Mangalore

ಉಡುಪಿ: ಹದಿಹರೆಯದ ಯುವತಿ ನಾಪತ್ತೆ ➤ ದೂರು ದಾಖಲು

(ನ್ಯೂಸ್ ಕಡಬ)newskadaba.com ಉಡುಪಿ, ಏ.11. ಉಡುಪಿಯಲ್ಲಿ ಹದಿಹರೆಯದ ಯುವತಿ ನಾಪತ್ತೆಯಾಗಿದ್ದಾಳೆ ಎಂದು ವರದಿ ತಿಳಿಸಿದೆ. ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ಅಂಬಾಗಿಲು ಕಕ್ಕುಂಜೆ ಹೌಸ್ ನಿವಾಸಿ ಶ್ರೀಲಕ್ಷ್ಮೀ(19) ನಾಪತ್ತೆಯಾದ ಯುವತಿಯಾಗಿದ್ದಾಳೆ. ಏಪ್ರಿಲ್ 7 ರಂದು ಶ್ರೀ ಲಕ್ಷ್ಮೀ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. 5 ಅಡಿ 6 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ […]

ಉಡುಪಿ: ಹದಿಹರೆಯದ ಯುವತಿ ನಾಪತ್ತೆ ➤ ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಉಡುಪಿ: ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗಾಹುತಿ.!

(ನ್ಯೂಸ್ ಕಡಬ)newskadaba.com ಉಡುಪಿ, ಏ.11. ಶಂಕರಪುರದ ರೈತ ಜೋಸೆಫ್ ಲೋಬೊ ಅವರ ಮನೆಯಲ್ಲಿ ನಿಲ್ಲಿಸಲಾಗಿದ್ದ ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಡೆದಿದೆ. ಈ ಘಟನೆಯನ್ನು ಕುಟುಂಬಸ್ಥರು ವಿಡಿಯೋದಲ್ಲಿ ಸೆರೆ ಹಿಡಿದಿದ್ದು, ಬೆಂಕಿಯಿಂದಾಗಿ ಸ್ಕೂಟರ್‌ನ ಸಮೀಪದಲ್ಲಿದ್ದ ವಸ್ತುಗಳಿಗೂ ಹಾನಿಯಾಗಿದೆ. ಇನ್ನು ಬಿಸಿಲಿನ ಬೇಗೆಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಉಡುಪಿ: ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗಾಹುತಿ.! Read More »

ಕರಾವಳಿ

ಕಾಸರಗೋಡು: ಆಟೋ ರಿಕ್ಷಾದಲ್ಲಿ ಅಕ್ರಮ ಗಾಂಜಾ ಸಾಗಾಟ.! ➤ ಬಂಟ್ವಾಳ ನಿವಾಸಿಗಳಿಬ್ಬರು ಅರೆಸ್ಟ್

(ನ್ಯೂಸ್ ಕಡಬ)newskadaba.com ಕಾಸರಗೋಡು, ಏ.11. ಕರ್ನಾಟಕ ದಿಂದ ಉಪ್ಪಳಕ್ಕೆ ಆಟೋ ರಿಕ್ಷಾದಲ್ಲಿ ಸಾಗಾಟ ಮಾಡುತ್ತಿದ್ದ ಗಾಂಜಾವನ್ನು ಮಂಜೇಶ್ವರ ಪೊಲೀಸರು ವಶಡಿಸಿಕೊಂಡಿದ್ದು, ಬಂಟ್ವಾಳ ನಿವಾಸಿಗಳಿಬ್ಬರನ್ನು ಬಂಧಿಸಿದ್ದಾರೆ. ಬಂಟ್ವಾಳ ಬಿ.ಸಿ ರೋಡ್ ನ ಮುಹಮ್ಮದ್ ಇಮ್ತಿಯಾಜ್(38) ಮತ್ತು ಮುಹಮ್ಮದ್ ಜುನೈದ್(29) ಬಂಧಿತರು ಎಂದು ಗುರುತಿಸಲಾಗಿದೆ. ಇವರಿಂದ ಎರಡೂ ವರೆ ಕಿಲೋ ಗಾಂಜಾ ವನ್ನು ವಶ ಪಡಿಸಿಕೊಂಡಿದ್ದು, ಮಂಜೇಶ್ವರ ಕೆದಂಬಾಡಿ ಕಡೆಯಿಂದ ಕುಂಜತ್ತೂರಿಗೆ ಒಳದಾರಿಯಾಗಿ ಬರುತ್ತಿದ್ದ ಆಟೋ ರಿಕ್ಷಾ ವನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಉಪ್ಪಳ ಕಡೆಗೆ ಸಾಗಾಟ

ಕಾಸರಗೋಡು: ಆಟೋ ರಿಕ್ಷಾದಲ್ಲಿ ಅಕ್ರಮ ಗಾಂಜಾ ಸಾಗಾಟ.! ➤ ಬಂಟ್ವಾಳ ನಿವಾಸಿಗಳಿಬ್ಬರು ಅರೆಸ್ಟ್ Read More »

ಕರಾವಳಿ

ಪಡುಬಿದ್ರಿ: ಪಿಕಪ್ ಮತ್ತು ಸ್ಕೂಟರ್ ನಡುವೆ ಅಪಘಾತ.! ➤ ಸವಾರ ಗಂಭೀರ

(ನ್ಯೂಸ್ ಕಡಬ)newskadaba.com ಪಡುಬಿದ್ರಿ, ಏ.11. ಪಡುಬದ್ರಿ ಸೇತುವೆ ಬಳಿ ಸ್ಕೂಟರ್’ವೊಂದಕ್ಕೆ ಪಿಕಪ್ ಢಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಪಲಿಮಾರು ಶಾಂಭವಿ ಕಂಪೌಂಡು ನಿವಾಸಿ ವಿಜಯ ಪೂಜಾರಿ(68) ಗಾಯಗೊಂಡವರಾಗಿದ್ದಾರೆ ಎಂದು ವರದಿ ತಿಳಿಸಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯ್ ಪೂಜಾರಿ ನಿವೃತ್ತ ಸರಕಾರಿ ಉದ್ಯೋಗಿಯಾಗಿದ್ದರು. ಉಡುಪಿಯಿಂದ ಮನೆಗೆ ಬರುತ್ತಿದ್ದ ಇವರು ಸೇತುವೆ ಬಳಿ ಬರುತ್ತಿರುವ ಸಂದರ್ಭ ಅದೇ ಕಡೆಯಿಂದ ಬಂದ ಪಿಕಪ್ ಡಿಕ್ಕಿಯಾಗಿದೆ. ಸವಾರ ಎಸೆಯಲ್ಪಟ್ಟರೆ ಸ್ಕೂಟರ್

ಪಡುಬಿದ್ರಿ: ಪಿಕಪ್ ಮತ್ತು ಸ್ಕೂಟರ್ ನಡುವೆ ಅಪಘಾತ.! ➤ ಸವಾರ ಗಂಭೀರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Theft, crime, Robbery

ಉಡುಪಿ: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕಳವುಗೈದ ಖದೀಮರು..!

(ನ್ಯೂಸ್ ಕಡಬ)newskadaba.com ಉಡುಪಿ, ಏ.11. ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು ಮಾಡಿರುವ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ. ಶಿರೂರು ಮಾರ್ಕೆಟ್ ಬಳಿ ಹಾರ್ಡ್‌ವೇರ್ ಉದ್ಯಮ ನಡೆಸುತ್ತಿರುವ ಅಜೀಮ್ ಎಂಬವರು ರಾತ್ರಿ ಊಟ ಮಾಡಿ ಮಸೀದಿಗೆ ಪ್ರಾರ್ಥನೆಗೆ ತೆರಳಿ ವಾಪಾಸ್ಸು ಬಂದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಇನ್ನು ನುಗ್ಗಿದ ಕಳ್ಳರು, ಮನೆಯೊಳಗಿದ್ದ 18 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ 12 ಲಕ್ಷ ನಗದು ಕಳವು ಮಾಡಿದ್ದಾರೆ.

ಉಡುಪಿ: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕಳವುಗೈದ ಖದೀಮರು..! Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಬಸ್ ಸೀಟಿನಿಂದ ಬಿದ್ದು ಮಹಿಳೆ ಗಂಭೀರ..!

(ನ್ಯೂಸ್ ಕಡಬ)newskadaba.com ಮಂಗಳೂರು, ಏ.11. ಹಂಪ್ಸ್ ನಲ್ಲಿ ಬಸ್ ದಿಡೀರ್ ಬ್ರೇಕ್ ಹಾಕಿದ ಕಾರಣ ಬಸ್‌ ‌ನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ನಗರದ ಲೇಡಿಹಿಲ್ ಬಳಿ ನಡೆದಿದೆ. ಪಾರ್ವತಮ್ಮ (53) ಗಾಯಗೊಂಡ ಮಹಿಳೆ ಎಂದು ತಿಳಿದುಬಂದಿದೆ. ಪಾರ್ವತಮ್ಮ ತನ್ನ ಪತಿ ಮತ್ತು ಮೊಮ್ಮಗನೊಂದಿಗೆ ಮಂಗಳೂರಿನ ಆಸ್ಪತ್ರೆಗೆಂದು ಬಂದು ಬಸ್ ವೊಂದರಲ್ಲಿ ವಾಪಸ್ ಉಡುಪಿಗೆ ಹೋಗುತ್ತಿದ್ದರು. ಈ ವೇಳೆ ಬಸ್ ಲೇಡಿಹಿಲ್ ಸಾಯಿಬಾಬಾ ಮಂದಿರದ ಬಳಿ ತಲುಪಿದಾಗ ಬಸ್ ಚಾಲಕ

ಮಂಗಳೂರು: ಬಸ್ ಸೀಟಿನಿಂದ ಬಿದ್ದು ಮಹಿಳೆ ಗಂಭೀರ..! Read More »

ಕರಾವಳಿ

ಬೆಳ್ತಂಗಡಿ: ರಸ್ತೆ ಅಪಘಾತ..! ➤ ಓರ್ವ ಸವಾರ ಮೃತ್ಯು

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಏ.11. ಬೈಕ್ ಢಿಕ್ಕಿ ಹೊಡೆದು ಓರ್ವ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾಯನಕೆರೆ ಶಕ್ತಿನಗರದ ಸರ್ಕಲ್ ಬಳಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಶಕ್ತಿನಗರ ಸರ್ಕಲ್ ಬಳಿ ರಾತ್ರಿ ಬೈಕ್ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಬೈಕ್ ನಲ್ಲಿದ್ದ ಸವಾರರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಇವರ ಗುರುತು ಪತ್ತೆಗಾಗಿ ಬೆಳ್ತಂಗಡಿ ಸಂಚಾರಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ

ಬೆಳ್ತಂಗಡಿ: ರಸ್ತೆ ಅಪಘಾತ..! ➤ ಓರ್ವ ಸವಾರ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಉಪ್ಪಿನಂಗಡಿ: ಟ್ಯಾಂಕರ್ ದುರಂತಕ್ಕೆ ಹತ್ತು ವರ್ಷ ! ➤ ಅಚ್ಚಳಿಯದೆ ಉಳಿದ ಕಹಿ ನೆನಪು

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಏ.10. ಉಪ್ಪಿನಂಗಡಿ ಸಮೀಪದ ಪೆರ್ಣೆ ಎಂಬಲ್ಲಿ 2013ರ ಏಪ್ರಿಲ್ 9ರಂದು ಸಂಭವಿಸಿದ ಭೀಕರ ಗ್ಯಾಸ್ ಟ್ಯಾಂಕರ್ ದುರಂತದಲ್ಲಿ ವಿವಿಧ ಕುಟುಂಬಗಳ 13 ಮಂದಿ ಮೃತಪಟ್ಟು, ಹಲವರು ಗಾಯಗೊಂಡು 10 ವರ್ಷಗಳು ಕಳೆದರೂ, ದುರಂತದ ಮಾನಸಿಕ ಗಾಯ ಇನ್ನೂ ಮಾಸಿಲ್ಲ. ಮಂಗಳೂರಿನಿಂದ ಬೆಂಗಳೂರಿನತ್ತ ಅನಿಲ ಸಾಗಾಟದ ಟ್ಯಾಂಕರ್ ಪೆರ್ನೆ ತಿರುವಿನಲ್ಲಿ ಅಪಘಾತಕ್ಕೀಡಾಗಿ ಮಗುಚಿ ಬಿತ್ತು. ಈ ಪರಿಣಾಮ ಅನಿಲ ಸೋರಿಕೆಯುಂಟಾಗಿ ಅಗ್ನಿ ಸ್ಪರ್ಶಗೊಂಡ ಕಾರಣ ಬೆಂಕಿಯ ಕೆನ್ನಾಲಿಗೆಯು ಪರಿಸರದಾದ್ಯಂತ ವ್ಯಾಪಿಸಿ ಮನೆ, ಅಂಗಡಿಯೊಳಗಿದ್ದ ಜನರೆಲ್ಲಾ

ಉಪ್ಪಿನಂಗಡಿ: ಟ್ಯಾಂಕರ್ ದುರಂತಕ್ಕೆ ಹತ್ತು ವರ್ಷ ! ➤ ಅಚ್ಚಳಿಯದೆ ಉಳಿದ ಕಹಿ ನೆನಪು Read More »

ಕರಾವಳಿ

ಹಣ ದ್ವಿಗುಣ ಮಾಡುತ್ತೇನೆಂದು ನಂಬಿಸಿ ವಂಚನೆ!   ➤8.78 ಲಕ್ಷ ರೂ. ದೋಖಾ!!!

(ನ್ಯೂಸ್ ಕಡಬ) newskadaba.com.ಮಂಗಳೂರು,ಏ.10 ಆನ್‌ಲೈನ್‌ನಲ್ಲಿ ಹಣ ದ್ವಿಗುಣ ಮಾಡಲು ಹೋಗಿ ವಂಚನೆಗೊಳಗಾಗಿ ವ್ಯಕ್ತಿಯೊಬ್ಬರು 8.78 ಲಕ್ಷ ರೂ. ಕಳೆದುಕೊಂಡ ಬಗ್ಗೆ ನಗರದ ಸೆನ್ ಠಾಣೆಗೆ ದೂರು ದಾಖಲಿಸಿದ್ದಾರೆ. ವ್ಯಕ್ತಿಯ ವಾಟ್ಸ್ಆ್ಯಪ್ ಗೆ ಅಪರಿಚಿತ ವ್ಯಕ್ತಿ ಪಾರ್ಟ್‌ ಟೈಂ ಉದ್ಯೋಗದ ಸಂದೇಶ ಕಳುಹಿಸಿದ್ದ. ಬಳಿಕ ಟಾಸ್ಕ್ ನೀಡಿದ ಅಪರಿಚಿತ 100 ರೂ. ಪಾವತಿಸಲು ಸೂಚಿಸಿದ್ದ. ಅದರಂತೆ ತಮ್ಮ ಫೋನ್ ಪೇಯಿಂದ ಹಣ ಪಾವತಿಸಿದ್ದಾರೆ. ಬಳಿಕ ಅಪರಿಚಿತ ವ್ಯಕ್ತಿಯು ಟೆಲಿಗ್ರಾಂ ಆ್ಯಪ್ ಲಿಂಕ್ ಕಳುಹಿಸಿ ಅದರಲ್ಲಿ ಹಣವನ್ನು ಆನ್‌ಲೈನ್ ಮೂಲಕ

ಹಣ ದ್ವಿಗುಣ ಮಾಡುತ್ತೇನೆಂದು ನಂಬಿಸಿ ವಂಚನೆ!   ➤8.78 ಲಕ್ಷ ರೂ. ದೋಖಾ!!! Read More »

ಕರ್ನಾಟಕ

ಉಳ್ಳಾಲ: ಅಂಗಡಿಯೊಳಗೆ ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಉಳ್ಳಾಲ, ಏ.10. ಅಂಗಡಿಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ವ್ಯಕ್ತಿಯೋರ್ವರು ಪತ್ತೆಯಾಗಿದ್ದಾರೆ. ತೊಕ್ಕೊಟ್ಟು ಜಂಕ್ಷನ್‌‌ನಲ್ಲಿರುವ ಥ್ರೆಡ್ ಹೌಸ್ ಮಳಿಗೆಯ ಮಾಲಕ ತನ್ನ ಅಂಗಡಿಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕನೀರುತೋಟ ನಿವಾಸಿ ಪ್ರವೀಣ್ ಆಳ್ವ (45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಪ್ರವೀಣ್ ಅವರು ತೊಕ್ಕೊಟ್ಟು ಜಂಕ್ಷನ್ ಬಳಿ ಹೊಲಿಗೆ ನೂಲು ಸೇರಿದಂತೆ ಟೈಲರ್ ಅಂಗಡಿಗಳಿಗೆ ಹೊಲಿಗೆ ಸಂಬಂಧಿಸಿದ ಕಚ್ಚಾ ವಸ್ತುಗಳನ್ನು ಪೂರೈಸುವ ಥ್ರೆಡ್ ಹೌಸ್ ಅಂಗಡಿಯನ್ನು ಹೊಂದಿದ್ದರು. ಪ್ರವೀಣ್ 10 ವರ್ಷಗಳಿಂದ

ಉಳ್ಳಾಲ: ಅಂಗಡಿಯೊಳಗೆ ನೇಣು ಬಿಗಿದು ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top