(ನ್ಯೂಸ್ ಕಡಬ) newskadaba.com, ಆ.21: ಮದ್ರಸಕ್ಕೆ ತೆರಳುತ್ತಿದ್ದ ಎಂಟು ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿದ ಘಟನೆ ಕಾಸರಗೋಡಿನ ಮಂಜೇಶ್ವರದಲ್ಲಿ ನಡೆದಿದೆ.
ಮಂಜೇಶ್ವರದ ರಶೀದ್ ಅವರ ಪುತ್ರ ಅಬೂಬಕ್ಕರ್ ರಫಾನ್ ಗಾಯಗೊಂಡ ಬಾಲಕ. ಬೆಳಿಗ್ಗೆ ಮದ್ರಸಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ನಾಯಿ ಅಟ್ಟಾಡಿಸಿ ದಾಳಿ ನಡೆಸಿದೆ ಎನ್ನಲಾಗಿದೆ.
ಬಾಲಕನ ಬೊಬ್ಬೆ ಕೇಳಿ ಸ್ಥಳೀಯರು ದಾವಿಸಿ ಬರುತ್ತಿದ್ದಂತೆ ನಾಯಿ ತಪ್ಪಿಸಿಕೊಂಡಿದೆ. ಗಾಯಗೊಂಡ ಬಾಲಕನನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ.









