ಕ್ಯಾಂಪಸ್ ನಲ್ಲಿ ಚಿರತೆ ದಾಳಿ ➤ ಅರಣ್ಯಾಧಿಕಾರಿಗಳು ಸೇರಿ 15 ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಗುವಹಾಟಿ , ಡಿ 27 :  ಚಿರತೆಯೊಂದು ದಾಳಿಮಾಡಿ ಪರಿಣಾಮ ಮೂವರು ಅರಣ್ಯಾಧಿಕಾರಿಗಳು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 15 ಮಂದಿ ಗಾಯಗೊಂಡಿರುವ ಘಟನೆ ಅಸ್ಸಾಂ ರಾಜ್ಯದ ಜೋರ್ಹಟ್‌ ಎಂಬಲ್ಲಿ ವರದಿಯಾಗಿದೆ.

ಅರಣ್ಯಾಧಿಕಾರಿಗಳು ಸೆರೆಹಿಡಿದಿರುವ ವೀಡಿಯೋವೊಂದರಲ್ಲಿ ಚಿರತೆ ಕ್ಯಾಂಪಸ್‌ನ ತಡೆಬೇಲಿಯನ್ನು ಹಾರಿ ಒಳಬರುತ್ತಿರುವುದು ಹಾಗೂ ಅಲ್ಲಿ ಸಾಗುತ್ತಿರುವ ಕಾರೊಂದರ ಮೇಲೆ ದಾಳಿ ನಡೆಸಿರುವುದು ಕ್ಯಾಮರದಲ್ಲಿ ಸೆರೆಯಾಗಿದೆ.

ಇನ್ನು ರೈನ್‌ಫಾರೆಸ್ಟ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಜೋರ್ಹಟ್‌ ನಗರದ ಹೊರವಲಯದಲ್ಲಿದ್ದು ಸುತ್ತಲೂ ಅರಣ್ಯ ಪ್ರದೇಶವಿರುವುದರಿಂದ ಚಿರತೆ ಅಲ್ಲಿಂದ ಕ್ಯಾಂಪಸ್‌ಗೆ ನುಗ್ಗಿದೆ ಎನ್ನಲಾಗಿದೆ

Scroll to Top