News Kadaba

ಕೊನೆಗೂ ಭಾರತದಲ್ಲಿ ಬಿಡುಗಡೆಯಾಯ್ತು ಬಹು ನಿರೀಕ್ಷಿತ ಬೈಕ್ ► ಟಿವಿಎಸ್ ಅಪಾಚಿ ಆರ್ ಆರ್ 310

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.08. ಟಿವಿಎಸ್ ಮೋಟಾರ್ ಕಂಪನಿಯ ಬಹು ನಿರೀಕ್ಷಿತ ಬೈಕ್ ಗಳಲ್ಲಿ ಒಂದಾದ ಅಪಾಚಿ ಆರ್ ಆರ್ 310 ಮೋಟಾರ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಸ್ಪೋರ್ಟ್ಸ್ ಬೈಕ್ ಮಾದರಿಯ ಆರ್ ಆರ್ 310 ಫೋರ್ ಸ್ಟ್ರೋಕ್, ಫೋರ್ ವ್ಯಾಲ್ಯು, ಸಿಂಗಲ್ ಸಿಲಿಂಡರ್ ಗಳನ್ನು ಒಳಗೊಂಡಿರಲಿದೆ.‌ 312 ಸಿಸಿ ಇಂಜಿನ್ ಸಾಮರ್ಥ್ಯದ ಈ ಬೈಕ್ 33.5 ಬಿಎಚ್ ಪಿ ಒಳಗೊಂಡಿದೆ. 9700 ಆರ್ ಪಿಎಂ ಮತ್ತು 27.3 ಎನ್ ಎಂ ಒಳಗೊಂಡಿದೆ. […]

ಕೊನೆಗೂ ಭಾರತದಲ್ಲಿ ಬಿಡುಗಡೆಯಾಯ್ತು ಬಹು ನಿರೀಕ್ಷಿತ ಬೈಕ್ ► ಟಿವಿಎಸ್ ಅಪಾಚಿ ಆರ್ ಆರ್ 310 Read More »

ರಾಷ್ಟ್ರೀಯ ನ್ಯೂಸ್

ಉಬರಡ್ಕ: ರಸ್ತೆ ಬಿಟ್ಟು ಮನೆಯ ಛಾವಣಿಗೆ ಹತ್ತಿದ ಕಾರು ► ಸುಬ್ರಹ್ಮಣ್ಯ ಎಸ್ಐ ಗೋಪಾಲ್ ರವರಿಗೆ ಗಾಯ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.07. ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾದುದರಿಂದ ಸುಬ್ರಹ್ಮಣ್ಯ ಠಾಣೆಯ ಉಪ ನಿರೀಕ್ಷಕರಾದ ಗೋಪಾಲ್ ರವರು ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಉಬರಡ್ಕದಲ್ಲಿ ಗುರುವಾರದಂದು ಬೆಳಿಗ್ಗೆ ನಡೆದಿದೆ. ಸುಬ್ರಹ್ಮಣ್ಯ ಠಾಣಾ ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ರವರು ಕೊಂಬೋಟು ಕುಟುಂಬದ ಕಾರ್ಯಕ್ರಮವನ್ನು ಮುಗಿಸಿ ಗುರುವಾರದಂದು ಬೆಳಿಗ್ಗೆ ಹಿಂತಿರುಗುತ್ತಿದ್ದಾಗ ಉಬರಡ್ಕದ ಮಿತ್ತೂರು ಎಂಬಲ್ಲಿ ಗೋಪಾಲ್ ರವರು ಚಲಾಯಿಸುತ್ತಿದ್ದ ಮಾರುತಿ ಆಲ್ಟೋ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿನ ಮನೆಯೊಂದರ ಛಾವಣಿಗೆ ಹತ್ತಿ ನಿಂತಿದೆ. ಇದರಿಂದಾಗಿ ಗೋಪಾಲ್

ಉಬರಡ್ಕ: ರಸ್ತೆ ಬಿಟ್ಟು ಮನೆಯ ಛಾವಣಿಗೆ ಹತ್ತಿದ ಕಾರು ► ಸುಬ್ರಹ್ಮಣ್ಯ ಎಸ್ಐ ಗೋಪಾಲ್ ರವರಿಗೆ ಗಾಯ Read More »

ಕರಾವಳಿ

ನಂತೂರು: ಬಸ್-ಲಾರಿ-ಕಾರು ಸರಣಿ ಅಪಘಾತ ► ಮಹಿಳೆ ಮೃತ್ಯು, 15 ಕ್ಕೂ ಹೆಚ್ಚು ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಡಿ.07. ಬಸ್ಸು ಮತ್ತು ಕಂಟೈನರ್ ಲಾರಿ ನಡುವೆ ಢಿಕ್ಕಿ ಸಂಭವಿಸಿ ಲಾರಿ ಕಾರೊಂದಕ್ಕೆ ಢಿಕ್ಕಿಯಾಗಿ ಉಂಟಾದ ಸರಣಿ ಅಪಘಾತದಲ್ಲಿ ಮಹಿಳೆಯೋರ್ವರು ಮೃತಪಟ್ಟು 15 ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಗರದ ನಂತೂರು ಎಂಬಲ್ಲಿ ಗುರುವಾರದಂದು ಬೆಳಿಗ್ಗೆ ನಡೆದಿದೆ. ಮೃತ ಮಹಿಳೆಯನ್ನು ಕವಿತಾ ಎಂದು ಗುರುತಿಸಲಾಗಿದೆ. ಬಿಕರ್ನಕಟ್ಟೆಯಿಂದ ಆಗಮಿಸುತ್ತಿದ್ದ ಬಸ್ ನಂತೂರು ಸರ್ಕಲ್ ನಲ್ಲಿ ಕಂಟೈನರ್ ಲಾರಿಗೆ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ ಲಾರಿಯು ಕಾರೊಂದಕ್ಕೆ ಢಿಕ್ಕಿಯಾಗಿದೆ. ಇದರಿಂದಾಗಿ ಸುಮಾರು15 ಕ್ಕೂ ಹೆಚ್ಚು

ನಂತೂರು: ಬಸ್-ಲಾರಿ-ಕಾರು ಸರಣಿ ಅಪಘಾತ ► ಮಹಿಳೆ ಮೃತ್ಯು, 15 ಕ್ಕೂ ಹೆಚ್ಚು ಮಂದಿಗೆ ಗಾಯ Read More »

ಕರಾವಳಿ

ಮೈಸೂರು ರಾಜವಂಶಕ್ಕೆ ಹೊಸ ಕುಡಿ ಆಗಮನ ► ಗಂಡು ಮಗುವಿಗೆ ಜನ್ಮ ನೀಡಿದ ಯುವರಾಜ ಯದುವೀರ್ ಪತ್ನಿ ತ್ರಿಷಿಕಾ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.07. ಮೈಸೂರು ರಾಜವಂಶಕ್ಕೆ ಹೊಸ ಕುಡಿಯೊಂದರ ಆಗಮನವಾಗಿದ್ದು, ಗಂಡು ಮಗು ಹುಟ್ಟಿರುವ ಹಿನ್ನೆಲೆಯಲ್ಲಿ ಯದುವಂಶದಲ್ಲೀಗ ಸಂಭ್ರಮ ಮುಗಿಲು ಮುಟ್ಟಿದೆ. ಮೈಸೂರು ಯುವರಾಜ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಪತ್ನಿ ತ್ರಿಷಿಕಾ ಬುಧವಾರದಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ದಂಪತಿಗೆ ಗಂಡು ಮಗು ಜನಿಸಿರುವುದರಿಂದ ಯದು ಕುಟುಂಬದ ಉತ್ತರಾಧಿಕಾರಿ ಕುಡಿ ಬಂದಂತಾಗಿದೆ.

ಮೈಸೂರು ರಾಜವಂಶಕ್ಕೆ ಹೊಸ ಕುಡಿ ಆಗಮನ ► ಗಂಡು ಮಗುವಿಗೆ ಜನ್ಮ ನೀಡಿದ ಯುವರಾಜ ಯದುವೀರ್ ಪತ್ನಿ ತ್ರಿಷಿಕಾ Read More »

ಕರ್ನಾಟಕ

ಮಂಗಳೂರು: ಅಂಬೇಡ್ಕರ್ ಪರಿ ನಿರ್ವಹಣಾ ದಿನಾಚರಣೆಯಲ್ಲಿ ಶಿಷ್ಟಾಚಾರದ ಉಲ್ಲಂಘನೆ ► ಜಿ.ಪಂ. ಅಧ್ಯಕ್ಷರನ್ನೇ ಬಿಟ್ಟು ತುರ್ತಾಗಿ ಕಾರ್ಯಕ್ರಮ ಮುಗಿಸಿದ ಸಮಾಜ ಕಲ್ಯಾಣ ಇಲಾಖೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.07. ಸಮಾಜ ಕಲ್ಯಾಣ ಇಲಾಖೆಯ ವತಿಯಂದ ಡಿಸೆಂಬರ್ 06 ಬುಧವಾರದಂದು ನಡೆದ ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ರವರ ಪರಿ ನಿರ್ವಹಣಾ ದಿನದ ಪ್ರಯುಕ್ತ ಮಂಗಳೂರಿನ ಪುರಭವನದ ಎದುರುಗಡೆ ಇರುವ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರವನ್ನು ಉಲ್ಲಂಘಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಆರೋಪಿಸಿದ್ದಾರೆ. ಕಾರ್ಯಕ್ರಮವು ಕಾರ್ಯಕ್ರಮವು ಬೆಳಿಗ್ಗೆ 10.00 ಗಂಟೆಗೆ ಜರಗಲಿರುವುದಾಗಿ ಇಲಾಖೆಯ ಅಧಿಕಾರಿಯವರು ತಿಳಿಸಿದ್ದು, ಅದರಂತೆ ನಾನು 10.00 ಗಂಟೆಗೆ ಕಾರ್ಯಕ್ರಮಕ್ಕೆ

ಮಂಗಳೂರು: ಅಂಬೇಡ್ಕರ್ ಪರಿ ನಿರ್ವಹಣಾ ದಿನಾಚರಣೆಯಲ್ಲಿ ಶಿಷ್ಟಾಚಾರದ ಉಲ್ಲಂಘನೆ ► ಜಿ.ಪಂ. ಅಧ್ಯಕ್ಷರನ್ನೇ ಬಿಟ್ಟು ತುರ್ತಾಗಿ ಕಾರ್ಯಕ್ರಮ ಮುಗಿಸಿದ ಸಮಾಜ ಕಲ್ಯಾಣ ಇಲಾಖೆ Read More »

ಕರಾವಳಿ

ಶ್ರೀರಾಮ ದೇವರ ಬಗ್ಗೆ ಅವಹೇಳನಕಾರಿ ಹೇಳಿಕೆ ► ಎಸ್.ಸಿ.ದ್ವಾರಕನಾಥ್ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ.06. ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಸ್.ಸಿ.ದ್ವಾರಕನಾಥ್ ಅವರು ಶ್ರೀರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಖಾಸಗಿ ದೂರು ದಾಖಲಾಗಿದೆ. ಮಂಗಳೂರಿನ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದ್ವಾರಕನಾಥ್ ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದರಿಂದ ಹಿಂದೂ ಧರ್ಮೀಯರ ಭಾವನೆಗೆ ಧಕ್ಕೆ ಉಂಟಾಗಿದೆ. ಶ್ರೀ ರಾಮ ದೇವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ದ್ವಾರಕನಾಥ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು

ಶ್ರೀರಾಮ ದೇವರ ಬಗ್ಗೆ ಅವಹೇಳನಕಾರಿ ಹೇಳಿಕೆ ► ಎಸ್.ಸಿ.ದ್ವಾರಕನಾಥ್ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲು Read More »

ಕರಾವಳಿ

ಗೋಳಿತ್ತಡಿ: ರಸ್ತೆ ಡಾಮರೀಕರಣಕ್ಕೆ ಸಚಿವ ರೈಯವರಿಂದ ಶಂಕುಸ್ಥಾಪನೆ ► ಎರಡೆರಡು ಬಾರಿ ಶಂಕುಸ್ಥಾಪನೆ ಭಾಗ್ಯ ಕಂಡ ಏಣಿತ್ತಡ್ಕ ರಸ್ತೆ

(ನ್ಯೂಸ್ ಕಡಬ) newskadaba.com ಕಡಬ, ಡಿ.06. ಉಪ್ಪಿನಂಗಡಿ-ಕಡಬ-ಸಬ್ರಹ್ಮಣ್ಯ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ಏಣಿತಡ್ಕ-ಗೋಳಿತ್ತಡಿ ರಸ್ತೆಯ ಸುಮಾರು ಒಂದೂವರೆ ಕಿಲೋಮೀಟರ್ ಉದ್ದ ರಸ್ತೆಗೆ ಡಾಮರೀಕರಣಕ್ಕಾಗಿ ಮಂಗಳವಾರ ಸಂಜೆ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ರಾಮಕುಂಜದ ಗೋಳಿತ್ತಡಿಯಲ್ಲಿ ನಾಮ ಫಲಕ ಅನಾವರಣ ಮಾಡುವ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು. ಉದನೆಯಲ್ಲಿ ರಸ್ತೆ ಡಾಮರೀಕರಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಬಳಿಕ ಶಾಂತಿಮೊಗೇರು ನೂತನ ಸೇತುವೆ ಉದ್ಘಾಟನೆ ಮಾಡಿದ ಸಚಿವರು ಸಂಜೆ ತರಾತುರಿಯಲ್ಲಿ ಗೋಳಿತ್ತಡಿಯಲ್ಲಿ ನಬಾರ್ಡ್ ಯೋಜನೆಯಡಿ ಸುಮಾರು 49 ಲಕ್ಷ

ಗೋಳಿತ್ತಡಿ: ರಸ್ತೆ ಡಾಮರೀಕರಣಕ್ಕೆ ಸಚಿವ ರೈಯವರಿಂದ ಶಂಕುಸ್ಥಾಪನೆ ► ಎರಡೆರಡು ಬಾರಿ ಶಂಕುಸ್ಥಾಪನೆ ಭಾಗ್ಯ ಕಂಡ ಏಣಿತ್ತಡ್ಕ ರಸ್ತೆ Read More »

ಕರಾವಳಿ

ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್‍ಶಿಪ್ ► ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಹಲವು ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಕಡಬ, ಡಿ.06. ನಂದಿನಿ ಸಭಾಭವನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಹಂಪನಕಟ್ಟೆ ಮಂಗಳೂರಿನಲ್ಲಿ ಡಿ.2 ಮತ್ತು 3 ರಂದು ನಡೆದ ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಲ್ ಆರ್ಟ್ಸ್ ಇವರು ನಡೆಸಿದ ಶಿಟೊ-ರ್ಯೂ ಕರಾಟೆ-ಡೋ 10ನೇ ವೆಸ್ಟರ್ನ್ಸ್ ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್ಶಿಪ್ 2017 ರಲ್ಲಿ ಭಾಗವಹಿಸಿದ ಕ್ನಾನಾಯ ಜ್ಯೋತಿ ವಿದ್ಯಾರ್ಥಿಗಳಾದ ದೀಪಕ್ ಗೌಡ ಪಿ. ಬ್ಲಾಕ್ ಬೆಲ್ಟ್‌ನಲ್ಲಿ ದ್ವಿತೀಯ, ಚರಣ್ ಪಿ.ಎಚ್ ಬ್ರೌನ್ ಬೆಲ್ಟ್‌ನಲ್ಲಿ ಪ್ರಥಮ, ಅಶ್ವೀದ್ ಬ್ರೌನ್ ಬೆಲ್ಟ್‌ನಲ್ಲಿ ದ್ವಿತೀಯ,

ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್‍ಶಿಪ್ ► ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಹಲವು ಪ್ರಶಸ್ತಿ Read More »

ಕರಾವಳಿ

ಸಂಸದ ಪ್ರತಾಪ್ ಸಿಂಹ ‘ಪ್ರತಾಪ’ಕ್ಕೆ ಬಿಜೆಪಿಯಲ್ಲಿಯೇ ಅಸಮಾಧಾನ ► ಬಿಜೆಪಿ ಹೈಕಮಾಂಡ್ ಗೆ ರಾಜ್ಯ ಘಟಕದಿಂದ ದೂರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.06. ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ನಡವಳಿಕೆಯು ಬಿಜೆಪಿ ವಲಯದಲ್ಲೇ ಬೇಸರ ಸೃಷ್ಟಿಸಿದ್ದು, ಪಕ್ಷದ ಹೈಕಮಾಂಡ್‍ಗೆ ಅವರ ವಿರುದ್ಧ ರಾಜ್ಯ ಘಟಕದ ಕೆಲವರು ದೂರು ನೀಡಿದ್ದಾರೆ. ಯುವಮೋರ್ಚಾ ಕಾರ್ಯಕರ್ತರನ್ನು ಹುರಿದುಂಬಿಸಲು ಹೋಗಿ ಫೇಸ್‍ಬುಕ್‍ನಲ್ಲಿ ಲೈವ್ ಕೊಟ್ಟು ಪಕ್ಷದೊಳಗೆ ನಡೆದ ವಿಷಯಗಳನ್ನು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಹೆಸರನ್ನು ಅನಗತ್ಯವಾಗಿ ಎಳೆದು ತಂದು ಮುಜುಗರ ತಂದಿದ್ದಾರೆ ಅಲ್ಲದೇ ಪಕ್ಷಕ್ಕೆ ಮತ್ತಷ್ಟು ಇರಿಸು-ಮುರಿಸು ಉಂಟಾಗುವಂತೆ

ಸಂಸದ ಪ್ರತಾಪ್ ಸಿಂಹ ‘ಪ್ರತಾಪ’ಕ್ಕೆ ಬಿಜೆಪಿಯಲ್ಲಿಯೇ ಅಸಮಾಧಾನ ► ಬಿಜೆಪಿ ಹೈಕಮಾಂಡ್ ಗೆ ರಾಜ್ಯ ಘಟಕದಿಂದ ದೂರು Read More »

ಕರ್ನಾಟಕ

ಬಾಬರಿ ಮಸೀದಿ ಸಂಬಂಧ ಕರಾಳ‌ ದಿನ ಹಾಗೂ ವಿಜಯೋತ್ಸವ ಆಚರಣೆಗೆ ನಿಷೇಧ ► ಇಂದು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.06. ಡಿಸೆಂಬರ್ 6 ರಂದು ಬಾಬರಿ ಮಸೀದಿಯ ಕುರಿತಾದ ಕರಾಳ ದಿನ ಹಾಗೂ ವಿಜಯೋತ್ಸವ ಆಚರಣೆಗೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ಸಾರ್ವಜನಿಕ ಹಿತದೃಷ್ಟಿಯಿಂದ ಕರ್ನಾಟಕ ಪೊಲೀಸ್ ಕಾಯಿದೆ ಕಲಂ 35 ರಂತೆ ಡಿಸೆಂಬರ್ 6 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ

ಬಾಬರಿ ಮಸೀದಿ ಸಂಬಂಧ ಕರಾಳ‌ ದಿನ ಹಾಗೂ ವಿಜಯೋತ್ಸವ ಆಚರಣೆಗೆ ನಿಷೇಧ ► ಇಂದು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ Read More »

ರಾಷ್ಟ್ರೀಯ ನ್ಯೂಸ್
Scroll to Top