ಸಮುದ್ರದಲ್ಲಿ ಮುಳುಗಿ ಬಾಲಕ ಮೃತ್ಯು..!

Death, deadbody, Waterfall

(ನ್ಯೂಸ್ ಕಡಬ) newskadaba.com ಕಾಸರಗೋಡು, ನ. 18. ದುಬೈಯಲ್ಲಿ ಸಮುದ್ರಕ್ಕಿಳಿದ ಕಾಸರಗೋಡು ಮೂಲದ ಬಾಲಕನೋರ್ವ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ.

ಮೃತಪಟ್ಟ ಬಾಲಕನನ್ನು ಮೂಲತಃ ಚೆಂಗಳ ನಿವಾಸಿ ಅಬ್ದುಲ್ಲ ಮಫಾಝ್(15) ಎಂದು ಗುರುತಿಸಲಾಗಿದೆ. ದುಬೈ ನ್ಯೂ ಇಂಡಿಯನ್ ಮಾಡೆಲ್ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ ಈತ ಶುಕ್ರವಾರ ಮಮ್ಝಾರ್ ಬೀಚ್ ಗೆ ತೆರಳಿದ್ದ ವೇಳೆ ಘಟನೆ ನಡೆದಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

 

 

Scroll to Top