News Kadaba

ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ನಾಳೆ ಬಿಡುಗಡೆ

(ನ್ಯೂಸ್‌ ಕಡಬ) newskadaba.com ಡಿ.12: ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ನಾಳೆ (ಡಿಸೆಂಬರ್ 11) ಬಿಡುಗಡೆ ಆಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಬುಕ್ ಮೈ ಶೋನಲ್ಲಿ ಚಾಲ್ತಿಯಲ್ಲಿದೆ. ಸಿನಿಮಾ ಬಿಡುಗಡೆಗೆ ಒಂದು ದಿನ ಮುಂಚಿತವಾಗಿ ‘ಡೆವಿಲ್’ ಸಿನಿಮಾಕ್ಕೆ ಸೆನ್ಸಾರ್ ಮಂಡಳಿಯು ಪ್ರಮಾಣ ಪತ್ರ ನೀಡಿದೆ. ಈ ಮೊದಲು ‘ಡೆವಿಲ್’ ಸಿನಿಮಾ ಡಿಸೆಂಬರ್ 12 ರಂದು ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆದರೆ ಚಿತ್ರತಂಡವು ಸಿನಿಮಾದ ಬಿಡುಗಡೆಯನ್ನು ಡಿಸೆಂಬರ್ 11 ರಂದೇ ಮಾಡುವುದಾಗಿ ಘೋಷಿಸಿತು. ಅಭಿಮಾನಿಗಳ ಒತ್ತಾಯದ ಮೇರೆಗೆ ಈ […]

ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ನಾಳೆ ಬಿಡುಗಡೆ Read More »

ಸಿನಿಮಾ

ಕ್ರೀಡಾಪಟುಗಳಿಗೆ ಅರಣ್ಯ ಮತ್ತು ಪೊಲೀಸ್‌ ಇಲಾಖೆಯ ನೇಮಕಾತಿಯಲ್ಲಿ ಹೆಚ್ಚುವರಿ ಮೀಸಲಾತಿ: ಸಿಎಂ

(ನ್ಯೂಸ್‌ ಕಡಬ) newskadaba.com ಡಿ.12: ಅರಣ್ಯ ಮತ್ತು ಪೊಲೀಸ್‌ ಇಲಾಖೆಯ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಶೇ.3 ಮೀಸಲಾತಿ ನೀಡಲಾಗಿದ್ದು, ಉಳಿದ ಇಲಾಖೆಯಲ್ಲಿ ಶೇ.2ರಷ್ಟು ಹುದ್ದೆಗಳನ್ನು ಕ್ರೀಡಾ ಸಾಧಕರಿಗೆ ಮೀಸಲಿಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕಾಂಗ್ರೆಸ್ಸಿನ ಐವನ್‌ ಡಿಸೋಜಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಳೆದ 3 ವರ್ಷಗಳಲ್ಲಿ ಒಲಿಂಪಿಕ್ಸ್‌, ಪ್ಯಾರಲಿಂಪಿಕ್ಸ್‌, ಏಷಿಯನ್‌ ಗೇಮ್ಸ್‌, ಪ್ಯಾರಾ ಏಷಿಯನ್‌ ಗೇಮ್ಸ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಪದಕ ವಿಜೇತ 13 ಕ್ರೀಡಾಪಟುಗಳಿಗೆ ವಿಶೇಷ ನೇಮಕಾತಿ ನಿಯಮದಡಿ ಅವಕಾಶ

ಕ್ರೀಡಾಪಟುಗಳಿಗೆ ಅರಣ್ಯ ಮತ್ತು ಪೊಲೀಸ್‌ ಇಲಾಖೆಯ ನೇಮಕಾತಿಯಲ್ಲಿ ಹೆಚ್ಚುವರಿ ಮೀಸಲಾತಿ: ಸಿಎಂ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ್ ನಿಧನ

(ನ್ಯೂಸ್‌ ಕಡಬ) newskadaba.com,  ಡಿ.12 : ಕೇಂದ್ರದ ಮಾಜಿ ಗೃಹ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಶಿವರಾಜ್ ಪಾಟೀಲ್(91) ಅವರು ಮಹಾರಾಷ್ಟ್ರದ ಲಾತೂರ್‌ನಲ್ಲಿನ ತಮ್ಮ ನಿವಾಸದಲ್ಲಿ ಶುಕ್ರವಾರ ಬೆಳಗ್ಗೆ 6.30ಕ್ಕೆ ಕೊನೆಯುಸಿರೆಳೆದಿದ್ದಾರೆ. ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಪಾಟೀಲ್ ಅವರು, ತೀವ್ರ ಅನಾರೋಗ್ಯ ಉಂಟಾದ ಪರಿಣಾಮ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಅವರ ನಿಧನಕ್ಕೆ ಎಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಂತಾಪ ವ್ಯಕ್ತಪಡಿಸಿದ್ದಾರೆ. ಪಾಟೀಲ್ 1980 ರಿಂದ 2004 ರವರೆಗೆ ಸತತವಾಗಿ ಏಳು ಬಾರಿ ಲಾತೂರ್ ಲೋಕಸಭಾ

ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ್ ನಿಧನ Read More »

ಬ್ರೇಕಿಂಗ್ ನ್ಯೂಸ್

ಎಸ್‌ಎಸ್‌ಸಿ ಜಿಡಿ ಕಾನ್ಸ್‌ಟೇಬಲ್ ನೇಮಕಾತಿ 2026: 25,487 ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್‌ ಕಡಬ) newskadaba.com,  ಡಿ.12 : ಸಿಬ್ಬಂದಿ ಆಯ್ಕೆ ಆಯೋಗ (SSC)ವು 2026ರ ಸಾಲಿನ ಜನರಲ್ ಡ್ಯೂಟಿ (GD) ಕಾನ್ಸ್‌ಟೇಬಲ್ ಪರೀಕ್ಷೆಯ ಅಧಿಸೂಚನೆಯನ್ನು ಪ್ರಕಟಿಸಿದೆ. ಅರೆಸೈನಿಕ ಪಡೆಗಳಲ್ಲಿ ಸೇರಲು ಬಯಸುವ 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯುಳ್ಳ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 25,487 ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೈಟ್ www.ssc.gov.in ಮೂಲಕ ಡಿಸೆಂಬರ್ 1, 2025

ಎಸ್‌ಎಸ್‌ಸಿ ಜಿಡಿ ಕಾನ್ಸ್‌ಟೇಬಲ್ ನೇಮಕಾತಿ 2026: 25,487 ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಭಾರತದ ವಸ್ತುಗಳಿಗೆ 50% ಸುಂಕ ವಿಧಿಸಲು ಮುಂದಾದ ಮೆಕ್ಸಿಕೋ

(ನ್ಯೂಸ್‌ ಕಡಬ) newskadaba.com,  ಡಿ.12 ಮೆಕ್ಸಿಕೋಸಿಟಿ:ಅಮೆರಿಕ ಸುಂಕ ಸಮರದ ಬೆನ್ನಲ್ಲೇ ಈಗ ಮೆಕ್ಸಿಕೋ ಭಾರತದ ಮೇಲೆ 50% ಸುಂಕ ವಿಧಿಸಲು ಮುಂದಾಗಿದೆ. 2026 ರಿಂದ ಭಾರತ, ಚೀನಾ ಸೇರಿದಂತೆ ಏಷ್ಯ ದೇಶಗಳಿಂದ ಬರುವ ಉತ್ಪನ್ನಗಳಿಗೆ 50% ಸುಂಕ ವಿಧಿಸುವ ಮಸೂದೆಗೆ ಅಲ್ಲಿನ ಮೇಲ್ಮನೆ ಒಪ್ಪಿಗೆ ನೀಡಿದೆ. ಮಸೂದೆಯು ಪರವಾಗಿ 76, ವಿರುದ್ಧವಾಗಿ 5 ಮಂದಿ ಸದಸ್ಯರು ಮತ ಚಲಾಯಿಸುವ ಮೂಲಕ ಮಸೂದೆ ಪಾಸ್‌ ಆಗಿದೆ. ಡೊನಾಲ್ಡ್ ಟ್ರಂಪ್ ಅವರ ‘ಅಮೇರಿಕಾ ಫಸ್ಟ್’ ಕಾರ್ಯಸೂಚಿಯಂತೆಯೇ ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ

ಭಾರತದ ವಸ್ತುಗಳಿಗೆ 50% ಸುಂಕ ವಿಧಿಸಲು ಮುಂದಾದ ಮೆಕ್ಸಿಕೋ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಉಡುಪಿ: ಟೆಂಪೋ ಟೈರ್ ಸ್ಫೋಟಗೊಂಡು ಪಲ್ಟಿ ಮಹಿಳಾ ಕಾರ್ಮಿಕರೊಬ್ಬರು ಮೃತ್ಯು- ಹಲವರಿಗೆ ಗಾಯ

(ನ್ಯೂಸ್‌ ಕಡಬ) newskadaba.com,  ಡಿ.12 ಉಡುಪಿ : ಕಾರ್ಮಿಕರು ಮತ್ತು ಕಾಂಕ್ರೀಟ್ ಉಪಕರಣಗಳನ್ನು ಸಾಗಿಸುತ್ತಿದ್ದ ಟೆಂಪೋ ಟೈರ್ ಸ್ಫೋಟಗೊಂಡು ಪಲ್ಟಿಯಾದ ಪರಿಣಾಮ ಒಬ್ಬ ಮಹಿಳಾ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದು, ಹಲವು ಮಂದಿಗೆ ಗಾಯಗೊಂಡ ಹೆಜಮಾಡಿ ಕನ್ನಂಗಾರು ಬ್ರಹ್ಮಬೈದರ್ಕಳ ಗರಡಿ ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುರುವಾರ ಘಟನೆ ನಡೆದಿದೆ.ಮೃತರನ್ನು ಪಾರ್ವತಿ (30) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಸಾವಿತ್ರಮ್ಮ, ಮಹಾಂತೇಶ್ ಮತ್ತು ಇತರ 5 ಮಂದಿ ಗಾಯಗೊಂಡಿದ್ದಾರೆ. ಮೂಲ್ಕಿಯಿಂದ ಉಡುಪಿ ಕಡೆಗೆ ಸಾಗಿಸುತ್ತಿದ್ದ ಟೆಂಪೋ ವಾಹನದಲ್ಲಿ ಪುರುಷರು ಮತ್ತು

ಉಡುಪಿ: ಟೆಂಪೋ ಟೈರ್ ಸ್ಫೋಟಗೊಂಡು ಪಲ್ಟಿ ಮಹಿಳಾ ಕಾರ್ಮಿಕರೊಬ್ಬರು ಮೃತ್ಯು- ಹಲವರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,  ಡಿ.12: ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂಜಾನೆ ಹಾಗೂ ಸಂಜೆ ವೇಳೆಗೆ ಚಳಿಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅದರ ಜೊತೆ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಇಂದಿನ ಹವಾಮಾನ ವರದಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪಡುಬಿದ್ರೆ: ರಸ್ತೆ ಅಪಘಾತದಲ್ಲಿ ಗೌಜಿ ಇವೆಂಟ್ಸ್ ಮಾಲಕ ಅಭಿಷೇಕ್ ಸಾವು

(ನ್ಯೂಸ್‌ ಕಡಬ) newskadaba.com, ಡಿ.10 ಉಡುಪಿ: ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಯುವ ಉದ್ಯಮಿಯೋರ್ವರು ಮೃತಟಪಟ್ಟ ಘಟನೆ ಪಡುಬಿದ್ರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ನಸುಕಿನ ಜಾವ ಸಂಭವಿಸಿದೆ.ಮೃತ ವ್ಯಕ್ತಿಯನ್ನು ಅಭಿಷೇಕ್ ಯಾನೆ ಅಭಿ (32) ಎಂದು ಗುರುತಿಸಲಾಗಿದೆ. ಬುಧವಾರ ನಸುಕಿನ ಜಾವ 2.20 ರ ಸಮಾರಿಗೆ ಕಾಪುವಿನಲ್ಲಿ ಕಾರ್ಯಕ್ರಮ ಮುಗಿಸಿ ವಾಪಾಸು ತೆರಳುತ್ತಿದ್ದ ವೇಳೆ ಅವರ ಕಾರು ಎರ್ಮಾಳು ತೆಂಕ ಸೇತುವೆ ಸಮೀಪ ತಿರುವಿನಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಳಿಕ ಪಕ್ಕದ ತೆಂಗಿನ ಮರಕ್ಕೆ ಡಿಕ್ಕಿ

ಪಡುಬಿದ್ರೆ: ರಸ್ತೆ ಅಪಘಾತದಲ್ಲಿ ಗೌಜಿ ಇವೆಂಟ್ಸ್ ಮಾಲಕ ಅಭಿಷೇಕ್ ಸಾವು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಂಗಳೂರಿನಲ್ಲಿ ರಸ್ತೆ ಅಪಘಾತ: ಬಂಟ್ವಾಳದ ಯುವಕ ಮೃತ್ಯು

(ನ್ಯೂಸ್‌ ಕಡಬ) newskadaba.com, ಡಿ.10 ಬೆಂಗಳೂರು: ಬೆಂಗಳೂರಿನ ಕೂಡ್ಲು ಗೇಟ್ ಸಮೀಪ ಮಧ್ಯಾಹ್ನ ನಡೆದ ರಸ್ತೆ ಅಪಘಾತವೊಂದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಯುವಕನೋರ್ವ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜಿಲಮೊಗರು ಸಮೀಪದ ಅಲ್ಲಿಪಾದೆ ಎಂಬಲ್ಲಿನ ಯುವಕ ಮುಹಮ್ಮದ್ ಹಾರಿಸ್ (34) ಮೃತಪಟ್ಟ ಯುವಕ. ಮುಹಮ್ಮದ್ ಹಾರಿಸ್ ಬೆಂಗಳೂರಿನ ಏಸಿ ಕಂಪನಿಯೊಂದರಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದು, ಕೆಲಸದ ನಿಮಿತ್ತ ಇಂದು ತನ್ನ ಸಹೋದ್ಯೋಗಿಯೋರ್ವನೊಡನೆ ಬೈಕಿನಲ್ಲಿ ತೆರಳುತ್ತಿದ್ದಾಗ ಗೂಡ್ಸ್ ವಾಹನವು ಹಿಂಬದಿಯಿಂದ ಢಿಕ್ಕಿಯಾಗಿದೆ

ಬೆಂಗಳೂರಿನಲ್ಲಿ ರಸ್ತೆ ಅಪಘಾತ: ಬಂಟ್ವಾಳದ ಯುವಕ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಹಿಳಾ ನೌಕರರಿಗೆ ಮುಟ್ಟಿನ ರಜೆ: ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ನಲ್ಲಿ ಹಿನ್ನಡೆ

(ನ್ಯೂಸ್‌ ಕಡಬ) newskadaba.com, ಡಿ.09  ಬೆಂಗಳೂರು: ಮಹಿಳಾ ಉದ್ಯೋಗಿಗಳಿಗೆ ಕಡ್ಡಾಯ ಮುಟ್ಟಿನ ರಜೆಯನ್ನು ನೀಡಿದ ರಾಜ್ಯ ಸರ್ಕಾರದ ಇತ್ತೀಚಿನ ಆದೇಶದ ವಿರುದ್ಧ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಪರ ವಕೀಲರ ವಾದ ಆಲಿಸಿದ ಹೈಕೋರ್ಟ್​, ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಮಧ್ಯಂತರ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸಲು ಸರ್ಕಾರ ಸ್ವತಂತ್ರವೆಂದು ಹೈಕೋರ್ಟ್ ಏಕಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ. ಉಚ್ಚ ನ್ಯಾಯಾಲಯದ ಮುಂದೆ ಇಂದು ಹೋಟೆಲ್

ಮಹಿಳಾ ನೌಕರರಿಗೆ ಮುಟ್ಟಿನ ರಜೆ: ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ನಲ್ಲಿ ಹಿನ್ನಡೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top