Mangalore

ಮಂಗಳೂರು: ನಂಬರ್ ಪ್ಲೇಟ್ ನಿಯಮ ಉಲ್ಲಂಘನೆ ವಿರುದ್ದ ಕಾರ್ಯಾಚರಣೆ ➤ 87 ಪ್ರಕರಣ ದಾಖಲು

(ನ್ಯೂಸ್ ಕಡಬ)newskadaba.com ಮಂಗಳೂರು, ಏ.13. ನಂಬರ್ ಪ್ಲೇಟ್ ಅಳವಡಿಸದ, ನಂಬರ್ ಪ್ಲೇಟ್ ನಿಯಮ ಮೀರಿದ ವಾಹನಗಳ ವಿರುದ್ದ ನಗರದಾದ್ಯಂತ ಮಂಗಳೂರು ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಾರ್ಯಾಚರಣೆ ವೇಳೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಪ್ಯಾನ್ಸಿ ನಮ್ಬರ್ ಪ್ಲೇಟ್, ಅಸಮರ್ಪಕ ನಂಬರ್ ಪ್ಲೇಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು 87 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಜೈನ್ ತಿಳಿಸಿದ್ದಾರೆ.  

ಮಂಗಳೂರು: ನಂಬರ್ ಪ್ಲೇಟ್ ನಿಯಮ ಉಲ್ಲಂಘನೆ ವಿರುದ್ದ ಕಾರ್ಯಾಚರಣೆ ➤ 87 ಪ್ರಕರಣ ದಾಖಲು Read More »

ಕರಾವಳಿ

ಪುತ್ತೂರು: ವಿವಾಹಿತ ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಪುತ್ತೂರು, ಏ.12. ವಿವಾಹಿತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಟ್ಟಂಪಾಡಿ ಗುಮ್ಮಟಗದ್ದೆ ಎಂಬಲ್ಲಿ ವರದಿಯಾಗಿದೆ. ಗುಮ್ಮಟಗದ್ದೆಯ ನಿವಾಸಿ ಬಾಲಕೃಷ್ಣ ಎಂಬವರ ಪುತ್ರಿ ಪುಣ್ಯಶ್ರೀ(32)ಮೃತ ಯುವತಿ. ಪುಣ್ಯಶ್ರೀಯನ್ನು ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಉದ್ದದಪಳಿಕೆ ನಿವಾಸಿ ಪುರುಶೋತ್ತಮ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಪುಣ್ಯಶ್ರೀ ಕಳೆದ ಕೆಲ ದಿನಗಳ ಹಿಂದೆ ಬೆಳ್ತಂಗಡಿಯ ಪತಿಯ ಮನೆಯಿಂದ ತನ್ನ ತವರು ಮನೆಯಾದ ಗುಮ್ಮಟಗದ್ದೆಗೆ ಆಗಮಿಸಿದ್ದರು ಎನ್ನಲಾಗಿದೆ. ಎ.10ರಂದು ತನ್ನ ಪತಿಗೆ ವೀಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಅಲ್ಲದೆ

ಪುತ್ತೂರು: ವಿವಾಹಿತ ಮಹಿಳೆ ಆತ್ಮಹತ್ಯೆ Read More »

ಕರಾವಳಿ

ಉಳ್ಳಾಲ: ಎಲ್ಲರೂ ಒಗ್ಗಟ್ಟಿನಿಂದ ಪಕ್ಷಕ್ಕಾಗಿ ದುಡಿಯಲಿದ್ದೇವೆ ➤ ಅಭ್ಯರ್ಥಿ ಸತೀಶ್ ಕುಂಪಲ

(ನ್ಯೂಸ್ ಕಡಬ)newskadaba.com  ಉಳ್ಳಾಲ, ಏ.12. ಪಕ್ಷದೊಳಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಪಕ್ಷದ ಆದೇಶದಂತೆ ಚುನಾವಣೆಗೆ ಸ್ಪರ್ಧಿಸುತ್ತಿದ್ದರೂ ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ, ಪಕ್ಷಕ್ಕಾಗಿ ದುಡಿಯುವ ಕಾರ್ಯವನ್ನು ಹಿಂದಿನಿಂದ ಮಾಡುತ್ತಾ ಬಂದಿದ್ದೇವೆ, ಅಭ್ಯರ್ಥಿಯಾಗಲು ಅವಕಾಶ ಕಲ್ಪಿಸಿಕೊಟ್ಟ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಸತೀಶ್ ಕುಂಪಲ ಹೇಳಿದ್ದಾರೆ. ಉಳ್ಳಾಲ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಮಾತನಾಡಿದ ಅವರು ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ ಎಲ್ಲರೂ ಒಗ್ಗಟ್ಟಿನೊಂದಿಗೆ ದುಡಿಯುವ ಪಣ ತೊಟ್ಟಿದ್ದೇವೆ. ಕುಡಿಯುವ ನೀರಿನ ಸಮಸ್ಯೆಯಿಂದ

ಉಳ್ಳಾಲ: ಎಲ್ಲರೂ ಒಗ್ಗಟ್ಟಿನಿಂದ ಪಕ್ಷಕ್ಕಾಗಿ ದುಡಿಯಲಿದ್ದೇವೆ ➤ ಅಭ್ಯರ್ಥಿ ಸತೀಶ್ ಕುಂಪಲ Read More »

ಕರಾವಳಿ

ಉಡುಪಿ: ಬಿಟ್ ಕಾಯಿನ್ ಹೆಸರಿನಲ್ಲಿ 25 ಲಕ್ಷ ವಂಚನೆ..!

(ನ್ಯೂಸ್ ಕಡಬ)newskadaba.com  ಉಡುಪಿ, ಏ.12. ಬಿಟ್ ಕಾಯಿನ್‌ನಲ್ಲಿ ಹೂಡಿದ ಲಕ್ಷಾಂತರ ರೂ. ಹಣವನ್ನು ವಾಪಾಸು ನೀಡದೆ ಮೋಸ ಮಾಡಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೆಬ್‌ಸೈಟ್‌ನಲ್ಲಿ ವ್ಯಾಲೆಟ್ ಓಪನ್ ಮಾಡಿ ಹಣ ಪಾವತಿಸುವಂತೆ ತಿಳಿಸಿದ್ದ. ಇದನ್ನು ನಂಬಿದ ಆತ್ರೇಯ ಆಚಾರ್ಯ, ಮಾರಚ್ 19ರಿಂದ ಎಪ್ರಿಲ್ 9ರ ಮಧ್ಯಾವಧಿಯಲ್ಲಿ ತುಷಾರ್ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಒಟ್ಟು 25,52,300ರೂ. ಹಣವನ್ನು ಆನ್ ಲೈನ್ ಮೂಲಕ ವರ್ಗಾವಣೆ ಮಾಡಿದ್ದರು. ಆ ಬಳಿಕ ವ್ಯಾಲೇಟ್‌ನಲ್ಲಿದ್ದ ಬಿಟ್ ಕಾಯಿನ್‌ನ್ನು ತುಷಾರ್

ಉಡುಪಿ: ಬಿಟ್ ಕಾಯಿನ್ ಹೆಸರಿನಲ್ಲಿ 25 ಲಕ್ಷ ವಂಚನೆ..! Read More »

ಕರಾವಳಿ

ಉಡುಪಿ: ‘ಪಕ್ಷ ನನ್ನನ್ನು ನಡೆಸಿಕೊಂಡ ರೀತಿಗೆ ನೋವಾಗಿದೆ’ ➤ ರಘುಪತಿ ಭಟ್

(ನ್ಯೂಸ್ ಕಡಬ)newskadaba.com ಉಡುಪಿ, ಏ.12. “ಟಿಕೆಟ್ ತಪ್ಪಿರುವುದಕ್ಕೆ ಬೇಸರವಿಲ್ಲ, ಆದರೆ ಪಕ್ಷ ನನ್ನನ್ನು ನಡೆಸಿಕೊಂಡ ರೀತಿಯಿಂದ ನನಗೆ ನೋವಾಗಿದೆ” ಎಂದು ಶಾಸಕ ಕೆ. ರಘುಪತಿ ಭಟ್ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಶಾಸಕ ಕೆ. ರಘುಪತಿ ಭಟ್ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅವರ ಮನೆ ಮುಂದೆ ನೂರಾರು ಸಂಖ್ಯೆಯ ಕಾರ್ಯಕರ್ತರು ಸೇರಿದ್ದು, ಮಾಧ್ಯಮದೊಂದಿಗೆ ಮಾತನಾಡಿ, “ಪಕ್ಷ ನನ್ನನ್ನು ನಡೆಸಿಕೊಂಡ ರೀತಿಯಿಂದ ನೋವಾಗಿದೆ. ಯಾವೊಬ್ಬ ನಾಯಕರೂ ನನಗೆ ಕಾಲ್ ಮಾಡಿ ಮಾತನಾಡಿಲ್ಲ. ಒಬ್ಬ ಜಿಲ್ಲಾಧ್ಯಕ್ಷರೂ ನನಗೆ ಕರೆ

ಉಡುಪಿ: ‘ಪಕ್ಷ ನನ್ನನ್ನು ನಡೆಸಿಕೊಂಡ ರೀತಿಗೆ ನೋವಾಗಿದೆ’ ➤ ರಘುಪತಿ ಭಟ್ Read More »

ಕರಾವಳಿ

ರಾಜಕೀಯದಿಂದ ನಿವೃತ್ತಿ ಘೋಷಿಸಿದ ಎಸ್.ಅಂಗಾರ

(ನ್ಯೂಸ್ ಕಡಬ)newskadaba.com ಸುಳ್ಯ, ಏ.12. ರಾಜಕೀಯದಿಂದ ಶಾಸಕ ಎಸ್.ಅಂಗಾರ ನಿವೃತ್ತಿ ಹೊಂದುವುದಾಗಿ, ಪಕ್ಷ ಟಿಕೆಟ್ ನೀಡದ ಕುರಿತು ನನ್ನ ಅಸಮಾಧಾನವಲ್ಲ. ಆದರೆ ಇಷ್ಟು ವರ್ಷ ಪಕ್ಷಕ್ಕಾಗಿ ಮತ್ತು ಸಮಾಜಕ್ಕಾಗಿ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಮಾಡಿದ ಸೇವೆಯನ್ನು ಗೌರವಿಸುವ ಕ್ರಮ ಇದಲ್ಲ. ಪ್ರಾಮಾಣಿಕ ರಾಜಕಾರಣಕ್ಕೆ ಇಂದು ಬೆಲೆ ಇಲ್ಲದಂತಾಗಿದೆ. ನನ್ನ ಪ್ರಾಮಾಣಿಕತೆಯೇ ನನಗೆ ಮುಳುವಾಗಿದೆ. ಲಾಬಿ ಮಾಡುವುದು ನನ್ನ ಗುಣವಾಗಿರಲಿಲ್ಲ. ಅದೇ ನನಗೆ ಹಿನ್ನಡೆಯಾಯಿತು ಎಂದು ಹೇಳಿದ ಅಂಗಾರರು, ನಾನು ಇನ್ನು ರಾಜಕಾರಣದಲ್ಲಿಲ್ಲ. ಚುನಾವಣಾ ಪ್ರಚಾರ ಕಣದಲ್ಲೂ

ರಾಜಕೀಯದಿಂದ ನಿವೃತ್ತಿ ಘೋಷಿಸಿದ ಎಸ್.ಅಂಗಾರ Read More »

ಕರಾವಳಿ

ಪುತ್ತೂರು: ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟ..!

(ನ್ಯೂಸ್ ಕಡಬ)newskadaba.com ಪುತ್ತೂರು, ಏ.12. ಬಿಜೆಪಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಆಶಾ ತಿಮ್ಮಪ್ಪ ಗೌಡ ಅವರಿಗೆ ಪುತ್ತೂರಿನ ಬಿಜೆಪಿ ಟಿಕೆಟ್ ನೀಡಿದೆ ವರದಿ ತಿಳಿಸಿದೆ. ಇದರ ಬೆನ್ನಲ್ಲೇ ಪುತ್ತೂರು ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟಗೊಂಡಿದೆ ಎನ್ನಲಾಗಿದೆ. ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಬೆಂಬಲಿಗರ ನೇತೃತ್ವದಲ್ಲಿ ತುರ್ತು ಸಭೆ ನಡೆಯಲಿದೆ.  

ಪುತ್ತೂರು: ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟ..! Read More »

ಕರಾವಳಿ

ಮಂಗಳೂರಿನ ಯುವತಿ ಥಾಯ್ಲೆಂಡ್ ನಲ್ಲಿ ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು, ಏ.12. ಥಾಯ್ಲೆಂಡ್‌ ನಲ್ಲಿ ಅವಘಡದಲ್ಲಿ ಮಂಗಳೂರು ಬೇಕಿಂಗ್ ಕಂಪನಿ ರೆಸ್ಟೋರಂಟ್ ಒಡತಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮಂಗಳೂರು ಗೋರಿಗುಡ್ಡೆ ಹಿಲ್ ಸ್ಟೀಕ್ ಅಪಾರ್ಟ್‌ಮೆಂಟ್ ನಲ್ಲಿ ವಾಸವಾಗಿದ್ದ ಓಷಿನ್ ಪಿರೇರಾ (28) ಮೃತಪಟ್ಟ ಯುವತಿ ಎಂದು ತಿಳಿದುಬಂದಿದೆ. ಇವರು ಎರಡು ದಿನಗಳ ಹಿಂದೆಯಷ್ಟೇ ಥಾಯ್ಲೆಂಡ್‌ಗೆ ತೆರಳಿದ್ದರು ಎನ್ನಲಾಗಿದೆ. ಅಲ್ಲಿ ಸ್ಕ್ಯೂಬಾ ಡೈವಿಂಗ್ ಮಾಡುವಾಗ ಅವಘಡದಲ್ಲಿ ಮೃತಪಟ್ಟಿದ್ದಾರೆ.

ಮಂಗಳೂರಿನ ಯುವತಿ ಥಾಯ್ಲೆಂಡ್ ನಲ್ಲಿ ಮೃತ್ಯು Read More »

ಕರಾವಳಿ

ಮಂಗಳೂರು: ಬೇಕಿಂಗ್ ಕಂಪನಿಯ ಮಾಲಕಿ ಒಶಿನ್ ಪಿರೇರಾ ಥೈಲ್ಯಾಂಡ್‌‌ನಲ್ಲಿ ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು, ಏ.11. “ಬೇಕಿಂಗ್ ಕಂಪನಿ”ಯ ಮಾಲಕಿ, 28 ವರ್ಷದ ಯುವತಿ ಒಶಿನ್ ಪಿರೇರಾ ಥೈಲ್ಯಾಂಡ್‌‌ನಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮೃತ ಒಶಿನ್ ಪಿರೇರಾ ಅವರು ದಿ.ಆಸ್ಕರ್ ಪಿರೇರಾ ಮತ್ತು ಶ್ರೀಮತಿ ಒಲಿವಿಯಾ ಪಿರೇರಾ ಅವರ ಪುತ್ರಿಯಾಗಿದ್ದಾರೆ. ಥೈಲ್ಯಾಂಡ್‌ ಪ್ರವಾಸದಲ್ಲಿದ್ದಾಗ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ದೊರಕಿದೆ. ಇವರ ಕುಟುಂಬವು ನಗರದ ಹಂಪನಕಟ್ಟೆಯಲ್ಲಿ ಅತ್ಯಂತ ಪ್ರಸಿದ್ಧವಾದ ‘ಪಿರೇರಾ ರೆಸ್ಟೋರೆಂಟ್’ ಅನ್ನು ಹೊಂದಿದೆ.

ಮಂಗಳೂರು: ಬೇಕಿಂಗ್ ಕಂಪನಿಯ ಮಾಲಕಿ ಒಶಿನ್ ಪಿರೇರಾ ಥೈಲ್ಯಾಂಡ್‌‌ನಲ್ಲಿ ಮೃತ್ಯು Read More »

ಕರಾವಳಿ

ಕಡಬ: ಮರ್ಧಾಳ ನಿವಾಸಿ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮೃತ್ಯು

(ನ್ಯೂಸ್ ಕಡಬ)newskadaba.com  ಕಡಬ, ಏ.11. ಕಡಬ ತಾಲೂಕಿನ ಮರ್ಧಾಳ ನಿವಾಸಿ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ಮೃತಪಟ್ಟವರನ್ನು  ಕಡಬ ಮರ್ಧಾಳ ನಿವಾಸಿ ಶಫೀಕ್ (40) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ಯಲಹಂಕದ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.  

ಕಡಬ: ಮರ್ಧಾಳ ನಿವಾಸಿ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top