಕೆ) ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿರುವ ಹಿನ್ನಲೆಯಲ್ಲಿ  ಅ. 28 ರ ಮಧ್ಯಾಹ್ನ 2 ರಿಂದ 29 ರ ಮಧ್ಯಾಹ್ನ 2 ರವರೆಗೆ ಭಕ್ತರ ಪ್ರವೇಶವನ್ನು ನಿಷೇಧೀಸಲಾಗಿದೆ. ಧರ್ಮಸ್ಥಳ ಸುತ್ತಮುತ್ತ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ದಳದಿಂದ ಕಾರ್ಯಚರಣೆ ಆರಂಭವಾಗಿದೆ. SPG ತಂಡ ಭದ್ರತೆ ಪರಿಶೀಲಿಸಿದ ಎಡಿಜಿಪಿ ಮೋದಿ ಭದ್ರತೆಗೆ 2500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಪ್ರಧಾನಿ ಭೇಟಿ ವೇಳೆ ಭದ್ರತೆ ಒದಗಿಸಲು ಹತ್ತು

ಭಾನುವಾರ ಪ್ರಧಾನಿ ಧರ್ಮಸ್ಥಳಕ್ಕೆ ಭೇಟಿ ► ಭಕ್ತರಿಗೆ ದರ್ಶನ ಭಾಗ್ಯ ನಿಷೇಧ..!!! Read More »

ಕರಾವಳಿ

ಮತ್ತೆ ಆರೋಗ್ಯದಲ್ಲಿ ಏರುಪೇರು ► ಆಸ್ಪತ್ರೆಗೆ ದಾಖಲಾದ ಪೇಜಾವರ ಶ್ರೀಗಳು

(ನ್ಯೂಸ್ ಕಡಬ) newskadaba.com ಉಡುಪಿ, ಅ.26. ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥ ಶ್ರೀಗಳಿಗೆ  ರಾತ್ರಿ ಹೊಟ್ಟೆನೋವು ಕಾಣಿಸಿಕೊಂಡ ಪರಿಣಾಮ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಿಂಗಳ ಹಿಂದೆ ಹರ್ನಿಯಾ ಆಪರೇಷನ್ ಗೆ ಒಳಗಾಗಿದ್ದ ಶ್ರೀಗಳು ಇದೀಗ ಮತ್ತೆ ಕೆಎಂಸಿಗೆ ದಾಖಲಾಗಿದ್ದಾರೆ. ದಾಖಲಾದ ವಿಶ್ವೇಶತೀರ್ಥರನ್ನು, ಸ್ಕ್ಯಾನಿಂಗ್ ಗೆ ಒಳಪಡಿಸಲಾಯ್ತು. ಎರಡು ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡುವ ಸಾಧ್ಯತೆಯಿದೆ. ಸ್ಕಾನಿಂಗ್ ಹಾಗೂ ಹೆಚ್ಚಿನ ಚಿಕಿತ್ಸೆಗೆ ಸೂಚಿಸಿರುವ ವೈದ್ಯರು ತಪಾಸಣೆ ನಡೆಸಿದ್ದಾರೆ. ರಾತ್ರಿಯ ಪೂಜೆ ಪೂರೈಸಿ, ಕೆಎಂಸಿ ಆಸ್ಪತ್ರೆಗೆ ತೆರಳಿರುವ ಸ್ವಾಮೀಜಿ ಅನುಷ್ಟಾನಗಳನ್ನೂ ಪೂರೈಸಿದ್ದಾರೆ. ಸ್ವಾಮೀಜಿ ಆರೋಗ್ಯವಾಗಿದ್ದಾರೆ,

ಮತ್ತೆ ಆರೋಗ್ಯದಲ್ಲಿ ಏರುಪೇರು ► ಆಸ್ಪತ್ರೆಗೆ ದಾಖಲಾದ ಪೇಜಾವರ ಶ್ರೀಗಳು Read More »

ಕರಾವಳಿ

ಸುಂಕದಕಟ್ಟೆ: ರಾಜ್ಯ ಹೆದ್ದಾರಿ ಬದಿಯಲ್ಲಿ ಅಪಾಯಕಾರಿ ಮರ ► ಕಣ್ಮುಚ್ಚಿ ಕುಳಿತ ಸಂಬಂಧಪಟ್ಟ ಅಧಿಕಾರಿಗಳು..!!!

(ನ್ಯೂಸ್ ಕಡಬ) newskadaba.com ಕಡಬ, ಅ.26. ಮರ್ದಾಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಸುಂಕದಕಟ್ಟೆ ಸಮೀಪ ರಸ್ತೆಯ ಬದಿಯಲ್ಲಿ ಮರವೊಂದು ರಸ್ತೆಗೆ ಬೀಳುವ ಹಂತದಲ್ಲಿದ್ದು ಇದಕ್ಕೆ  ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ. ಅರಣ್ಯ ಇಲಾಖಾ ವಸತಿಗೃಹದ ಕಚೇರಿ ಸಮೀಪವೇ ಈ ಅಪಾಯಕಾರಿ ಮರ ಸಂಪೂರ್ಣವಾಗಿ ಒಣಗಿ ರಸ್ತೆಗೆ ಬೀಳುವ ಹಂತದಲ್ಲಿದ್ದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ತೆರವುಗೊಳಿಸುವ ಮನಸ್ಸು ಮಾಡುತ್ತಿಲ್ಲ. ಈ ರಸ್ತೆಯಲ್ಲಿ ದಿನನಿತ್ಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಾವಿರಾರು ಯಾತ್ರಾರ್ಥಿ ವಾಹನಗಳು ಸಂಚಾರಿಸುತ್ತಿದ್ದು ಅಲ್ಲದೆ ಪ್ರತಿನಿತ್ಯ ವಿದ್ಯಾರ್ಥಿಗಳು, ಸಾರ್ವಜನಿಕರು ರಸ್ತೆಯ

ಸುಂಕದಕಟ್ಟೆ: ರಾಜ್ಯ ಹೆದ್ದಾರಿ ಬದಿಯಲ್ಲಿ ಅಪಾಯಕಾರಿ ಮರ ► ಕಣ್ಮುಚ್ಚಿ ಕುಳಿತ ಸಂಬಂಧಪಟ್ಟ ಅಧಿಕಾರಿಗಳು..!!! Read More »

ಕರಾವಳಿ
Scroll to Top