kasaragodu

ಕಾಸರಗೋಡು: ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ವೃದ್ಧ

(ನ್ಯೂಸ್‌ ಕಡಬ) newskadaba.com ಸೆ.06 ಕಾಸರಗೋಡು: ಗುಂಡು ಹಾರಿಸಿಕೊಂಡು ವೃದ್ಧರೋರ್ವರು ಆತ್ಮಹತ್ಯೆಗೆ ಶರಣಾದ ಘಟನೆ ಮಂಜೇಶ್ವರ ಠಾಣಾ ವ್ಯಾಪ್ತಿಯ ಮೀಯಪದವು ಮದಂಗಲ್ಲು ಎಂಬಲ್ಲಿ ನಡೆದಿದೆ. ಮದಂಗಲ್ಲಿನ ಸುಬ್ರಾಯ ಭಟ್ (86) ಮೃತಪಟ್ಟವರು. ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ಈ ಘಟನೆ ನಡೆದಿದೆ. ಮಾನಸಿಕ ಅಸ್ವಸ್ಥತೆಯಿಂದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಸುಬ್ರಾಯ ಭಟ್ ಹಾಗೂ ಪತ್ನಿ ರಾಜಮ್ಮ ಮಾತ್ರ ಮನೆಯಲ್ಲಿ ವಾಸವಾಗಿದ್ದರು. ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ […]

ಕಾಸರಗೋಡು: ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ವೃದ್ಧ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಸರಗೋಡು: ಎಂಟು ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ

(ನ್ಯೂಸ್‌ ಕಡಬ) newskadaba.com, ಆ.21: ಮದ್ರಸಕ್ಕೆ ತೆರಳುತ್ತಿದ್ದ ಎಂಟು ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿದ ಘಟನೆ ಕಾಸರಗೋಡಿನ ಮಂಜೇಶ್ವರದಲ್ಲಿ ನಡೆದಿದೆ. ಮಂಜೇಶ್ವರದ ರಶೀದ್ ಅವರ ಪುತ್ರ ಅಬೂಬಕ್ಕರ್ ರಫಾನ್ ಗಾಯಗೊಂಡ ಬಾಲಕ. ಬೆಳಿಗ್ಗೆ ಮದ್ರಸಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ನಾಯಿ ಅಟ್ಟಾಡಿಸಿ ದಾಳಿ ನಡೆಸಿದೆ ಎನ್ನಲಾಗಿದೆ. ಬಾಲಕನ ಬೊಬ್ಬೆ ಕೇಳಿ ಸ್ಥಳೀಯರು ದಾವಿಸಿ ಬರುತ್ತಿದ್ದಂತೆ ನಾಯಿ ತಪ್ಪಿಸಿಕೊಂಡಿದೆ. ಗಾಯಗೊಂಡ ಬಾಲಕನನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಸರಗೋಡು: ಎಂಟು ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಸೌದಿ ಅರೇಬಿಯಾದಲ್ಲಿ ಕಾಸರಗೋಡು ಮೂಲದ ಟ್ಯಾಕ್ಸಿ ಚಾಲಕನನ್ನು ಗುಂಡಿಕ್ಕಿ ಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಮೇ. 31. ಕಾಸರಗೋಡು ಮೂಲದ ಟ್ಯಾಕ್ಸಿ ಚಾಲಕರೊಬ್ಬರನ್ನು ರವಿವಾರ ಬೆಳಗಿನ ಜಾವ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಸೌದಿ ಅರೇಬಿಯದ ಅಸೀರ್ ಪ್ರಾಂತ್ಯದ ಬಿಶಾ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು 41 ವರ್ಷದ ಬಷೀರ್ ಎಂದು ಗುರುತಿಸಲಾಗಿದೆ. ಅವರು ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಕಳೆದ 13 ವರ್ಷಗಳಿಂದ ಬಷೀರ್ ಅವರು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಮೊದಲು ಹೌಸ್ ಡ್ರೈವರ್ ವೀಸಾದ ಮೇಲೆ ಸೌದಿಗೆ ಆಗಮಿಸಿದ್ದರು ಎನ್ನಲಾಗಿದೆ.

ಸೌದಿ ಅರೇಬಿಯಾದಲ್ಲಿ ಕಾಸರಗೋಡು ಮೂಲದ ಟ್ಯಾಕ್ಸಿ ಚಾಲಕನನ್ನು ಗುಂಡಿಕ್ಕಿ ಹತ್ಯೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ 137 ವರ್ಷ ಜೈಲು ಶಿಕ್ಷೆ; 7.5 ಲ.ರೂ ದಂಡ

(ನ್ಯೂಸ್ ಕಡಬ) newskadaba.com ಫೆ. 22. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜೀವಾವಧಿ ಕಠಿನ ಸಜೆ, ಅದರೊಂದಿಗೆ 137 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 7.5 ಲ.ರೂ ದಂಡ ವಿಧಿಸಿ ಕಾಸರಗೋಡು ಫಾಸ್ಟ್ ಟ್ರ‍್ಯಾಕ್ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಮೀಯಪದವು ಮೂಡಂಬೈಲು ಕುಳವಯಲ್ ನಿವಾಸಿ ವಲ್ಲಿ ಡಿ’ಸೋಜಾ(47)ನಿಗೆ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ. ಆರೋಪಿ ವಲ್ಲಿ ಡಿ’ಸೋಜಾ ಒಂದು ವೇಳೆ ದಂಡ ಪಾವತಿಸದಿದ್ದಲ್ಲಿ 28 ತಿಂಗಳು ಹೆಚ್ಚುವರಿ ಕಠಿನ ಸಜೆ ಅನುಭವಿಸುವಂತೆ ಕೋರ್ಟ್ ತೀರ್ಪಿನಲ್ಲಿ

ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ 137 ವರ್ಷ ಜೈಲು ಶಿಕ್ಷೆ; 7.5 ಲ.ರೂ ದಂಡ Read More »

ಕರಾವಳಿ

ಕಾಸರಗೋಡು: ಕಯ್ಯಾರ್ ಕ್ರಿಸ್ತ ರಾಜ ಚರ್ಚ್ ನ ನೂತನ ಕಟ್ಟಡದ ಶಿಲಾನ್ಯಾಸ

(ನ್ಯೂಸ್ ಕಡಬ) newskadaba.com ಜ.18 ಮಂಗಳೂರು: ಕಯ್ಯಾರ್ ಕ್ರಿಸ್ತ ರಾಜ ಚರ್ಚ್ ನ ನೂತನ ಕಟ್ಟಡಕ್ಕೆ ಶನಿವಾರ (ಇಂದು) ಬೆಳಿಗ್ಗೆ ಕಾಸರಗೋಡು ವಲಯ ವಿಗಾರ್ ವಾರ್ ಫಾ.ಸ್ಟ್ಯಾನಿ ಪಿರೇರಾ ಶಿಲಾನ್ಯಾಸ ನೆರವೇರಿಸಿದರು. ವಾಸ್ತು ಶಿಲ್ಪಿ ಅನಿಲ್ ಲೋಬೊ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಯ್ಯಾರ್ ಚರ್ಚ್ ಧರ್ಮಗುರು ಫಾ. ವಿಶಾಲ್ ಮೋನಿಸ್, ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಡಿ’ಸೋಜ, ಕಾರ್ಯದರ್ಶಿ ಝೀನಾ ಡಿ’ಸೋಜ, ಸಿಸ್ಟರ್ ಜಾಸ್ಮಿನ್ ಲೂವಿಸ್, ಸಿಸ್ಟರ್ ರೀನಾ ಸೆರಾವೊ, ಅಲ್ಫೋನ್ಸ್ ಡಿ’ಸೋಜ ಹಾಗೂ ಚರ್ಚ್ ಪಾಲನಾ ಸಮಿತಿ ಸದಸ್ಯರು

ಕಾಸರಗೋಡು: ಕಯ್ಯಾರ್ ಕ್ರಿಸ್ತ ರಾಜ ಚರ್ಚ್ ನ ನೂತನ ಕಟ್ಟಡದ ಶಿಲಾನ್ಯಾಸ Read More »

ಕರಾವಳಿ

ಕಾಸರಗೋಡು: ಸೂಪರ್ ಮಾರ್ಕೆಟ್‌ಗೆ ನುಗ್ಗಿದ ಕಾಡುಹಂದಿ

(ನ್ಯೂಸ್ ಕಡಬ) newskadaba.com ಡಿ. 25 ಕಾಸರಗೋಡು: ಕಾಡುಹಂದಿಯೊಂದು ಸೂಪರ್ ಮಾರ್ಕೆಟ್‌ಗೆ ನುಗ್ಗಿದ ಘಟನೆ ಕುಂಬಳೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಕುಂಬಳೆ ಪೇಟೆಯಲ್ಲಿರುವ ಸೂಪರ್ ಪಾಯಿಂಟ್ ಹೈಪರ್ ಮಾರ್ಕೆಟ್ ನೊಳಗೆ ಮಂಗಳವಾರ ರಾತ್ರಿ 9 ಗಂಟೆಯ ವೇಳೆ ಕಾಡು ಹಂದಿ ಸೂಪರ್ ಮಾರ್ಕೆಟ್ ಗೆ ನುಗ್ಗಿದೆ. ಈ ವೇಳೆ ಬೆರಳೆಣಿಕೆಯ ಗ್ರಾಹಕರು ಹಾಗೂ ಸಿಬ್ಬಂದಿಗಳು ಮಾತ್ರ ಎನ್ನಲಾಗಿದೆ. ಅನಿರೀಕ್ಷಿತವಾಗಿ ಒಳಗೆ ಬಂದ ಹಂದಿಯನ್ನು ಕಂಡು ಗಲಿಬಿಲಿಗೊಂಡ ಸಿಬ್ಬಂದಿಗಳು ಹಾಗೂ ಇತರರು ಬೊಬ್ಬೆ ಹಾಕುವಷ್ಟರಲ್ಲಿ ಹಂದಿ ಹೊರಕ್ಕೆ ಓಡಿ

ಕಾಸರಗೋಡು: ಸೂಪರ್ ಮಾರ್ಕೆಟ್‌ಗೆ ನುಗ್ಗಿದ ಕಾಡುಹಂದಿ Read More »

ಕರಾವಳಿ

ಕಾಸರಗೋಡು: ಭಾರೀ ಮಳೆ ಮುನ್ಸೂಚನೆ- ನಾಳೆ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ

(ನ್ಯೂಸ್ ಕಡಬ) newskadaba.com ಕಾಸರಗೋಡು, ಡಿ. 02. ಭಾರೀ  ಮಳೆ ಮುನ್ಸೂಚನೆ ಹಾಗೂ ಕೇಂದ್ರ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ ಹಿನ್ನಲೆಯಲ್ಲಿ ನಾಳೆ (3) ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆ ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ. ಇಂಪಾಶೇಖರ್ ಆದೇಶ ನೀಡಿದ್ದಾರೆ. ಪ್ರೊಪೇಶನಲ್ ಕಾಲೇಜು, ಟ್ಯೂಶನ್ ಕೇಂದ್ರ, ಅಂಗನವಾಡಿ, ಮದ್ರಸಗಳಿಗೆ ರಜೆ ಅನ್ವಯ ವಾಗಲಿದೆ. ಆದರೆ ಮೋಡಲ್ ರೆಶಿಡೆನ್ಶಿಯಲ್ ಶಾಲೆಗಳಿಗೆ ರಜೆ ಅನ್ವಹಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನದಿಂದ ಭಾರೀ ಮಳೆ ಸುರಿಯುತ್ತಿದೆ. ಮುಂದಿನ

ಕಾಸರಗೋಡು: ಭಾರೀ ಮಳೆ ಮುನ್ಸೂಚನೆ- ನಾಳೆ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ Read More »

ಕರಾವಳಿ

ವಿಷಹಾರ ಸೇವಿಸಿ 35ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

(ನ್ಯೂಸ್ ಕಡಬ) newskadaba.com ಕಾಸರಗೋಡು, ನ.22. ವಿಷಾಹಾರ ಸೇವನೆಯಿಂದ ಅಸ್ವಸ್ಥಗೊಂಡ 35 ಕ್ಕೂ ಅಧಿಕ ವಿದ್ಯಾರ್ಥಿಗಳು ಕಾಸರಗೋಡು ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಘಟನೆ ಗುರುವಾರ ನಡೆದಿದೆ. ಅಲಂಪಾಡಿ ಹಯರ್ ಸೆಕಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ ಸಂಜೆ ವಿದ್ಯಾರ್ಥಿಗಳಿಗೆ ಹಾಲು ವಿತರಿಸಲಾಗಿದ್ದು, ಬಳಿಕ ಮನೆಗೆ ಬಂದ ವಿದ್ಯಾರ್ಥಿಗಳು ವಾಂತಿ ಹಾಗೂ ಇನ್ನಿತರ ರೀತಿಯಲ್ಲಿ ಅಸ್ವಸ್ಥತೆ ಕಂಡು ಬಂದಿದೆ.ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆ, ಚೆಂಗಳ ಸಹಕಾರಿ ಆಸ್ಪತ್ರೆ ಹಾಗೂ ವಿದ್ಯಾನಗರ, ಕಾಸರಗೋಡು ನಗರದ

ವಿಷಹಾರ ಸೇವಿಸಿ 35ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ Read More »

ಕರಾವಳಿ
Death, deadbody, Waterfall

ಸಮುದ್ರದಲ್ಲಿ ಮುಳುಗಿ ಬಾಲಕ ಮೃತ್ಯು..!

(ನ್ಯೂಸ್ ಕಡಬ) newskadaba.com ಕಾಸರಗೋಡು, ನ. 18. ದುಬೈಯಲ್ಲಿ ಸಮುದ್ರಕ್ಕಿಳಿದ ಕಾಸರಗೋಡು ಮೂಲದ ಬಾಲಕನೋರ್ವ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ. ಮೃತಪಟ್ಟ ಬಾಲಕನನ್ನು ಮೂಲತಃ ಚೆಂಗಳ ನಿವಾಸಿ ಅಬ್ದುಲ್ಲ ಮಫಾಝ್(15) ಎಂದು ಗುರುತಿಸಲಾಗಿದೆ. ದುಬೈ ನ್ಯೂ ಇಂಡಿಯನ್ ಮಾಡೆಲ್ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ ಈತ ಶುಕ್ರವಾರ ಮಮ್ಝಾರ್ ಬೀಚ್ ಗೆ ತೆರಳಿದ್ದ ವೇಳೆ ಘಟನೆ ನಡೆದಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.    

ಸಮುದ್ರದಲ್ಲಿ ಮುಳುಗಿ ಬಾಲಕ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಪಟಾಕಿ ದುರಂತ: 154 ಮಂದಿ ಗಾಯ

(ನ್ಯೂಸ್ ಕಡಬ) newskadaba.com ಕಾಸರಗೋಡು, ಅ.29. ಪಟಾಕಿ ದುರಂತ ಸಂಭವಿಸಿ 154 ಮಂದಿ ಗಾಯಗೊಂಡಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ. ವೀರರ್ಕಾವು ದೇವಸ್ಥಾನದ ಬಳಿಯ ತಾತ್ಕಾಲಿಕ ಶೆಡ್‌ನಲ್ಲಿ ಪಟಾಕಿ ಸಂಗ್ರಹಿಸಿಡಲಾಗಿತ್ತು. ಈ ಶೆಡ್‌ಗೆ ಮೂವಳಂಕುಜಿ ಚಾಮುಂಡಿ ತೆಯ್ಯಂನ ‘ವೆಳ್ಳಟ್ಟಂ ಪುರಪ್ಪಡು’ಗೆ ಸಂಬಂಧಿಸಿದಂತೆ ಪಟಾಕಿ ಸಿಡಿಸುವ ವೇಳೆ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡ 154 ಮಂದಿ ಪೈಕಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, 8 ಮಂದಿ ಗಂಭೀರವಾಗಿದ್ದಾರೆ. ಹಾಗೂ 97 ಮಂದಿಯನ್ನು ಕಾಸರಗೋಡು, ಕಣ್ಣೂರು ಮತ್ತು ಮಂಗಳೂರಿನ ವಿವಿಧ

ಪಟಾಕಿ ದುರಂತ: 154 ಮಂದಿ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top