karnataka

ಮುಡಾ ಪ್ರಕರಣ: ಇಂದಿನಿಂದ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ಆರಂಭ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.30. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆ ಆರಂಭ ಮಾಡಲಿದ್ದಾರೆ. ಈಗಾಗಲೇ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದ್ದು ಮೊದಲು ದೂರುದಾರರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಿದೆ. ಜೊತೆಗೆ ದೂರುದಾರರ ಬಳಿ ಲೋಕಾಯುಕ್ತ ಪೊಲೀಸರು ದಾಖಲೆಗಳನ್ನು ಪೊಲೀಸರು ಸಂಗ್ರಹ ಮಾಡಲಿದ್ದಾರೆ. ಮುಡಾ ಹಗರಣ ಸಂಬಂಧ ಸಿಆರ್‌ಪಿಸಿ ಸೆಕ್ಷನ್ 156(3) ಅಡಿ ತನಿಖೆ ನಡೆಸಿ 3 ತಿಂಗಳಲ್ಲಿ ವರದಿ ನೀಡುವಂತೆ ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ […]

ಮುಡಾ ಪ್ರಕರಣ: ಇಂದಿನಿಂದ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ಆರಂಭ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಖ್ಯಾತ ಹಿರಿಯ ಚಿತ್ರ ಕಲಾವಿದ ವಿಜಯ ಸಿಂಧೂರ್ ನಿಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 28. ಅಂತಾರಾಷ್ಟ್ರೀಯ ಖ್ಯಾತಿಯ ಹಿರಿಯ ಚಿತ್ರ ಕಲಾವಿದ ವಿಜಯ ಸಿಂಧೂರ್ ಅವರು ಜಮಖಂಡಿಯ ಸ್ವಗೃಹದಲ್ಲಿ ಇಂದು ಮುಂಜಾನೆ ನಿಧನರಾದರು. ಚಿತ್ರಕಲಾ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆಗಾಗಿ ಕರ್ನಾಟಕ ಸರ್ಕಾರದ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ, ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ಬಾಂಬೆ ಆರ್ಟ್‌ ಸೊಸೈಟಿ ಪ್ರಶಸ್ತಿ, ಆರ್ಟ್‌ ಸೊಸೈಟಿ ಆಫ್ ಇಂಡಿಯಾದ ಪಟೇಲ್ ಟ್ರೋಫಿ, ಕೋಲ್ಕತ್ತಾದ ಅಖಿಲ ಭಾರತ ಕಲಾ ಪ್ರದರ್ಶನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಲಭಿಸಿವೆ.

ಖ್ಯಾತ ಹಿರಿಯ ಚಿತ್ರ ಕಲಾವಿದ ವಿಜಯ ಸಿಂಧೂರ್ ನಿಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಹಾತ್ಮ ಗಾಂಧಿ ಜಯಂತಿ- ಸರ್ಕಾರ ಮಾರ್ಗಸೂಚಿ ಬಿಡುಗಡೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 28. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ದಿ. 2.10.2024 ರಂದು ಮಹಾತ್ಮ ಗಾಂಧಿ ಜಯಂತಿಯನ್ನು ಆಚರಿಸುವ ಬಗ್ಗೆ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. 1924 ರಲ್ಲಿ ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧಿಯವರು ವಹಿಸಿದ್ದರು, ಈ ಐತಿಹಾಸಿಕ ಘಟನೆಯ ಶತಮಾನೋತ್ಸವ ಸಂಭ್ರಮವನ್ನು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ

ಮಹಾತ್ಮ ಗಾಂಧಿ ಜಯಂತಿ- ಸರ್ಕಾರ ಮಾರ್ಗಸೂಚಿ ಬಿಡುಗಡೆ Read More »

ಕರ್ನಾಟಕ

ತಾಜ್ ವೆಸ್ಟ್ ಎಂಡ್ ಹೊಟೇಲ್ ಗೆ ಬಾಂಬ್ ಬೆದರಿಕೆ ಇ-ಮೇಲ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 28. ನಗರದ ಹಲವು ಖಾಸಗಿ ಶಾಲೆಗಳಿಗೆ ಈ ಹಿಂದೆ ಬಾಂಬ್ ಬೆದರಿಕೆ ಕರೆಗಳು ಬಂದಿದ್ದವು. ನಗರದ ಪ್ರತಿಷ್ಠಿತ ತಾಜ್ ವೆಸ್ಟ್ ಎಂಡ್ ಹೊಟೇಲ್ ಗೆ ಬಾಂಬ್ ​ಇಟ್ಟು ಸ್ಪೋಟಿಸುವುದಾಗಿ ಕಿಡಿಗೇಡಿಗಳು ಇ-ಮೇಲ್​ ಮಾಡಿದ್ದಾರೆ. ಹೋಟೆಲ್​ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಪೊಲೀಸರು ಬಾಂಬ್ ಸ್ಕ್ವಾಡ್​​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಅದೊಂದು ಹುಸಿ ಬಾಂಬ್​ ಬೆದರಿಕೆ ಎಂದು ದೃಢವಾಗಿದೆ. ಹೈಗ್ರೌಂಡ್ಸ್ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ

ತಾಜ್ ವೆಸ್ಟ್ ಎಂಡ್ ಹೊಟೇಲ್ ಗೆ ಬಾಂಬ್ ಬೆದರಿಕೆ ಇ-ಮೇಲ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಶೀಘ್ರವೇ 2 ತಿಂಗಳ ಗೃಹಲಕ್ಷ್ಮಿಬಾಕಿ ಪಾವತಿ:ಲಕ್ಷ್ಮಿ ಹೆಬ್ಬಾಳ್ಕರ್

(ನ್ಯೂಸ್ ಕಡಬ) newskadaba.com ಸೆ. 27 ಬೆಳಗಾವಿ: ಗೃಹಲಕ್ಷ್ಮಿ ಯೋಜನೆಯ ಜುಲೈ ಕಂತಿನ ಹಣ ಬಿಡುಗಡೆಯ ಪ್ರಕ್ರಿಯೆ ನಡೆಯುತ್ತಿದ್ದು, ಇದಾದ ಕೆಲ ದಿನಗಳಲ್ಲೇ ಆಗಸ್ಟ್ ತಿಂಗಳ ಹಣವೂ ಬಿಡುಗಡೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಇದು ನಿರಂತರ ಪ್ರಕ್ರಿಯೆ. ಸರ್ಕಾರ ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಮಾತೇ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಗೃಹಲಕ್ಷ್ಮಿ ಹಣವನ್ನು ಕಾಯುತ್ತಿರುವ ಲಕ್ಷಾಂತರ ಮಹಿಳೆಯರಿಗೆ ಈ ತಿಂಗಳು ಮುಗಿಯುವ ಮುನ್ನವೇ

ಶೀಘ್ರವೇ 2 ತಿಂಗಳ ಗೃಹಲಕ್ಷ್ಮಿಬಾಕಿ ಪಾವತಿ:ಲಕ್ಷ್ಮಿ ಹೆಬ್ಬಾಳ್ಕರ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೋಮುಗಲಭೆ ಪ್ರಕರಣ: ಬಂಧಿತ 55 ಆರೋಪಿಗಳಿಗೆ ಜಾಮೀನು

(ನ್ಯೂಸ್ ಕಡಬ) newskadaba.com ಮಂಡ್ಯ, ಸೆ. 27. ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದಿದ್ದ ಕೋಮುಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ 55 ಆರೋಪಿಗಳಿಗೆ ಮಂಡ್ಯ 1ನೇ ಜಿಲ್ಲಾ & ಸೆಷನ್ಸ್​ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಕಳೆದ ಸೆಪ್ಟೆಂಬರ್ 11ರಂದು ನಾಗಮಂಗಲ ಅಕ್ಷರಶಃ ಹೊತ್ತಿ ಉರಿದಿತ್ತು. ಈ ಗಲಭೆ ಪ್ರಕರಣದ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು 55 ಆರೋಪಿಗಳನ್ನು ಬಂಧಿಸಿದ್ದರು. ನಾಗಮಂಗಲವನ್ನು ಸಂಪೂರ್ಣ ನಿಯಂತ್ರಿಸಲು ಹರಸಾಹಸಪಟ್ಟಿದ್ದರು. ಆರೋಪಿಗಳನ್ನು ಬಂಧಿಸಿದ ಬಳಿಕ ನಾಗಮಂಗಲದ ಗಲಭೆ ರಾಜಕೀಯ ತಿರುವುಗಳನ್ನು ಪಡೆದುಕೊಂಡಿತ್ತು.  

ಕೋಮುಗಲಭೆ ಪ್ರಕರಣ: ಬಂಧಿತ 55 ಆರೋಪಿಗಳಿಗೆ ಜಾಮೀನು Read More »

ಕರ್ನಾಟಕ, ಕ್ರೈಮ್ ನ್ಯೂಸ್

ರಸ್ತೆ ಅಪಘಾತ: ಯುವತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 27. ನಗರದಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಯುವತಿಯೊಬ್ಬಳು ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಶಾಲಿನಿ ಎಂದು ಗುರುತಿಸಲಾಗಿದೆ. ಬೆನ್ಸನ್ ಟೌನ್ ಚಿನ್ನಪ್ಪ ಗಾರ್ಡನ್ ನಿಂದ ಬರುತ್ತಿದ್ದ ಆಟೋ ಮೆಜೆಸ್ಟಿಕ್ ಗೆ ಪ್ಯಾಸೆಂಜರ್ ಡ್ರಾಪ್ ಮಾಡಲು ಹೊರಟಿತ್ತು. ಸಿಗ್ನಲ್ ಜಂಪ್ ಮಾಡಿದ ಲಾರಿ ಡ್ರೈವರ್ ನಿಯಂತ್ರಣ ತಪ್ಪಿ ಆಟೋಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಆಟೋ ಹಿಂಬದಿ ಸೀಟ್‌ನಲ್ಲಿ ಕುಳಿತಿದ್ದ ಯುವತಿ ಸ್ಥಳದಲ್ಲೇ ಎನ್ನಲಾಗಿದೆ.  

ರಸ್ತೆ ಅಪಘಾತ: ಯುವತಿ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್
Crime

ವೈದ್ಯನ ನಿರ್ಲಕ್ಷಕ್ಕೆ 7 ವರ್ಷದ ಬಾಲಕಿ ಮೃತ್ಯು..! ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಸೆ. 27. ಖಾಸಗಿ ಕ್ಲಿನಿಕ್ ವೈದ್ಯ ನೀಡಿದ ಇಂಜೆಕ್ಷನ್​ನಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಏಳು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಅಜ್ಜಂಪುರ ಸಮೀಪದ ಕೆಂಚಾಪುರ ಗ್ರಾಮದ ಅಶೋಕ್ ಅವರ 7 ವರ್ಷದ ಮಗ ಸೋನೇಶ್ ಕಳೆದ ನಾಲ್ಕು ದಿನಗಳ ಹಿಂದೆ ತೀವ್ರ ಜ್ವರದಿಂದ ಬಳಲುತ್ತಿದ್ದ. ಪೋಷಕರು ಸೋನೇಶ್ ನನ್ನು ಅಜ್ಜಂಪುರ ಪಟ್ಟಣದ ಖಾಸಗಿ ಕ್ಲಿನಿಕ್ ವೈದ್ಯ ವರುಣ್ ಬಳಿ ಸೆಪ್ಟೆಂಬರ್ 24 ರಂದು ಚಿಕಿತ್ಸೆಗಾಗಿ ಕರೆದೊಯ್ದಿದ್ರು. ವೈದ್ಯ ವರುಣ್ ನೀಡಿದ

ವೈದ್ಯನ ನಿರ್ಲಕ್ಷಕ್ಕೆ 7 ವರ್ಷದ ಬಾಲಕಿ ಮೃತ್ಯು..! ಪ್ರಕರಣ ದಾಖಲು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಶಾಸಕ ಮುನಿರತ್ನ ಮನೆ ಮೇಲೆ ಎಸ್​ಐಟಿ ದಾಳಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 27. ನ್ಯಾಯಾಂಗ ಬಂಧನದಲ್ಲಿರುವ ಬಿಜೆಪಿ ಶಾಸಕ ಮುನಿರತ್ನ ಮನೆ ಮೇಲೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ. ಬೆಂಗಳೂರಿನ ವೈಯಾಲಿಕಾವಲ್ ನಿವಾಸದ ಮೇಲೆ ಎಸ್​ಐಟಿ ಎಸಿಪಿ ಕವಿತಾ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸಿದೆ. ವೈಯಾಲಿಕಾವಲ್ ನ ನಿವಾಸ ಸೇರಿದಂತೆ ಒಟ್ಟು 15 ಕಡೆಗಳಲ್ಲಿ ಎಸ್​ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಫ್​ಎಸ್​​ಎಲ್ ತಂಡದ ಜತೆಗೆ ಎಸ್​ಐಟಿ ಅಧಿಕಾರಿಗಳು

ಶಾಸಕ ಮುನಿರತ್ನ ಮನೆ ಮೇಲೆ ಎಸ್​ಐಟಿ ದಾಳಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸಾಲ ತೀರಿಸುವಂತೆ ಬ್ಯಾಂಕ್ ಕಳುಹಿಸಿದ ನೋಟಿಸ್‌ಗೆ ಹೆದರಿ ರೈತ ಆತ್ಮಹತ್ಯೆಗೆ ಶರಣು..!

(ನ್ಯೂಸ್ ಕಡಬ) newskadaba.com ಕಲಬುರಗಿ, ಸೆ. 27. ಸಾಲ ತೀರಿಸುವಂತೆ ಬ್ಯಾಂಕ್ ಕಳುಹಿಸಿದ ನೋಟಿಸ್‌ಗೆ ಹೆದರಿ ಪೆಟ್ರೋಲ್ ಸುರಿದುಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಮೃತರನ್ನು ಪಾಂಡಪ್ಪ ತಿಪ್ಪಣ್ಣ ಕೊರವರ್ (45) ಎಂದು ಗುರುತಿಸಲಾಗಿದೆ. 3 ಎಕರೆ ಜಮೀನು ಹೊಂದಿದ್ದ ಪಾಂಡಪ್ಪ ಬ್ಯಾಂಕ್‌ನಲ್ಲಿ 1 ಲಕ್ಷ ರು. ಜತೆಗೆ ಕೈ ಸಾಲ ಮಾಡಿದ್ದರು. ಮಳೆಯಿಂದ ತೊಗರಿ ಬೆಳೆ ನಷ್ಟವಾಗಿತ್ತು. ಈ ನಡುವೆ ಸಾಲ ತೀರಿಸಲು ವಕೀಲರ ಮೂಲಕ 2 ಬಾರಿ ಬ್ಯಾಂಕ್ ನೋಟಿಸ್ ಕಳುಹಿಸಿತ್ತು. ಹೀಗಾಗಿ

ಸಾಲ ತೀರಿಸುವಂತೆ ಬ್ಯಾಂಕ್ ಕಳುಹಿಸಿದ ನೋಟಿಸ್‌ಗೆ ಹೆದರಿ ರೈತ ಆತ್ಮಹತ್ಯೆಗೆ ಶರಣು..! Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top