News Kadaba

ಕಾರು ಅಪಘಾತ ➤ ಎಂಟು ಮಂದಿ ಮೃತ್ಯು.!

(ನ್ಯೂಸ್ ಕಡಬ) newskadaba.com ತಮಿಳುನಾಡು, ಡಿ. 24. ಶಬರಿಮಲೆಯಿಂದ ವಾಪಸಾಗುತ್ತಿದ್ದ ಭಕ್ತರ ಕಾರೊಂದು ಕಮರಿಗೆ ಉರುಳಿದ ಪರಿಣಾಮ ಕನಿಷ್ಠ ಎಂಟು ಪ್ರಯಾಣಿಕರು ಮೃತಪಟ್ಟಿರುವ ಘಟನೆ ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿ ವರದಿಯಾಗಿದೆ. ಮೃತರಲ್ಲಿ ಅಪ್ರಾಪ್ತ ಬಾಲಕ ಸೇರಿದ್ದು, ಜಿಲ್ಲೆಯ ಆಂಡಿಪಟ್ಟಿ ನಿವಾಸಿಗಳು. ಇವರೆಲ್ಲರೂ ಶಬರಿಮಲೆಗೆ ಹೋಗಿ ವಾಪಸ್ಸಾಗುತ್ತಿದ್ದರು ಎನ್ನಲಾಗಿದೆ. ಗಾಯಗೊಂಡ ಇಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಡ್ಡಗಾಡು ಮಾರ್ಗದ ತಿರುವಿನಲ್ಲಿ ವಾಹನ ಚಲಾಯಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಏಳು ಜನರು […]

ಕಾರು ಅಪಘಾತ ➤ ಎಂಟು ಮಂದಿ ಮೃತ್ಯು.! Read More »

ಕರ್ನಾಟಕ, ಕ್ರೈಮ್ ನ್ಯೂಸ್

ದಶಪಥ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ  ➤ ಮೂವರು ಮೃತ್ಯು       

(ನ್ಯೂಸ್ ಕಡಬ) newskadaba.com ಚನ್ನಪಟ್ಟಣ, ಡಿ. 24. ರಸ್ತೆ ಅಪಘಾತವುಂಟಾದ ಪರಿಣಾಮ ಮೂವರು ಸ್ಥಳದಲ್ಲೇ 3 ಮೃತಪಟ್ಟು ಹಲವರಿಗೆ ಗಾಯಗೊಂಡ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದ ದಶಪಥ ಹೆದ್ದಾರಿಯಲ್ಲಿ ಸಂಭವಿಸಿದೆ. ತಿರುಪತಿಯಿಂದ ಹಿಂದಿರುಗುತ್ತಿದ್ದ ಟಿಟಿ ವಾಹನವು ಚನ್ನಪಟ್ಟಣದ ಮುದಗೆರೆ ಗೇಟ್ ಬಳಿ ಕ್ಯಾಂಟರ್‌ಗೆ ಡಿಕ್ಕಿಯಾಗಿದ್ದು, ಪರಿಣಾಮ ಟಿಟಿ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿ, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.    

ದಶಪಥ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ  ➤ ಮೂವರು ಮೃತ್ಯು        Read More »

ಕರ್ನಾಟಕ, ಕ್ರೈಮ್ ನ್ಯೂಸ್

ಇಟ್ಟಿಗೆ ಭಟ್ಟಿಯಲ್ಲಿ ಸ್ಫೋಟ ➤ ಆರು ಮಂದಿ ಮೃತ್ಯು..!

(ನ್ಯೂಸ್ ಕಡಬ) newskadaba.com ಪಾಟ್ನಾ ಡಿ. 24. ಇಟ್ಟಿಗೆ ಭಟ್ಟಿಯೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿದ ಪರಿಣಾಮ ಆರು ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ನರೀರ್ ಗಿರ್ ಗ್ರಾಮದಲ್ಲಿ ವರದಿಯಾಗಿದೆ. ಮೃತಪಟ್ಟಿರುವುದರಲ್ಲಿ ಇಟ್ಟಿಗೆ ಭಟ್ಟಿಯ ಮಾಲೀಕ ಮೊಹ್ಮದ್ ಇರ್ಷಾದ್ ಒಬ್ಬರು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜಿತೇಂದ್ರ ಸಿಂಗ್ ಗಂಗ್ವಾರ್ ಹೇಳಿದ್ದಾರೆ. ಘಟನೆಯ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದು, ಗಾಯಾಳುಗಳ ಚಿಕಿತ್ಸೆ ಎಲ್ಲ

ಇಟ್ಟಿಗೆ ಭಟ್ಟಿಯಲ್ಲಿ ಸ್ಫೋಟ ➤ ಆರು ಮಂದಿ ಮೃತ್ಯು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹಾವು ಕಡಿತ ➤ ಆಂಬ್ಯುಲೆನ್ಸ್ ಸಿಗದೇ ಓರ್ವ ಮೃತ್ಯು   

(ನ್ಯೂಸ್ ಕಡಬ) newskadaba.com ಹಾಸನ, ಡಿ. 24. ಅಂಗನವಾಡಿ ಕೇಂದ್ರದ ಆವರಣದಲ್ಲಿ ಹಾವು ಕಚ್ಚಿ ಬಾಲಕನೊಬ್ಬ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡಕಲ್ಲೂರು ಗ್ರಾಮದಲ್ಲಿ ಸಂಭವಿಸಿದೆ. ಮೃತ ಬಾಲಕನನ್ನು ದೊಡ್ಡಕಲ್ಲೂರು ಗ್ರಾಮದ ಯಶವಂತ್-ಗೌರಿ ಎಂಬುವವರ ಪುತ್ರ ರೋಷನ್ (4) ಎಂದು ಗುರುತಿಸಲಾಗಿದೆ. ಅಂಗನವಾಡಿ ಸಹಾಯಕಿ ಮಕ್ಕಳನ್ನು ಕರೆ ತರಲೆಂದು ಮನೆಗಳಿಗೆ ತರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ತಕ್ಷಣವೇ ವಿಷಯ ತಿಳಿದ ಕುಟುಂಬಸ್ಥರು ರೋಷನ್‍ ನನ್ನು ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೈಕ್‍ ನಲ್ಲಿ

ಹಾವು ಕಡಿತ ➤ ಆಂಬ್ಯುಲೆನ್ಸ್ ಸಿಗದೇ ಓರ್ವ ಮೃತ್ಯು    Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ ಲೋಕಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ!

(ನ್ಯೂಸ್ ಕಡಬ) newskadaba.com ನವದೆಹಲಿ,  ಡಿ. 23.  ಈ ಬಾರಿಯ ಸಂಸತ್ ಮುಂಗಾರು ಅಧಿವೇಶನ ಆರು ದಿನ ಮುಂಚಿತವಾಗಿ ಮುಕ್ತಾಯಗೊಂಡಿದೆ.  ಡಿಸೆಂಬರ್ 7 ರಂದು ಆರಂಭವಾಗಿದ್ದ ಅಧಿವೇಶನ ಡಿಸೆಂಬರ್ 29ಕ್ಕೆ ಮುಗಿಯಬೇಕಿತ್ತು. ಆದರೆ, ಆರು ದಿನ ಮುಂಚಿತವಾಗಿ ಮುಕ್ತಾಯವಾಗಿದ್ದು, ಲೋಕಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ಸರ್ಕಾರದ ಪ್ರತಿನಿಧಿಗಳು, ವಿವಿಧ ಪಕ್ಷಗಳ ಪ್ರತಿನಿಧಿಗಳನ್ನೊಳಗೊಂಡ ಲೋಕಸಭಾ ಕಾರ್ಯ ಕಲಾಪ ಸಮಿತಿ ಸಭೆಯಲ್ಲಿ ಅಧಿವೇಶನದ ಅವಧಿಯನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡರು. ಈ ವೇಳೆ ಪ್ರಧಾನಿ

➤ ಲೋಕಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ! Read More »

ಕರ್ನಾಟಕ

ಅರುಣಾಚಲ ಪ್ರದೇಶ: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನ ➤ ಪೈಲಟ್ ಮೃತ್ಯು..!

(ನ್ಯೂಸ್ ಕಡಬ) newskadaba.com ಅರುಣಾಚಲ ಪ್ರದೇಶ, ಡಿ 23 : ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನಕ್ಕೀಡಾಗಿ ಓರ್ವ ಪೈಲಟ್ ಮೃತ್ಯುಗೊಂಡ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದೆ. ಮೃತಪಟ್ಟವರನ್ನು ಪೈಲಟ್ ಲೆಪ್ಟಿನೆಂಟ್ ಕರ್ನಲ್ ಸೌರಬ್ ಯಾದವ್ ಎಂದು ಗುರುತಿಸಲಾಗಿದೆ. ತವಾಂಗ್ ಬಳಿ   ಹಾರಾಟ ನಡೆಸುತ್ತಿದ್ದ ಹೆಲಿಕಾಪ್ಟರ್ ಪತನವಾಗಿದ್ದು, ಅದರಲ್ಲಿದ್ದ ಇಬ್ಬರು ಪ್ರಯಾಣಿಕರನ್ನು ಸ್ಥಳೀಯ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ, ತೀವ್ರವಾಗಿ ಗಾಯಗೊಂಡಿದ್ದ ಪೈಲಟ್ ಲೆಪ್ಟಿನೆಂಟ್ ಕರ್ನಲ್ ಸೌರಬ್ ಯಾದವ್ ಚಿಕಿತ್ಸೆ ವೇಳೆಯಲ್ಲಿ ಮೃತಪಟ್ಟಿರುವುದಾಗಿ ಭಾರತೀಯ

ಅರುಣಾಚಲ ಪ್ರದೇಶ: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನ ➤ ಪೈಲಟ್ ಮೃತ್ಯು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪಾವಂಜೆ ಸೇತುವೆಯಲ್ಲಿ ಸರಣಿ ಅಪಘಾತ ; ಮಹಿಳೆಗೆ ಗಾಯ

(ನ್ಯೂಸ್ ಕಡಬ) newskadaba.com ಹಳೆಯಂಗಡಿ , ಡಿ 23 : ಆಟೋರಿಕ್ಷಾ, ಬಸ್ ಹಾಗೂ ಲಾರಿಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ 66 ರ ಪಾವಂಜೆ ಸೇತುವೆಯಲ್ಲಿ ವರದಿಯಾಗಿದೆ. ಗಾಯಗೊಂಡವರನ್ನು ಮಂಗಳೂರಿ ನಿವಾಸಿ ಸರಸ್ವತಿ ಎಂದು ಗುರುತಿಸಲಾಗಿದೆ. ಸರಸ್ವತಿ ತಮ್ಮ ಪತಿಯೊಂದಿಗೆ ಬಪ್ಪನಾಡು ದೇವಸ್ಥಾನಕ್ಕೆ ರಿಕ್ಷಾದಲ್ಲಿ ಆಗಮಿಸುತ್ತಿದ್ದಾಗ ರಿಕ್ಷಾಗೆ ಉಡುಪಿಯತ್ತ ತೆರಳುತ್ತಿದ್ದ ಮುಂಬೈ ಬಸ್ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಅದರ ಹಿಂದೆ ಇದ್ದ ಲಾರಿಯು ಮುಂಬೈ ಬಸ್ಸಿಗೆ

ಪಾವಂಜೆ ಸೇತುವೆಯಲ್ಲಿ ಸರಣಿ ಅಪಘಾತ ; ಮಹಿಳೆಗೆ ಗಾಯ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಂದಕಕ್ಕೆ ಉರುಳಿದ ಭಾರತೀಯ ಸೇನಾ ವಾಹನ, 16 ಯೋಧರು ಹುತಾತ್ಮ, ನಾಲ್ವರ ಸ್ಥಿತಿ ಗಂಭೀರ!  

(ನ್ಯೂಸ್ ಕಡಬ) newskadaba.com  ಸಿಕ್ಕಿಂ, ಡಿ.23  ಉತ್ತರ ಸಿಕ್ಕಿಂನ ಲಾಚೆನ್ ಪಟ್ಟಣದಲ್ಲಿ ಭಾರತೀಯ ಸೇನೆಯ ವಾಹನವು ಕಂದಕಕ್ಕೆ ಉರುಳಿದ ಪರಿಣಾಮ 16 ಯೋಧರು ಹುತಾತ್ಮರಾಗಿದ್ದು ನಾಲ್ವರ ಯೋಧರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಏರ್ ಲಿಫ್ಟ್ ಮಾಡಲಾಗಿದೆ.  ಅಪಘಾತದಲ್ಲಿ ಸೇನಾ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಗಾಯಗೊಂಡ ನಾಲ್ವರನ್ನು ಏರ್ ಲಿಫ್ಟ್ ಮಾಡಲಾಗಿದೆ. ಹುತಾತ್ಮರಾದವರಲ್ಲಿ ಮೂವರು ಜೂನಿಯರ್ ಕಮಿಷರ್ ಅಧಿಕಾರಿಗಳು ಮತ್ತು 13 ಯೋಧರು ಸೇರಿದ್ದಾರೆ.  ಯೋಧರ ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದ್ದು ಮರಣೋತ್ತರ ಪರೀಕ್ಷೆಗಾಗಿ ಗ್ಯಾಂಗ್‌ಟಾಕ್‌ನ ಸರ್ಕಾರಿ ಎಸ್‌ಟಿಎನ್‌ಎಂ

ಕಂದಕಕ್ಕೆ ಉರುಳಿದ ಭಾರತೀಯ ಸೇನಾ ವಾಹನ, 16 ಯೋಧರು ಹುತಾತ್ಮ, ನಾಲ್ವರ ಸ್ಥಿತಿ ಗಂಭೀರ!   Read More »

ರಾಷ್ಟ್ರೀಯ ನ್ಯೂಸ್

ಜನವಸತಿ ಪ್ರದೇಶದಲ್ಲಿ ತಂಡದಿಂದ ಯುವಕನ ಬರ್ಬರ ಹತ್ಯೆ..!

(ನ್ಯೂಸ್ ಕಡಬ) newskadaba.com  ನವದೆಹಲಿ , ಡಿ 23 : ಯುವಕಯೋರ್ವನನ್ನು ತಂಡವೊಂದು ಥಳಿಸಿ ಜನರ ಎದುರೇ ಹರಿತವಾದ ಆಯುಧದಿಂದ ಇರಿದು ಕೊಲೆಗೈದ ಭೀಕರ ಘಟನೆ ದೆಹಲಿಯ ಬದರ್ ಪುರದಲ್ಲಿ ವರದಿಯಾಗಿದೆ. ಮೃತ ಯುವಕನನ್ನು ಕೇಶವ್ (30) ಎಂದು ಗುರುತಿಸಲಾಗಿದೆ. ಮೂವರು ಯುವಕರ ತಂಡವೊಂದು ಕೇಶವ್ ಬಳಿ ಯಾವುದೋ ವಿಚಾರವಾಗಿ ಮಾತು ಬೆಳೆಸಿದೆ . ಈ ವೇಳೆ ಓರ್ವ ಯುವಕ  ಚಾಕುವಿನಿಂದ ಇರಿಯುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಂಭೀರವಾಗಿ ಗಾಯಗೊಂಡ ಯುವಕನನ್ನು ಏಮ್ಸ್ ಆಸ್ಪತ್ರೆ ದಾಖಲಿಸುವ ಹೊತ್ತಿಗೆ ಯುವಕ

ಜನವಸತಿ ಪ್ರದೇಶದಲ್ಲಿ ತಂಡದಿಂದ ಯುವಕನ ಬರ್ಬರ ಹತ್ಯೆ..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಾಷ್ಟ್ರೀಯ ಕುಸ್ತಿ ➤ ರಾಜ್ಯಕ್ಕೆ ಬೆಳ್ಳಿ ಗರಿ!

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 23.  ಕರ್ನಾಟಕ ಕುಸ್ತಿ ಅಸೋಶಿಯೇಶನ್ ಇತಿಹಾಸದಲ್ಲೆ ಮೊದಲ ಬಾರಿಗೆ ಕರ್ನಾಟಕದ ಕುಸ್ತಿಪಟುಗಳು ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತೀಯ ಕುಸ್ತಿಸಂಘದ ವತಿಯಿಂದ ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕುಸ್ತಿಪಟುಗಳಾದ ಸಂದೀಪ್ ಹಳಲ್ದೆಕರ್ ಬೆಳ್ಳಿ, ದರಿಯಪ್ಪ ಕಂಚಿನ ಪದಕ ಗೆದ್ದಿದ್ದಾರೆ. ಎರಡನೇ ದಿನದಂದು ನಡೆದ ಪಂದ್ಯಾವಳಿಯಲ್ಲಿ ಕರ್ನಾಟಕದ ಹಳಿಯಾಳದ ಸಂದೀಪ್ ಹಳಲ್ದೆಕರ್ ರಾಷ್ಟ್ರೀಯ ನ್ಯಾಷನಲ್ ಫೈನಲ್ ಪಂದ್ಯಾವಳಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡು ಬೆಳ್ಳಿ ಪದಕ ಪಡೆದರು, ಮತ್ತೋರ್ವ

ರಾಷ್ಟ್ರೀಯ ಕುಸ್ತಿ ➤ ರಾಜ್ಯಕ್ಕೆ ಬೆಳ್ಳಿ ಗರಿ! Read More »

ಕರ್ನಾಟಕ, ಕ್ರೀಡಾ ನ್ಯೂಸ್
Scroll to Top