News Kadaba

ನಾಳೆ(ಡಿ.16) ಕಡಬದಲ್ಲಿ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ► ಅವಿಭಜಿತ ಪುತ್ತೂರು ತಾಲೂಕಿನ ಕೊನೆಯ ಕನ್ನಡ ಸಾಹಿತ್ಯ ಸಮ್ಮೇಳನ

(ನ್ಯೂಸ್ ಕಡಬ) newskadaba.com ಕಡಬ, ಡಿ.15. ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಅವಿಭಜಿತ ಪುತ್ತೂರು ತಾಲೂಕಿನ 17 ನೇ ಹಾಗೂ ಕೊನೆಯ ಕನ್ನಡ ಸಾಹಿತ್ಯ ಸಮ್ಮೇಳನ ಕಡಬದ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಡಿಸೆಂಬರ್ 16 ನೇ ಶನಿವಾರದಂದು ಬೆಳಿಗ್ಗಿನಿಂದ ಸಂಜೆಯ ತನಕ ನಡೆಯಲಿದೆ. ಕಡಬದಲ್ಲಿ ಇದು ತಾಲೂಕು ಮಟ್ಟದ ಎರಡನೇ ಸಾಹಿತ್ಯ ಸಮ್ಮೇಳನವಾಗಿದೆ. ಕಡಬ ಈಗಾಗಲೇ ತಾಲೂಕು ಕೇಂದ್ರವಾಗಿ ಘೋಷಣೆಯಾಗಿದ್ದು ಬರುವ ಜನವರಿ ತಿಂಗಳಿನಿಂದ ಪೂರ್ಣ ಪ್ರಮಾಣದ […]

ನಾಳೆ(ಡಿ.16) ಕಡಬದಲ್ಲಿ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ► ಅವಿಭಜಿತ ಪುತ್ತೂರು ತಾಲೂಕಿನ ಕೊನೆಯ ಕನ್ನಡ ಸಾಹಿತ್ಯ ಸಮ್ಮೇಳನ Read More »

ಕರಾವಳಿ

ಕಡಬದಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸ್ಥಳದ ಗಡಿಗುರುತು ► ತಿಂಗಳೊಳಗೆ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ: ಪಿ.ಪಿ.ವರ್ಗೀಸ್

(ನ್ಯೂಸ್ ಕಡಬ) newskadaba.com ಕಡಬ, ಡಿ.15. ಕಡಬ ಅಂಬೇಡ್ಕರ್ ಭವನದ ಹತ್ತಿರ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಖಾದಿರಿಸಿದ 1.73 ಎಕ್ರೆ ಸ್ಥಳವನ್ನು ಭೂಮಾಪನಾ ಇಲಾಖೆಯಿಂದ ಸರ್ವೇ ಮಾಡಿ ಗಡಿ ಗುರುತು ಮಾಡುವ ಕಾರ್ಯ ಬುಧವಾರದಂದು ನಡೆಯಿತು. ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರವರ ನೇತೃತ್ವದಲ್ಲಿ ಭೂಮಾಪನಾ ಇಲಾಖೆ ಹಾಗೂ ಕೆಎಸ್ಆರ್ಟಿಸಿ ವತಿಯಿಂದ ಜಂಟಿ ಸರ್ವೇ ನಡೆಸಿ ಬಸ್ ನಿಲ್ದಾಣಕ್ಕೆ ಗಡಿ ಗುರುತು ಮಾಡುವುದರ ಮೂಲಕ ಭೂಮಿ ಕಾದಿರಿಸಲಾಯಿತು. ಈ ಸಂದರ್ಭ ಮಾತನಾಡಿದ ಕಡಬ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್

ಕಡಬದಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸ್ಥಳದ ಗಡಿಗುರುತು ► ತಿಂಗಳೊಳಗೆ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ: ಪಿ.ಪಿ.ವರ್ಗೀಸ್ Read More »

ಕರಾವಳಿ

ಕುಲ್ಕುಂದ: ಸ್ನೇಹಿತರೊಂದಿಗೆ ಮೋಜಿಗಾಗಿ ತೆರಳಿದ ಯುವಕ ನೀರುಪಾಲು ► ಕೊಲೆ ಶಂಕೆ ವ್ಯಕ್ತಪಡಿಸಿದ ಪೋಷಕರು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.14. ಸ್ನೇಹಿತರೊಂದಿಗೆ ಮೋಜು ಮಾಡಲೆಂದು ಸುಬ್ರಹ್ಮಣ್ಯ ರಕ್ಷಿತಾರಣ್ಯದ ಮುಂಗುಳಿಪಾದೆ ಎಂಬಲ್ಲಿನ ಕುಮಾರಧಾರ ನದಿ ತಟಕ್ಕೆ ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರದಂದು ನಡೆದಿದೆ. ಮೃತ ಯುವಕನನ್ನು ಕೊಂಬಾರು ಗ್ರಾಮದ ಕಾಯರ್ತಡ್ಕ ನಿವಾಸಿ ಗಣೇಶ ಎಂಬವರ ಪುತ್ರ ಜಯಪ್ರಕಾಶ್ (19) ಎಂದು ಗುರುತಿಸಲಾಗಿದ್ದು, ಈತ ತನ್ನ ಸ್ನೇಹಿತರಾದ ಮಿಥುನ್, ಸತೀಶ್, ಗುರುಪ್ರಸಾದ್, ಪ್ರವೀಣ್, ಅನಿಲ್ ಕುಮಾರ್ ರವರೊಂದಿಗೆ ಮೋಜು ಮಾಡಲೆಂದು ಬುಧವಾರದಂದು ಆಗಮಿಸಿದ್ದರೆನ್ನಲಾಗಿದೆ. ಮಧ್ಯಾಹ್ನ ಹೊಳೆ ಬದಿಯಲ್ಲಿ ಕೋಳಿ ಪದಾರ್ಥ

ಕುಲ್ಕುಂದ: ಸ್ನೇಹಿತರೊಂದಿಗೆ ಮೋಜಿಗಾಗಿ ತೆರಳಿದ ಯುವಕ ನೀರುಪಾಲು ► ಕೊಲೆ ಶಂಕೆ ವ್ಯಕ್ತಪಡಿಸಿದ ಪೋಷಕರು Read More »

ಕರಾವಳಿ

ಸಂಪೂರ್ಣ ಹದಗೆಟ್ಟಿರುವ ಕಾಯರಡ್ಕ – ಪೆರಿಯಶಾಂತಿ ರಸ್ತೆ ದುರಸ್ತಿಗೆ ಆಗ್ರಹ ► ನಾಳೆ ‘ನೀತಿ ತಂಡ’ದಿಂದ ಸಾರ್ವಜನಿಕ ಭಿಕ್ಷಾಟನೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಡಿ.13. ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಇಚಿಲಂಪಾಡಿಯ ಕಾಯರಡ್ಕ- ಪೆರಿಯಶಾಂತಿ ನಡುವಿನ ಎರಡು ಕಿಮೀ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆ ಕಾಮಗಾರಿಗೆ ಆಗ್ರಹಿಸಿ ಇಚಿಲಂಪಾಡಿಯ ನೀತಿ ತಂಡದ ವತಿಯಿಂದ ಡಿಸೆಂಬರ್ 14 ಗುರುವಾರದಂದು ಸಾರ್ವಜನಿಕ ಭಿಕ್ಷಾಟನೆ ನಡೆಸಿ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಲಿದೆ ಎಂದು ನೀತಿ ತಂಡದ ರಾಜ್ಯಾಧ್ಯಕ್ಷರಾದ ಜಯನ್ ಟಿ. ತಿಳಿಸಿದ್ದಾರೆ. ಈ ರಸ್ತೆಯ ಅವ್ಯವಸ್ಥೆ ಬಗ್ಗೆ ನೀತಿ ತಂಡವು ಸಾರ್ವಜನಿಕರ ಸಹಕಾರದೊಂದಿಗೆ 2017 ಮಾರ್ಚ್ 22

ಸಂಪೂರ್ಣ ಹದಗೆಟ್ಟಿರುವ ಕಾಯರಡ್ಕ – ಪೆರಿಯಶಾಂತಿ ರಸ್ತೆ ದುರಸ್ತಿಗೆ ಆಗ್ರಹ ► ನಾಳೆ ‘ನೀತಿ ತಂಡ’ದಿಂದ ಸಾರ್ವಜನಿಕ ಭಿಕ್ಷಾಟನೆ Read More »

ಕರಾವಳಿ

ಜಿಲ್ಲಾ ಮಟ್ಟದ ‘ಸ್ಥಳದಲ್ಲೇ ಮಾದರಿ ತಯಾರಿ’ ಸ್ಪರ್ಧೆ ► ರಾಮಕುಂಜೇಶ್ವರ ಪ್ರೌಢಶಾಲೆಯ ಶಿಕ್ಷಕ ವೆಂಕಟೇಶ ದಾಮ್ಲೆ ರಾಜ್ಯ ಮಟ್ಟಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಡಿ.13. ಜಿಲ್ಲಾಮಟ್ಟದ “ಸ್ಥಳದಲ್ಲೇ ಮಾದರಿ ತಯಾರಿ” ಸ್ಪರ್ಧೆಯಲ್ಲಿ ಹೈಸ್ಕೂಲು ವಿಭಾಗದಿಂದ ಶ್ರೀ ರಾಮಕುಂಜೇಶ್ವರ  ಪ್ರೌಢಶಾಲೆಯ (ಕನ್ನಡ ಮಾಧ್ಯಮ) ಗಣಿತ ಶಿಕ್ಷಕರಾದ ಶ್ರೀ ವೆಂಕಟೇಶ ದಾಮ್ಲೆಯವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ದ.ಕ. ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಪ್ಠಾನ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ – ಇವುಗಳ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ “ಸ್ಥಳದಲ್ಲೇ ಮಾದರಿ ತಯಾರಿ”

ಜಿಲ್ಲಾ ಮಟ್ಟದ ‘ಸ್ಥಳದಲ್ಲೇ ಮಾದರಿ ತಯಾರಿ’ ಸ್ಪರ್ಧೆ ► ರಾಮಕುಂಜೇಶ್ವರ ಪ್ರೌಢಶಾಲೆಯ ಶಿಕ್ಷಕ ವೆಂಕಟೇಶ ದಾಮ್ಲೆ ರಾಜ್ಯ ಮಟ್ಟಕ್ಕೆ Read More »

ಕರಾವಳಿ

ನೆಲ್ಯಾಡಿ-ಬಲ್ಯ ರಸ್ತೆ ಕಾಮಗಾರಿಗೆ ಬಿಡುಗಡೆಯಾಯಿತು 6 ಕೋಟಿ ಅನುದಾನ ► ಸಂಸದ ನಳಿನ್ ಕುಮಾರ್ ಕಟೀಲ್ ರಿಂದ ನಡೆಯಿತು ಗುದ್ದಲಿಪೂಜೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಡಿ.13. ಕೇಂದ್ರ ರಸ್ತೆ ನಿಧಿ(ಸಿಆರ್ಎಫ್)ಯಿಂದ ಬಿಡುಗಡೆಗೊಂಡ 6 ಕೋಟಿ ರೂ.ಅನುದಾನದಲ್ಲಿ ನಡೆಯುವ ನೆಲ್ಯಾಡಿ-ಬಲ್ಯ ರಸ್ತೆಯ ಅಗಲೀಕರಣ ಹಾಗೂ ಮರು ಡಾಮರೀಕರಣ ಕಾಮಗಾರಿಗೆ ಮಂಗಳವಾರದಂದು ಹೊಸಮಜಲುನಲ್ಲಿ ಗುದ್ದಲಿಪುಜೆ ನೆರವೇರಿಸಲಾಯಿತು. ಸಂಸದ ನಳಿನ್ ಕುಮಾರ್ ಕಟೀಲ್ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸುಳ್ಯ ಶಾಸಕ ಎಸ್.ಅಂಗಾರರವರು, ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಸಿಆರ್ಎಫ್ ಯೋಜನೆಯಡಿ ಸಂಸದ ನಳಿನ್ಕುಮಾರ್ ಕಟೀಲ್ 20 ಕೋಟಿ ರೂ. ಅನುದಾನ

ನೆಲ್ಯಾಡಿ-ಬಲ್ಯ ರಸ್ತೆ ಕಾಮಗಾರಿಗೆ ಬಿಡುಗಡೆಯಾಯಿತು 6 ಕೋಟಿ ಅನುದಾನ ► ಸಂಸದ ನಳಿನ್ ಕುಮಾರ್ ಕಟೀಲ್ ರಿಂದ ನಡೆಯಿತು ಗುದ್ದಲಿಪೂಜೆ Read More »

ಕರಾವಳಿ

ಕಡಬ ತಾಲೂಕಿಗೆ ಆಗಮಿಸಿದ ಇಸ್ಕಾನ್ ಧರ್ಮ ಪ್ರಚಾರಾರ್ಥ ಪಾದಯಾತ್ರೆ ► ಜನಾಕರ್ಷಣೆಯಾಗಿರುವ ಗಜ ಗಾತ್ರದ ಬೃಹತ್ ಎತ್ತುಗಳು

(ನ್ಯೂಸ್ ಕಡಬ) newskadaba.com ಕಡಬ, ಡಿ.13. ಇಸ್ಕಾನ್ ಸಂಸ್ಥೆಯು ಧರ್ಮ ಪ್ರಚಾರಾರ್ಥ ಹಾಗೂ ಹರಿನಾಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರವ್ಯಾಪಿ ಹಮ್ಮಿಕೊಂಡಿರುವ 34 ನೇ ವರ್ಷದ ಅಖಿಲ ಭಾರತ ಪಾದಯಾತ್ರೆ ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕೇಂದ್ರವಾದ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಗುರುವಾರದಂದು ತಲುಪಲಿದೆ. 1984 ರಲ್ಲಿ ಪ್ರಾರಂಭವಾದ ಈ ರಥಯಾತ್ರೆಯು 5 ಬಾರಿ ಭಾರತ ದೇಶವನ್ನು ಪ್ರದಕ್ಷಿಣೆಗೈದಿದ್ದು, 6 ಸಲ ಕರ್ನಾಟಕ ರಾಜ್ಯವನ್ನು ಪ್ರವೇಶಿಸಿದೆ. ದ್ವಾರಕೆಯಿಂದ ಹೊರಟು ಕುರುಕ್ಷೇತ್ರ ಬದರಿನಾಥ, ಹರಿದ್ವಾರ, ವೃಂದಾವನ, ಮಾಯಾಪುರ,

ಕಡಬ ತಾಲೂಕಿಗೆ ಆಗಮಿಸಿದ ಇಸ್ಕಾನ್ ಧರ್ಮ ಪ್ರಚಾರಾರ್ಥ ಪಾದಯಾತ್ರೆ ► ಜನಾಕರ್ಷಣೆಯಾಗಿರುವ ಗಜ ಗಾತ್ರದ ಬೃಹತ್ ಎತ್ತುಗಳು Read More »

ರಾಷ್ಟ್ರೀಯ ನ್ಯೂಸ್

ಸೇತುವೆಯಿಂದ ನದಿಗೆ ಉರುಳಿದ ಪ್ರವಾಸಿ ಬಸ್ ► ಮೂವರು ಮೃತ್ಯು, ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.12. ಬೆಂಗಳೂರಿನಿಂದ ಕಣ್ಣೂರಿನ ತಲಶ್ಶೇರಿಯತ್ತ ಪ್ರಯಾಣ ಬೆಳಿಸಿದ್ದ ಪ್ರವಾಸಿ ಬಸ್‌ವೊಂದು ನಿಯಂತ್ರಣ ತಪ್ಪಿ ನದಿಗೆ ಉರುಳಿದ ಘಟನೆ ಪೆರಿಂಗತ್ತೂರ್‌ ಎಂಬಲ್ಲಿ ಮಂಗಳವಾರದಂದು ನಡೆದಿದೆ. ಈ ಅವಘಡದಲ್ಲಿ ಮಹಿಳೆ, ಮಗು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಹಲವರು ಗಾಯಗೊಂಡಿದ್ದಾರೆ‌. ಚಾಲಕನ ನಿಯಂತ್ರಣ ತಪ್ಪಿದ ಬಸ್ ಪೆರಿಂಗತ್ತೂರ್ ಎಂಬಲ್ಲಿನ ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದು ನದಿಗೆ ಉರುಳಿದೆ. ಚಾಲಕ ಬಸ್‌ನಿಂದ ಜಿಗಿದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸೇತುವೆಯಿಂದ ನದಿಗೆ ಉರುಳಿದ ಪ್ರವಾಸಿ ಬಸ್ ► ಮೂವರು ಮೃತ್ಯು, ಹಲವರಿಗೆ ಗಾಯ Read More »

ರಾಷ್ಟ್ರೀಯ ನ್ಯೂಸ್

ಗೊಂದಲಗಳ ಮಧ್ಯೆ ಆರಂಭವಾದ ಉಸ್ತುವಾರಿ ಸಚಿವರ ‘ಸಾಮರಸ್ಯ ನಡಿಗೆ’ ► ಫರಂಗಿಪೇಟೆಯಲ್ಲಿ ಬಸ್‍ಗಳ ಮೇಲೆ ಕಲ್ಲು ತೂರಾಟ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.12. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕೆಲವು ಸ್ವಪಕ್ಷೀಯರ ವಿರೋಧದ ನಡುವೆಯೂ ಫರಂಗಿಪೇಟೆಯಿಂದ ಆರಂಭವಾದ ‘ಸಾಮರಸ್ಯದ ನಡಿಗೆ’ ಕೆಲದೂರ ಕ್ರಮಿಸುವುದಕ್ಕೆ ಮೊದಲೇ ಫರಂಗಿಪೇಟೆಯಲ್ಲಿ ರಾಜಹಂಸ ಸೇರಿದಂತೆ ಕೆಎಸ್ಸಾರ್ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ದುಷ್ಕರ್ಮಿಗಳು ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಇದರಿಂದ ಪ್ರಯಾಣಿಕರಿಗೆ ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಫರಂಗಿಪೇಟೆಯಿಂದ ಮಾಣಿಯವರೆಗೆ ನಡೆಯಲಿರುವ ಸಾಮರಸ್ಯದ ನಡಿಗೆಗೆ ಪೂರ್ವದಲ್ಲೇ ಕಲ್ಲು ತೂರಾಟ ನಡೆಸಿರುವ ದುಷ್ಕರ್ಮಿಗಳು ಜಾಥಾಕ್ಕೆ ಆರಂಭದಲ್ಲೇ

ಗೊಂದಲಗಳ ಮಧ್ಯೆ ಆರಂಭವಾದ ಉಸ್ತುವಾರಿ ಸಚಿವರ ‘ಸಾಮರಸ್ಯ ನಡಿಗೆ’ ► ಫರಂಗಿಪೇಟೆಯಲ್ಲಿ ಬಸ್‍ಗಳ ಮೇಲೆ ಕಲ್ಲು ತೂರಾಟ Read More »

ಕರಾವಳಿ

ಪರಮೇಶ್ ಮೇಸ್ತ ಪ್ರಕರಣದ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ► ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ: ಐಜಿಪಿ ನಿಂಬಾಲ್ಕರ್

(ನ್ಯೂಸ್ ಕಡಬ) newskadaba.com ಹೊನ್ನಾವರ, ಡಿ.11. ಪರೇಶ್ ಮೇಸ್ತ ಸಾವು ಪ್ರಕರಣದ ಬಗ್ಗೆ ಪಕ್ಷವೊಂದು ನೀಡಿದ್ದ ಪತ್ರಿಕಾ ಪ್ರಕಟಣೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಗಳು ವೈಯಕ್ತಿಕ ಹಿತಾಸಕ್ತಿಗಾಗಿ ಅಮಾಯಕ ಮನಸ್ಸುಗಳನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ತಂತ್ರವಾಗಿದೆ ಎಂದು ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಹೇಳಿದ್ದಾರೆ. ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಧರ್ಮದ ಆಧಾರಲ್ಲಿ ಸಮಾಜವನ್ನು ಒಡೆಯುವ ಹಾಗೂ ಕೋಮುಭಾವನೆಯನ್ನು ಕೆರಳಿಸಲು ನಡೆಸಿದ ಷಡ್ಯಂತ್ರವು ಈ ವದಂತಿಗಳ ಹಿಂದೆ ಅಡಗಿದೆ. ಪರಮೇಶ ಮೇಸ್ತ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ

ಪರಮೇಶ್ ಮೇಸ್ತ ಪ್ರಕರಣದ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ► ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ: ಐಜಿಪಿ ನಿಂಬಾಲ್ಕರ್ Read More »

ಕರ್ನಾಟಕ
Scroll to Top