ಸಾಲ ತೀರಿಸುವಂತೆ ಬ್ಯಾಂಕ್ ಕಳುಹಿಸಿದ ನೋಟಿಸ್‌ಗೆ ಹೆದರಿ ರೈತ ಆತ್ಮಹತ್ಯೆಗೆ ಶರಣು..!



(ನ್ಯೂಸ್ ಕಡಬ) newskadaba.com ಕಲಬುರಗಿ, ಸೆ. 27. ಸಾಲ ತೀರಿಸುವಂತೆ ಬ್ಯಾಂಕ್ ಕಳುಹಿಸಿದ ನೋಟಿಸ್‌ಗೆ ಹೆದರಿ ಪೆಟ್ರೋಲ್ ಸುರಿದುಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಮೃತರನ್ನು ಪಾಂಡಪ್ಪ ತಿಪ್ಪಣ್ಣ ಕೊರವರ್ (45) ಎಂದು ಗುರುತಿಸಲಾಗಿದೆ.







3 ಎಕರೆ ಜಮೀನು ಹೊಂದಿದ್ದ ಪಾಂಡಪ್ಪ ಬ್ಯಾಂಕ್‌ನಲ್ಲಿ 1 ಲಕ್ಷ ರು. ಜತೆಗೆ ಕೈ ಸಾಲ ಮಾಡಿದ್ದರು. ಮಳೆಯಿಂದ ತೊಗರಿ ಬೆಳೆ ನಷ್ಟವಾಗಿತ್ತು. ಈ ನಡುವೆ ಸಾಲ ತೀರಿಸಲು ವಕೀಲರ ಮೂಲಕ 2 ಬಾರಿ ಬ್ಯಾಂಕ್ ನೋಟಿಸ್ ಕಳುಹಿಸಿತ್ತು. ಹೀಗಾಗಿ ತಮ್ಮ ಬಳಿಯಿದ್ದ ಎತ್ತುಗಳನ್ನು ಮಾರಾಟಕ್ಕೆ ಮುಂದಾದಾಗ ಕುಟುಂಬಸ್ಥರು ವಿರೋಧಿಸಿದ್ದರು ಎಂದು ವರದಿ ತಿಳಿಸಿದೆ.






error: Content is protected !!
Scroll to Top