ಪಾವಂಜೆ ಸೇತುವೆಯಲ್ಲಿ ಸರಣಿ ಅಪಘಾತ ; ಮಹಿಳೆಗೆ ಗಾಯ

(ನ್ಯೂಸ್ ಕಡಬ) newskadaba.com ಹಳೆಯಂಗಡಿ , ಡಿ 23 : ಆಟೋರಿಕ್ಷಾ, ಬಸ್ ಹಾಗೂ ಲಾರಿಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ 66 ರ ಪಾವಂಜೆ ಸೇತುವೆಯಲ್ಲಿ ವರದಿಯಾಗಿದೆ.

ಗಾಯಗೊಂಡವರನ್ನು ಮಂಗಳೂರಿ ನಿವಾಸಿ ಸರಸ್ವತಿ ಎಂದು ಗುರುತಿಸಲಾಗಿದೆ.

ಸರಸ್ವತಿ ತಮ್ಮ ಪತಿಯೊಂದಿಗೆ ಬಪ್ಪನಾಡು ದೇವಸ್ಥಾನಕ್ಕೆ ರಿಕ್ಷಾದಲ್ಲಿ ಆಗಮಿಸುತ್ತಿದ್ದಾಗ ರಿಕ್ಷಾಗೆ ಉಡುಪಿಯತ್ತ ತೆರಳುತ್ತಿದ್ದ ಮುಂಬೈ ಬಸ್ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಅದರ ಹಿಂದೆ ಇದ್ದ ಲಾರಿಯು ಮುಂಬೈ ಬಸ್ಸಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.ಗಾಯಗೊಂಡ ಮಹಿಳೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Scroll to Top