ನೂತನ ಸಚಿವರಿಗೆ ಅಭಿನಂದನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.28.ಕರ್ನಾಟಕ ಸರಕಾರದ ಬಂದರು, ಮೀನುಗಾರಿಕಾ ಹಾಗೂ ಮುಜರಾಯಿ ಇಲಾಖೆಯ ನೂತನ ಸಚಿವರಾದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅಭಿನಂದಿಸಲಾಯಿತು.

ಕಡಬ ತಾಲೂಕಿನ ಬಿಜೆಪಿಯ ಪ್ರಮುಖರಾದ ಎ.ಪಿ.ಎಂ.ಸಿ. ಸದಸ್ಯೆ ಪುಲಸ್ತ್ಯಾ ರೈ, ಮರ್ದಾಳ ಬಿಜೆಪಿ ಶಕ್ತಿ ಕೇಂದ್ರದ ಉಸ್ತುವಾರಿ ನೂಜಿಬಾಳ್ತಿಲದ ಉಮೇಶ್ ಶೆಟ್ಟಿ ಬೆಂಗಳೂರಿನ ಸಚಿವರ ಕಛೇರಿಯಲ್ಲಿ ಮಂಗಳವಾರ ಬೇಟಿಯಾಗಿ ಅಭಿನಂದನೆ ಸಲ್ಲಿಸಿದರು.

Scroll to Top