karnataka

ಕರಾವಳಿ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು.!     ಶಾಸಕ ಹರೀಶ್ ಪೂಂಜಾ ಆಗ್ರಹ

(ನ್ಯೂಸ್ ಕಡಬ)newskadaba.com ಮಂಗಳೂರು, ಜು.23. ಈ ಬಾರಿ ಸುರಿದ ಭಾರಿ ಮಳೆಗೆ ಕರಾವಳಿ ಭಾಗಗಳ ಹಲವೆಡೆ ಭಾರೀ ಹಾನಿ ಸಂಭವಿಸಿದ್ದು, ಸರ್ಕಾರ ದಕ್ಷಿಣ ಕನ್ನಡ ಸೇರಿ ಕರಾವಳಿ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕೆಂದು ಶಾಸಕ ಹರೀಶ್ ಪೂಂಜಾ ಸೇರಿ ಬಿಜೆಪಿ ಸದಸ್ಯರು ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತಾಗಿ ಮಾತನಾಡಿದ ಹರೀಶ್‌ ಪೂಂಜ ಅವರು, ಮಳೆ ಅವಾಂತರದಿಂದ ಹಲವೆಡೆ ರಸ್ತೆ ಸಂಪರ್ಕವೇ ಕಡಿತಗೊಂಡಿದೆ. ಅತ್ಯಂತ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ, ನೆರೆಹಾವಳಿಗೆ ತುತ್ತಾದ ಕೊಡಗಿಗೆ, ಉತ್ತರ ಕರ್ನಾಟಕಕ್ಕೆ ಹಲವು […]

ಕರಾವಳಿ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು.!     ಶಾಸಕ ಹರೀಶ್ ಪೂಂಜಾ ಆಗ್ರಹ Read More »

ಕರಾವಳಿ

ಇನ್ನುಂದೆ 50 ವರ್ಷ ಮೇಲ್ಪಟ್ಟ ಶಿಕ್ಷಕರ ವರ್ಗಾವಣೆ ಮಾಡುವಂತಿಲ್ಲ !! ಕರ್ನಾಟಕ ಹೈಕೋರ್ಟ್ ಆದೇಶ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.23. 50 ವರ್ಷ ಮೇಲ್ಪಟ್ಟ ಶಿಕ್ಷಕರನ್ನು ವರ್ಗಾವಣೆ ಮಾಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಖಡಕ್ ಆದೇಶ ಹೊರಡಿಸಿದೆ ಎಂದು ವರದಿ ತಿಳಿಸಿದೆ.  ಈ ಬಗ್ಗೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಸ್‌ಎಟಿ) ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದು, ಕೆಎಟಿ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ವಿಭಾಗೀಯ ಪೀಠವು 50 ವರ್ಷ ಮೇಲ್ಪಟ್ಟ ಶಿಕ್ಷಕರ ವರ್ಗಾವಣೆ ಮಾಡುವಂತಿಲ್ಲ ಎಂದು ಆದೇಶಿಸಿದೆ. ಜೊತೆಗೆ

ಇನ್ನುಂದೆ 50 ವರ್ಷ ಮೇಲ್ಪಟ್ಟ ಶಿಕ್ಷಕರ ವರ್ಗಾವಣೆ ಮಾಡುವಂತಿಲ್ಲ !! ಕರ್ನಾಟಕ ಹೈಕೋರ್ಟ್ ಆದೇಶ Read More »

ಕರ್ನಾಟಕ

*ವಾಲ್ಮೀಕಿ ನಿಗಮ ಹಗರಣ ನಾಗೇಂದ್ರ ಗೆ ಆ. 3ರವರೆಗೆ ನ್ಯಾಯಾಂಗ ಬಂಧನ….!

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.22. ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಆಗಸ್ಟ್ 3 ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದುಬಂದಿದೆ. ನಾಗೇಂದ್ರ ಅವರ ಕಸ್ಟಡಿ ಇಂದಿಗೆ ಅಂತ್ಯವಾದ ಹಿನ್ನೆಲೆ ಅವರನ್ನು ಇಡಿ ಅಧಿಕಾರಿಗಳು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ಈ ವೇಳೆ ಬಿ. ನಾಗೇಂದ್ರ ಅವರನ್ನು ಆಗಸ್ಟ್ 3 ತನಕ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶಿಸಿದೆ. ಇನ್ನು ಹಗರಣ ಸಂಬಂಧಪಟ್ಟಂತೆ ಸತ್ಯನಾರಾಯಣ ವರ್ಮನನ್ನು

*ವಾಲ್ಮೀಕಿ ನಿಗಮ ಹಗರಣ ನಾಗೇಂದ್ರ ಗೆ ಆ. 3ರವರೆಗೆ ನ್ಯಾಯಾಂಗ ಬಂಧನ….! Read More »

ಕರ್ನಾಟಕ, ಕ್ರೈಮ್ ನ್ಯೂಸ್

ನಿಯಂತ್ರಣ ತಪ್ಪಿ ಬೈಕ್ ನಿಂದ ರಸ್ತೆಗೆ ಬಿದ್ದು ಯುವಕ ಮೃತ್ಯು ಓರ್ವ ಗಂಭೀರ….!

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.22. ಬೈಕ್ ನಲ್ಲಿ ತೆರಳುವಾಗ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಯುವಕನೋರ್ವ ಮೃತಪಟ್ಟಿದ್ದು, ಆತನ ಸ್ನೇಹಿತ ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಮೃತರನ್ನು ವಿಘ್ನೇಶ್ (26) ಎಂದು ಗುರುತಿಸಲಾಗಿದೆ. ಗಾಯಗೊಂಡಾತನನ್ನು ಶ್ರೀ ನಿಧಿ (25) ಎಂದು ಗುರುತಿಸಲಾಗಿದೆ. ಬೆಳಗಿನ ಜಾವ 1.30 ರ ಸುಮಾರಿಗೆ ವಿಘ್ನೇಶ್ ಮತ್ತು ಶ್ರೀ ನಿಧಿ ರೆಸ್ಟೋರೆಂಟ್‌ ನಲ್ಲಿ ಊಟ ಮುಗಿಸಿ ಮನೆಗೆ ಹೋಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ನಿಯಂತ್ರಣ ತಪ್ಪಿ ಬೈಕ್ ನಿಂದ ರಸ್ತೆಗೆ ಬಿದ್ದು ಯುವಕ ಮೃತ್ಯು ಓರ್ವ ಗಂಭೀರ….! Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಮನೆಗಳ್ಳತನಕ್ಕೆ ಯತ್ನ ಆರೋಪಿಗಳು ಪರಾರಿ.!

(ನ್ಯೂಸ್ ಕಡಬ)newskadaba.com ಮಂಗಳೂರು, ಜು.22. ಮನೆಯೊಂದರ ಮುಖ್ಯ ಗೇಟ್ ತೆಗೆದು ಒಳನುಗ್ಗಿರುವ ಕಳ್ಳರು ಬಾಗಿಲಿನ ಬಳಿ ಇದ್ದ ಇನ್ನೊಂದು ಸ್ಟೀಲ್ ಗೇಟ್‌ ನ್ನು ತೆರೆದು ಮನೆಯ ಬಾಗಿಲನ್ನು ರಾಡ್‌ ನಿಂದ ಒಡೆಯಲು ಯತ್ನಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ರಾತ್ರಿ 1.45 ರ ವೇಳೆಗೆ ಈ ಘಟನೆ ನಡೆದಿದ್ದು, ಈ ವೇಳೆ ಎಚ್ಚರಗೊಂಡು ಎಲ್ಲ ಲೈಟ್ ಹಾಕಿ ಮನೆ ಮಂದಿ ಕೂಗಿ ಕೊಂಡಾಗ ಕಳ್ಳರು ಓಡಿ ಹೋಗಿದ್ದಾರೆ.  ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.      

ಮಂಗಳೂರು: ಮನೆಗಳ್ಳತನಕ್ಕೆ ಯತ್ನ ಆರೋಪಿಗಳು ಪರಾರಿ.! Read More »

ಕರಾವಳಿ, ಕ್ರೈಮ್ ನ್ಯೂಸ್

ರಾಜ್ಯದ್ಯಂತ ಹೆಚ್ಚಾದ ಡೆಂಘಿ ಹಾವಳಿ ಮತ್ತೋರ್ವ ಯುವತಿ ಬಲಿ.!

(ನ್ಯೂಸ್ ಕಡಬ)newskadaba.com ಬಳ್ಳಾರಿ, ಜು.20. ರಾಜ್ಯಾದ್ಯಂತ ಡೆಂಘೀ ಹಾವಳಿ ಹೆಚ್ಚಾಗುತ್ತಿದ್ದು, ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೆ ಇದೆ ಎನ್ನಲಾಗಿದೆ. ಇದೀಗ, ಮಹಾಮಾರಿ ಡೆಂಗ್ಯೂ ಗೆ ರಾಜ್ಯದಲ್ಲಿ ಮತ್ತೋರ್ವ ಯುವತಿ ಬಲಿಯಾಗಿದ್ದು ಈ ಮೂಲಕ ಸಾವಿನ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ. ಮೃತ ಯುವತಿಯನ್ನು ರೇಖಾ (19) ಎಂದು ಗುರುತಿಸಲಾಗಿದ್ದು,  ತೀವ್ರ ಜ್ವರ ಕಾಣಿಸಿಕೊಂಡ ಪರಿಣಾಮ ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಯುವತಿಗೆ ಶಂಕಿತ ಡೆಂಗ್ಯೂ ಜ್ವರವಿತ್ತು. ಈ ಬಗ್ಗೆ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.  

ರಾಜ್ಯದ್ಯಂತ ಹೆಚ್ಚಾದ ಡೆಂಘಿ ಹಾವಳಿ ಮತ್ತೋರ್ವ ಯುವತಿ ಬಲಿ.! Read More »

ಕರ್ನಾಟಕ, ಕ್ರೈಮ್ ನ್ಯೂಸ್

ದ್ವಿ ಚಕ್ರ ವಾಹನಕ್ಕೆ ನಾಯಿಯ ಶವ ಕಟ್ಟಿ ಎಳೆದುಕೊಂಡು ಹೋದ ವ್ಯಕ್ತಿ

(ನ್ಯೂಸ್ ಕಡಬ)newskadaba.com ಉಡುಪಿ, ಜು.20. ದ್ವಿಚಕ್ರ ವಾಹನದಲ್ಲಿ ನಾಯಿಯನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವ ಘಟನೆ ಉಡುಪಿಯಲ್ಲಿ ವರದಿಯಾಗಿದೆ. ಸಾರ್ವಜನಿಕರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ವ್ಯಕ್ತಿ ನಾಯಿಯ ಕುತ್ತಿಗೆಗೆ ಸರಪಳಿಯನ್ನು ಜೋಡಿಸಿ ನಂತರ ತನ್ನ ಸ್ಕೂಟರ್‌ ನ ಸೀಟಿಗೆ ಇನ್ನೊಂದು ತುದಿಯನ್ನು ಕಟ್ಟಿದ್ದಾನೆ. ವ್ಯಕ್ತಿಗಾಗಿ ಶಿರ್ವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಸಾರ್ವಜನಿಕರು ಕ್ರೂರ ಕೃತ್ಯವನ್ನು ಖಂಡಿಸಿದ್ದು ಮುಂದೆ ಇಂತಹ ಘಟನೆಗಳು ನಡೆಯದಂತೆ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.  

ದ್ವಿ ಚಕ್ರ ವಾಹನಕ್ಕೆ ನಾಯಿಯ ಶವ ಕಟ್ಟಿ ಎಳೆದುಕೊಂಡು ಹೋದ ವ್ಯಕ್ತಿ Read More »

ಕರಾವಳಿ

ಪುತ್ತೂರು: ಯುವಕನೋರ್ವ ಹೊಳೆಗೆ ಹಾರಿ ಆತ್ಮಹತ್ಯೆ ಶಂಕೆ ಮುಂದುವರಿದ ತನಿಖೆ

(ನ್ಯೂಸ್ ಕಡಬ)newskadaba.com ಪುತ್ತೂರು, ಜು.20. ಯುವಕನೋರ್ವ ಹೊಳೆಗೆ ಹಾರಿ ಆತ್ಮಹತ್ಯೆ  ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಈ ಘಟನೆ ಸರ್ವೆಯ ತುಂಬಿ ಹರಿಯುವ ಗೌರಿ ಹೊಳೆ ಬಳಿ ನಡೆದಿದೆ ಎನ್ನಲಾಗಿದೆ. ಯುವಕನನ್ನು ಮಹೀಂದ್ರ ಶೋರೂಂ ಉದ್ಯೋಗಿ ಸನ್ಮಿತ್ (21) ಎಂದು ತಿಳಿದುಬಂದಿದೆ. ಈತನ ಸ್ಕೂಟರ್  ಹೊಳೆಯ ಬದಿಯಿಂದ 150 ಮೀ ದೂರದಲ್ಲಿ ನಿಲ್ಲಿಸಿದ್ದ ಎನ್ನಲಾಗಿದೆ. ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿದ್ದು, ಹೊಳೆಯಲ್ಲಿ ಸನ್ಮಿತ್‌ ಮೃತದೇಹಕ್ಕಾಗಿ ಹುಡುಕಾಟ ಆರಂಭಿಸಿದ್ದಾರೆ. ಸನ್ಮಿತ್‌ ನಿಜವಾಗಿಯೂ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಎನ್ನುವ

ಪುತ್ತೂರು: ಯುವಕನೋರ್ವ ಹೊಳೆಗೆ ಹಾರಿ ಆತ್ಮಹತ್ಯೆ ಶಂಕೆ ಮುಂದುವರಿದ ತನಿಖೆ Read More »

ಕರಾವಳಿ, ಕ್ರೈಮ್ ನ್ಯೂಸ್

ರಾಜ್ಯದಲ್ಲಿ ‘ವಿವಾಹ ನೋಂದಣಿ’ ಈಗ ಇನ್ನಷ್ಟು ಸುಲಭ

(ನ್ಯೂಸ್‌ ಕಡಬ) newskadaba ಬೆಂಗಳೂರು, ಮಾ.09: ಈವರೆಗೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮಾತ್ರ ವಿವಾಹ ನೋಂದಣಿಯನ್ನು ಕೈಗೊಳ್ಳಲಾಗುತ್ತಿತ್ತು. ಆದರೆ, ರಾಜ್ಯ ಸರ್ಕಾರ ಈ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಿದೆ. ಉಪ ನೋಂದಣಾಧಿಕಾರಿಗಳ ಕಚೇರಿಗೆ ಅಲೆದಾಟ ತಪ್ಪಿಸಲು ಕ್ರಮ ಕೈಗೊಂಡಿದೆ. ವಿವಾಹ ನೋಂದಣಿಯನ್ನು ಜನಸ್ನೇಹಿಯಾಗಿಸಲು ಕಾವೇರಿ 2.0 ತಂತ್ರಾಂಶದಲ್ಲಿ ಆನ್ಲೈನ್ ಮೂಲಕ ನೋಂದಣಿ ಮಾಡಲು ಮತ್ತು ಗ್ರಾಮ ಪಂಚಾಯಿತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ-1 ಕೇಂದ್ರಗಳಲ್ಲಿಯೂ ಸಹ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. https://kaveri.karnataka.gov.in/ ಭೇಟಿ ನೀಡಿ

ರಾಜ್ಯದಲ್ಲಿ ‘ವಿವಾಹ ನೋಂದಣಿ’ ಈಗ ಇನ್ನಷ್ಟು ಸುಲಭ Read More »

ಕರ್ನಾಟಕ

ಕಾಂಗ್ರೆಸ್​ನ ಮಾಜಿ ಶಾಸಕ ವಾಸು ನಿಧನ

(ನ್ಯೂಸ್‌ ಕಡಬ) newskadaba ಮೈಸೂರು, ಮಾ.09: ಕಾಂಗ್ರೆಸ್​ನ ಮಾಜಿ ಶಾಸಕ ವಾಸು (72) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ವಾಸು ಅವರು ಮೈಸೂರಿನ ಖಾಸಗಿ ಆಸ್ಪತ್ರೆ ದಾಖಲಾಗಿದ್ದರು. ಇಂದು (ಮಾ.09) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರಿಗೆ ಮಕ್ಕಳಾದ ಕವೀಶ್​, ಅವೀಶ್​ ಹಾಗೂ ರಿತೇಷ್​ ಇದ್ದಾರೆ. ಗಾಯತ್ರಿಪುರಂ ವಾರ್ಡ್​​ ನಗರ ಪಾಲಿಕೆ ಸದಸ್ಯರಾಗಿ ಆಯ್ಕೆಗೊಂಡು ನಂತರ ಮೇಯರ್​​ ಆಗಿ ಆಯ್ಕೆಗೊಂಡಿದ್ದರು. ಇದರಿಂದ ವಾಸು ಅವರು ಮೇಯರ್ ವಾಸು ಎಂದೇ ಪ್ರಖ್ಯಾತರಾಗಿದ್ದರು. ಚಾಮರಾಜ ಕ್ಷೇತ್ರದಲ್ಲಿ ನಾಲ್ಕು ಬಾರಿ ಕಾಂಗ್ರೆಸ್​

ಕಾಂಗ್ರೆಸ್​ನ ಮಾಜಿ ಶಾಸಕ ವಾಸು ನಿಧನ Read More »

ಕರ್ನಾಟಕ
Scroll to Top