karnataka

ಬಳ್ಳಾರಿ : ಕಾಲುವೆಗೆ ಬಿದ್ದು 90 ಕುರಿಗಳು ಮೃತ್ಯು..!

(ನ್ಯೂಸ್ ಕಡಬ) newskadaba.com ಬಳ್ಳಾರಿ ,  ಡಿ 27 :   ಕಾಲುವೆ ದಾಟುವಾಗ ಒಂದರ ಮೇಲೊಂದು ಬಿದ್ದು  90 ಕುರಿಗಳು ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ನೆಹರೂ ನಗರದ ಬಳಿ ಸಂಭವಿಸಿದೆ. ಮೇವು ಹರಸಿಕೊಂಡು ಸಿರುಗುಪ್ಪ ತಾಲೂಕಿಗೆ  ಕಾಲುವೆ ಮೂಲಕ ಹೋಗುವಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಕುರಿಗಾಹಿ ಸಿದ್ದಪ್ಪ ಎಂಬುವವರ 19 ಕುರಿಗಳು, ಮಂಜುನಾಥ್ 26, ಮಂಜುನಾಥ್ ಸತ್ಯಪ್ಪ ಎಂಬುವವರ 53 ಕುರಿಗಳು ಮೃತಪಟ್ಟಿವೆ ಎನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪಶು […]

ಬಳ್ಳಾರಿ : ಕಾಲುವೆಗೆ ಬಿದ್ದು 90 ಕುರಿಗಳು ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ವಿಜಯಪುರ : ಮನೆ ಕಳ್ಳತನ ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ವಿಜಯಪುರ, ಡಿ 27:  ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ವರದಿಯಾಗಿದೆ. ಬಂಧಿತರನ್ನು ಪ್ರಶಾಂತ ರಾಘವೇಂದ್ರ ಬುಡ್ಡರ, ಮಹಮ್ಮದ್ ಅಲಿ ಮೆಹಬೂಬ್ ಬಗಲಿ ಎಂದು ಗುರುತಿಸಲಾಗಿದೆ. ಬಂಧಿತರಿಂದ 20 ಗ್ರಾಂ ಬಂಗಾರ, 50 ಗ್ರಾಂ ಬೆಳ್ಳಿ, ಒಂದು ಟ್ಯಾಬ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

ವಿಜಯಪುರ : ಮನೆ ಕಳ್ಳತನ ➤ ಇಬ್ಬರ ಬಂಧನ Read More »

ಕರ್ನಾಟಕ

ಗಾಂಜಾ ಸೇವನೆ ಐವರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಮಣಿಪಾಲ ,  ಡಿ 27 :   ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಆಚಾರ್ಯ ಕಂಪೌಂಡ ಬಳಿ 5 ಮಂದಿಯನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದ ಘಟನೆ ಮಣಿಪಾಲದಲ್ಲಿ ವರದಿಯಾಗಿದೆ. ಬಂಧಿತರನ್ನು ದೀಪಕ್ (23), ಆದಿನಾಥ್ ಎಸ್ ಗಾಣಿಗ (29), ಮೊಹಮ್ಮದಗ ಆಜಯ್(37), ಅನುಪಮ್ (24) ಎಂದು ಗುರುತಿಸಲಾಗಿದೆ. ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಆಚಾರ್ಯ ಕಂಪೌಂಡ ಬಳಿ ದೀಪಕ್, ಆದಿನಾಥ್ ಎಸ್ ಗಾಣಿಗ, ಶರತ್,

ಗಾಂಜಾ ಸೇವನೆ ಐವರು ಪೊಲೀಸ್ ವಶಕ್ಕೆ Read More »

ಕರ್ನಾಟಕ

ಮಲ್ಪೆ ಬೀಚ್ ನಲ್ಲಿ ಸಿಕ್ಕಿದ 22 ಕೆಜಿ ತೂಕದ ಗೋಳಿ ಮೀನು ➤ ಬರೋಬ್ಬರಿ 2.34 ಲಕ್ಷ ರೂ. ಗೆ ಹರಾಜು…!

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 27. ಮಲ್ಪೆ ಮೀನುಗಾರರ ಬಲೆಗೆ ಬಿದ್ದ ಗೋಳಿ ಮೀನು ಬರೋಬ್ಬರಿ 2,34,080 ರೂಪಾಯಿಗೆ ಮಾರಾಟವಾಗಿದೆ. ಮಲ್ಪೆ ಬಂದರಿನ ಮೀನುಗಾರರ ಬಲೆಗೆ ಸಿಕ್ಕ 22 ಕೆ.ಜಿ. ತೂಕದ ಈ ಮೀನು ಮೀನುಗಾರರ ಪಾಲಿಗೆ ಲಾಭದಾಯಕವಾಗಿದೆ. ಹಾಗಾದರೆ ಕೇವಲ 22 ಕೆ.ಜಿ. ತೂಕದ ಮೀನಿಗೆ ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸಿದ್ರಾ ಎಂದು ಉಬ್ಬೇರಿಸಬೇಡಿ. ಇದು ಗೋಳಿ ಮೀನು. ಔಷಧಕ್ಕೆ ಬಳಕೆಯಾಗುವ ಗೋಳಿ ಮೀನಿಗೆ ಬೇಡಿಕೆ ಮತ್ತು ಬೆಲೆ ಹೆಚ್ಚು. ಆಳಸಮುದ್ರ ಮೀನುಗಾರಿಕಾ ಬೋಟ್‌ನ

ಮಲ್ಪೆ ಬೀಚ್ ನಲ್ಲಿ ಸಿಕ್ಕಿದ 22 ಕೆಜಿ ತೂಕದ ಗೋಳಿ ಮೀನು ➤ ಬರೋಬ್ಬರಿ 2.34 ಲಕ್ಷ ರೂ. ಗೆ ಹರಾಜು…! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಂಗಳೂರು : ಬೈಕ್ ಪಲ್ಟಿ ➤ ಖಾಸಗಿ ಕಂಪನಿ ಉದ್ಯೋಗಿ ಮೃತ್ಯು..!

(ನ್ಯೂಸ್ ಕಡಬ) newskadaba.com ಬೆಂಗಳೂರು ,  ಡಿ 27 :   ಅತಿವೇಗವಾಗಿ ಹೋಗುತ್ತಿದ್ದ ಬೈಕೊಂದು ಆಯತಪ್ಪಿ ಬಿದ್ದ ಪರಿಣಾಮ ಪೋರ್ಟರ್ ಕಂಪನಿಯ ಪ್ರತಿನಿಧಿಯೊಬ್ಬರು ಮೃತಪಟ್ಟ ದಾರುಣ ಘಟನೆ ಹೆಚ್ ಎಸ್ ಆರ್ ಲೇಔಟ್ ನ ಹೊರವರ್ತುಲ ರಸ್ತೆಯ ಇಬ್ಬಲೂರು ಬ್ರಿಡ್ಜ್ ಡೌನ್ ನಲ್ಲಿ ವರದಿಯಾಗಿದೆ. ಮೃತರನ್ನು ಪೈಲೇಔಟ್ ನ ಸಂತೋಷ್ ಹೊಂಗಲ್ (33) ಎಂದು ಗುರುತಿಸಲಾಗಿದೆ. ಹೆಚ್ ಎಸ್ ಆರ್ ಲೇಔಟ್ ನ ಹೊರವರ್ತುಲ ರಸ್ತೆಯ ಇಬ್ಬಲೂರು ಬ್ರಿಡ್ಜ್ ಡೌನ್ ಬಳಿ ಕೆಲಸ ಮುಗಿಸಿಕೊಂಡು ಇವರು

ಬೆಂಗಳೂರು : ಬೈಕ್ ಪಲ್ಟಿ ➤ ಖಾಸಗಿ ಕಂಪನಿ ಉದ್ಯೋಗಿ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕ್ಯಾಂಪಸ್ ನಲ್ಲಿ ಚಿರತೆ ದಾಳಿ ➤ ಅರಣ್ಯಾಧಿಕಾರಿಗಳು ಸೇರಿ 15 ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಗುವಹಾಟಿ , ಡಿ 27 :  ಚಿರತೆಯೊಂದು ದಾಳಿಮಾಡಿ ಪರಿಣಾಮ ಮೂವರು ಅರಣ್ಯಾಧಿಕಾರಿಗಳು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 15 ಮಂದಿ ಗಾಯಗೊಂಡಿರುವ ಘಟನೆ ಅಸ್ಸಾಂ ರಾಜ್ಯದ ಜೋರ್ಹಟ್‌ ಎಂಬಲ್ಲಿ ವರದಿಯಾಗಿದೆ. ಅರಣ್ಯಾಧಿಕಾರಿಗಳು ಸೆರೆಹಿಡಿದಿರುವ ವೀಡಿಯೋವೊಂದರಲ್ಲಿ ಚಿರತೆ ಕ್ಯಾಂಪಸ್‌ನ ತಡೆಬೇಲಿಯನ್ನು ಹಾರಿ ಒಳಬರುತ್ತಿರುವುದು ಹಾಗೂ ಅಲ್ಲಿ ಸಾಗುತ್ತಿರುವ ಕಾರೊಂದರ ಮೇಲೆ ದಾಳಿ ನಡೆಸಿರುವುದು ಕ್ಯಾಮರದಲ್ಲಿ ಸೆರೆಯಾಗಿದೆ. ಇನ್ನು ರೈನ್‌ಫಾರೆಸ್ಟ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಜೋರ್ಹಟ್‌ ನಗರದ ಹೊರವಲಯದಲ್ಲಿದ್ದು ಸುತ್ತಲೂ ಅರಣ್ಯ ಪ್ರದೇಶವಿರುವುದರಿಂದ ಚಿರತೆ ಅಲ್ಲಿಂದ

ಕ್ಯಾಂಪಸ್ ನಲ್ಲಿ ಚಿರತೆ ದಾಳಿ ➤ ಅರಣ್ಯಾಧಿಕಾರಿಗಳು ಸೇರಿ 15 ಮಂದಿಗೆ ಗಾಯ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕುಂದಾಪುರ : ಬೈಕ್ ಗೆ ಕ್ರೇನ್ ಢಿಕ್ಕಿ ➤ ಸಹಸವಾರ ಸ್ಥಳದಲ್ಲೇ ಮೃತ್ಯು..!

(ನ್ಯೂಸ್ ಕಡಬ) newskadaba.com  ಕುಂದಾಪುರ , ಡಿ 27 :  ಚಲಿಸುತ್ತಿದ್ದ ಬೈಕ್ ಗೆ ಹಿಂಬದಿಯಿಂದ ಬಂದ ಕ್ರೇನ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ  ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ಪಾದಕದಕಟ್ಟೆ ಎಂಬಲ್ಲಿ ವರದಿಯಾಗಿದೆ. ಮೃತರನ್ನು ಕುಂದಾಪುರ ತಾಲೂಕಿನ ಹುಣ್ಸೆಮಕ್ಕಿ ಸಮೀಪದ ಹೊಂಬಾಡಿ ನಿವಾಸಿ ಪ್ರಶಾಂತ್ ಮೊಗವೀರ (31) ಎಂದು ಗುರುತಿಸಲಾಗಿದೆ. ಪ್ರಶಾಂತ್ ಅವರು ದಿನೇಶ್ ಪೂಜಾರಿ ಎಂಬವರ ಬೈಕ್ ನಲ್ಲಿ  ಹಿಂಬದಿ ಕುಳಿತು ಕುಂದಾಪುರ ಕಡೆಯಿಂದ

ಕುಂದಾಪುರ : ಬೈಕ್ ಗೆ ಕ್ರೇನ್ ಢಿಕ್ಕಿ ➤ ಸಹಸವಾರ ಸ್ಥಳದಲ್ಲೇ ಮೃತ್ಯು..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಧರ್ಮಸ್ಥಳ: ಬೈಕ್ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಅಪಘಾತ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಡಿ. 27. ಬೈಕ್ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಪ್ರಾಣಪಾಯದಿಂದ ಪಾರಾದ ಘಟನೆ ದೊಂಡೋಲೆ ಕ್ರಾಸ್ ಬಳಿ ಮಂಗಳವಾರದಂದು ಸಂಭವಿಸಿದೆ. ಅಪಘಾತದಿಂದಾಗಿ ಬೈಕ್ ಸಂಪೂರ್ಣ ಜಖಂಗೊಂಡಿದೆ. ಘಟನೆ ನಡೆದ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. .

ಧರ್ಮಸ್ಥಳ: ಬೈಕ್ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಅಪಘಾತ Read More »

ಕರಾವಳಿ, ಕ್ರೈಮ್ ನ್ಯೂಸ್

ಮೈಸೂರು: ಬೋನಿಗೆ ಬಿದ್ದ ಮತ್ತೊಂದು ಚಿರತೆ

(ನ್ಯೂಸ್ ಕಡಬ) newskadaba.com ಮೈಸೂರು, ಡಿ. 27. ಚಿರತೆಯೊಂದು ಬೋನಿಗೆ ಬಿದ್ದ ಘಟನೆ ಮೈಸೂರು ತಾಲೂಕಿನ ಕೀಳನಪುರ ಗ್ರಾಮದಲ್ಲಿ ವರದಿಯಾಗಿದೆ. ಕಳೆದ 15 ದಿನಗಳಿಂದ ಗ್ರಾಮದ ಸುತ್ತ ಮುತ್ತ ಚಿರತೆ ಓಡಾಟ ನಡೆಸುತ್ತಿತ್ತು. ಮೂರು ದಿನಗಳ ಹಿಂದೆ ಕರುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ಇದರಿಂದಾಗಿ ಜನರು ಭೀತಿಗೊಳಗಾಗಿದ್ದರು. ಚಿರತೆಯನ್ನು ಹಿಡಿಯಲು ಅರಣ್ಯಾಧಿಕಾರಿಗಳು ಅದೇ ಕರುವಿನ ಮೃತದೇಹವನ್ನು ಬೋನಿನಲ್ಲಿಟ್ಟು ಚಿರತೆಯನ್ನು ಸೆರೆ ಹಿಡಿದರು. ಸೆರೆಯಾದ ಚಿರತೆಗೆ ಸುಮಾರು 8 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಆರ್​ಎಫ್​​ಓ

ಮೈಸೂರು: ಬೋನಿಗೆ ಬಿದ್ದ ಮತ್ತೊಂದು ಚಿರತೆ Read More »

ಕರ್ನಾಟಕ

ರಾಜ್ಯದಲ್ಲಿ ಬಿಎಫ್.7 ಸೋಂಕಿತರಿಗೆ ಉಚಿತ ಚಿಕಿತ್ಸೆ ➤ ಕಂದಾಯ ಸಚಿವ ಆರ್.ಅಶೋಕ್

(ನ್ಯೂಸ್ ಕಡಬ) newskadaba.com ಬೆಳಗಾವಿ, ಡಿ. 27. ರಾಜ್ಯದಲ್ಲಿ ಕೊರೊನಾ ಉಪಪ್ರಭೇದ ಬಿ.ಎಫ್ 7 ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಎಲ್ಲಾ ಶಂಕಿತ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಬೆಂಗಳೂರಿನ ಬೌರಿಂಗ್ ಮತ್ತು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು. ಆಸ್ಪತ್ರೆಯಲ್ಲಿ ಆಕ್ಸಿಜನ್, ಬೆಡ್, ಐಸಿಯು, ವೆಂಟಿಲೇಟರ್ ಹಾಗೂ ಪೈಪ್ ಲೈನ್ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಬಿಎಫ್.7 ಸೋಂಕಿತರಿಗೆ ಉಚಿತ ಚಿಕಿತ್ಸೆ ➤ ಕಂದಾಯ ಸಚಿವ ಆರ್.ಅಶೋಕ್ Read More »

ಕರಾವಳಿ
Scroll to Top