Kadaba

ಬದಿಯಡ್ಕ: ಡಿ.23ಕ್ಕೆ ವಿವಾಹ ನಿಗದಿಯಾಗಿದ್ದ ಯುವಕ ಅಪಘಾತದಲ್ಲಿ ಮೃತ್ಯು

(ನ್ಯೂಸ್ ಕಡಬ) newskadaba.com ಬದಿಯಡ್ಕ ಡಿ. 03: ಡಿಸೆಂಬರ್ 23ರಂದು ವಿವಾಹ ನಿಗದಿಯಾಗಿದ್ದ ಬದಿಯಡ್ಕ ನಿವಾಸಿಯೋರ್ವರು ಬೆಂಗಳೂರಿನಲ್ಲಿ ಅಪಘಾತ ಸಂಭವಿಸಿ ಮೃತಪಟ್ಟ ಘಟನೆ ನಡೆದಿದೆ. ಬದಿಯಡ್ಕ ಕರಿಂಬಿಲ ನಿವಾಸಿ ಪ್ರವೀಣ್ ಕುಮಾರ್ ಪ್ರಭು (29) ಮೃತ ದುರ್ದೈವಿ. ಪ್ರವೀಣ್ ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಇಲೆಕ್ಟ್ರಿಕಲ್ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು ಎಂದು ತಿಳಿದು ಬಂದಿದೆ. ಬಳಿಕ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ […]

ಬದಿಯಡ್ಕ: ಡಿ.23ಕ್ಕೆ ವಿವಾಹ ನಿಗದಿಯಾಗಿದ್ದ ಯುವಕ ಅಪಘಾತದಲ್ಲಿ ಮೃತ್ಯು Read More »

ಕರಾವಳಿ

ದ.ಕ ಗ್ರಾ.ಪಂ.ಚುನಾವಣೆ ಹಿನ್ನೆಲೆ ➤ ಶಸ್ತ್ರಾಸ್ತ್ರ ಡೆಪಾಸಿಟ್ ಇಡಲು ದ.ಕ. ಡಿಸಿ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 03: ದ.ಕ. ಜಿಲ್ಲೆಯಲ್ಲಿ ಡಿಸೆಂಬರ್ 22 ಮತ್ತು 27ರಂದು ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಯಲಿರುವುದರಿಂದ ಪರವಾನಿಗೆ ಶಸ್ತ್ರಾಸ್ತ್ರ ಹೊಂದಿರುವವರು ಸಮೀಪದ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಅವರು, ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಹಾಗೂ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್, ಬೆಳ್ತಂಗಡಿ ತಾಲೂಕಿನ ವೇಣೂರು ಮತ್ತು ಆರಂಬೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದಂತೆ

ದ.ಕ ಗ್ರಾ.ಪಂ.ಚುನಾವಣೆ ಹಿನ್ನೆಲೆ ➤ ಶಸ್ತ್ರಾಸ್ತ್ರ ಡೆಪಾಸಿಟ್ ಇಡಲು ದ.ಕ. ಡಿಸಿ ಸೂಚನೆ Read More »

ಕರಾವಳಿ

ಉಡುಪಿ: ಶ್ರೀಗಂಧ ದಾಸ್ತಾನು ಮಾಡಿಟ್ಟಿದ್ದ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 02: ಆಟೋ ರಿಕ್ಷಾದಲ್ಲಿ ಶ್ರೀಗಂಧ ಮರದ ಕೊರಡುಗಳನ್ನು ದಾಸ್ತಾನು ಮಾಡಿಟ್ಟಿದ್ದ ವ್ಯಕ್ತಿಯೋರ್ವನನ್ನು ಅರಣ್ಯಾಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ವಂಡ್ಸೆ ಗ್ರಾಮದ ಹಕ್ಲುಮನೆ ನಿವಾಸಿ ರಾಜೇಶ್(34) ಎಂದು ಗುರುತಿಸಲಾಗಿದೆ.     ಕುಂದಾಪುರದ ಅರಣ್ಯಾಧಿಕಾರಿಗಳಿಗೆ ಬಂದ ಖಚಿತ ಮಾಹಿತಿಯಂತೆ ವಂಡ್ಸ್ ಗೆ ತೆರಳಿ ದಾಳಿ ನಡೆಸಿ ಅರಣ್ಯಾಧಿಕಾರಿಗಳ ತಂಡ ಆರೋಪಿಯನ್ನು ಬಂಧಿಸಿ 3.8 ಕೆ.ಜಿ ಶ್ರೀಗಂಧದ ಕೊರಡು ಸಮೇತ ಆಟೋ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ

ಉಡುಪಿ: ಶ್ರೀಗಂಧ ದಾಸ್ತಾನು ಮಾಡಿಟ್ಟಿದ್ದ ಆರೋಪಿಯ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು :ಆರೋಪಿಯ ಸುಳಿವು ಕೊಟ್ಟವರಿಗೆ 2 ಲಕ್ಷ ಬಹುಮಾನ

(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 02 : ಸುಳ್ಯದಲ್ಲಿ ಕೊಲೆ ಮತ್ತು ಲೂಟಿ ಪ್ರಕರಣದಲ್ಲಿ ಭಾಗಿಯಾಗಿ ತಪ್ಪಿಸಿಕೊಂಡ ಆರೋಪಿಯ ಮಾಹಿತಿ ನೀಡಿದವರಿಗೆ 2 ಲಕ್ಷ ರೂ. ನಗದು ಬಹುಮಾನವನ್ನು ಕೇರಳ ಪೊಲೀಸ್ ಮಹಾನಿರ್ದೇಶಕರು ಘೋಷಿಸಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಬ್ದುಲ್ ಅಜೀಜ್ (33) ಎಂಬ ಆರೋಪಿ ಕೇರಳದ ಕಾಸರಗೋಡು ಜಿಲ್ಲೆಯ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಮತ್ತು ಲೂಟಿ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಈತನನ್ನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದಕ್ಷಿಣ

ಮಂಗಳೂರು :ಆರೋಪಿಯ ಸುಳಿವು ಕೊಟ್ಟವರಿಗೆ 2 ಲಕ್ಷ ಬಹುಮಾನ Read More »

ಕರಾವಳಿ

ಬೆಳ್ಳಾರೆ : ಚುನಾವಣಾ ಬಹಿಷ್ಕಾರದ ಬ್ಯಾನರ್ ಹಾಕಿದ ಸ್ಥಳೀಯರು

(ನ್ಯೂಸ್ ಕಡಬ) newskadaba.com ಬೆಳ್ಳಾರೆ ಡಿ. 02 : ರಾಜ್ಯದಲ್ಲಿ ಎರಡು ಹಂತದ ಗ್ರಾಮ ಪಂಚಾಯತ್​ ಚುನಾವಣೆ ಘೋಷಣೆ ಆಗಿದೆ. ಈ ಹಿನ್ನೆಲೆ ಮೂಲ ಸೌಕರ್ಯ ಮರೀಚಿಕೆ ಆಗಿರುವ ಗ್ರಾಮಗಳು ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿವೆ. ಸುಳ್ಯ ತಾಲೂಕಿನ ಬೆಳ್ಳಾರೆಯ ತಡಗಜೆಯಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿ ಓಟ್​ ಕೇಳಲು ಬರುವವರಿಗೆ ಪರೋಕ್ಷವಾಗಿ ಅಣುಕಿಸುವಂತೆ ಮಾಡಿದ್ದಾರೆ.ಕಳೆದ 25 ವರ್ಷಗಳಿಂದ ಬೆಳ್ಳಾರೆ ಗ್ರಾಮದ 3ನೇ ವಾರ್ಡ್​​ನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಬೀದಿ

ಬೆಳ್ಳಾರೆ : ಚುನಾವಣಾ ಬಹಿಷ್ಕಾರದ ಬ್ಯಾನರ್ ಹಾಕಿದ ಸ್ಥಳೀಯರು Read More »

ಕರಾವಳಿ

ಕಡಬದಲ್ಲಿ ಇಂದು ಶೂನ್ಯ ಕೊರೋನಾ

(ನ್ಯೂಸ್ ಕಡಬ) newskadaba.com ಕಡಬ, ಡಿ. 02: ಕಡಬ ತಾಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯಂತೆ ಇಂದು ಶೂನ್ಯ ಕೊರೋನಾ.     ಆದರೇ ಪುತ್ತೂರು ತಾಲೂಕಿನಲ್ಲಿ ಇಂದು 2 ಮಂದಿಗೆ ಕೊರೋನಾ ಪತ್ತೆಯಾಗಿದೆ. ಬನ್ನೂರಿನ 43 ವರ್ಷದ ವ್ಯಕ್ತಿ, ಬೆಟ್ಟಂಪಾಡಿಯ 32 ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢಪಟ್ಟಿದೆ.  

ಕಡಬದಲ್ಲಿ ಇಂದು ಶೂನ್ಯ ಕೊರೋನಾ Read More »

ಕರಾವಳಿ

ಮಂಗಳೂರು ಬೋಟ್ ದುರಂತ: ಉಳಿದ ಮೂವರ ಶವವೂ ಪತ್ತೆ ➤ ಸಚಿವರಿಂದ ಮೃತದೇಹಗಳ ಅಂತಿಮ ದರ್ಶನ

(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 02 : ಇಂದು ಮತ್ತೆ ಕಾರ್ಯಾಚರಣೆ ಪ್ರಾರಂಬಿಸಿದ ಬಳಿಕ ಬೆಳಗ್ಗೆ ಚಿಂತನ್ ಮತ್ತು ಅನ್ಸಾರ್ ರ ಶವವು ಪತ್ತೆಯಾಗಿತ್ತು. ಮಧ್ತಾಹ್ನ ದ ವೇಳೆಗೆ ಜಿಯಾವುಲ್ಲಾ ಮತ್ತು ಹಸೈನಾರ್ ರವರ ಶವ ಪತ್ತೆಯಾಗಿದೆ. ಈ ಮೂಲಕ ಕೋಸ್ಟ್ ಗಾರ್ಡ್ ಹಾಗೂ ಮೀನುಗಾರಿಕಾ ಇಲಾಖೆಯ ಜಂಟಿ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ಮೃತರೆಲ್ಲರೂ ಬೊಕ್ಕಪಟ್ಟ ಹಾಗೂ ಬೋಳಾರು ನಿವಾಸಿಗಳಾಗಿದ್ದು, ಇದೀಗಾ ಶವಗಳನ್ನು ವೆನ್ ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ‘ಶ್ರೀರಕ್ಷಾ’ ಹೆಸರಿನ

ಮಂಗಳೂರು ಬೋಟ್ ದುರಂತ: ಉಳಿದ ಮೂವರ ಶವವೂ ಪತ್ತೆ ➤ ಸಚಿವರಿಂದ ಮೃತದೇಹಗಳ ಅಂತಿಮ ದರ್ಶನ Read More »

ಕರಾವಳಿ

ಮೀನುಗಾರಿಕಾ ದೋಣಿ ದುರಂತ ➤ ಶಾಸಕ ವೇದವ್ಯಾಸ್ ಕಾಮತ್ ಸಾಂತ್ವನ

(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 02 : ಧಕ್ಕೆಯ ಅಳಿವೆ ಬಾಗಿಲಿನಲ್ಲಿ ಸಂಭವಿಸಿದ ಮೀನುಗಾರಿಕಾ ದೋಣಿ ದುರಂತದಿಂದ ಮೃತಪಟ್ಟವರಿಗೆ ಸರಕಾರದಿಂದ ಪರಿಹಾರ ಧನ ಘೋಷಿಸುವ ಕುರಿತು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.   ಬಂದರಿಗೆ ಭೇಟಿ ನೀಡಿದ ವೇಳೆ ಮಾತನಾಡಿದ‌ ಶಾಸಕ ಕಾಮತ್, ಬೋಟ್ ದುರಂತಕ್ಕೀಡಾಗಿರುವ‌ ವಿಚಾರ ತಿಳಿದು ಮನಸ್ಸಿಗೆ ಅತೀವ ನೋವಾಗಿದೆ. ವಿಚಾರ ತಿಳಿದ ತಕ್ಷಣವೇ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಇಬ್ಬರ ಮೃತ ದೇಹ ಪತ್ತೆಯಾಗಿದ್ದು

ಮೀನುಗಾರಿಕಾ ದೋಣಿ ದುರಂತ ➤ ಶಾಸಕ ವೇದವ್ಯಾಸ್ ಕಾಮತ್ ಸಾಂತ್ವನ Read More »

ಕರಾವಳಿ

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಡಿ. 02: ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ 2019-20 ನೇ ಸಾಲಿನ ಸಾಧನೆಗೆ ಉತ್ತಮ ಸಹಕಾರ ಸಂಘ ಪ್ರಶಸ್ತಿಯು ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಲಭಿಸಿದೆ.   ನ.27 ರಮದು ಮಂಗಳೂರಿನಲ್ಲಿ ನಡೆದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷ ಎನ್.ಎಂ. ರಾಜೇಂದ್ರ ಕುಮಾರ್ ರವರು ಸಂಘದ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಆಳ್ವರವರನ್ನು ಪ್ರಶಸ್ತಿ

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ Read More »

ಕರಾವಳಿ

ಐತ್ತೂರು :ಅರಣ್ಯ ಪ್ರದೇಶದಲ್ಲಿ ಹುಲ್ಲು ಹೆರೆಯುತ್ತಿದ್ದವರ ವಾಹನ ಕೊಂಡೊಯ್ದ ಅರಣ್ಯಾಧಿಕಾರಿಗಳು.!

(ನ್ಯೂಸ್ ಕಡಬ) newskadaba.com ಐತ್ತೂರು, ಡಿ. 02: ಅರಣ್ಯ ಪ್ರದೇಶದ ಬದಿಯಲ್ಲಿ ದೀಕ್ಷಿತಾ ಎಂಬವರು ಹುಲ್ಲು ಹೆರೆಯುತ್ತಿದ್ದ ವೇಳೆ ಐತ್ತೂರು ಗ್ರಾಮದ ಮೂಜೂರುಕಟ್ಟೆ ಎಂಬಲ್ಲಿಗೆ ಆಗಮಿಸಿದ ಅರಣ್ಯಧಿಕಾರಿಗಳು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ 800 ಕಾರನ್ನು ವಶಕ್ಕೆ ಪಡೆದುಕೊಂಡು ಅರಣ್ಯಧಿಕಾರಿಗಳ ಕಛೇರಿಗೆ ತಂದಿರಿಸಿದ್ದಾರೆ.     ಈ ಬಗ್ಗೆ ನ್ಯಾಯಕ್ಕಾಗಿ ಆಗ್ರಹಿಸಿ ಸ್ಥಳೀಯರು ಅರಣ್ಯ ಅಧಿಕಾರಿಗಳ ಕಛೇರಿಯ ಎದುರು ದಿಡೀರ್ ಪ್ರತಿಭಟನೆ ಆರಂಭಿಸಿದ್ದಾರೆ .  

ಐತ್ತೂರು :ಅರಣ್ಯ ಪ್ರದೇಶದಲ್ಲಿ ಹುಲ್ಲು ಹೆರೆಯುತ್ತಿದ್ದವರ ವಾಹನ ಕೊಂಡೊಯ್ದ ಅರಣ್ಯಾಧಿಕಾರಿಗಳು.! Read More »

ಕರಾವಳಿ
Scroll to Top