News Kadaba

Theft, crime, Robbery

17 ಸಾವಿರ ಬೆಲೆ ಬಾಳುವ ಸೈಕಲ್ ಕಳ್ಳತನ     

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 24. ಬೆಂಗಳೂರು ನಗರದಲ್ಲಿ ಮತ್ತೊಂದು ಸೈಕಲ್ ಕಳ್ಳರ ಗ್ಯಾಂಗ್ ಹುಟ್ಟಿಕೊಂಡಿದ್ದು, ಆಟೋದಲ್ಲಿ ಬಂದ ಕಳ್ಳರ ಗ್ಯಾಂಗ್‌ವೊಂದು ಸೈಕಲ್ ಕದಿಯೋ ವಿಡಿಯೋ ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವರಾಜ್‌ ಎಂಬಾತನಿಗೆ ಸೇರಿದ 17 ಸಾವಿರ ಬೆಲೆ ಬಾಳುವ ಸೈಕಲ್ ಇದಾಗಿದ್ದು, ಜಿಮ್‌ಗೆ ಹೋಗಲು ಸೈಕಲ್‌ನಲ್ಲಿ ಯುವರಾಜ್ ಬಂದಿದ್ದ. ಇನ್ನು ಇದನ್ನು ನೋಡಿದ ಮೂವರು ಕಳ್ಳರು ಆಟೋದಲ್ಲಿ ಬಂದು, ದೂರದಲ್ಲಿ ನಿಂತು ಗಮನಿಸಿ ಯಾರು ಇಲ್ಲದ ವೇಳೆ ಈ ಕೃತ್ಯವನ್ನೆಸಗಿದ್ದಾರೆ.

17 ಸಾವಿರ ಬೆಲೆ ಬಾಳುವ ಸೈಕಲ್ ಕಳ್ಳತನ      Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಹಿಳೆಯ ಕೊಲೆಗೈದು ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಭೂಪ..!

(ನ್ಯೂಸ್ ಕಡಬ) newskadaba.com ದಾವಣಗೆರೆ. ಡಿ. 24. ವ್ಯಕ್ತಿಯೋರ್ವ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿದ ನಂತರ ತಾನೂ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಕೊಲೆಯಾದವರನ್ನು ಚಾಂದ್ ಸುಲ್ತಾನ(28) ಎಂದು ಗುರುತಿಸಲಾಗಿದೆ. ಇವರು ಲೆಕ್ಕ ಪರಿಶೋಧಕರ ಕಚೇರಿಯಲ್ಲಿ ಲೆಕ್ಕ ಪರಿಶೋಧಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿ ಸಾದತ್ ಹರಿಹರ ಮೂಲದವನಾಗಿದ್ದು, ಮೃತ ಮಹಿಳೆಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಸಾದತ್, ಸುಲ್ತಾನಳೊಂದಿಗೆ ಮಾತನಾಡಲು ಬಯಸುವುದಾಗಿ ಹೇಳಿದ್ದಾನೆ. ಸ್ವಲ್ಪ ಹೊತ್ತಿನ ನಂತರ

ಮಹಿಳೆಯ ಕೊಲೆಗೈದು ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಭೂಪ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಐಸಿಐಸಿಐ ಬ್ಯಾಂಕ್ ನಿಂದ ಅಧಿಕಾರ ದುರುಪಯೋಗ ➤ ಮಾಜಿ ಸಿಇಒ ಬಂಧನ..!

(ನ್ಯೂಸ್ ಕಡಬ) newskadaba. com ನವದೆಹಲಿ, ಡಿ. 24. ಐಸಿಐಸಿಐ ಬ್ಯಾಂಕ್ ನಿಂದ ಮಂಜೂರಾದ ಸಾಲ ವಂಚನೆ ಮತ್ತು ಅಕ್ರಮಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ಮಾಜಿ ಸಿಇಒ ಮತ್ತು ಎಂಡಿ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚಾರ್ ಅವರನ್ನು ಸಿಬಿಐ ಬಂಧಿಸಿದೆ.   ವಿಡಿಯೊಕಾನ್‌ ಸಮೂಹಕ್ಕೆ ಸಾಲ ಮಂಜೂರಾತಿಯಲ್ಲಿ ಅಕ್ರಮ ಮತ್ತು ವಂಚನೆ ಆರೋಪ ಇವರ ಮೇಲಿದ್ದು, ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಚಂದಾ ಕೊಚ್ಚರ್,

ಐಸಿಐಸಿಐ ಬ್ಯಾಂಕ್ ನಿಂದ ಅಧಿಕಾರ ದುರುಪಯೋಗ ➤ ಮಾಜಿ ಸಿಇಒ ಬಂಧನ..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಳ್ತಂಗಡಿ: ಗೂಡ್ಸ್ ರಿಕ್ಷಾಕ್ಕೆ ಶಾಲಾ ಬಸ್ ಢಿಕ್ಕಿ ➤ ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 24. ಶಾಲಾ ವಾಹನ ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ವಾಹನದ ಚಾಲಕನೋರ್ವ ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ನಿವಾಸಿ ರಝಾಕ್ (50) ಎಂದು ಗುರುತಿಸಲಾಗಿದೆ. ಗೂಡ್ಸ್ ರಿಕ್ಷಾಕ್ಕೆ ಶಾಲಾ ಮಕ್ಕಳ ಬಸ್ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಬೆಳ್ತಂಗಡಿ: ಗೂಡ್ಸ್ ರಿಕ್ಷಾಕ್ಕೆ ಶಾಲಾ ಬಸ್ ಢಿಕ್ಕಿ ➤ ಓರ್ವ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ➤ ಪ್ರಾಧ್ಯಾಪಕ ಅಮಾನತು

(ನ್ಯೂಸ್ ಕಡಬ) newskadaba.com ಬಳ್ಳಾರಿ, ಡಿ. 23. ಲೈಂಗಿಕ ಕಿರುಕುಳ ಆರೋಪದ ಮೇಲೆ ಇಲ್ಲಿನ ವಿಜಯನಗರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪಿಜಿ ಸೆಂಟರ್‌ನ ಇಂಗ್ಲೀಷ್ ಪ್ರೊಫೆಸರ್ ಡಾ. ಚಾಂದ್‌ ಭಾಷ ಎಂ. ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಆದೇಶ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ವಿಶ್ವವಿದ್ಯಾಲದಯ ರಿಜಿಸ್ಟರ್ ಅವರು ಈ ಆದೇಶವನ್ನು ಜಾರಿ ಮಾಡಿದ್ದು, ಕರ್ನಾಟಕ ಸಿವಿಲ್ ಸೇವೆಗಳ ಕಾಯ್ದೆ ಮತ್ತು ಕಾನೂನಾತ್ಮಕವಾಗಿ ಪಿಎಚ್‌ಡಿ ವಿದ್ಯಾರ್ಥಿನಿ ಸಲ್ಲಿಸಿದ್ದ ಲೈಂಗಿಕ ಕಿರುಕುಳದ ಲಿಖಿತ ಆರೋಪದ ಹಿನ್ನೆಲೆ ಸುದೀರ್ಘ ವಿಚಾರಣೆ ನಡೆಸಿ,

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ➤ ಪ್ರಾಧ್ಯಾಪಕ ಅಮಾನತು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಗ್ರಾಹಕನ ಸೋಗಿನಲ್ಲಿ ಬಂದು ಆರು ಲಕ್ಷ ರೂ. ನಗದು ದೋಚಿ ಪರಾರಿ..!

(ನ್ಯೂಸ್ ಕಡಬ) newskadaba. com ಕಾಪು, ಡಿ. 24. ಇಲ್ಲಿನ ಮುಖ್ಯರಸ್ತೆಯಲ್ಲಿರುವ ಮಹಾಲಸಾ ಟ್ರೇಡರ್ಸ್ ಹಾಲಿನ ಅಂಗಡಿಗೆ ಹಾಲು ಖರೀದಿ ನೆಪದಲ್ಲಿ ಗ್ರಾಹಕನ ಸೋಗಿನಲ್ಲಿ ಬಂದ ನಾಲ್ವರು ಮಾಲಕನಿಂದ ಆರು ಲಕ್ಷ ರೂ. ನಗದು ದೋಚಿ ಪರಾರಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.   ಅಂಗಡಿ ಮಾಲಕ ರಾತ್ರಿ ವೇಳೆ ಬೀಗ ಹಾಕಿ ಮನೆಗೆ ತೆರಳಲು ಸಿದ್ಧರಾಗಿ 4 ದಿನದ ವ್ಯವಹಾರದ ಸುಮಾರು 6 ಲಕ್ಷ ರೂ. ನಗದನ್ನು ಸ್ಕೂಟಿಯಲ್ಲಿ ಇರಿಸಿದ್ದರು. ಈ ವೇಳೆ ಗ್ರಾಹಕನ ಸೋಗಿನಲ್ಲಿ

ಗ್ರಾಹಕನ ಸೋಗಿನಲ್ಲಿ ಬಂದು ಆರು ಲಕ್ಷ ರೂ. ನಗದು ದೋಚಿ ಪರಾರಿ..! Read More »

ಕರಾವಳಿ, ಕ್ರೈಮ್ ನ್ಯೂಸ್

ಅಕ್ರಮ ಮಾದಕ ದ್ರವ್ಯ ಸಾಗಾಟ  ➤ 17 ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಶ್ರೀನಗರ, ಡಿ. 24. ಪಾಕಿಸ್ತಾನದಿಂದ ಅಕ್ರಮವಾಗಿ ಮಾದಕ ದ್ರವ್ಯ ಸರಬರಾಜು ಮಾಡುತ್ತಿದ್ದ ಬೃಹತ್‌ ಜಾಲವನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭೇದಿಸಿದ್ದು, ಐವರು ಪೊಲೀಸರು ಸೇರಿ 17 ಮಂದಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಅಂತಾರಾಷ್ಟ್ರೀಯ ಗಡಿ ಮೂಲಕ ಮಾದಕ ದ್ರವ್ಯ ಸಾಗಿಸುತ್ತಿದ್ದ ಜಾಲವನ್ನು ಪತ್ತೆ ಮಾಡಲಾಗಿದೆ. ಕಣಿವೆ ರಾಜ್ಯದಲ್ಲಿ ವಿವಿಧ ತಂಡಗಳಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡವು ಮಾದಕ ದ್ರವ್ಯ ಸರಬರಾಜು ಮಾಡುತ್ತಿದ್ದವರ ಹೆಡೆಮುರಿ ಕಟ್ಟಿದೆ. ಮಾದಕ ದ್ರವ್ಯ

ಅಕ್ರಮ ಮಾದಕ ದ್ರವ್ಯ ಸಾಗಾಟ  ➤ 17 ಆರೋಪಿಗಳ ಬಂಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಿಎಂಟಿಸಿ, ಮೆಟ್ರೋದಲ್ಲಿ ಮಾಸ್ಕ್ ಕಡ್ಡಾಯ..!  

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 24.. ಚೀನಾದಲ್ಲಿ ಕೊರೊನಾ ಮತ್ತೆ ಆರ್ಭಟ ಹೆಚ್ಚಾಗುತ್ತಿದ್ದಂತೆ ಕರುನಾಡಿನಲ್ಲೂ ಆತಂಕ ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಹಲವು ನಿರ್ಧಾರ ಜಾರಿಗೆ ತಂದಿದ್ದು, ಈ ಮೂಲಕ ಬಿಎಂಟಿಸಿ ಬಸ್​ ಹತ್ತ ಬೇಕು ಅಂದ್ರೆ ಮಾಸ್ಕ್ ಕಡ್ಡಾಯವಾಗಿ ಬೇಕು, ಮಾರ್ಷಲ್​ಗಳು ರಸ್ತೆಗೆ ಇಳಿದಿದ್ದು ನಿಯಮ ಪಾಲಿಸಿಲ್ಲ ಅಂದ್ರೆ ಜೇಬಿಗೆ ದಂಡದ ಬರೆ ಬೀಳಲಿದೆ. ಕೋವಿಡ್‌ ಮಹಾಮಾರಿ ಸೋಂಕು ಮತ್ತೆ ತೀವ್ರವಾಗುವ ಭೀತಿ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೂ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ

ಬಿಎಂಟಿಸಿ, ಮೆಟ್ರೋದಲ್ಲಿ ಮಾಸ್ಕ್ ಕಡ್ಡಾಯ..!   Read More »

ಕರ್ನಾಟಕ, ಕ್ರೈಮ್ ನ್ಯೂಸ್

ಹಾಸನ: ಪ್ರವಾಸಕ್ಕೆ ತೆರಳಿದ್ದ ಖಾಸಗಿ ಬಸ್ ಪಲ್ಟಿ ➤ 7 ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಹಾಸನ, ಡಿ. 23. ಪ್ರವಾಸಕ್ಕೆಂದು ತೆರಳಿದ್ದ ಖಾಸಗಿ ಬಸ್ಸೊಂದು ರಸ್ತೆ ಬದಿ ಉರುಳಿಬಿದ್ದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕುವೆಂಪುನಗರ ಬಳಿ ನಡೆದಿದೆ.   ಕನಕಪುರದಿಂದ ಖಾಸಗಿ ಬಸ್‌ನಲ್ಲಿ ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳು, ಶಿಕ್ಷಕರು ಪ್ರವಾಸ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಬಸ್‌ ಪಲ್ಟಿಯಾಗಿದೆ. ಗಾಯಾಳುಗಳಿಗೆ ಹಾಸನ ಮತ್ತು ಬೇಲೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಪಘಾತ ನಡೆದ ಸ್ಥಳಕ್ಕೆ ಬೇಲೂರು ಪೊಲೀಸರು ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ಹಾಸನ: ಪ್ರವಾಸಕ್ಕೆ ತೆರಳಿದ್ದ ಖಾಸಗಿ ಬಸ್ ಪಲ್ಟಿ ➤ 7 ಮಂದಿಗೆ ಗಾಯ Read More »

ಕರ್ನಾಟಕ, ಕ್ರೈಮ್ ನ್ಯೂಸ್

ದಕ್ಷಿಣ ಕೊಡಗಿನಲ್ಲಿ ವಿಪರೀತ ಆನೆ ಹಾವಳಿ  ➤ ಸಂಕಷ್ಟದಲ್ಲಿ ರೈತರು              

(ನ್ಯೂಸ್ ಕಡಬ) newskadaba.com ಮಡಿಕೇರಿ, ಡಿ. 24. ದಕ್ಷಿಣ ಕೊಡಗಿನ ಕುರ್ಚಿ ಗ್ರಾಮದಲ್ಲಿ ಕಾಡಾನೆಗಳ ದಾಳಿಯಿಂದ ತಮ್ಮ ಭತ್ತದ ಗದ್ದೆಯನ್ನು ರಕ್ಷಿಸಲು ರೈತ ಮತ್ತು ಅವರ ಪತ್ನಿ ರಾತ್ರಿಯಿಡೀ ನಿದ್ದೆಯಿಲ್ಲದೆ ಕಾದು ಕುಳಿತ ಘಟನೆ ನಡೆದಿದೆ. ಆದರೂ, 37 ಗೋಣಿ ಚೀಲಗಳಲ್ಲಿ ಸಂಗ್ರಹಿಸಿಟ್ಟಿದ್ದ ಭತ್ತದ ಇಳುವರಿಯ ಮೇಲೆ ಕಾಡಾನೆಗಳು ದಾಳಿ ನಡೆಸಿವೆ. ವಿ ಚೆಂಗಪ್ಪ ಮತ್ತು ಬೀನಾ ಚೆಂಗಪ್ಪ ದಂಪತಿ ಜೀವನೋಪಾಯಕ್ಕೆ ಬೇಸಾಯವನ್ನು ಅವಲಂಬಿಸಿದ್ದು, ಸುಮಾರು ಐದು ಎಕರೆ ಜಮೀನನ್ನು ಹೊಂದಿದ್ದಾರೆ. ಇದರಲ್ಲಿ ಮೂರು ಎಕರೆ ಭತ್ತವನ್ನು

ದಕ್ಷಿಣ ಕೊಡಗಿನಲ್ಲಿ ವಿಪರೀತ ಆನೆ ಹಾವಳಿ  ➤ ಸಂಕಷ್ಟದಲ್ಲಿ ರೈತರು               Read More »

ಕರಾವಳಿ, ಕರ್ನಾಟಕ
Scroll to Top