ಮತ್ತೆ ಏರಿಕೆ ಕಂಡ ಚಿನ್ನದ ದರ

(ನ್ಯೂಸ್‌ ಕಡಬ) newskadaba.com, ಡಿ.05 : ನಿನ್ನೆಯಷ್ಟೇ ಇಳಿಕೆ ಕಂಡಿದ್ದ ಚಿನ್ನದ ದರ ಇಂದು ಮತ್ತೆ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 25 ರೂ. ಏರಿಕೆ ಕಂಡು ಬಂದಿದ್ದು, 24 ಕ್ಯಾರೆಟ್‌ನ ಒಂದು 27 ರೂ. ಕಂಡು ಬಂದಿದೆ. 22 ಕ್ಯಾರಟ್‌ ಚಿನ್ನದ ಬೆಲೆ 11,910 ರೂ. ಆದರೆ, 24 ಕ್ಯಾರಟ್‌ ಚಿನ್ನದ ದರ 12,993 ರೂ. ಇದೆ.

22 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 95,280 ರೂ. ಇದ್ದರೆ, 10 ಗ್ರಾಂಗೆ ನೀವು 1,19,100 ರೂ. ಮತ್ತು 100 ಗ್ರಾಂ ಗೆ 11,91,000 ರೂ. ಪಾವತಿಸಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,03,944 ರೂ. ನೀಡಿದರೆ, 10 ಗ್ರಾಂಗೆ ನೀವು 1,29,930 ರೂ. ಮತ್ತು 100 ಗ್ರಾಂಗೆ 12,99,300 ರೂ. ಪಾವತಿಸಬೇಕು.

Scroll to Top