News Kadaba

ಪುತ್ತೂರು: ತಾ.ಪಂ ಸಾಮಾನ್ಯ ಸಭೆ ► ಎರಡು ವರ್ಷಗಳ ಬೇಡಿಕೆ ಈಡೇರಿಕೆಗಾಗಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ..!!!

(ನ್ಯೂಸ್ ಕಡಬ) newskadaba.com ಪುತ್ತೂರು, ಅ.30. ನಿರಂತರ ಎರಡು ವರ್ಷಗಳಿಂದ ಬೇಡಿಕೆ ಮುಂದಿಡುತ್ತಿದ್ದರೂ ಇದುವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಆಗ್ರಹಿಸಿ ತಾಲೂಕು ಪಂಚಾಯತ್‌ ಸದಸ್ಯೆ ಕೆ.ಟಿ. ವಲ್ಸಮ್ಮ ಕಪ್ಪು ಪಟ್ಟಿ ಧರಿಸಿ ಶನಿವಾರ ಪ್ರತಿಭಟನೆ ನಡೆಸಿದರು. ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್‌ ಅಧ್ಯಕ್ಷತೆಯಲ್ಲಿ ತಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆ ಕಪ್ಪು ಬಟ್ಟೆ ಹೊದ್ದುಕೊಂಡು ಆಗಮಿಸಿದ  ತಾಲೂಕು ಪಂಚಾಯತ್‌ ಸದಸ್ಯೆ ಕೆ.ಟಿ. ವಲ್ಸಮ್ಮ, ವೇದಿಕೆಯಲ್ಲಿದ್ದವರಿಗೆ ಮನವಿ ನೀಡಿದರು. ಬಳಿಕ ಕಪ್ಪು ಬಟ್ಟೆಯನ್ನು ಬಾಯಿಗೆ ಕಟ್ಟಿ ಸಭೆಯಲ್ಲಿ ಕುಳಿತು […]

ಪುತ್ತೂರು: ತಾ.ಪಂ ಸಾಮಾನ್ಯ ಸಭೆ ► ಎರಡು ವರ್ಷಗಳ ಬೇಡಿಕೆ ಈಡೇರಿಕೆಗಾಗಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ..!!! Read More »

ಕರಾವಳಿ

ಎಟಿಎಂಗೆ ಹಣ ತುಂಬುವ ವೇಳೆ ► 18 ಲಕ್ಷ, 50 ಸಾವಿರ ರೂ. ಹಣದ ಬ್ಯಾಗ್ ಕಸಿದು ಪರಾರಿ..!!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.30. ಎಟಿಎಂ ಗೆ ಹಣ ತುಂಬುವ ವೇಳೆ 18 ಲಕ್ಷ ರೂ. ಕಸಿದು ಪರಾರಿಯಾಗಿರುವ ಘಟನೆ ಬೆಂಗಳೂರಿನ  ಜಾಲಹಳ್ಳಿ ಕ್ರಾಸ್ ಬಳಿ ಸೋಮವಾರ ಮುಂಜಾನೆ 6 ಗಂಟೆ ಸುಮಾರಿಗೆ ನಡೆದಿದೆ. ಐಸಿಐಸಿಐ ಬ್ಯಾಂಕ್ ಎಟಿಎಂಗೆ ಹಣ ತುಂಬಿಸುವ ವೇಳೆ ಹೆಲ್ಮಟ್ ಧರಿಸಿ 220 ಪಲ್ಸರ್ ಬೈಕ್‍ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಸೆಕ್ಯೂರ್ ವೆಲ್ ಏಜೆನ್ಸಿಯ ಮೂವರು ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ. ಪ್ರತಿರೋಧ ಒಡಿದ್ದಕ್ಕೆ ಕಸ್ಟೋಡಿಯನ್ ಮೋಹನ್ ಅವರಿಗೆ ಚಾಕುವಿನಿಂದ ಇರಿದ ದುಷ್ಕರ್ಮಿಗಳು 18 ಲಕ್ಷ

ಎಟಿಎಂಗೆ ಹಣ ತುಂಬುವ ವೇಳೆ ► 18 ಲಕ್ಷ, 50 ಸಾವಿರ ರೂ. ಹಣದ ಬ್ಯಾಗ್ ಕಸಿದು ಪರಾರಿ..!!! Read More »

ಕರ್ನಾಟಕ

ಕೆಟ್ಟು ನಿಂತ ಟ್ರ್ಯಾಕ್ಟರ್ ಗೆ ಬೊಲೆರೋ ಡಿಕ್ಕಿ ► ಓರ್ವನ ದುರ್ಮರಣ

(ನ್ಯೂಸ್ ಕಡಬ) newskadaba.com ಹಾವೇರಿ, ಅ.30. ಟ್ರ್ಯಾಕ್ಟರ್ ಗೆ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಹಾವೇರಿ ನಗರದ ಹೊರವಲಯದಲ್ಲಿರೋ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸೋಮವಾರ ನಡೆದಿದೆ. ಮೃತ ವ್ಯಕ್ತಿಯನ್ನು ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಡ್ಡದಬೇವಿನಹಳ್ಳಿ ಗ್ರಾಮದ ನಿವಾಸಿ ಸಹದೇವಪ್ಪ ಸಂಗಾಪುರ(52) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ 32 ವರ್ಷ ಮಂಜುನಾಥ ಎಂಬಾತ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ರಸ್ತೆ ಪಕ್ಕದಲ್ಲಿ ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ ನ್ನು ರಿಪೇರಿ ಮಾಡುತ್ತಿದ್ದ

ಕೆಟ್ಟು ನಿಂತ ಟ್ರ್ಯಾಕ್ಟರ್ ಗೆ ಬೊಲೆರೋ ಡಿಕ್ಕಿ ► ಓರ್ವನ ದುರ್ಮರಣ Read More »

ಕರ್ನಾಟಕ

ಐತ್ತೂರು ಗ್ರಾ.ಪಂ. ಜಮಾಬಂದಿ ಸಭೆ ► ವಿವಿಧ ಕಾಮಗಾರಿಗಳ ಪರಿಶೀಲನೆ

(ನ್ಯೂಸ್ ಕಡಬ) newskadaba.com ಕಡಬ, ಅ.30. ಐತ್ತೂರು ಗ್ರಾಮ ಪಂಚಾಯತ್ ಜಮಾಬಂದಿ ಸಭೆಯು ಗ್ರಾ.ಪಂ. ಅಧ್ಯಕ್ಷರಾದ ಸತೀಶ್ ಕೆ.ಯವರ ಅಧ್ಯಕ್ಷತೆಯಲ್ಲಿ  ಪಂಚಾಯತ್ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು. ತಾಲೂಕು ಯೋಜನಾಧಿಕಾರಿ ಗಣಪತಿ ಭಟ್ ಜಮಾಬಂದಿ ಸಭೆಯ ಅಧಿಕಾರಿಯಾಗಿದ್ದರು. 2016-17ನೇ ವಾರ್ಷಿಕ ಲೆಕ್ಕಪತ್ರ ಹಾಗೂ ವಿವಿಧ ದಾಖಲೆ ಪರಿಶೀಲನೆಯ ಕುರಿತು ಜಮಾಬಂದಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಬಳಿಕ ವಿವಿಧ ಕಾಮಗಾರಿಗಳಾದ ಬಜಕೆರೆ ರಸ್ತೆ ಕಾಂಕ್ರೀಟೀಕರಣ, ಭ್ರಾಂತಿಕಟ್ಟೆ-ಕೋಡಿಂಕಿರಿ ರಸ್ತೆಯ ಬಜಕೆರೆ ಎಂಬಲ್ಲಿ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ, ಹಾಗೂ ಕಲ್ಲಾಜೆ-ಅಂತಿಬೆಟ್ಟು ರಸ್ತೆಯ ಕಲ್ಲಾಜೆ

ಐತ್ತೂರು ಗ್ರಾ.ಪಂ. ಜಮಾಬಂದಿ ಸಭೆ ► ವಿವಿಧ ಕಾಮಗಾರಿಗಳ ಪರಿಶೀಲನೆ Read More »

ಕರಾವಳಿ

ಹೊಸಮಠ: ಸಾಲ ಮನ್ನಾ ಸೌಲಭ್ಯದಿಂದ ವಂಚಿತರಾಗಿರುವ 80 ಮಂದಿ ಸಾಲಗಾರು..!!!

(ನ್ಯೂಸ್ ಕಡಬ) newskadaba.com ಕಡಬ, ಅ.30. ಸರಕಾರದ ಸಾಲಮನ್ನಾ ಯೋಜನೆಯಿಂದ ಕುಟ್ರುಪ್ಪಾಡಿ ಸಿಎ ಬ್ಯಾಂಕ್ಗೆ 3.5ಕೋಟಿ ರೂ.ಬರಲು ಬಾಕಿ, 80 ಜನ ಸದಸ್ಯರು ಸಾಲಮನ್ನಾದಿಂದ ವಂಚಿತರಾಗಿದ್ದಾರೆ. ಸಾಲಮನ್ನಾ ಘೋಷಿಸಿದ ಹಣವನ್ನು ಕೂಡಲೇ ಸಂಘಕ್ಕೆ ಜಮೆ ಮಾಡುವುದರೊಂದಿಗೆ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿ ಸಾಲ ಮನ್ನಾ ಸೌಲಭ್ಯದಿಂದ ವಂಚಿತರಾಗಿರುವ 80 ಮಂದಿ ಸಾಲಗಾರರಿಗೂ ಸೌಲಭ್ಯ ಒದಗಿಸಬೇಕಾಗಿದೆ ಎಂದು ಹೊಸಮಠ ಪ್ರಾ.ಕೃ.ಸ.ಸಂಘದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ನಿರ್ದೇಶಕ ಜಯಚಂದ್ರ ರೈ ಕುಂಟೋಡಿಯವರು ಸರಕಾರ ರೈತರ

ಹೊಸಮಠ: ಸಾಲ ಮನ್ನಾ ಸೌಲಭ್ಯದಿಂದ ವಂಚಿತರಾಗಿರುವ 80 ಮಂದಿ ಸಾಲಗಾರು..!!! Read More »

ಕರಾವಳಿ

ಬೆಳ್ತಂಗಡಿ: ಕಾರುಗಳ ಮಧ್ಯೆ ಢಿಕ್ಕಿ ► ಇಬ್ಬರು ಮೃತ್ಯು, ನಾಲ್ವರು ಗಂಭೀರ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ.29. ಕಾರುಗಳೆರಡರ ನಡುವೆ ಮುಖಾಮುಖಿ ಢಿಕ್ಕಿಯುಂಟಾದ ಪರಿಣಾಮ ಇಬ್ಬರು ಮೃತಪಟ್ಟು,‌ ನಾಲ್ವರು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ಸಮೀಪದ ಗರಡಾಡಿ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೃತಪಟ್ಟವರನ್ನು ಗುರುವಾಯನಕೆರೆ ಸಮೀಪದ ಕುವೆಟ್ಟು ನಿವಾಸಿಗಳಾದ ವಿನಾಯಕ ಹಾಗು ವಿಶ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ‌.

ಬೆಳ್ತಂಗಡಿ: ಕಾರುಗಳ ಮಧ್ಯೆ ಢಿಕ್ಕಿ ► ಇಬ್ಬರು ಮೃತ್ಯು, ನಾಲ್ವರು ಗಂಭೀರ Read More »

ಕರಾವಳಿ

ಮರ್ಧಾಳ: ಬೈಕ್ – ಕಾರು ಢಿಕ್ಕಿ ► ಸವಾರರಿಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಅ.29. ಬೈಕ್ ಹಾಗೂ ಮಧ್ಯೆ ಢಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಮರ್ಧಾಳ ಬೊಳ್ಳೂರು ರಸ್ತೆಯ ಮಿತ್ತೋಡಿ ಎಂಬಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರರಾದ ಮರ್ಧಾಳ ನಿವಾಸಿ ಮಂಜು ಹಾಗೂ ಸಂತೋಷ್ ಎಂಬವರು ಗಾಯಗೊಂಡಿದ್ದಾರೆ. ಬೊಳ್ಳೂರು ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಮರ್ಧಾಳ ಕಡೆಗೆ ತೆರಳುತ್ತಿದ್ದ ಬೈಕ್ ಮಧ್ಯೆ ಢಿಕ್ಕಿ ಸಂಭವಿಸಿದೆ. ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮರ್ಧಾಳ: ಬೈಕ್ – ಕಾರು ಢಿಕ್ಕಿ ► ಸವಾರರಿಬ್ಬರಿಗೆ ಗಾಯ Read More »

ಕರಾವಳಿ

ಅಮಾಯಕ ಹಿಂದೂ ಯುವಕರ ಮೇಲೆ ಪೊಲೀಸ್ ದಬ್ಬಾಳಿಕೆ ಆರೋಪ ► ಕಡಬ ಬಂದ್ ಯಶಸ್ವಿ

(ನ್ಯೂಸ್ ಕಡಬ) newskadaba.com ಕಡಬ, ಅ.28. ಅಮಾಯಕ ಹಿಂದೂ ಯುವಕರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳು ನೀಡಿದ್ದ ಕಡಬ ಬಂದ್ ಗೆ ಪೂರ್ಣ ಬೆಂಬಲ ವ್ಯಕ್ತವಾಗಿದ್ದು, ಕಡಬ ಪರಿಸರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವ್ಯಾಪಾರಸ್ಥರು ಬೆಂಬಲಿಸಿದ್ದಾರೆ. ಕಡಬದಲ್ಲಿ ಈ ಹಿಂದೆ ಮಕ್ಕಾ ಮಸೀದಿಯ ಅವಹೇಳನ ನಡೆಸಿರುವ ಪ್ರಕರಣದಲ್ಲಿ ಆರೋಪಿಯನ್ನು ಹಿಂದೂ ಸಂಘಟನೆಯ ಮುಖಂಡರೇ ಠಾಣೆಗೆ ಒಪ್ಪಿಸಿದ್ದರೂ ಅಮಾಯಕ ಹಿಂದೂ ಕಾರ್ಯಕರ್ತರನ್ನು ಪೊಲೀಸರು ಪ್ರಕರಣದಲ್ಲಿ ಸಿಲುಕಿಸುತ್ತಿದ್ದಾರೆ‌. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಸಹಕಾರ

ಅಮಾಯಕ ಹಿಂದೂ ಯುವಕರ ಮೇಲೆ ಪೊಲೀಸ್ ದಬ್ಬಾಳಿಕೆ ಆರೋಪ ► ಕಡಬ ಬಂದ್ ಯಶಸ್ವಿ Read More »

ಕರಾವಳಿ

ಟಿಪ್ಪು ಸುಲ್ತಾನ್ ಮತ್ತು ಸಿದ್ದರಾಮಯ್ಯರವರ ಅವಹೇಳನ ► ಓರ್ವ ಉಪ್ಪಿನಂಗಡಿ ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.27. ಸ್ವಾತಂತ್ರ ಸೇನಾನಿ ಟಿಪ್ಪು ಸುಲ್ತಾನ್ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಅಸಹ್ಯವಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ ಎಂದು ಆರೋಪಿಸಿ ಉಪ್ಪಿನಂಗಡಿ ಯುವ ಕಾಂಗ್ರೆಸ್ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ನೀಡಿದ್ದ ದೂರಿನ ಮೇರೆಗೆ ಓರ್ವನನ್ನು ವಶಕ್ಕೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆದಿದೆ. 34ನೇ ನೆಕ್ಕಿಲಾಡಿಯಲ್ಲಿನ ಕಾರ್ ಕ್ಲಬ್ ಮಾಲಕ ಸದಾನಂದ ಹಾಗೂ ಯೊಗೀಶ್ ಪ್ರಭು ಅವರ ಮೇಲೆ ದೂರು ದಾಖಲಾಗಿದ್ದು, ಯೊಗೀಶ್ ಪ್ರಭು ಎಂಬವರು ಸ್ವಾತಂತ್ರ್ಯ ಸೇನಾನಿ ಟಿಪ್ಪು ಸುಲ್ತಾನ್

ಟಿಪ್ಪು ಸುಲ್ತಾನ್ ಮತ್ತು ಸಿದ್ದರಾಮಯ್ಯರವರ ಅವಹೇಳನ ► ಓರ್ವ ಉಪ್ಪಿನಂಗಡಿ ಪೊಲೀಸರ ವಶಕ್ಕೆ Read More »

ಕರಾವಳಿ

ಕರಾಟೆಯ ಭರಾಟೆಯಲ್ಲಿ ಬಡ ಕುಟುಂಬದ ತರಾಟೆ ► ಮಂಗಳೂರು ಮೇಯರ್ ಗಿದೆ ಕಾನೂನಿನ ತರಾಟೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.27. ತನ್ನ ವಿಶೇಷ ಕಾರ್ಯಾಚರಣೆಯಿಂದ ಸದಾ ಒಂದಿಲ್ಲೊಂದು ವಿಚಾರಗಳಿಗೆ ಸುದ್ದಿಯಾಗುತ್ತಿದ್ದ ಕರಾಟೆ ಕಿಂಗ್ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ರವರು ಇದೀಗ ಇನ್ನೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಮೇಯರ್ ರವರು ಬಡಪಾಯಿ ಕುಟುಂಬವೊಂದಕ್ಕೆ ತನ್ನ ಕರಾಟೆಯ ಪೌರುಷವನ್ನು ತೋರಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಸಾರ್ವಜನಿಕರ ಆಕ್ರೋಶ, ಟೀಕೆಗೆ ಗುರಿಯಾಗಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಅವರ ಕುಟುಂಬ ನಗರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದು, ದೀಪಾವಳಿ ಹಬ್ಬದಂದು ಮೇಯರ್ ಮನೆಯಲ್ಲಿ

ಕರಾಟೆಯ ಭರಾಟೆಯಲ್ಲಿ ಬಡ ಕುಟುಂಬದ ತರಾಟೆ ► ಮಂಗಳೂರು ಮೇಯರ್ ಗಿದೆ ಕಾನೂನಿನ ತರಾಟೆ Read More »

ಕರಾವಳಿ
Scroll to Top