ಹಣ ದ್ವಿಗುಣ ಮಾಡುತ್ತೇನೆಂದು ನಂಬಿಸಿ ವಂಚನೆ!   ➤8.78 ಲಕ್ಷ ರೂ. ದೋಖಾ!!!

(ನ್ಯೂಸ್ ಕಡಬ) newskadaba.com.ಮಂಗಳೂರು,ಏ.10 ಆನ್‌ಲೈನ್‌ನಲ್ಲಿ ಹಣ ದ್ವಿಗುಣ ಮಾಡಲು ಹೋಗಿ ವಂಚನೆಗೊಳಗಾಗಿ ವ್ಯಕ್ತಿಯೊಬ್ಬರು 8.78 ಲಕ್ಷ ರೂ. ಕಳೆದುಕೊಂಡ ಬಗ್ಗೆ ನಗರದ ಸೆನ್ ಠಾಣೆಗೆ ದೂರು ದಾಖಲಿಸಿದ್ದಾರೆ. ವ್ಯಕ್ತಿಯ ವಾಟ್ಸ್ಆ್ಯಪ್ ಗೆ ಅಪರಿಚಿತ ವ್ಯಕ್ತಿ ಪಾರ್ಟ್‌ ಟೈಂ ಉದ್ಯೋಗದ ಸಂದೇಶ ಕಳುಹಿಸಿದ್ದ.

ಬಳಿಕ ಟಾಸ್ಕ್ ನೀಡಿದ ಅಪರಿಚಿತ 100 ರೂ. ಪಾವತಿಸಲು ಸೂಚಿಸಿದ್ದ. ಅದರಂತೆ ತಮ್ಮ ಫೋನ್ ಪೇಯಿಂದ ಹಣ ಪಾವತಿಸಿದ್ದಾರೆ. ಬಳಿಕ ಅಪರಿಚಿತ ವ್ಯಕ್ತಿಯು ಟೆಲಿಗ್ರಾಂ ಆ್ಯಪ್ ಲಿಂಕ್ ಕಳುಹಿಸಿ ಅದರಲ್ಲಿ ಹಣವನ್ನು ಆನ್‌ಲೈನ್ ಮೂಲಕ ದ್ವಿಗುಣ ಮಾಡಲು 8 ಟಾಸ್ಕ್ ಮಾಡುವಂತೆ ಸೂಚಿಸಿ ವಿವಿಧ ಬ್ಯಾಂಕ್‌ಗಳಿಗೆ ಹಂತ ಹಂತವಾಗಿ ಹಣವನ್ನು ವರ್ಗಾಯಿಸಿಕೊಂಡಿದ್ದ.

 

Scroll to Top