Mangalore

ತಾಪಮಾನ ತಗ್ಗಿಸಲು ಗಿಡ ನೆಡುವುದೊಂದೇ ದಾರಿ ➤ ಶ್ರೀ ಮಾಧವ ಉಳ್ಳಾಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 15. ಇತ್ತೀಚಿನ ದಿನಗಳಲ್ಲಿ ಪರಿಸರದ ತಾಪಮಾನ ದಿನೇ ದಿನೇ ಹೆಚ್ಚುತ್ತಿದೆ. ಕಾಡು ಬರಿದಾಗಿ ಗಿಡ ಮರ ನಾಶವಾಗಿ ದೈನಂದಿನ ವಾತಾವರಣದ ಉಷ್ಣತೆ 40ಕ್ಕೆ ತಲುಪುತ್ತಿದೆ. ಇದು ಬಹಳ ಅಪಾಯಕಾರಿ ಬೆಳವಣಿಗೆ. ರಾತ್ರಿ ಚಳಿ ಇದ್ದರೂ ಹಗಲು ಹೊತ್ತು ಅಸಹನೀಯವಾದ ಸೆಖೆ ಇರುತ್ತದೆ. ಈ ರೀತಿ ವಾತಾವರಣದ ವೈಪರೀತ್ಯ ಮಾನವನ ಆರೋಗ್ಯಕ್ಕೆ ಮಾರಕ. ತಕ್ಷಣವೇ ನಾವೆಲ್ಲಾ ಎಚ್ಚೆತ್ತು ಗಿಡ ಮರ ಉಳಿಸಿ, ಬೆಳೆಸಬೇಕು. ಹೆಚ್ಚುತ್ತಿರುವ ತಾಪಮಾನ ತಗ್ಗಿಸಲು ಗಿಡ ನೆಡುವುದೊಂದೇ ದಾರಿ […]

ತಾಪಮಾನ ತಗ್ಗಿಸಲು ಗಿಡ ನೆಡುವುದೊಂದೇ ದಾರಿ ➤ ಶ್ರೀ ಮಾಧವ ಉಳ್ಳಾಲ್ Read More »

ಕರಾವಳಿ

ಗುಜರಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ ➤ ಲಕ್ಷಾಂತರ ರೂಪಾಯಿ ನಷ್ಟ

(ನ್ಯೂಸ್ ಕಡಬ) newskadaba.com ಉಡುಪಿ, ಮಾ. 15. ಗುಜರಿ ಅಂಗಡಿಯ ವಸ್ತುಗಳಿಗೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದ ಘಟನೆ ಉಡುಪಿಯ ಕಿನ್ನಿಮುಲ್ಕಿ ಸ್ವಾಗತ ಗೋಪುರ ಸಮೀಪದ ಗುಜರಿ ಅಂಗಡಿಯಲ್ಲಿ ನಡೆದಿದೆ. ಪ್ಲಾಸ್ಟಿಕ್ ಮತ್ತು ಗುಜರಿ ವಸ್ತುಗಳಿಗೆ ಆಕಸ್ಮಿಕ ಬೆಂಕಿ ತಗುಲಿದೆ ಎನ್ನಲಾಗಿದೆ. ತಡರಾತ್ರಿ ಅಗ್ನಿಶಾಮದಳ ಸಿಬ್ಬಂದಿಗಳು ಹರಸಾಹಸಟ್ಟು ಬೆಂಕಿ ನಂದಿಸಿದರು. ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.    

ಗುಜರಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ ➤ ಲಕ್ಷಾಂತರ ರೂಪಾಯಿ ನಷ್ಟ Read More »

ಕರಾವಳಿ

ಮಾ. 19ರಂದು ಸಾಗರ ಪರಿಕ್ರಮ-2023 ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು,ಮಾ. 15. ಕೇಂದ್ರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ  ಸಚಿವರಾದ ಪರಶೋತ್ತಮ್ ರೂಪಾಲ ಅವರ ಅಧ್ಯಕ್ಷತೆಯಲ್ಲಿ ಸಾಗರ ಪರಿಕ್ರಮ-2023 (ಹಂತ-4) ಕಾರ್ಯಕ್ರಮವನ್ನು ಮಾ. 19ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ನಗರದ ಬಲ್ಲಾಳ್‍ಬಾಗ್ ನಲ್ಲಿರುವ ಟಿ.ಎಂ.ಎ.ಪೈ ಕನ್‍ವೆನ್‍ಷನ್ ಸೆಂಟರ್‍ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ. 19ರಂದು ಸಾಗರ ಪರಿಕ್ರಮ-2023 ಕಾರ್ಯಕ್ರಮ Read More »

ಕರಾವಳಿ

ರಾಮಕುಂಜ ಮತ್ತು ಕೊಯಿಲ ಗ್ರಾ.ಪಂ. ವ್ಯಾಪ್ತಿ         ➤ ಬಿಜೆಪಿ ಮುಖಂಡರಿಂದ ಗೋಳಿತ್ತಡಿ- ಏಣಿತ್ತಡ್ಕ ರಸ್ತೆಯ ತೇಪೆ ಕಾರ್ಯ ಪರಿಶೀಲನೆ       

(ನ್ಯೂಸ್ ಕಡಬ)newskadaba.com ಕಡಬ, ಮಾ.14. ತಾಲೂಕಿನ ರಾಮಕುಂಜ ಮತ್ತು ಕೊಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಗೋಳಿತ್ತಡಿ- ಏಣಿತ್ತಡ್ಕ ರಸ್ತೆಯ ನೆಲ್ಯೋಟ್ಟ ಎಂಬಲ್ಲಿಂದ ತ್ರಿವೇಣಿ ಸರ್ಕಲ್ ತನಕ ನಡೆಯುವ ತೇಪೆ ಕಾರ್ಯವನ್ನು  ಬಿಜೆಪಿ ಮುಖಂಡರು, ಜನಪ್ರತಿನಿದಿಗಳು ಪರಿಶೀಲನೆ ನಡೆಸಿದರು ಎನ್ನಲಾಗಿದೆ. ಗೋಳಿತ್ತಡಿಯಿಂದ ನೆಲ್ಯೊಟ್ಟು ತನಕ ಈಗಾಗಲೇ  ಶಾಸಕರ ಅನುದಾನದಲ್ಲಿ ಸುಮಾರು 4 ಲಕ್ಷ ರೂ ವೆಚ್ಚದಲ್ಲಿ ತೇಪೆ ಕಾರ್ಯ ಮುಗಿದಿದ್ದು ಬಳಿಕದ   ರಸ್ತೆ ತೇಪೆ ಕಾರ್ಯಕ್ಕೆ ಕ್ಷೇತ್ರದ ಶಾಸಕ ,ಸಚಿವ ಎಸ್ ಅಂಗಾರ ಶಿಪಾರಿಸ್ಸಿನ ಮೇರೆಗೆ ಜಿಲ್ಲಾ ಪಂಚಾಯಿತಿಯಿಂದ

ರಾಮಕುಂಜ ಮತ್ತು ಕೊಯಿಲ ಗ್ರಾ.ಪಂ. ವ್ಯಾಪ್ತಿ         ➤ ಬಿಜೆಪಿ ಮುಖಂಡರಿಂದ ಗೋಳಿತ್ತಡಿ- ಏಣಿತ್ತಡ್ಕ ರಸ್ತೆಯ ತೇಪೆ ಕಾರ್ಯ ಪರಿಶೀಲನೆ        Read More »

ಕರಾವಳಿ

ಉದ್ಯೋಗದ ಹೆಸರಿನಲ್ಲಿ 15.34 ಲಕ್ಷ ರೂ. ವಂಚನೆ ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 14. ವಾಟ್ಸ್ ಆಯಪ್‌ನಲ್ಲಿ ಬಂದ ಅರೆಕಾಲಿಕ ಉದ್ಯೋಗದ ಜಾಹೀರಾತನ್ನು ನಂಬಿ ಒಟ್ಟು 15.34 ಲಕ್ಷ ರೂ. ಕಳೆದುಕೊಂಡ ಬಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದು, ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರ ವ್ಯಕ್ತಿಯ ವಾಟ್ಸಾಪ್ ಗೆ ಮಾರ್ಚ್ 4ರಂದು ಅಪರಿಚಿತ ವ್ಯಕ್ತಿಯೋರ್ವ ಅರೆಕಾಲಿಕ ಉದ್ಯೋಗದ ಕುರಿತು ಸಂದೇಶ ಕಳುಹಿಸಿದ್ದು, ಅದರ ಜೊತೆಗೆ ಗೂಗಲ್‌ ಲಿಂಕ್ ಒಂದನ್ನು ಕಳುಹಿಸಲಾಗಿತ್ತು. ಅಲ್ಲದೇ ಟೆಲಿಗ್ರಾಂ ಆಯಪ್‌ ಡೌನ್‌ಲೋಡ್‌ ಮಾಡುವಂತೆ ಸೂಚಿಸಿದ್ದ. ದೂರುದಾರ ವ್ಯಕ್ತಿಯು ಸಂದೇಶದ ಪ್ರಕಾರ

ಉದ್ಯೋಗದ ಹೆಸರಿನಲ್ಲಿ 15.34 ಲಕ್ಷ ರೂ. ವಂಚನೆ ➤ ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಧರ್ಮಸ್ಥಳ ಮಂಜುನಾಥೇಶ್ವರ ದರ್ಶನ ಸಮಯದಲ್ಲಿ ಬದಲಾವಣೆ

(ನ್ಯೂಸ್ ಕಡಬ)newskadaba.com ದಕ್ಷಿಣ ಕನ್ನಡ, ಮಾ.14. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ವಾರ್ಷಿಕ ಬ್ರಹ್ಮಕಲಶದ ನಿಮಿತ್ತ ದೇವರ ದರ್ಶನದ ಸಮಯ ವ್ಯತ್ಯಾಸವಾಗಲಿದ ಅಡಳಿತ ಮಂಡಳಿ ಅಧಿಕೃತ ಮಾಹಿತಿ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡುವ ಹಾಗೂ ದೇವರ ದರ್ಶನ ಪಡೆಯುವ ಭಕ್ತರ ಸಂಖ್ಯೆ ಹೆಚ್ಚಳವಾಗಿದ್ದು, ಈ ಬಾರಿ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ವಾರ್ಷಿಕ ಬ್ರಹ್ಮಕಲಶದ ನಿಮಿತ್ತ ದೇವರ ದರ್ಶನದ ಸಮಯದಲ್ಲಿ ವ್ಯತ್ಯಾಸವಾಗಲಿದೆ. ಭಕ್ತಾದಿಗಳು ಬದಲಾದ

ಧರ್ಮಸ್ಥಳ ಮಂಜುನಾಥೇಶ್ವರ ದರ್ಶನ ಸಮಯದಲ್ಲಿ ಬದಲಾವಣೆ Read More »

ಕರಾವಳಿ

ಪಾಳು ಬಿದ್ದ ಕಟ್ಟಡದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಉಡುಪಿ, ಮಾ. 14. ಕಲ್ಸಂಕ ಜಂಕ್ಷನ್ ಬಳಿ ಇರುವ ಪಾಳು ಬಿದ್ದ ಕಟ್ಟಡದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಅನುಮಾನಸ್ಪದವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. ಸುರತ್ಕಲ್ ಮೂಲದ 32 ವರ್ಷದ ವ್ಯಕ್ತಿಯ ಮೃತದೇಹ ಎನ್ನಲಾಗುತ್ತಿದ್ದು, ಕಟ್ಟಡದಿಂದ ಬಿದ್ದು ಮೃತಪಟ್ಟಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ವ್ಯಕ್ತಿ ಆಯ ತಪ್ಪಿ ಬಿದ್ದು ಮೃತಪಟ್ಟಿರಬಹುದೇ ಅಥವಾ ಯಾರಾದರೂ ತಳ್ಳಿ ಕೊಲೆ ಮಾಡಿರಬಹುದೇ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಪಾಳು ಬಿದ್ದ ಕಟ್ಟಡದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆ Read More »

ಕರಾವಳಿ

ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಢಿಕ್ಕಿ  ➤ ಸವಾರ ಮೃತ್ಯು..!   

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ. 14. ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸವಾರನೋರ್ವ ಮೃತಪಟ್ಟ ಘಟನೆ ನಗರದ ಲೇಡಿಹಿಲ್ ಬಳಿ ನಡೆದಿದೆ. ಮೃತ ಸವಾರನನ್ನು ಮುಹಮ್ಮದ್ ಹನೀಫ್(35) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಓರ್ವ ಗಾಯಗೊಂಡಿದ್ದು, ಗಾಯಾಳುವನ್ನು ಬಂಟ್ವಾಳ ತಾಲೂಕಿನ ಮುಹಮ್ಮದ್ ಖಾಸಿಂ ಎಂದು ಗುರುತಿಸಲಾಗಿದೆ. ಮೃತ ಸವಾರ ಮುಹಮ್ಮದ್ ಹನೀಫ್ ಎಂಬವರು ಲೇಡಿಹಿಲ್ ವೃತ್ತದ ಬಳಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಬಡಿದು, ಬಳಿಕ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಈ ದುರ್ಘಟನೆ

ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಢಿಕ್ಕಿ  ➤ ಸವಾರ ಮೃತ್ಯು..!    Read More »

ಕರಾವಳಿ, ಕ್ರೈಮ್ ನ್ಯೂಸ್

ನಿಷೇಧಿತ ಮಾದಕ ವಸ್ತು ಗಾಂಜಾ ಸಾಗಾಟ ➤ ಆರೋಪಿಗಳು ಅರೆಸ್ಟ್..!

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 14. ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಗಾಂಜಾ ಸಹಿತ ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದ ಘಟನೆ ವರದಿಯಾಗಿದೆ. ಬಂಧಿತರನ್ನು ಬಂಟ್ವಾಳ ಪಾಣೆಮಂಗಳೂರು ಅಲಡ್ಕ ನಿವಾಸಿ ಅಬ್ದುಲ್ ಸಾದಿಕ್ (35) ಹಾಗೂ ಬೆಳ್ತಂಗಡಿ ತಾಲೂಕು ಕಕ್ಕಿಂಜೆ ಗ್ರಾಮದ ನಿವಾಸಿ ನವಾಜ್(24) ಎಂದು ಗುರುತಿಸಲಾಗಿದೆ. ಇವರು ಕಂಕನಾಡಿ ರೈಲ್ವೆ ಸ್ಟೇಷನ್ ನ ಅಳಪೆ ಪರಿಸರದಲ್ಲಿ ಗಾಂಜಾವನ್ನು ಸಾಗಾಟ ಮಾಡುತ್ತಿರುವ ಕುರಿತು ಮಾಹಿತಿ ಪಡೆದ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ.ಹೆಗಡೆಯವರ

ನಿಷೇಧಿತ ಮಾದಕ ವಸ್ತು ಗಾಂಜಾ ಸಾಗಾಟ ➤ ಆರೋಪಿಗಳು ಅರೆಸ್ಟ್..! Read More »

ಕರಾವಳಿ, ಕ್ರೈಮ್ ನ್ಯೂಸ್

ಉಳ್ಳಾಲ: ಅಂತರಾಜ್ಯ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿ    ➤ 30 ಲಕ್ಷ ರೂ. ಮೌಲ್ಯದ ಸೊತ್ತು ಕಳವು

(ನ್ಯೂಸ್ ಕಡಬ)newskadaba.com ಉಳ್ಳಾಲ, ಮಾ.14. ಕೊಚ್ಚಿ,ಕೂಟನ್ನಾಡ್- ಮಂಗಳೂರು, ಬೆಂಗಳೂರು ಅಂತರಾಜ್ಯ ಗ್ಯಾಸ್‌ ಪೈಪ್‌ ಲೈನ್‌ ಕಾಮಗಾರಿಯ ರೂ.30 ಲಕ್ಷ ಬೆಲೆಯ ಸೊತ್ತುಗಳನ್ನು ಕಳವು ನಡೆಸಿರುವ ಘಟನೆ ಹರೇಕಳ ಗ್ರಾಮದ ಇನೋಳಿ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಐಎಲ್‌ ಆಂಡ್‌ ಎಫ್‌ ಎಸ್‌ ಕಂಪೆನಿ ಕಾಮಗಾರಿಯನ್ನು ನಡೆಸುತ್ತಿದ್ದು, ಕಂಪೆನಿಯ ಎಡ್ಮಿನ್‌ ಆಫೀಸರ್‌ ಸತೀಶ್‌ ಪಾಲ್‌ ಎಂಬವರು ನೀಡಿರುವ ದೂರಿನಂತೆ ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಳ್ಳಾಲ: ಅಂತರಾಜ್ಯ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿ    ➤ 30 ಲಕ್ಷ ರೂ. ಮೌಲ್ಯದ ಸೊತ್ತು ಕಳವು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top