News Kadaba

ಬೆಂಗಳೂರು : ಎಲ್ಎಲ್ಆರ್ ಪರೀಕ್ಷೆಗೆ ಹೊಸ ನಿಯಮ; ಅರ್ಜಿ ಸಲ್ಲಿಸಿದ 7 ದಿನಗಳಲ್ಲಿ ಟೆಸ್ಟ್ ಕಡ್ಡಾಯ

(ನ್ಯೂಸ್‌ ಕಡಬ) newskadaba.com, ಡಿ.09: ವಾಹನ ಚಾಲನಾ ಕಲಿಕಾ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸುವವರಿಗೆ ಜನವರಿ 1, 2026 ರಿಂದ ಹೊಸ ಮತ್ತು ಕಟ್ಟುನಿಟ್ಟಿನ ನಿಯಮ ಜಾರಿಗೆ ಬರಲಿದೆ. ಅರ್ಜಿದಾರರು, ಅರ್ಜಿ ಸಲ್ಲಿಸಿದ ಏಳು ದಿನಗಳ ಒಳಗೆ ಕಡ್ಡಾಯವಾಗಿ ಆನ್‌ಲೈನ್ ಮೂಲಕ ಕಲಿಕಾ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ. ಯೋಗೀಶ್ ಅವರು ತಿಳಿಸಿದ್ದಾರೆ. ಎಲ್‌ಎಲ್‌ಆರ್‌ಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಎನ್‌ಐಸಿ ಅಭಿವೃದ್ಧಿಪಡಿಸಿರುವ ಕೇಂದ್ರೀಕೃತ ವೆಬ್ ಆಧಾರಿತ ಸಾರಥಿ ತಂತ್ರಾಂಶವನ್ನು ಬಳಸಬೇಕು. […]

ಬೆಂಗಳೂರು : ಎಲ್ಎಲ್ಆರ್ ಪರೀಕ್ಷೆಗೆ ಹೊಸ ನಿಯಮ; ಅರ್ಜಿ ಸಲ್ಲಿಸಿದ 7 ದಿನಗಳಲ್ಲಿ ಟೆಸ್ಟ್ ಕಡ್ಡಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ

(ನ್ಯೂಸ್‌ ಕಡಬ) newskadaba.com, ಡಿ.09:  ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದ್ದು, 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹13,009 ಮತ್ತು 22 ಕ್ಯಾರಟ್ ಚಿನ್ನದ  ಬೆಲೆ ಪ್ರತಿ ಗ್ರಾಂಗೆ ₹11,925 ಇದೆ; ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ ₹190ಕ್ಕೆ ಏರಿಕೆಯಾಗಿದೆ. ದೇಶದಾದ್ಯಂತ ಚಿನ್ನದ ಬೆಲೆಗಳು ಬದಲಾಗುತ್ತಿದೆ… ಬೆಂಗಳೂರಿನ ಚಿನ್ನದ ದರ 24 ಕ್ಯಾರಟ್ ಚಿನ್ನ (1 ಗ್ರಾಂ): ₹13,009 22 ಕ್ಯಾರಟ್ ಚಿನ್ನ (1 ಗ್ರಾಂ): ₹11,925 18 ಕ್ಯಾರಟ್ ಚಿನ್ನ (1

ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂಡಿಗೋ ವಿಮಾನದಲ್ಲಿ ಪಾರಿವಾಳದ ಹಾರಾಟ – ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ವೈರಲ್

(ನ್ಯೂಸ್‌ ಕಡಬ) newskadaba.com, ಡಿ.09:  ಬೆಂಗಳೂರಿನಿಂದ ವಡೋದರಾ ಕಡೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ ಹಾರಾಡುತ್ತಿದ್ದ ಪಾರಿವಾಳವು ಪ್ರಯಾಣಿಕರಿಗೆ ಅಚ್ಚರಿಯ ಕ್ಷಣಗಳನ್ನು ಉಂಟುಮಾಡಿದ್ದು, ವಿಡಿಯೋ  ವೈರಲ್ ಆಗಿದೆ.ವೈರಲ್ ವೀಡಿಯೊದಲ್ಲಿ, ಪ್ರಯಾಣಿಕರು ಹಾಗೂ ಸಿಬ್ಬಂದಿ ಹಾರಾಟದ ಸಮಯದಲ್ಲಿ ಪಾರಿವಾಳವನ್ನು ಹಿಡಿಯಲು ಯತ್ನಿಸುತ್ತಿರುವುದು ಕಾಣುತ್ತದೆ. ಆದರೆ ಅದು ಅವರಿಂದ ತಪ್ಪಿಸಿಕೊಂಡು ವಿಮಾನದ ಒಳಗೆ ಹಾರುತ್ತಲೇ ಮುಂದುವರಿಯುತ್ತಿತ್ತು. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ದೃಶ್ಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. “ವಿಮಾನದಲ್ಲಿ ಅಚ್ಚರಿಯ ಉಡುಗೊರೆಯನ್ನು ಪಡೆದೆ, ಪ್ರಯಾಣವು ಸಂತೋಷದಿಂದ ಮತ್ತು ನಗುವಿನ ವಾತಾವರಣದಲ್ಲಿ ಮುಗಿಯಿತು,” ಎಂದು

ಇಂಡಿಗೋ ವಿಮಾನದಲ್ಲಿ ಪಾರಿವಾಳದ ಹಾರಾಟ – ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ವೈರಲ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಣಿಪಾಲ ಸಮೀಪದ ಮಂಚಿಯಲ್ಲಿ ಕೋಳಿ ಅಂಕಕ್ಕೆ ದಾಳಿ- 8 ಮಂದಿ ವಶಕ್ಕೆ

(ನ್ಯೂಸ್‌ ಕಡಬ) newskadaba.com, ಡಿ.09 ಮಣಿಪಾಲ: ಡಿ.7ರಂದು ಮಧ್ಯಾಹ್ನ ಕೋಳಿ ಅಂಕ ನಡೆಸುತ್ತಿದ್ದ ಎಂಟು ಮಂದಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಜಯ ದೇವಾಡಿಗ, ದಯಾನಂದ ಪೂಜಾರಿ, ಪ್ರಜ್ವಲ್, ಅಚ್ಚಣ್ಣ ಮೂಲ್ಯ, ಸಚಿನ್, ಪ್ರದೀಪ್, ಅಮೀರ್, ಫಾರೂಕ್ ಅಹಮ್ಮದ್ ಬಂಧಿತ ಆರೋಪಿಗಳು. ಇವರಿಂದ 6500ರೂ. ಮೌಲ್ಯದ 4 ಕೋಳಿಗಳು, 15 ವಾಹನಗಳು ಹಾಗೂ 22100ರೂ. ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ ಸಮೀಪದ ಮಂಚಿಯಲ್ಲಿ ಕೋಳಿ ಅಂಕಕ್ಕೆ ದಾಳಿ- 8 ಮಂದಿ ವಶಕ್ಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗ್ಯಾಸ್ ಗೀಸರ್ ಸೋರಿಕೆಯಿಂದ ತಾಯಿ- ಮಗು ಮೃತ್ಯು

(ನ್ಯೂಸ್‌ ಕಡಬ) newskadaba.com, ಡಿ.09 :ಗ್ಯಾಸ್ ಗೀಸರ್ ಸೋರಿಕೆಯಿಂದ ತಾಯಿ – ಮಗು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ನಡೆದಿದೆ. ಮೃತರನ್ನು ಚಾಂದಿನಿ (26), ಯುವಿ (4) ಎಂದು ಗುರುತಿಸಲಾಗಿದೆ. ಸೋಮವಾರ (ಡಿ.8) ಮಧ್ಯಾಹ್ನ ಸ್ನಾನಕ್ಕೆಂದು ತೆರಳಿದ್ದಾಗ ಗ್ಯಾಸ್ ಸೋರಿಕೆಯಾಗಿ ಅಸ್ವಸ್ಥರಾಗಿದ್ದರು. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪ್ರತಿದಿನ ದೊಡ್ಡ ಮಗಳನ್ನು ಶಾಲೆಯಿಂದ 4 ಗಂಟೆಗೆ ಕರೆದುಕೊಂಡು ಬರಲು ಚಾಂದಿನಿ ಹೋಗುತ್ತಿದ್ದರು. ಆದರೆ ಸೋಮವಾರ ಮಗಳನ್ನು ಕರೆದುಕೊಂಡು

ಗ್ಯಾಸ್ ಗೀಸರ್ ಸೋರಿಕೆಯಿಂದ ತಾಯಿ- ಮಗು ಮೃತ್ಯು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com, ಡಿ.09 :  ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮುಂದಿನ ಒಂದು ವಾರಗಳ ಕಾಲ ಮುಂಜಾನೆ ಚಳಿ ಹಾಗೂ ಅಲ್ಲಲ್ಲಿ ಮಂಜಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ…. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಬೆಳಗಾವಿ ಭಾಗಗಳಲ್ಲಿ ಹೆಚ್ಚಿನ ಚಳಿ ಇರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ

ಇಂದಿನ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಕಂಬಳಕ್ಕೆ ಹೊಸ ನಿಯಮ!

(ನ್ಯೂಸ್‌ ಕಡಬ) newskadaba.com, ಡಿ.08: ತುಳು ನಾಡಿನ ಪರಂಪರೆಯ ಕಂಬಳದಲ್ಲಿ ಈ ವರ್ಷದಿಂದ ಹಲವು ಮಹತ್ವದ ಬದಲಾವಣೆಗಳನ್ನು ಜಾರಿಗೊಳಿಸಲಾಗುತ್ತಿದೆ. ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ, ಅಡ್ಡ ಹಲಗೆ ಮತ್ತು ಕನೆ ಹಲಗೆ ಎಂಬ ಆರು ವಿಭಾಗಗಳಲ್ಲಿ ನಡೆಯುವ ಕಂಬಳ ಸ್ಪರ್ಧೆಗಳಿಗೆ ಸಮಯ ನಿರ್ವಹಣೆ ಮತ್ತು ಅಂಕ ನಿರ್ಧಾರಕ್ಕೆ ಸಂಬಂಧಿಸಿದಂತೆ ಕಂಬಳ ಸಮಿತಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಕನೆ ಹಲಗೆ ವಿಭಾಗದಲ್ಲಿ ಈಗಾಗಲೇ ಇದ್ದ ಗೊಂದಲದ ನಿರ್ವಹಣೆಗೆ ಈ ಬಾರಿ ಸಮಿತಿ

ಮಂಗಳೂರು: ಕಂಬಳಕ್ಕೆ ಹೊಸ ನಿಯಮ! Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ: ಸೈಂಟ್ ಜೋಕಿಮ್ಸ್ ಪ್ರೌಢಶಾಲೆಯಲ್ಲಿ ‘ಉತ್ಸವ 2K25’ ಆಚರಣೆ

(ನ್ಯೂಸ್‌ ಕಡಬ) newskadaba.com, ಡಿ.08: ಸೈಂಟ್ ಜೋಕಿಮ್ಸ್ ಪ್ರೌಢಶಾಲೆಯ ವಾರ್ಷಿಕ ದಿನಾಚರಣೆ ‘ಉತ್ಸವ್ 2K25’ ಸಂಸ್ಥೆಯ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಸ್ಥೆಯ ಹಳೆ ವಿದ್ಯಾರ್ಥಿನಿ  ನಿಶ್ಚಿತಾ ಚೇತನ್ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಇಂದಿನ ಆಧುನಿಕ ಯುಗದಲ್ಲಿ ಸಮಾನವಾಗಿ ಕಾಣುವ ಸನ್ನಿವೇಶ ನಮ್ಮ ಮುಂದಿದೆ. ಕೌಶಲ್ಯಗಳನ್ನು ರೂಢಿಸಿಕೊಳ್ಳಲು ಹೊಸ ಹೊಸ ಪರಿಕಲ್ಪನೆಯ ಇಂತಹ ರಚನಾತ್ಮಕ ಕಾರ್ಯಕ್ರಮಗಳು ಅಗತ್ಯ ಎಂದು ಅತಿಥಿ ಭಾಷಣದಲ್ಲಿ ಅವರು ಹೇಳಿದರು.

ಕಡಬ: ಸೈಂಟ್ ಜೋಕಿಮ್ಸ್ ಪ್ರೌಢಶಾಲೆಯಲ್ಲಿ ‘ಉತ್ಸವ 2K25’ ಆಚರಣೆ Read More »

ಕರಾವಳಿ

ಉಡುಪಿ: ಪೊಲೀಸ್ ಇಲಾಖೆಯಿಂದ ‘ಪೀಕ್ ಕ್ಯಾಪ್’ ಹಸ್ತಾಂತರ

(ನ್ಯೂಸ್‌ ಕಡಬ) newskadaba.com, ಡಿ.08: ರಾಜ್ಯ ಸರ್ಕಾರದ ಆದೇಶದಂತೆ, ಎಲ್ಲಾ ಪೊಲೀಸ್ ಸಿಬ್ಬಂದಿಗೆ ‘ಪೀಕ್ ಕ್ಯಾಪ್’ ವಿತರಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಉಡುಪಿ ಜಿಲ್ಲೆಯಲ್ಲಿಯೂ ಇದನ್ನು ಜಾರಿಗೆ ತರಲಾಗಿದೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರು ಸಾಂಕೇತಿಕವಾಗಿ ಕ್ಯಾಪ್‌ಗಳನ್ನು ವಿತರಿಸಿದರು. ಜಿಲ್ಲೆಯಲ್ಲಿ 1,400 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳಿದ್ದಾರೆ. ಇವರಲ್ಲಿ ಸುಮಾರು 200 ಪೀಕ್ ಕ್ಯಾಪ್‌ಗಳು ಈಗಾಗಲೇ ಬಂದಿದ್ದು, ವಿತರಣಾ ಪ್ರಕ್ರಿಯೆ ನಡೆಯುತ್ತಿದೆ. ಪೊಲೀಸ್ ಇಲಾಖೆಯ ಮೂಲಗಳ ಪ್ರಕಾರ, ಉಳಿದ ಕ್ಯಾಪ್‌ಗಳು ಹಂತ ಹಂತವಾಗಿ ಬರಲಿವೆ.

ಉಡುಪಿ: ಪೊಲೀಸ್ ಇಲಾಖೆಯಿಂದ ‘ಪೀಕ್ ಕ್ಯಾಪ್’ ಹಸ್ತಾಂತರ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ಗೆ ಕಠಿಣ ನಿಯಮ: ಸಹ ಕೈದಿಗಳಿಗೆ ಕಿರುಕುಳ ಆರೋಪ

(ನ್ಯೂಸ್‌ ಕಡಬ) newskadaba.com, ಡಿ.06 : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಅವರು ತಮ್ಮ ಸಹ ಕೈದಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಈ ಬಾರಿ ದರ್ಶನ್ ಜೈಲು ಸೇರಿದಾಗಿನಿಂದ ಜೈಲಿನಲ್ಲಿ ಕಠಿಣ ನಿಯಮಗಳು ಜಾರಿಯಲ್ಲಿದ್ದು, ಇತ್ತೀಚೆಗೆ ಜೈಲಿನ ಪಾರ್ಟಿ ವಿಡಿಯೋ ವೈರಲ್ ಆದ ನಂತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಜೈಲಿನ ಮುಖ್ಯ ಸೂಪರಿಂಟೆಂಡೆಂಟ್ ಆಗಿ ಐಪಿಎಸ್ ಅಧಿಕಾರಿ ಅಂಶು ಕುಮಾರ್

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ಗೆ ಕಠಿಣ ನಿಯಮ: ಸಹ ಕೈದಿಗಳಿಗೆ ಕಿರುಕುಳ ಆರೋಪ Read More »

ಬ್ರೇಕಿಂಗ್ ನ್ಯೂಸ್
Scroll to Top