News Kadaba

ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ: ಲಕ್ಷಾಂತರ ಪ್ರಯಾಣಿಕರೊಂದಿಗೆ ರೋಗಿಗಳಿಗೂ ತೊಂದರೆ

(ನ್ಯೂಸ್‌ ಕಡಬ) newskadaba.com, ಡಿ.06 : ಕಳೆದ ಐದಾರು ದಿನಗಳಿಂದ ಇಂಡಿಗೋ (IndiGo) ವಿಮಾನಗಳ ಹಾರಾಟದಲ್ಲಿ ಉಂಟಾಗಿರುವ ಗಣನೀಯ ವ್ಯತ್ಯಯದಿಂದಾಗಿ ಲಕ್ಷಾಂತರ ಸಾಮಾನ್ಯ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಾರಾಟದ ಅನಿಶ್ಚಿತತೆಯು ಹೊರ ರಾಜ್ಯಗಳು ಮತ್ತು ಹೊರ ರಾಷ್ಟ್ರಗಳಲ್ಲಿ ತುರ್ತು ಚಿಕಿತ್ಸೆಗಾಗಿ ತೆರಳಬೇಕಾದ ರೋಗಿಗಳ ಪಾಲಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ವಿಮಾನಗಳು ಸಿಗದೆ ರೋಗಿಗಳು ಮತ್ತು ಅವರ ಕುಟುಂಬಗಳು ಪರದಾಡುವಂತಾಗಿದೆ. ಈ ಬಿಕ್ಕಟ್ಟು ವೈದ್ಯಕೀಯ ಅಗತ್ಯಗಳಿರುವವರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಲಭ್ಯವಾಗುವುದನ್ನು ಕಠಿಣಗೊಳಿಸಿದೆ. ಇಂಡಿಗೋ ಹಾರಾಟದ […]

ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ: ಲಕ್ಷಾಂತರ ಪ್ರಯಾಣಿಕರೊಂದಿಗೆ ರೋಗಿಗಳಿಗೂ ತೊಂದರೆ Read More »

ಬ್ರೇಕಿಂಗ್ ನ್ಯೂಸ್

ವಿಧಾನಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭ

(ನ್ಯೂಸ್‌ ಕಡಬ) newskadaba.com, ಡಿ.06 : ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಅಧಿವೇಶನಕ್ಕೆ ಬೆಳಗಾವಿ ಸಜ್ಜಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರದಲ್ಲಿ ಹೆಚ್ಚುವರಿ ಭದ್ರತೆ ನಿಯೋಜಿಸಲಾಗಿದೆ. ಡಿಸೆಂಬರ್ 19 ವರೆಗೆ 10 ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ 21ಕ್ಕೂ ಹೆಚ್ಚು ವಿಧೇಯಕಗಳ ಮಂಡನೆ ಸಾಧ್ಯತೆ ಇದೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ. ವಿಪಕ್ಷಗಳ ಅಸ್ತ್ರಗಳನ್ನು ಎದುರಿಸಲು ಸರ್ಕಾರ ಕೂಡ ತಯಾರಾಗಿದೆ. ಅಧಿವೇಶನದ ಮೊದಲ ದಿನದ ಕಲಾಪ

ವಿಧಾನಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಲ್ಪ ಇಳಿಕೆ ಇಂದಿನ ಚಿನ್ನದ ದರ

(ನ್ಯೂಸ್‌ ಕಡಬ) newskadaba.com, ಡಿ.06  ಚಿನ್ನದ ದರದಲ್ಲಿ ಇಂದು ಭಾರೀ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 50 ರೂ. ಇಳಿಕೆ ಕಂಡು ಬಂದಿದ್ದು 11,930 ರೂ ಇದೆ. 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನ 54 ರೂ. ಇಳಿಕೆ ಕಂಡು ಬಂದಿದ್ದು, 13,015 ರೂ. ಇದೆ. 22 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 95,440 ರೂ. ಇದ್ದರೆ, 10 ಗ್ರಾಂಗೆ ನೀವು 1,19,300 ರೂ. ಮತ್ತು 100

ಅಲ್ಪ ಇಳಿಕೆ ಇಂದಿನ ಚಿನ್ನದ ದರ Read More »

ಕರಾವಳಿ, ಕರ್ನಾಟಕ

ಇಂಡಿಗೋ ವಿಮಾನ ರದ್ದಾದ ಕಾರಣ ಆನ್ ಲೈನ್ ಮೂಲಕ ವಧು-ವರರ ಆರತಕ್ಷತೆ ಕಾರ್ಯಕ್ರಮ

(ನ್ಯೂಸ್‌ ಕಡಬ) newskadaba.com, ಡಿ.06 : ನವೆಂಬರ್ 23ರಂದು ಭುವನೇಶ್ವರದಲ್ಲಿ ಮದುವೆಯಾಗಿದ್ದ ಮೇಧಾ ಕ್ಷೀರಸಾಗರ ಮತ್ತು ಸಂಗಮ ದಾಸ್‌ ಅವರಿಗಾಗಿ ನಗರದಲ್ಲಿ ಬುಧವಾರ ದೊಡ್ಡ ಗುಜರಾತ್ ಭವನದಲ್ಲಿ ಆರತಕ್ಷತೆ ಆಯೋಜಿಸಲಾಗಿತ್ತು. ಆದರೆ ವಧು-ವರರು ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ. ಇದಕ್ಕೆಲ್ಲ ಕಾರಣ ಇಂಡಿಗೋ ಎಂದು ಪೋಷಕರು ಕಿಡಿಕಾರಿದ್ಧಾರೆ. ಭುವನೇಶ್ವರದಿಂದ ಹುಬ್ಬಳ್ಳಿಗೆ ವಧು-ವರರು ವಿಮಾನ ಪ್ರಯಾಣ ಮಾಡಲು ಟಿಕೆಟ್‌ ಬುಕ್ ಮಾಡಿಕೊಂಡಿದ್ದರು. ಆದರೆ, ಇಂಡಿಗೋ ಏರ್‌ಲೈನ್ಸ್‌ ವಿಮಾನ ರದ್ದು ಮತ್ತು ವಿಳಂಬದ ಕಾರಣ ಅವರು ಹುಬ್ಬಳ್ಳಿಗೆ ತಲುಪಲಾಗಲಿಲ್ಲ. ಡಿಸೆಂಬರ್ 2ರಿಂದ 3ರವರೆಗೆ

ಇಂಡಿಗೋ ವಿಮಾನ ರದ್ದಾದ ಕಾರಣ ಆನ್ ಲೈನ್ ಮೂಲಕ ವಧು-ವರರ ಆರತಕ್ಷತೆ ಕಾರ್ಯಕ್ರಮ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಟಿಇಟಿ ಪರೀಕ್ಷೆಯಿಂದ ವಿನಾಯಿತಿ

(ನ್ಯೂಸ್‌ ಕಡಬ) newskadaba.com, ಡಿ.05 : ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಸಂಬಂಧಪಟ್ಟ ವಿಷಯಗಳಲ್ಲಿ ಪದವಿ ಪಡೆದಿರುವ ಪ್ರಾಥಮಿಕ ಶಾಲಾ ಶಿಕ್ಷಕರು, 1 ರಿಂದ 5ನೇ ತರಗತಿಗಳಿಗೆ ಬೋಧನೆ ಮಾಡಲು ಟಿಇಟಿ ಪ್ರಮಾಣಪತ್ರ ಕಡ್ಡಾಯ ಎಂಬ ಷರತ್ತಿನಿಂದ ವಿನಾಯಿತಿ ನೀಡಲಾಗಿದೆ. ಆದರೆ, 6ನೇ ಮತ್ತು 7ನೇ ತರಗತಿಗಳಿಗೆ ಹಾಗೂ ಅದಕ್ಕಿಂತ ಮುಂದುವರಿದ ತರಗತಿಗಳ ಶಿಕ್ಷಕರು ಟಿಇಟಿ ಪ್ರಮಾಣಪತ್ರ ಹೊಂದಿರುವುದು ಅಗತ್ಯವಾಗಿದೆ. ಈ ಬಗ್ಗೆ ರಾಜ್ಯ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಟಿಇಟಿ ಪರೀಕ್ಷೆಯಿಂದ ವಿನಾಯಿತಿ Read More »

ಕರ್ನಾಟಕ

ಮತ್ತೆ ಏರಿಕೆ ಕಂಡ ಚಿನ್ನದ ದರ

(ನ್ಯೂಸ್‌ ಕಡಬ) newskadaba.com, ಡಿ.05 : ನಿನ್ನೆಯಷ್ಟೇ ಇಳಿಕೆ ಕಂಡಿದ್ದ ಚಿನ್ನದ ದರ ಇಂದು ಮತ್ತೆ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 25 ರೂ. ಏರಿಕೆ ಕಂಡು ಬಂದಿದ್ದು, 24 ಕ್ಯಾರೆಟ್‌ನ ಒಂದು 27 ರೂ. ಕಂಡು ಬಂದಿದೆ. 22 ಕ್ಯಾರಟ್‌ ಚಿನ್ನದ ಬೆಲೆ 11,910 ರೂ. ಆದರೆ, 24 ಕ್ಯಾರಟ್‌ ಚಿನ್ನದ ದರ 12,993 ರೂ. ಇದೆ. 22 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 95,280 ರೂ.

ಮತ್ತೆ ಏರಿಕೆ ಕಂಡ ಚಿನ್ನದ ದರ Read More »

ಕರ್ನಾಟಕ

ಕಾರಿಗೆ ಡಿಕ್ಕಿ ಹೊಡೆದು ಮನೆ ಮೇಲೆ ಬಿದ್ದ ಬೃಹತ್ ಕ್ರೇನ್; ಮನೆಗೆ ಹಾನಿ

(ನ್ಯೂಸ್‌ ಕಡಬ) newskadaba.com, ಡಿ.05 : ಬೃಹತ್ ಕ್ರೇನ್‌ವೊಂದು ಕಾರೊಂದಕ್ಕೆ ಢಿಕ್ಕಿ ಹೊಡೆದು ಮನೆ ಮೇಲೆ ಬಿದ್ದ ಪರಿಣಾಮ ಮನೆ ಜಖಂಗೊಂಡ ಘಟನೆ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊರಂತಬೆಟ್ಟು ಬಳಿ ಡಿ. 5ರಂದು ಸಂಭವಿಸಿದೆ. ಮುಲ್ಕಿ- ಮೂಡುಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಕಲ್ಲಮುಂಡ್ಕೂರಿನ ಮೊರಂತಬೆಟ್ಡುವಿನ ತಿರುವಿನಲ್ಲಿ ಈ ಘಟನೆ ನಡೆದಿದೆ. ಅತೀ ವೇಗದಲ್ಲಿ ಸಂಚರಿಸುತ್ತಿದ್ದ ಕ್ರೇನ್ ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದಿದೆ. ಇದರಿಂದ ಮನೆಗೆ ಹಾನಿ ಸಂಭವಿಸಿದೆ. ಅವಘಡದ ವೇಳೆ ಮನೆಮಂದಿ ಮನೆಯ ಇನ್ನೊಂದು

ಕಾರಿಗೆ ಡಿಕ್ಕಿ ಹೊಡೆದು ಮನೆ ಮೇಲೆ ಬಿದ್ದ ಬೃಹತ್ ಕ್ರೇನ್; ಮನೆಗೆ ಹಾನಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಇಂಡಿಗೋ ವಿಮಾನ ಸೇವೆಯಲ್ಲಿ ವ್ಯತ್ಯಯ 10 ವಿಮಾನಗಳ ಸಂಚಾರ ರದ್ದು

(ನ್ಯೂಸ್‌ ಕಡಬ) newskadaba.com, ಡಿ.05 : ದೇಶಾದ್ಯಂತ ಇಂಡಿಗೋ ವಿಮಾನ ಸೇವೆಯಲ್ಲಿ ಉಂಟಾದ ವ್ಯತ್ಯಯವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯ ಮೇಲೂ ಪರಿಣಾಮ ಬೀರಿದೆ. ಇದರ ಪರಿಣಾಮವಾಗಿ ಡಿಸೆಂಬರ್ 4 ರಂದು ಆಗಮಿಸುವ ಮತ್ತು ನಿರ್ಗಮಿಸುವ ಒಟ್ಟು 10 ವಿಮಾನಗಳು ರದ್ದಾಗಿವೆ. ಮುಂಬೈ, ನವದೆಹಲಿ ಮತ್ತು ಬೆಂಗಳೂರಿಗೆ ಹೋಗುವ ಮತ್ತು ಬರುವ ವಿಮಾನಗಳು ಗುರುವಾರ ರದ್ದಾಗಿದೆ. ಅನೇಕ ಪ್ರಯಾಣಿಕರಿಗೆ ಕೆಲವು ಗಂಟೆಗಳ ಮುಂಚಿತವಾಗಿ ಮಾಹಿತಿ ರವಾನೆ ಆದ ಕಾರಣದಿಂದ ಬಹುತೇಕರು ವಿಮಾನ ನಿಲ್ದಾಣಕ್ಕೆ ಆಗಮಿಸಲಿಲ್ಲ. ಆದರೆ

ಮಂಗಳೂರು: ಇಂಡಿಗೋ ವಿಮಾನ ಸೇವೆಯಲ್ಲಿ ವ್ಯತ್ಯಯ 10 ವಿಮಾನಗಳ ಸಂಚಾರ ರದ್ದು Read More »

ಕರಾವಳಿ

ಆರ್ಬಿಐ ರೆಪೋ ದರ ಶೇ. 5.25ಕ್ಕೆ ಇಳಿಕೆ

(ನ್ಯೂಸ್‌ ಕಡಬ) newskadaba.com, ಡಿ.05 : ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ ದರವನ್ನು 25 ಮೂಲಾಂಕಗಳಷ್ಟು ಇಳಿಸಿದ್ದು, ಈ ಮೂಲಕ ಶೇ. 5.50ರಷ್ಟು ಇದ್ದ ಬಡ್ಡಿದರವು ಶೇ. 5.25ಕ್ಕೆ ಇಳಿದಿದೆ. ಬುಧವಾರದಿಂದ ನಡೆದ ಎಂಪಿಸಿ ಸಭೆಯ ನಿರ್ಧಾರಗಳನ್ನು ಶುಕ್ರವಾರ ಪ್ರಕಟಿಸಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು, “ಎಂಪಿಸಿಯ ಆರೂ ಸದಸ್ಯರು ಸರ್ವಾನುಮತದಿಂದ ರಿಪೋ ದರವನ್ನು 25 ಮೂಲಾಂಕಗಳಷ್ಟು ಇಳಿಸಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ಈ ಹೊಸ ದರಗಳು ತತ್‌ಕ್ಷಣದಿಂದಲೇ ಜಾರಿಗೆ ಬರುತ್ತವೆ” ಎಂದು ತಿಳಿಸಿದ್ದಾರೆ. “ಅನಿಶ್ಚಿತ

ಆರ್ಬಿಐ ರೆಪೋ ದರ ಶೇ. 5.25ಕ್ಕೆ ಇಳಿಕೆ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಮಂಗಳೂರಿನಲ್ಲಿ ‘ಡಿಜಿಟಲ್ ಅರೆಸ್ಟ್’ ವಂಚನೆ ಯತ್ನ: ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆಯಿಂದ ₹84 ಲಕ್ಷ ಹಣ ಉಳಿತಾಯ

(ನ್ಯೂಸ್‌ ಕಡಬ) newskadaba.com, ಡಿ.05 : ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯಲ್ಲಿ ವೃದ್ಧ ದಂಪತಿಯನ್ನು ಗುರಿಯಾಗಿಸಿ ನಡೆದ ಭೀಕರ ‘ಡಿಜಿಟಲ್ ಅರೆಸ್ಟ್’ (Digital Arrest) ವಂಚನೆಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ವಂಚನೆಯಲ್ಲಿ ದಂಪತಿಗಳ 84 ಲಕ್ಷ ರೂ. ಮೊತ್ತದ ಹಣವನ್ನು ಕದಿಯಲು ಯತ್ನಿಸಲಾಗಿತ್ತು. ಆದರೆ, ದಂಪತಿಯ ಬ್ಯಾಂಕ್ ಮ್ಯಾನೇಜರ್‌ ಅವರ ಸಮಯಪ್ರಜ್ಞೆ ಮತ್ತು ತಕ್ಷಣದ ಕ್ರಮದಿಂದಾಗಿ ಬೃಹತ್ ವಂಚನೆಯು ತಪ್ಪಿದ್ದು, ಮಂಗಳೂರು ಗ್ರಾಮಾಂತರ ಭಾಗದ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿದೆ. ಡಿ. 1ರ ಸಂಜೆ,

ಮಂಗಳೂರಿನಲ್ಲಿ ‘ಡಿಜಿಟಲ್ ಅರೆಸ್ಟ್’ ವಂಚನೆ ಯತ್ನ: ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆಯಿಂದ ₹84 ಲಕ್ಷ ಹಣ ಉಳಿತಾಯ Read More »

ಕರಾವಳಿ
Scroll to Top