kasargodu

ಆಕಸ್ಮಿಕವಾಗಿ ನೀರಿನ ಹೊಂಡದಲ್ಲಿ ಮುಳುಗಿ ಬಾಲಕ ಮೃತ್ಯು

(ನ್ಯೂಸ್ ಕಡಬ)newskadaba.com ಕಾಸರಗೋಡು, ಆ.02. ನೀರಿನ ಹೊಂಡದಲ್ಲಿ ಮುಳುಗಿ ಬಾಲಕ ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಮೃತ ಬಾಲಕನನ್ನು ಕರಿಕುಂಡುವಿನ ಅಲ್ಬಿನ್ ಸೆಬಾಸ್ಟಿಯನ್ (16) ಎಂದು ಗುರತಿಸಲಾಗಿದೆ. ಸೆಬಾಸ್ಟಿಯನ್ ಗೆಳೆಯರ ಜೊತೆ ಮನೆ ಸಮೀಪದ ಹೊಂಡದಲ್ಲಿ ಸ್ನಾನ ಕ್ಕಿಳಿದ ಸಂದರ್ಭದಲ್ಲಿ ಈ ದುರಂತ ನಡೆದಿದೆ. ನೀರಿನಲ್ಲಿ ಮುಳುಗಿದ್ದ ಬಾಲಕನಿಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಮುಳುಗು ತಜ್ಞರು ಶೋಧ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದರು ಎನ್ನಲಾಗಿದೆ.

ಆಕಸ್ಮಿಕವಾಗಿ ನೀರಿನ ಹೊಂಡದಲ್ಲಿ ಮುಳುಗಿ ಬಾಲಕ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆಕಸ್ಮಿಕವಾಗಿ ಬಾವಿಗೆ ಕಾಲುಜಾರಿ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ)newskadaba.com ಕಾಸರಗೋಡು, ಜು.28. ಆವರಣ ಇಲ್ಲದ ಬಾವಿಗೆ ಬಿದ್ದು ಪಾಕತಜ್ಞರೋರ್ವರು ಮೃತಪಟ್ಟ ಘಟನೆ ಪೆರ್ಲ ಸಮೀಪದ ಕಾಟುಕುಕ್ಕೆ ಕುಡ್ತಡ್ಕದಲ್ಲಿ ನಡೆದಿದೆ. ಮೃತಪಟ್ಟವರನ್ನು ಜನಾರ್ಧನ ನಾಯಕ್(42 ) ಎಂದು ಗುರುತಿಸಲಾಗಿದೆ. ಮನೆ ಸಮೀಪದ ಬಾವಿಗೆ ಬಿದ್ದು ಈ ದುರ್ಘಟನೆ ನಡೆದಿದ್ದು, ನೀರು ಸೇದಲು ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ಆಕಸ್ಮಿಕ ವಾಗಿ ಬಿದ್ದಿರಬಹುದೆಂದು ಶಂಕಿಸಲಾಗಿದೆ. ತವರು ಮನೆಗೆ ತೆರಳಿದ್ದ ಪತ್ನಿ ಮತ್ತು ಮಗು ಸಂಜೆ ಮನೆಗೆ ಬಂದಾಗ ಜನಾರ್ಧನ ನಾಪತ್ತೆಯಾಗಿದ್ದು, ಪರಿಸರ ವಾಸಿಗಳಿಗೆ ಮಾಹಿತಿ ನೀಡಿದ್ದರು. ಗಮನಿಸಿದಾಗ

ಆಕಸ್ಮಿಕವಾಗಿ ಬಾವಿಗೆ ಕಾಲುಜಾರಿ ಬಿದ್ದು ವ್ಯಕ್ತಿ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಸತಿ ನಿಲಯದ 19 ವಿದ್ಯಾರ್ಥಿಗಳು ಅಸ್ವಸ್ತ – ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ)newskadaba.com ಕಾಸರಗೋಡು, ಜು.27. ವಸತಿ ನಿಲಯದ 19 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಕಾಸರಗೋಡಿನಲ್ಲಿ ವರದಿಯಾಗಿದೆ. ನೀಲೇಶ್ವರದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ. ಏಕಲವ್ಯ ಮಾದರಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಸತತ ಕೆಮ್ಮು ಕಂಡು ಬಂದುದರಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಭೇಟಿಯಾದ ಜಿಲ್ಲಾಧಿಕಾರಿ ಕೆ. ಇಂಪಾಶೇಖರ್ ಅವರು ಯೋಗ ಕ್ಷೇಮ ವಿಚಾರಿಸಿದರು ಎನ್ನಲಾಗಿದೆ.

ವಸತಿ ನಿಲಯದ 19 ವಿದ್ಯಾರ್ಥಿಗಳು ಅಸ್ವಸ್ತ – ಆಸ್ಪತ್ರೆಗೆ ದಾಖಲು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಸರಗೋಡು: ಮಾದಕ ವಸ್ತು ಸಾಗಾಟ ಪ್ರಕರಣ ➤ ಇಬ್ಬರು ಪೊಲೀಸರ ವಶಕ್ಕೆ

(ನ್ಯೂಸ್ ಕಡಬ)newskadaba.com ಮಂಜೇಶ್ವರ, ಫೆ.05. ಮಾದಕ ವಸ್ತು ಸಾಗಾಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಬ್ಬರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಕೂಳೂರಿ ನ ಮುಹಮ್ಮದ್ ನೌಫಾಲ್ (33) ಮತ್ತು ತಲಪಾಡಿ ನೇರ್ಲಪ್ಪಾಡಿ ಯ ಕೆ. ಬಿ ಫೈಝಲ್ (26) ಬಂಧಿತರು. ಇವರು ಎಂಡಿಎಂಎ ಮಾದಕ ವಸ್ತು ಸಾಗಾಟದ ಏಜೆಂಟ್ ಗಳೆಂದು ಪೊಲೀಸರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಮಂಜೇಶ್ವರ ಪೊಲೀಸರು ಮೂವರನ್ನು ಎಂ ಡಿ ಎಂ ಎ ಮಾದಕ ವಸ್ತು ಸಹಿತ ಪೊಲೀಸರು ಬಂಧಿಸಿದ್ದರು. ಇವರಿಗೆ ಈ

ಕಾಸರಗೋಡು: ಮಾದಕ ವಸ್ತು ಸಾಗಾಟ ಪ್ರಕರಣ ➤ ಇಬ್ಬರು ಪೊಲೀಸರ ವಶಕ್ಕೆ Read More »

ರಾಷ್ಟ್ರೀಯ ನ್ಯೂಸ್

ಕಾಸರಗೋಡು: 1.300 ಕಿಲೋ ಚಿನ್ನ ಸಹಿತ ವ್ಯಕ್ತಿ ಬಂಧನ

(ನ್ಯೂಸ್ ಕಡಬ)newskadaba.com ಕಾಸರಗೋಡು, ಫೆ.04. ಕಾಸರಗೋಡು ನಿಲ್ದಾಣದಲ್ಲಿ ರೈಲಿನಿಂದ ಬಂದಿಳಿದ ಚೆರ್ಕಳ ಸಿಟಿಜನ್‌ ನಗರದ ಮೊಹಮ್ಮದ್‌ ಫಾಹಿಸ್‌ (34) ಎಂಬಾತನ ಬ್ಯಾಗ್‌ ತಪಾಸಣೆ ಮಾಡಿದಾಗ 1.300 ಕಿಲೋ ಚಿನ್ನ ಪತ್ತೆಯಾಗಿದ್ದು, ಆತನನ್ನು ಕಸ್ಟಂಸ್‌ ತಂಡ ಬಂಧಿಸಿದೆ. ಚಿನ್ನ ಸಾಗಾಟದ ಬಗ್ಗೆ ಕಾಸರಗೋಡು ಕಸ್ಟಮ್ಸ್ ಯೂನಿಟ್‌ನ ಸೂಪರಿಂಟೆಂಡೆಂಟ್‌ ಪಿ.ಟಿ.ರಾಜೀವ್‌ ಅವರಿಗೆ ರಹಸ್ಯ ಮಾಹಿತಿ ಲಭಿಸಿತ್ತು. ಅದರಂತೆ ಅವರು ಮತ್ತು ಕಾಸರಗೋಡು ಕಸ್ಟಮ್ಸ್ ವಿಭಾಗದ ಹೆಡ್‌ ಹವಾಲ್ದಾರ್‌ಗಳಾದ ಆನಂದ ಕೆ. ಚಂದ್ರಶೇಖರ ಕೆ. ಮತ್ತು ವಿಶ್ವನಾಥ ಎಂ. ನೇತೃತ್ವದ ತಂಡ

ಕಾಸರಗೋಡು: 1.300 ಕಿಲೋ ಚಿನ್ನ ಸಹಿತ ವ್ಯಕ್ತಿ ಬಂಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಸರಗೋಡು: ಶೆಡ್ ನಲ್ಲಿ ಮಹಿಳೆಯ ಮೃತದೇಹ ಪತ್ತೆ

(ನ್ಯೂಸ್ ಕಡಬ)newskadaba.com ಕಾಸರಗೋಡು, ಫೆ.02. ಪೆರ್ಲ ಸಮೀಪದ ಏಳ್ಕಾನ ಶೇಣಿ ಎಂಬಲ್ಲಿ ರಬ್ಬರ್ ಎಸ್ಟೇಟ್ ನ ಶೆಡ್ ನೊಳಗೆ ಮಹಿಳೆಯೋರ್ವರ ಮೃತದೇಹ ಪತ್ತೆಯಾಗಿದೆ. ಕೊಲ್ಲಂ ಮೂಲದ ನೀತು ಕೃಷ್ಣ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮಹಿಳೆಯ ಪತಿ ವಯನಾಡ್ ಮೂಲದ ಆಂಟೋ ಸೆಬಾಸ್ಟಿಯನ್ ಎಂಬಾತ ನಾಪತ್ತೆಯಾಗಿದ್ದು ಸಂಶಯಕ್ಕೆ ಕಾರಣವಾಗಿದೆ. ಒಂದೂವರೆ ತಿಂಗಳ ಹಿಂದೆ ಈ ದಂಪತಿ ರಬ್ಬರ್ ಟ್ಯಾಪಿಂಗ್ ವೃತ್ತಿಗಾಗಿ ಆಗಮಿಸಿದ್ದರು. ಇವರು ವಾಸಿಸುತ್ತಿದ್ದ ಮನೆ ಸಮೀಪದ ಶೆಡ್ ನಲ್ಲಿ ಇತರ ಕಾರ್ಮಿಕರಾದ ವೆಳ್ಳರಿಕುಂಡುವಿನ ರಿಜೋ ಹಾಗೂ ಪಶ್ಚಿಮ

ಕಾಸರಗೋಡು: ಶೆಡ್ ನಲ್ಲಿ ಮಹಿಳೆಯ ಮೃತದೇಹ ಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾರಿನಲ್ಲಿ ಎಂಡಿಎಂಎ ಮಾದಕ ವಸ್ತು ಸಾಗಾಟ ➤ ಇಬ್ಬರ ಬಂಧನ

(ನ್ಯೂಸ್ ಕಡಬ)newskadaba.com ಕಾಸರಗೋಡು, ಜ.30. ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಎಂಡಿಎಂಎ ಮಾದಕ ವಸ್ತು ಸಹಿತ ಇಬ್ಬರನ್ನು ಅಬಕಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ. ಕುಂಬಳೆ ಬಂಬ್ರಾಣದ ಅಬ್ದುಲ್ ರುಮೈಸ್ (27) ಮತ್ತು ಉಪ್ಪಳ ಪೆರಿಂಗಡಿಯ ಎಂ.ಕೆ ಮುಸ್ತಾಫಾ (39) ಬಂಧಿತರು ಎಂದು ತಿಳಿದುಬಂದಿದೆ. ಇವರಿಂದ 69 ಗ್ರಾಂ. ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದ್ದು, ಉಪ್ಪಳ ಪೇಟೆಯಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಮಾದಕವಸ್ತು ಪತ್ತೆಯಾಗಿದೆ. ಇನ್ನು ಬಂಧಿತ ರುಮೈಸ್ ಐದು ವರ್ಷಗಳ ಹಿಂದೆ ನಡೆದ ಕೊಲೆ

ಕಾರಿನಲ್ಲಿ ಎಂಡಿಎಂಎ ಮಾದಕ ವಸ್ತು ಸಾಗಾಟ ➤ ಇಬ್ಬರ ಬಂಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಸರಗೋಡು: ಬಸ್ಸು – ಪಿಕಪ್ ಢಿಕ್ಕಿ ! ➤ ಓರ್ವ ಸಾವು, ಇನ್ನೋರ್ವ ಗಂಭೀರ

(ನ್ಯೂಸ್ ಕಡಬ)newskadaba.com ಕಾಸರಗೋಡು, ಜ.30. ಬಸ್ಸು ಮತ್ತು ಪಿಕಪ್ ನಡುವೆ ಉಂಟಾದ ಅಪಘಾತದಲ್ಲಿ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಅಂಬಲತ್ತರ ಪಾರಪಳ್ಳಿಯಲ್ಲಿ ನಡೆದಿದೆ. ಮೃತಪಟ್ಟವರನ್ನು ಅಂಬಲಪಾಡಿಯ ಪನತ್ತಡಿಯ ಯೂಸಫ್ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂದಡ್ಕದಿಂದ ತೆರಳುತ್ತಿದ್ದ ಖಾಸಗಿ ಬಸ್ಸು ಮತ್ತು ಪಿಕಪ್ ನಡುವೆ ಈ ಅಪಘಾತ ನಡೆದಿದೆ.

ಕಾಸರಗೋಡು: ಬಸ್ಸು – ಪಿಕಪ್ ಢಿಕ್ಕಿ ! ➤ ಓರ್ವ ಸಾವು, ಇನ್ನೋರ್ವ ಗಂಭೀರ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಸರಗೋಡು: ತಾಯಿ ಮತ್ತು ಮಗಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ)newskadaba.com ಕಾಸರಗೋಡು, ಜ.23. ತಾಯಿ ಮತ್ತು ಮಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೇಡಡ್ಕ ಕುಂಡಂಗುಯಿಯಲ್ಲಿ ಸಂಭವಿಸಿದೆ ಎನ್ನಲಾಗಿದೆ. ಕುಂಡಂಗುಯಿ ಚಂದ್ರ ಎಂಬವರ ಪತ್ನಿ ನಾರಾಯಣಿ (46) ಮತ್ತು ಪುತ್ರಿ ಶ್ರೀನಂದಾ (12)ಮೃತದೇಹ ಪತ್ತೆಯಾಗಿದೆ. ಘಟನೆ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂದು ವರದಿ ತಿಳಿಸಿದೆ. ನಾರಾಯಣಿರವರ ಮೃತದೇಹ ನೇಣು ಬಿಗಿದು ಹಾಗೂ ಶ್ರಿನಂದಾಳ ಮೃತದೇಹ ಮನೆಯ ಕೋಣೆಯಲ್ಲಿ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಈ ಕುರಿತು ಹೆಚ್ಚಿನ‌ ಮಾಹಿತಿ ನಿರೀಕ್ಷಿಸಲಾಗಿದೆ..

ಕಾಸರಗೋಡು: ತಾಯಿ ಮತ್ತು ಮಗಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅನ್ಯಕೋಮಿನ ಜೋಡಿ ಲಾಡ್ಜ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ)newskadaba.com  ಕಾಸರಗೋಡು, ಜ.21. ನಾಪತ್ತೆಯಾಗಿದ್ದ ಅನ್ಯಕೋಮಿನ ಜೋಡಿ ಲಾಡ್ಜ್ ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರಾಜಾಪುರ ಕಲ್ಲಾರು ಒಕ್ಲಾವು ನಿವಾಸಿ ಮಹಮ್ಮದ್ ಶರೀಫ್ (40) ಮತ್ತು ಕಲ್ಲಾರು ಅಡಕಂ ಪುಲಿಕುಳಿಯ ಸಿಂಧು (36)ಮೃತರು ಎಂದು ಗುರುತಿಸಲಾಗಿದೆ. ಜನವರಿ 7ರಂದು ಇಬ್ಬರೂ ನಾಪತ್ತೆಯಾಗಿದ್ದರು. ಈ ಕುರಿತು ನಾಪತ್ತೆ ಪ್ರಕರಣ ದಾಖಲಿಸಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇದೀಗ ಗುರುವಾಯೂರು ಪಡಿಯಾರ ನಾಡೆಯ  ಕೊಠಡಿಯೊಳಗೆ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರೂ ಪತ್ತೆಯಾಗಿದ್ದಾರೆ ಎಂದು ವರದಿ ತಿಳಿಸಿದೆ.  

ಅನ್ಯಕೋಮಿನ ಜೋಡಿ ಲಾಡ್ಜ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top