karnataka

ಬೈಕ್​ ಗೆ KSRTC ಬಸ್ ಢಿಕ್ಕಿ ➤ ಸ್ಥಳದಲ್ಲೇ ನವವಿವಾಹಿತೆ ಮೃತ್ಯು

(ನ್ಯೂಸ್ ಕಡಬ)newskadaba.com ಮೈಸೂರು, ಮೇ.08. ಬೈಕ್​ಗೆ ಕೆಎಸ್​ಆರ್​ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ನವ ವಿವಾಹಿತೆ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದ ಬಳಿ ನಡೆದಿದೆ. ಹಲ್ಲರೆ ಗ್ರಾಮದ ಪೂಜಾ(19) ಮೃತ ದುರ್ದೈವಿಯಾಗಿದ್ದಾರೆ. ಪತಿ ಮದನ್ ಗಂಭೀರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಡಿಯಾಲ ಗ್ರಾಮದಿಂದ ಸಾರಿಗೆ ಬಸ್ ನಂಜನಗೂಡು ಕಡೆಗೆ ಬರುತ್ತಿದ್ದ ವೇಳೆ ಬೈಕ್ ​ನಲ್ಲಿ ನವದಂಪತಿಗಳು ತೆರಳುತ್ತಿದ್ದಾಗ ಈ ಸಂಭವಿಸಿದೆ.  

ಬೈಕ್​ ಗೆ KSRTC ಬಸ್ ಢಿಕ್ಕಿ ➤ ಸ್ಥಳದಲ್ಲೇ ನವವಿವಾಹಿತೆ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ.! ➤ರಾಜ್ಯದಲ್ಲಿ BJP ಅಲೆ ಸೃಷ್ಟಿಸಿದ ಮೋದಿ

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.08 ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಒಟ್ಟು ಒಂದು ವಾರಗಳ ಕಾಲ ಕರ್ನಾಟಕದಲ್ಲಿ ಗಟ್ಟಿಯಾಗಿ ನಿಂತು ಬಿಜೆಪಿ ಪರ ಅಲೆ ಮೂಡಿಸುವಲ್ಲಿ ಯಶಸ್ವಿಯಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಚಾರ ಕಾರ್ಯ ಭಾನುವಾರ ಮುಕ್ತಾಯಗೊಂಡಿದೆ.ಬೆಂಗಳೂರಿನಲ್ಲಿ ನಡೆದ ಐತಿಹಾಸಿಕ ರೋಡ್‌ ಶೋ ಸೇರಿದಂತೆ ಒಟ್ಟು 27 ಕಾರ್ಯಕ್ರಮಗಳಲ್ಲಿ ಮೋದಿ ಭಾಗಿಯಾಗಿದ್ದಾರೆ.ಒಟ್ಟು 21ಸಭೆ ಹಾಗೂ 6 ರೋಡ್‌ ಶೋದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದಾರೆ. ಬೀದರ್‌ ಜಿಲ್ಲೆಯ ಹುಮ್ನಾಬಾದ್‌ನಲ್ಲಿ ಮೊದಲ ಕಾರ್ಯಕ್ರಮ ಆರಂಭವಾಗುವುದರೊಂದಿಗೆ ಕರ್ನಾಟಕದಲ್ಲಿ ಮೋದಿ ಹವಾ ಪ್ರಾರಂಭಗೊಂಡಿತು. ಇದರ

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ.! ➤ರಾಜ್ಯದಲ್ಲಿ BJP ಅಲೆ ಸೃಷ್ಟಿಸಿದ ಮೋದಿ Read More »

ಕರ್ನಾಟಕ

ಸಾಲದ ವಿಚಾರವಾಗಿ ಪತಿಯೊಂದಿಗೆ ಗಲಾಟೆ.! ➤ಪತ್ನಿ ಆತ್ಮಹತ್ಯೆ

(ನ್ಯೂಸ್ ಕಡಬ)Newskadaba.com ಕಾರ್ಕಳ,ಮೇ.08 ಸ್ವಸಹಾಯ ಸಂಘದ ಸಾಲ ಕಟ್ಟುವ ವಿಚಾರಕ್ಕಾಗಿ ಪತಿಯೊಂದಿಗೆ ಜಗಳವಾಡಿದ ಪತ್ನಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಕಾರ್ಕಳ ಪತ್ತೊಂಜಿಕಟ್ಟೆ ಎಂಬಲ್ಲಿ ನಡೆದಿದೆ.ಮೃತರನ್ನು ಪತ್ತೊಂಜಿಕಟ್ಟೆ ನಿವಾಸಿ ಅಣ್ಣಪ್ಪ ಎಂಬವರ ಪತ್ನಿ ಪುಷ್ಪ (23) ಎಂದು ಗುರುತಿಸಲಾಗಿದೆ.ಗೇರುಬೀಜ ಸಿಪ್ಪೆ ತೆಗೆಯುವ ಕೆಲಸ ಮಾಡಿಕೊಂಡಿದ್ದ ಪುಷ್ಪಾ ಸ್ವಸಹಾಯ ಸಂಘದ ಸಾಲ ಕಟ್ಟುವ ಬಗ್ಗೆ ಪತಿಯೊಂದಿಗೆ ಚರ್ಚೆ ಮಾಡಿದ್ದು, ಬೆಳಗ್ಗೆ ಹಣದ ವ್ಯವಸ್ಥೆ ಮಾಡುವುದಾಗಿ ಪತಿ ಹೇಳಿದ್ದರು. ಆದರೆ ಪುಷ್ಪಾ ಈಗಲೇ ಹಣ ಬೇಕೆಂದು ಹೇಳಿ ಅವರೊಳಗೆ

ಸಾಲದ ವಿಚಾರವಾಗಿ ಪತಿಯೊಂದಿಗೆ ಗಲಾಟೆ.! ➤ಪತ್ನಿ ಆತ್ಮಹತ್ಯೆ Read More »

ಕರ್ನಾಟಕ

ಮುಂದಿನ 5 ದಿನ ರಾಜ್ಯದಲ್ಲಿ ಭಾರೀ ಮಳೆ ➤ ಇಂದು(ಮೇ.8)ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮೇ.08. ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗಲಿದ್ದು, ಮೇ.08 ರಿಂದ 12ರವರೆಗೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮೋಚಾ ಚಂಡಮಾರುತ ರೂಪುಗೊಳ್ಳುತ್ತಿದ್ದು, ಮೇ 08ರಂದು ಇದು ತೀವ್ರ ಸ್ವರೂಪ ಪಡೆದುಕೊಳ್ಳಲಿದ್ದು, ಈ ಹಿನ್ನೆಲೆ ಮೇ.09 ಮತ್ತು 10ರಂದು ಭಾರೀ ಮಳೆಯಾಗಬಹುದು. ಮೇ 10ರಂದು ಮತದಾನಕ್ಕೆ ತೆರಳುವವರಿಗೆ ಮಳೆಯಿಂದ ಸಮಸ್ಯೆ ಉಂಟಾಗಬಹುದು. ಇನ್ನು, ಇಂದು ರಾಜ್ಯದ ವಿವಿಧೆಡೆ

ಮುಂದಿನ 5 ದಿನ ರಾಜ್ಯದಲ್ಲಿ ಭಾರೀ ಮಳೆ ➤ ಇಂದು(ಮೇ.8)ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ Read More »

ಕರ್ನಾಟಕ

ಮತದಾರರಿಗೆ ಗುಡ್ ನ್ಯೂಸ್➤ ಮತದಾನ ಮಾಡಿದವರಿಗೆ ‘ಮಯೂರ ಹೋಟೆಲ್’ ವಾಸ್ತವ್ಯದ ಮೇಲೆ 50 ರಷ್ಟು ರಿಯಾಯಿತಿ..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.08 ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಮತ ಚಲಾಯಿಸುವ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ನಿಗಮದ ‘ಮಯೂರ ಹೋಟೆಲ್’ ವಾಸ್ತವ್ಯದ ಮೇಲೆ ಶೇಕಡ 50 ರಷ್ಟು ವಿಶೇಷ ರಿಯಾಯಿತಿ ನೀಡಲಾಗುವುದು. ವಿಶೇಷ ರಿಯಾಯಿತಿಯನ್ನು ಪಡೆಯಲಿಚ್ಚಿಸುವಂತಹ ಸಾರ್ವಜನಿಕರು ಕಡ್ಡಾಯವಾಗಿ ಮತದಾನ ಮಾಡಿ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.  

ಮತದಾರರಿಗೆ ಗುಡ್ ನ್ಯೂಸ್➤ ಮತದಾನ ಮಾಡಿದವರಿಗೆ ‘ಮಯೂರ ಹೋಟೆಲ್’ ವಾಸ್ತವ್ಯದ ಮೇಲೆ 50 ರಷ್ಟು ರಿಯಾಯಿತಿ..! Read More »

ಕರ್ನಾಟಕ

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಹುಪತ್ನಿತ್ವ ನಿಷೇಧ..!➤ ಹಿಮಂತ ಬಿಸ್ವಾ ಶರ್ಮಾ

(ನ್ಯೂಸ್ ಕಡಬ)Newskadaba.com ಮಂಗಳೂರು,ಮೇ.08 ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಹುಪತ್ನಿತ್ವ ನಿಷೇಧಿಸುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಮರಲ್ಲಿ ಬಹುಪತ್ನಿತ್ವ ಪದ್ಧತಿಯಿದ್ದು, ಮುಸ್ಲಿಂ ಮಹಿಳೆಯರ ಗೌರವ, ಸ್ವಾಭಿಮಾನಕ್ಕೆ ಧಕ್ಕೆ ತರುವ ಕ್ರಮ ತಡೆಯುಲು ಸಮಾನ ನಾಗರಿಕ ಸಂಹಿತೆ ಜಾರಿಗೆ ತಂದು ಕರ್ನಾಟಕದಲ್ಲಿ ಬಹು ಪತ್ನಿತ್ವ ಪದ್ಧತಿ ನಿಷೇಧಿಸಲಾಗುವುದು ಎಂದಿದ್ದಾರೆ. ತ್ರಿವಳಿ ತಲಾಖ್ ನಿಷೇಧ, ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪನೆ, ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮೊದಲಾದ ಪ್ರಮುಖ ನಿರ್ಧಾರಗಳನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಹುಪತ್ನಿತ್ವ ನಿಷೇಧ..!➤ ಹಿಮಂತ ಬಿಸ್ವಾ ಶರ್ಮಾ Read More »

ಕರಾವಳಿ, ಕರ್ನಾಟಕ

ಕೊಡಗಿನ ಯುವಕ ಬೆಂಗಳೂರಿನಲ್ಲಿ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ)newskadaba.com  ಕೊಡಗು, ಮೇ.08. ಕೊಡಗಿನ ನಿವಾಸಿ ಯುವಕನೋರ್ವ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸೋಮವಾರಪೇಟೆ ಕಿರಗಂದೂರುವಿನ ರುಕ್ಮಿಣಿ ಹಾಗೂ ಶಿವಪ್ಪ ಅವರ ಪುತ್ರ ಜಿತಿನ್‌ (22) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ವರದಿ ತಿಳಿಸಿದೆ. ಜಿತಿನ್ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.  

ಕೊಡಗಿನ ಯುವಕ ಬೆಂಗಳೂರಿನಲ್ಲಿ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ Read More »

ಕರ್ನಾಟಕ

ಉಳ್ಳಾಲ: ಕಾಂಗ್ರೆಸ್ ಪ್ರಚಾರದ ವಾಹನ ಚಾಲಕನಿಗೆ ಹಲ್ಲೆ ➤ ಎಸ್ಡಿ ಪಿಐ ಕಾರ್ಯಕರ್ತನ ಬಂಧನ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.08. ಉಳ್ಳಾಲ ಅಬ್ಬಕ್ಕ ವೃತ್ತದಿಂದ ದೇರಳಕಟ್ಟೆವರೆಗೆ ಎಸ್‍ಡಿಪಿಐ ಹಮ್ಮಿಕೊಂಡಿದ್ದ ರಿಕ್ಷಾ ಹಾಗೂ ಬೈಕ್ ರ್ಯಾಲಿ ವೇಳೆ ಕಾಂಗ್ರೆಸ್ ಚುನಾವಣಾ ಪ್ರಚಾರದ ವಾಹನ ಚಾಲಕನಿಗೆ ಹಲ್ಲೆ ನಡೆಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಟೆಕಲ್ ಸಮೀಪ ಸಂಭವಿಸಿದೆ. ಕಾಂಗ್ರೆಸ್ ಕಾರ್ಯಕರ್ತ ನೌಫಾಲ್ (35) ಹಲ್ಲೆಗೊಳಗಾದವರು ಎಂದು ವರದಿ ತಿಳಿಸಿದೆ. ನಾಟೆಕಲ್ ಸಮೀಪ ಅಸೈಗೋಳಿಯಿಂದ ಚೆಂಬುಗುಡ್ಡೆ ಸಾರ್ವಜನಿಕ ಸಭೆಗೆ ತೆರಳುತ್ತಿದ್ದ ಕಾಂಗ್ರೆಸ್ ಪ್ರಚಾರದ ವಾಹನ ಎಸ್ ಡಿಪಿಐ ಅವರ ರ್ಯಾಲಿಗೆ ನಾಟೆಕಲ್ ಸಮೀಪ ಎದುರಾಗಿತ್ತು.

ಉಳ್ಳಾಲ: ಕಾಂಗ್ರೆಸ್ ಪ್ರಚಾರದ ವಾಹನ ಚಾಲಕನಿಗೆ ಹಲ್ಲೆ ➤ ಎಸ್ಡಿ ಪಿಐ ಕಾರ್ಯಕರ್ತನ ಬಂಧನ Read More »

ಕರಾವಳಿ

ಮೇ.6 ರಂದು ಬೆಳಗಾವಿಗೆ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಆಗಮನ…!

(ನ್ಯೂಸ್ ಕಡಬ)Newskadaba.com ಬೆಳಗಾವಿ,ಮೇ.05 ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರು ನಾಳೆ ಮೇ 6ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ ಪರ ಅವರು ಭರ್ಜರಿ ಪ್ರಚಾರ ಕೈಗೊಳ್ಳಲಿದ್ದಾರೆ. ಸಂಜೆ 4 ಗಂಟೆಗೆ ಬೆಳಗಾವಿ ತಾಲೂಕಿನ ಸುಳೆಬಾವಿಗೆ ಆಗಮಿಸಲಿರುವ ಅವರು ಅಲ್ಲಿನ ಶ್ರೀ ಮಹಾಲಕ್ಷ್ಮೀ ದೇವಿ ದರ್ಶನ ಪಡೆದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಚುನಾವಣೆ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ.5 ಗಂಟೆಗೆ ಶಿಂದೊಳ್ಳಿ ಗ್ರಾಮದಲ್ಲಿ ರೋಡ್

ಮೇ.6 ರಂದು ಬೆಳಗಾವಿಗೆ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಆಗಮನ…! Read More »

ಕರ್ನಾಟಕ

ಕಾರು ನಿಯಂತ್ರಣ ಕಳೆದುಕೊಂಡು ರಿಕ್ಷಾಕ್ಕೆ ಢಿಕ್ಕಿ..!➤ ಬಾಲಕ ಮೃತ್ಯು

(ನ್ಯೂಸ್ ಕಡಬ)Newskadaba.com ಭಟ್ಕಳ,ಮೇ.05 ವೇಗವಾಗಿ ಚಲಿಸುತ್ತಿದ್ದ ಕಾರೊಂದರ ಟೈರ್ ಪಂಚರ್ ಆದ ಪರಿಣಾಮ ನಿಯಂತ್ರಣ ಕಳೆದುಕೊಂಡ ಕಾರು ಎದುರಿನಿಂದ ಬರುತ್ತಿದ್ದ ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ 11 ವರ್ಷ ಪ್ರಾಯದ ಬಾಲಕ ಮೃತಪಟ್ಟ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಜಾಲಿ ರಸ್ತೆಯಲ್ಲಿ ನಡೆದಿದೆ. ಭಟ್ಕಳದ ನವತ್ ಕಾಲನಿ ಮಕ್ತಬ್ ಜಾಮಿಯಾ ವಿದ್ಯಾರ್ಥಿ ಝುಹೈಮ್(11) ಮೃತ ಬಾಲಕ. ಈತ ತನ್ನ ಅಕ್ಕನೊಂದಿಗೆ ಆಝಾದ್ ನಗರದ ಮಸೀದಿ ಶಾಫಿ ಬಳಿಯ ತಂದೆಯ ಮನೆಯಿಂದ ಜಾಲಿ ರಸ್ತೆಯ ಆಝಾದ್

ಕಾರು ನಿಯಂತ್ರಣ ಕಳೆದುಕೊಂಡು ರಿಕ್ಷಾಕ್ಕೆ ಢಿಕ್ಕಿ..!➤ ಬಾಲಕ ಮೃತ್ಯು Read More »

ಕರ್ನಾಟಕ
Scroll to Top