karnataka

ಬಂಟ್ವಾಳ: ಸೆ.5 ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.29. ಸೆಪ್ಟೆಂಬರ್ 5 ರಂದು ಬೆಳಿಗ್ಗೆ 10.30ಕ್ಕೆ ಬಂಟ್ವಾಳ ತಾಲೂಕು ಪಂಚಾಯತ್ ಎಸ್‍ಜಿಎಸ್‍ವೈ ಸಭಾಂಗಣದಲ್ಲಿ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆಯು ಆಯೋಜಿಸಲಾಗಿದೆ. ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತ್ ಬಂಟ್ವಾಳ ಇವರ ಪ್ರಕಟಣೆ ತಿಳಿಸಿದೆ. 

ಬಂಟ್ವಾಳ: ಸೆ.5 ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ Read More »

ಕರಾವಳಿ

ಮೀನುಗಾರಿಕಾ ಸಚಿವರ ಪ್ರವಾಸ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.29.ಮುಜರಾಯಿ, ಮೀನುಗಾರಿಕೆ ಹಾಗೂ ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರವಾಸ ತೆರಳಿದ್ದಾರೆ. ಆಗಸ್ಟ್ 29 ರಂದು ಬೆಳಿಗ್ಗೆ 11 ಗಂಟೆಗೆ ಉಡುಪಿಯಿಂದ ಮಂಗಳೂರಿಗೆ ಆಗಮಿಸಿ ಪಕ್ಷದ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12.30 ಗಂಟೆಗೆ ಉಡುಪಿಗೆ ತೆರಳಲಿದ್ದಾರೆ.

ಮೀನುಗಾರಿಕಾ ಸಚಿವರ ಪ್ರವಾಸ Read More »

ಕರಾವಳಿ

ಆಯುಷ್ ನೂತನ ಯೋಜನೆಗಳಿಗೆ ಚಾಲನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.29.ಆಗಸ್ಟ್ 29 ರಂದು ಆಯುಷ್ ಸಚಿವರಾದ ಶ್ರೀಪಾದ ಯಸ್ಸೋ ನಾಯ್ಕ್ ರವರು ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖೆಯ ನೂತನ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಫಾದರ್ ಮುಲ್ಲರ್ಸ್ ಹೋಮಿಯೋಪಥಿ ಮೆಡಿಕಲ್ ಕಾಲೇಜು ಸಹಯೋಗದೊಂದಿಗೆ ಮಕ್ಕಳ ಚೈತನ್ಯಪೂರ್ಣ ಬೆಳವಣಿಗೆಗಾಗಿ ಸಮೃಧ್ಧಿ ಯೋಜನೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗಬಲ್ಲ ದೈಹಿಕ, ಮಾನಸಿಕ ಚೈತನ್ಯ ನೀಡುವ ಔಷಧೋಪಚಾರ ಉಚಿತವಾಗಿ ನೀಡುವ ಯೋಜನೆ ಇದಾಗಿದೆ. ಅಲ್ಲದೇ ವಿಷೇಶವಾಗಿ ಅಪೌಷ್ಟಿಕಾಂಶದಿಂದ ಬೆಳವಣಿಗೆ ಕುಂಠಿತವಾಗಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಅಗತ್ಯವುಳ್ಳ

ಆಯುಷ್ ನೂತನ ಯೋಜನೆಗಳಿಗೆ ಚಾಲನೆ Read More »

ಕರಾವಳಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ. ಕ ಜಿಲ್ಲೆ ವತಿಯಿಂದ ➤ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭಕ್ಕೆ ಕಲಾವಿದರಿಂದ ಅರ್ಜಿ ಅಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.29.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭಕ್ಕೆ ಕಲಾವಿದರಿಂದ ಅರ್ಜಿ ಅಹ್ವಾನಿಸಲಾಗಿದೆ.   ಆಯೋಜಿಸಲಾಗುವ ಚಿಗುರು, ಯುವ ಸೌರಭ, ಸಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಸಂಗೀತ, ಕರ್ನಾಟಕ/ಹಿಂದುಸ್ಥಾನಿ ವಾದ್ಯ ಸಂಗೀತ ಕರ್ನಾಟಕ/ಹಿಂದುಸ್ಥಾನಿ ಸಂಗೀತ, ಸುಗಮ ಸಂಗೀತ/ವಚನ ಸಂಗೀತ/ತತ್ವಪದ/ದಾಸರಪದ, ಜನಪದ ಗೀತೆಗಳು, ಸಮೂಹ ನೃತ್ಯ/ನೃತ್ಯ ರೂಪಕ, ಶಾಸ್ತ್ರೀಯ ನೃತ್ಯ-ಭರತನಾಟ್ಯ ,ಕಥಕ್, ಮೋಹಿನಿಯಾಟಂ ,ಕೂಚಿಪುಡಿ ಒಡೆಸ್ಸಿ, (ಸೋಲೋ/ಯುಗಳ ನೃತ್ಯ), ಜನಪದ ಪ್ರದರ್ಶನ ಕಲಾ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ. ಕ ಜಿಲ್ಲೆ ವತಿಯಿಂದ ➤ ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭಕ್ಕೆ ಕಲಾವಿದರಿಂದ ಅರ್ಜಿ ಅಹ್ವಾನ Read More »

ಕರಾವಳಿ

ಕನ್ನಡ ಮತ್ತು ಸಂಸ್ಕೃತ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ➤ ಗಿರಿಜನ ಉತ್ಸವಕ್ಕೆ ಕಲಾವಿದರಿಂದ ಅರ್ಜಿ ಅಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.29.ಕನ್ನಡ ಮತ್ತು ಸಂಸ್ಕೃತ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಗಿರಿಜನ ಉತ್ಸವಕ್ಕೆ ಕಲಾವಿದರಿಂದ ಅರ್ಜಿ ಅಹ್ವಾನಿಸಲಾಗಿದೆ. ಗಿರಿಜನ ಉಪಯೋಜನೆಯಡಿ ಗಿರಿಜನ ಉತ್ಸವ ಕಾರ್ಯಕ್ರಮದಲ್ಲಿ ಯಕ್ಷಗಾನ, ನಾಟಕ, ಶಾಸ್ತ್ರೀಯ, ನೃತ್ಯ, ಜಾನಪದ ಪ್ರದರ್ಶನ ಕಲಾ ತಂಡಗಳು, ದಾಸರ ಪದಗಳು, ತತ್ವಪದ, ಗೀಗಿಪದ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದುಸ್ಥಾನಿ ವಾದ್ಯ ಸಂಗೀತ, ಹಾಡುಗಾರಿಕೆ, ಕರ್ನಾಟಕ ವಾದ್ಯ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಪರಿಶಿಷ್ಟ ಪಂಗಡ ವಿಭಾಗದ ಕಲಾವಿದರಿಗೆ ಮಾತ್ರ ಈ ಉತ್ಸವದಲ್ಲಿ ಕಲಾಪ್ರದರ್ಶನ

ಕನ್ನಡ ಮತ್ತು ಸಂಸ್ಕೃತ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ➤ ಗಿರಿಜನ ಉತ್ಸವಕ್ಕೆ ಕಲಾವಿದರಿಂದ ಅರ್ಜಿ ಅಹ್ವಾನ Read More »

ಕರಾವಳಿ

ಕಾನೂನು ಪದವಿ ವಿಶ್ವವಿದ್ಯಾನಿಲಯ ಮಂಗಳೂರು ➤ ಪುನಾರಾವರ್ತಿತ ಕಾನೂನು ಪರೀಕ್ಷಾ ನೋಂದಣಿಗೆ ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.29.ಮಂಗಳೂರು ವಿಶ್ವವಿದ್ಯಾನಿಲಯದ ಕಾನೂನು ಪದವಿಯ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಕಾನೂನು ಪದವಿಯ ಪರೀಕ್ಷೆಗಳನ್ನು 2019-20ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಅಂತಿಮವಾಗಿ ನಡೆಸಲಿದೆ. ಪರೀಕ್ಷೆ  ಬರೆಯಲು ಬಾಕಿಯಿರುವ ಪುನರಾವರ್ತಿತ ವಿದ್ಯಾರ್ಥಿಗಳು ಅಕ್ಟೋಬರ್ 2019 ಮತ್ತು ಏಪ್ರಿಲ್ 2020 ತಿಂಗಳಲ್ಲಿ ನಡೆಯಲಿರುವ ಪರೀಕ್ಷೆಗೆ ಆಯಾಯ ಕಾಲೇಜುಗಳಲ್ಲಿ ನೋಂದಣಿ ಮಾಡುವಂತೆ ತಿಳಿಸಲಾಗಿದೆ. ಏಪ್ರಿಲ್ 2020ರಲ್ಲಿ ನಡೆಸುವ ಪರೀಕ್ಷೆಗೆ ಹಾಜರಾಗಲು ಕೊನೆಯ ಅವಕಾಶವಾಗಿದ್ದು, ಮುಂದಕ್ಕೆ ಪುನರಾವರ್ತಿತ ವಿದ್ಯಾರ್ಥಿಗಳಿಗಾಗಿ ಯಾವುದೇ ವಿಷಯಕ್ಕೆ ಸಂಬಂಧಿಸಿ ಕಾನೂನು ಪದವಿ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ ಎಂದು

ಕಾನೂನು ಪದವಿ ವಿಶ್ವವಿದ್ಯಾನಿಲಯ ಮಂಗಳೂರು ➤ ಪುನಾರಾವರ್ತಿತ ಕಾನೂನು ಪರೀಕ್ಷಾ ನೋಂದಣಿಗೆ ಆದೇಶ Read More »

ಕರಾವಳಿ

ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಇವರ ಸಹಯೋಗದೊಂದಿಗೆ ➤ `ಸ್ವಚ್ಛತಾ ರಸಪ್ರಶ್ನೆ-2019’

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.29.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳೂರು, ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಇವರ ಸಹಯೋಗದೊಂದಿಗೆ ಸ್ವಚ್ಛತಾ ರಸಪ್ರಶ್ನೆಯನ್ನು ಆಯೋಜಿಸಲಾಗಿತ್ತು. ಸ್ವಚ್ಛಮೇವ ಜಯತೆ ಆಂದೋಲನದ ಅಂಗವಾಗಿ ಸ್ವಚ್ಛತೆ, ಜಲ ಸಂರಕ್ಷಣೆ, ಪರಿಸರ ಸಂರಕ್ಷಣೆ ಜಾಗೃತಿಗಾಗಿ ನಡೆಯುತ್ತಿರುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ `ಸ್ವಚ್ಛತಾ ರಸಪ್ರಶ್ನೆ-2019’ ಕಾರ್ಯಕ್ರಮವು ಮಂಗಳೂರಿನ ಪುರಭವನದಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ.

ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಇವರ ಸಹಯೋಗದೊಂದಿಗೆ ➤ `ಸ್ವಚ್ಛತಾ ರಸಪ್ರಶ್ನೆ-2019’ Read More »

ಕರಾವಳಿ

ಬಸ್ ಮತ್ತು ಸ್ಕೂಟಿ ಮುಖಾಮುಖಿ ಡಿಕ್ಕಿ

(ನ್ಯೂಸ್ ಕಡಬ) newskadaba.com ಹೆಬ್ರಿ, ಆಗಸ್ಟ್.28. ಉಡುಪಿಯಿಂದ ಕಾರ್ಕಳ ಹೋಗುತಿದ್ದ ಖಾಸಗಿ ಬಸ್ ಹಾಗೂ ಎದುರುಗಡೆಯಿಂದ ಸ್ಕೂಟಿ ಮುಖಾಮುಖಿ ಡಿಕ್ಕಿ ಹೊಡೆದ ಘಟನೆ ಹಿರಿಯಡ್ಕ ಓಂತಿಬೆಟ್ಟುಎಂಬಲ್ಲಿ ನಡೆದಿದೆ. ಸ್ಕೂಟಿ ಎದುರು ಕಾರೊಂದು ಚಲಿಸುತ್ತಿದ್ದು ಚಾಲಕ ಮೊಬೈಲ್ ನಲ್ಲಿ ಮಾತನಾಡುತ್ತ ಒಮ್ಮೆಲೆ ಬಲ ಬದಿಗೆ ಬಂದ ಕಾರಣ ಸ್ಕೂಟಿ ಸವಾರ ನಿಯಂತ್ರಣ ತಪ್ಪಿ ಬಸ್ಸಿಗೆ ಡಿಕ್ಕಿ ಹೊಡೆದ ಎನ್ನಲಾಗುತ್ತಿದೆ. ಪರಿಣಾಮ ಸ್ಕೂಟಿ ಸವಾರ ಗಂಭೀರ ಗಾಯಗೊಂಡಿದ್ದಾನೆ.ಗಾಯಗೊಂಡ ವ್ಯಕ್ತಿ ಮೂಲತಃ ಕುಂಜಿಬೆಟ್ಟುವಿನ ನಿವಾಸಿ ಪ್ರಸ್ತುತ ಪೆರ್ಡೂರಿನಲ್ಲಿ ವಾಸವಾಗಿರುವ ಮೂಲ್ಯ (೫೦)

ಬಸ್ ಮತ್ತು ಸ್ಕೂಟಿ ಮುಖಾಮುಖಿ ಡಿಕ್ಕಿ Read More »

ಕರಾವಳಿ

ನೂತನ ಸಚಿವರಿಗೆ ಅಭಿನಂದನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.28.ಕರ್ನಾಟಕ ಸರಕಾರದ ಬಂದರು, ಮೀನುಗಾರಿಕಾ ಹಾಗೂ ಮುಜರಾಯಿ ಇಲಾಖೆಯ ನೂತನ ಸಚಿವರಾದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅಭಿನಂದಿಸಲಾಯಿತು. ಕಡಬ ತಾಲೂಕಿನ ಬಿಜೆಪಿಯ ಪ್ರಮುಖರಾದ ಎ.ಪಿ.ಎಂ.ಸಿ. ಸದಸ್ಯೆ ಪುಲಸ್ತ್ಯಾ ರೈ, ಮರ್ದಾಳ ಬಿಜೆಪಿ ಶಕ್ತಿ ಕೇಂದ್ರದ ಉಸ್ತುವಾರಿ ನೂಜಿಬಾಳ್ತಿಲದ ಉಮೇಶ್ ಶೆಟ್ಟಿ ಬೆಂಗಳೂರಿನ ಸಚಿವರ ಕಛೇರಿಯಲ್ಲಿ ಮಂಗಳವಾರ ಬೇಟಿಯಾಗಿ ಅಭಿನಂದನೆ ಸಲ್ಲಿಸಿದರು.

ನೂತನ ಸಚಿವರಿಗೆ ಅಭಿನಂದನೆ Read More »

ಕರಾವಳಿ

ಮೆನ್ನಬೆಟ್ಟು ಗ್ರಾ.ಪಂ.ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.28.ಮೆನ್ನಬೆಟ್ಟು ಗ್ರಾಮ ಪಂಚಾಯತ್‍ನ 2019-20ನೇ ಸಾಲಿನ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯ ಆಯೋಜಿಸಲಾಗಿದೆ. ಆಗಸ್ಟ್ 30 ರಂದು ಬೆಳಿಗ್ಗೆ 10.30 ಗಂಟೆಗೆ ಮೆನ್ನಬೆಟ್ಟು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೆನ್ನಬೆಟ್ಟು ಗ್ರಾಮ ಪಂಚಾಯತ್ ಇವರ ಪ್ರಕಟಣೆ ತಿಳಿಸಿದೆ.

ಮೆನ್ನಬೆಟ್ಟು ಗ್ರಾ.ಪಂ.ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ Read More »

ಕರಾವಳಿ
Scroll to Top