karnataka

crime, arrest, suspected

ಅಕ್ರಮ ಮಾದಕ ವಸ್ತು ಗಾಂಜಾ ಮಾರಾಟ ಪ್ರಕರಣ ➤ ಓರ್ವ ಅರೆಸ್ಟ್, ಇನ್ನೋರ್ವ ಆರೋಪಿ ಪರಾರಿ

(ನ್ಯೂಸ್ ಕಡಬ)newskadaba.com ಪುತ್ತೂರು, ಮಾ.17. ಮಾದಕ ಪದಾರ್ಥ ಗಾಂಜಾವನ್ನು ಮಾರಾಟ ಮಾಡಲು ಉದ್ದೇಶದಿಂದ ಕಾರಿನಲ್ಲಿ ಸಾಗಾದ ಮಾಡುತ್ತಿದ್ದ ಸಂಧರ್ಭ ಸಂಪ್ಯ ಪೊಲೀಸ್ ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪುತ್ತೂರಿನ ಅಬೂಬಕ್ಕರ್ ಸಿದ್ದಿಕ್ ಎಂದು ಗುರುತಿಸಲಾಗಿದೆ. ಪರಾರಿಯಾದವನನ್ನು ಸುಳ್ಯದ ಸರ್ಪುದ್ದಿನ್ ಎಂದು ಗುರುತಿಸಲಾಗಿದೆ.

ಅಕ್ರಮ ಮಾದಕ ವಸ್ತು ಗಾಂಜಾ ಮಾರಾಟ ಪ್ರಕರಣ ➤ ಓರ್ವ ಅರೆಸ್ಟ್, ಇನ್ನೋರ್ವ ಆರೋಪಿ ಪರಾರಿ Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮಾ. 17.  ಬಾವಿಗೆ ಬಿದ್ದ ಕೊಡವನ್ನು ಮೇಲಕ್ಕೆತ್ತಲು ಬಾವಿಗೆ ಇಳಿದಿದ್ದ ವ್ಯಕ್ತಿಯೋರ್ವ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ವರದಿಯಾಗಿದೆ. ಮೃತರನ್ನು ಪ್ರವೀಣ್ ಎಂದು ಗುರುತಿಸಲಾಗಿದೆ.  ಇವರು ವಸಂತಿ ಎಂಬವರ ಮನೆಯ ಬಾವಿಗೆ ಬಿದ್ದಿದ್ದ ಕೊಡವನ್ನು ಮೇಲಕ್ಕೆತ್ತಲೆಂದು ಹಗ್ಗದ ಸಹಾಯದಿಂದ ಇಳಿದು, ಬಳಿಕ ಕೊಡಪಾನವನ್ನು ಮೇಲಕ್ಕೆ ಕಳುಹಿಸಿದ್ದರು. ಬಳಿಕ ಅದೇ ಹಗ್ಗವನ್ನು ಬಳಸಿಕೊಂಡು ಅವರು ಮೇಲಕ್ಕೇರಲು ಪ್ರಯತ್ನಿಸಿದ್ದಾರೆ. ಆದರೆ, ಅರ್ಧಕ್ಕೆ ತಲುಪಿದ ವೇಳೆ ಕೈಜಾರಿ ಬಾವಿಗೆ ಬಿದ್ದಿದ್ದಾರೆ ಎನ್ನಲಾಗಿದೆ.  

ಬೆಳ್ತಂಗಡಿ: ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಉಳ್ಳಾಲ: ಮಹಿಳೆಯನ್ನು ಚೂರಿಯಿಂದ ಇರಿದು ಕೊಲೆ..!

(ನ್ಯೂಸ್ ಕಡಬ) newskadaba.com ಉಳ್ಳಾಲ, ಮಾ. 17. ಮಹಿಳೆಯನ್ನು ಚೂರಿಯಿಂದ ಇರಿದು ಹತ್ಯೆ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಉಳ್ಳಾಲ ಕೋಟೆಪುರ ಬಸ್‌ ನಿಲ್ದಾಣದ ಸಮೀಪ ನಡೆದಿದೆ. ಹತ್ಯೆಗೆ ಸಂಬಂಧಿಸಿ ಆಕೆಯೊಂದಿಗೆ ವಾಸಿಸುತ್ತಿದ್ದ ದೆಹಲಿ ಮೂಲದ ನಯೀಮ್‌ ಎಂಬಾತ ಈ ಹತ್ಯೆಯನ್ನು ಮಾಡಿ ಪರಾರಿಯಾಗಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳ ಹಿಂದೆ ದೆಹಲಿಯಿಂದ ಕೋಟೆಪುರಕ್ಕೆ ಬಂದಿದ್ದ ಜೋಡಿ, ಸ್ಥಳೀಯ ಸೆಲೂನ್‌ ಮಾಲೀಕರ ಮೂಲಕ ಬಾಡಿಗೆ ಮನೆಯನ್ನು ಸಂಪರ್ಕಿಸಿ, ಹಮೀದ್‌ ಎಂಬವರ ಬಾಡಿಗೆ ಮನೆಯನ್ನು

ಉಳ್ಳಾಲ: ಮಹಿಳೆಯನ್ನು ಚೂರಿಯಿಂದ ಇರಿದು ಕೊಲೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ಕುಂದಾಪುರ: ಲಾರಿ ಢಿಕ್ಕಿಯಾಗಿ ಬಸ್ ಪಲ್ಟಿ

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.17. ಡಿಪೋದಿಂದ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಸರ್ಕಾರಿ ಬಸ್ಸೊಂದು ಯೂ ಟರ್ನ್ ತೆಗೆದುಕೊಳ್ಳುವ ವೇಳೆ‌ ಲಾರಿ‌ ಡಿಕ್ಕಿಯಾದ ಪರಿಣಾಮ ಪಲ್ಟಿಯಾದ ಘಟನೆ‌ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಂದಾಪುರದ ಸಂತೆ ಮಾರ್ಕೆಟ್ ಬಳಿ ನಡೆದಿದೆ. ಎಂದಿನಂತೆ ಕೆಎಸ್ಆರ್ಟಿಸಿ ಬಸ್ ಸರ್ವೀಸ್ ರಸ್ತೆಯಲ್ಲಿ‌ ಬಂದು ಸಂತೆ ಮಾರ್ಕೆಟ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಯು ಟರ್ನ್ ತೆಗೆದುಕೊಂಡಿದ್ದಾರೆ. ಇದೇ ಸಂದರ್ಭ ಹಿಂದಿನಿಂದ ಬಂದ ಲಾರಿ‌ ಡಿಕ್ಕಿಹೊಡೆದಿದೆ ಎನ್ನಲಾಗಿದೆ. ಪ್ತಯಾಣಿಕರಿಲ್ಲದ ಬಸ್ ತಿರುವು ತೆಗೆದುಕೊಳ್ಳುತ್ತಿದ್ದುದರಿಂದ ನಿಯಂತ್ರಣ

ಕುಂದಾಪುರ: ಲಾರಿ ಢಿಕ್ಕಿಯಾಗಿ ಬಸ್ ಪಲ್ಟಿ Read More »

ಕರಾವಳಿ, ಕ್ರೈಮ್ ನ್ಯೂಸ್

ಪುತ್ತೂರು: ಗಾಂಜಾ ಮಾರಾಟಕ್ಕೆ ಯತ್ನ ➤ ಓರ್ವ ಅರೆಸ್ಟ್ 

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ. 17. ಮಾರಾಟ ಮಾಡುವ ಉದ್ದೇಶದಿಂದ ಗಾಂಜಾವನ್ನು ಇಟ್ಟುಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಮತ್ತು ಎಸ್.ಐ ಅವರ ನೇತೃತ್ವದ ತಂಡವು ಬಂಧಿಸಿದ ಘಟನೆ ಮುಕ್ರಂಪಾಡಿಯ ಬಸ್ ತಂಗುದಾಣದಲ್ಲಿ ನಡೆದಿದೆ. ಬಂಧಿತನನ್ನು ಬಲ್ನಾಡು ಗ್ರಾಮದ ಬುಳ್ಳೇರಿಕಟ್ಟೆ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಇಕ್ಬಾಲ್ ಪಿ ಯಾನೆ ಇಕ್ಕು(35) ಎಂದು ಗುರುತಿಸಲಾಗಿದೆ.  

ಪುತ್ತೂರು: ಗಾಂಜಾ ಮಾರಾಟಕ್ಕೆ ಯತ್ನ ➤ ಓರ್ವ ಅರೆಸ್ಟ್  Read More »

ಕರಾವಳಿ

ಬಂಟ್ವಾಳ: ರೈಲು ಢಿಕ್ಕಿ ಹೊಡೆದು ಯುವಕ ಮೃತ್ಯು..!

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ. 17. ರೈಲು ಡಿಕ್ಕಿ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಗೋಳ್ತಮಜಲು ಗ್ರಾಮದ ನೆಟ್ಲ ಸಮೀಪದ ಮಾಣಿಮಜಲು ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ಅರ್ಜುನ್ (28) ಎಂದು ಗುರುತಿಸಲಾಗಿದೆ. ಯಾವ ರೀತಿಯಲ್ಲಿ ಘಟನೆ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ. ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಬಂಟ್ವಾಳ: ರೈಲು ಢಿಕ್ಕಿ ಹೊಡೆದು ಯುವಕ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಘಟಪ್ರಭಾ ದಡದಲ್ಲಿ 108 ಅಡಿ ಎತ್ತರದ ಬಸವಣ್ಣನ ಪ್ರತಿಮೆ ನಿರ್ಮಾಣ ➤ ಸಿಎಂ ಬೊಮ್ಮಾಯಿ ಘೋಷಣೆ…!

(ನ್ಯೂಸ್ ಕಡಬ)newskadaba.com ಬೆಳಗಾವಿ, ಮಾ.16. ಘಟಪ್ರಭಾ ದಡದಲ್ಲಿ 108 ಅಡಿ ಎತ್ತರದ ಭವ್ಯವಾದ ಬಸವಣ್ಣನ ಪ್ರತಿಮೆ ಸ್ಥಾಪಿಸಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಘಟಪ್ರಭಾ ದಡದಲ್ಲಿ 108 ಅಡಿ ಎತ್ತರದ ಭವ್ಯವಾದ ಬಸವಣ್ಣನ ಪ್ರತಿಮೆ ನಿರ್ಮಿಸುವ ಸಂಬಂಧ ಸೂಕ್ತ ಆದೇಶ ನೀಡಲಾಗುತ್ತದೆ ಎಂದು ಹೇಳಿದರು. ಬಸವೇಶ್ವರ ವೃತ್ತದ ಸಮೀಪ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.  

ಘಟಪ್ರಭಾ ದಡದಲ್ಲಿ 108 ಅಡಿ ಎತ್ತರದ ಬಸವಣ್ಣನ ಪ್ರತಿಮೆ ನಿರ್ಮಾಣ ➤ ಸಿಎಂ ಬೊಮ್ಮಾಯಿ ಘೋಷಣೆ…! Read More »

ಕರ್ನಾಟಕ

ಬೆಂಗಳೂರಿನಲ್ಲಿ ತಂದೆಯಿಂದಲೇ ಮಗಳ ಬರ್ಬರ ಹತ್ಯೆ.!

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.16. ನಗರದಲ್ಲಿ ತಂದೆಯಿಂದಲೇ ಮಗಳ ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ. ಕೊಡಿಗೆಹಳ್ಳಿಯ ಧನಲಕ್ಷ್ಮೀ ಲೇಔಟ್‌ ನಲ್ಲಿ ಘಟನೆ ನಡೆದಿದೆ. 32 ವರ್ಷದ ಆಶಾ ಮೃತ ದುರ್ದೈವಿ. ದೊಣ್ಣೆಯಿಂದ ಹೊಡೆದು ತಂದೆ ರಮೇಶ್‌ ಕೊಲೆ ಮಾಡಿದ್ದಾರೆ. ಆರೋಪಿ ರಮೇಶ್‌ ಕೊಡಿಗೆಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮದುವೆ ಬಳಿಕ ಪತಿಯನ್ನು ಬಿಟ್ಟು ತವರು ಮನೆಯಲ್ಲೇ ಇದ್ದಳು. ಇದೇ ವಿಚಾರಕ್ಕೆ ರಾತ್ರಿ ತಂದೆ, ಮಗಳ ನಡುವೆ ಜಗಳ ಆಗಿತ್ತು. ಈ ವೇಳೆ ಮಗಳ ತಲೆಗೆ ದೊಣ್ಣೆಯಿಂದ

ಬೆಂಗಳೂರಿನಲ್ಲಿ ತಂದೆಯಿಂದಲೇ ಮಗಳ ಬರ್ಬರ ಹತ್ಯೆ.! Read More »

ಕರ್ನಾಟಕ

ನಿರ್ಮಾಪಕ ಉಮಾಪತಿ ಹತ್ಯೆಗೆ ಸ್ಕೆಚ್ ಹಾಕಿದ್ದ ರೌಡಿ ರಾಜೇಶ್ ಬಂಧನ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.16. ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿ ರಾಜೇಶ ಅಲಿಯಾಸ್ ಕರಿಯ ರಾಜೇಶ ಎಂಬಾತನನ್ನು ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದಾರೆ. ಕೆ.ಜಿ.ನಗರದ ರೌಡಿ ರಾಜೇಶ್, 2006ರಿಂದ ದರೋಡೆ, ಮಾದಕ ದ್ರವ್ಯ ಮಾರಾಟ, ಕೊಲೆಗೆ ಸಂಚು, ಕೊಲೆಗೆ ಯತ್ನ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕುಖ್ಯಾತ ರೌಡಿ ಪರಂದಾಮ ಮತ್ತು ಬಾಂಬೆ ರವಿ ಸಹಚರರಾಗಿದ್ದ. ಈತನ ವಿರುದ್ಧ ಕಾಟನ್‌ಪೇಟೆ, ಹನುಮಂತನಗರ, ಬಸವನಗುಡಿ ಪೊಲೀಸ್ ಠಾಣೆಗಳಲ್ಲಿ ದರೋಡೆ, ಕೊಲೆ ಯತ್ನ, ಕೊಲೆಗೆ ಸಂಚು ಸೇರಿದಂತೆ

ನಿರ್ಮಾಪಕ ಉಮಾಪತಿ ಹತ್ಯೆಗೆ ಸ್ಕೆಚ್ ಹಾಕಿದ್ದ ರೌಡಿ ರಾಜೇಶ್ ಬಂಧನ Read More »

ಕರ್ನಾಟಕ

ಆನೆ ನೋಡಿ ಬೈಕ್ ನಿಂದ ಕೆಳಗೆ ಬಿದ್ದ ವ್ಯಕ್ತಿ

(ನ್ಯೂಸ್ ಕಡಬ)newskadaba.com ಚಾಮರಾಜನಗರ, ಮಾ.16. ಆನೆ ದಾಳಿ ಮಾಡುತ್ತದೆ ಎಂಬ ಭಯದಲ್ಲಿ ಬೈಕ್ ಸವಾರ ರಸ್ತೆ ಪಕ್ಕದ ಕಾಲುವೆಗೆ ಬಿದ್ದಿರುವ ಘಟನೆ ಚಾಮರಾಜನಗರ ಗಡಿ ಭಾಗವಾದ ತಮಿಳುನಾಡಿನ ತಲೆಮಲೈಯಲ್ಲಿ ನಡೆದಿದೆ. ನೈನಿತಾಳಪುರಂ ಗ್ರಾಮದರಾಮಸ್ವಾಮಿ ಎಂಬವರು ಕಾಲುವೆಗೆ ಬಿದ್ದಿರುವ ಬೈಕ್ ಸವಾರ, ರಸ್ತೆ ಮಧ್ಯೆ ಬಂದು ನಿಂತ ಆನೆಯನ್ನು ಗಮನಿಸಿದ ರಾಮಸ್ವಾಮಿ ದಿಢೀರ್ ಬಂದಿದ್ದಾರೆ. ಆನೆ ನೋಡುತ್ತಿದ್ದಂತೆ ಗಾಬರಿಗೊಂಡು ಆಯತಪ್ಪಿ ಬಿದ್ದಿದ್ದು, ಬಳಿಕ ಇನ್ನಿತರ ಸವಾರರ ಸಮಯ ಪ್ರಜ್ಞೆಯಿಂದ ಆನೆ ತಿರುಗುವ ಮುನ್ನಇತ್ತ ಕಡೆ ಬಂದಿದ್ದಾರೆ.    

ಆನೆ ನೋಡಿ ಬೈಕ್ ನಿಂದ ಕೆಳಗೆ ಬಿದ್ದ ವ್ಯಕ್ತಿ Read More »

ಕರ್ನಾಟಕ
Scroll to Top